AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಪೆಗ್ ರೆಡ್ ವೈನ್ ಕುಡಿಯುವುದು ನಿಜವಾಗಿಯೂ ಹೃದಯಕ್ಕೆ ಒಳ್ಳೆಯದೇ? ತಜ್ಞರ ಅಭಿಪ್ರಾಯವೇನು?

ರೆಡ್ ವೈನ್ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಎಲ್ಲರೂ ತಿಳಿದುಕೊಂಡಿರುತ್ತಾರೆ. ಆದರೆ ಇದು ಸತ್ಯವೋ? ಅಲ್ಲವೋ ಎಂಬುದನ್ನು ನೋಡುವುದಿಲ್ಲ. ಸಾಮಾನ್ಯವಾಗಿ ವೈನ್ ಕುಡಿಯುವವರು ಯಾವಾಗಲೂ ರೆಡ್ ವೈನ್ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೇಳುವುದುಂಟು. ಮಾತ್ರವಲ್ಲ ಹೃದಯದ ಆರೋಗ್ಯಕ್ಕೂ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಹಾಗಾದ್ರೆ ಆರೋಗ್ಯ ತಜ್ಞೆ ಸೋನಲ್ ಹಾಲೆಂಡ್ ಈ ಬಗ್ಗೆ ಏನ್ ಹೇಳ್ತಾರೆ, ನಿಜವಾಗಿಯೂ ರೆಡ್ ವೈನ್ ಆರೋಗ್ಯಕ್ಕೆ ಪ್ರಯೋಜನಕಾರಿಯೇ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಒಂದು ಪೆಗ್ ರೆಡ್ ವೈನ್ ಕುಡಿಯುವುದು ನಿಜವಾಗಿಯೂ ಹೃದಯಕ್ಕೆ ಒಳ್ಳೆಯದೇ? ತಜ್ಞರ ಅಭಿಪ್ರಾಯವೇನು?
The Pros And Cons Of Red Wine
ಪ್ರೀತಿ ಭಟ್​, ಗುಣವಂತೆ
|

Updated on: Oct 21, 2025 | 8:37 PM

Share

ರೆಡ್ ವೈನ್ (Red Wine) ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಇದು ಹಣ್ಣುಗಳಿಂದ ತಯಾರಾಗುವುದರಿಂದ ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿ ಎಂದು ನಂಬಲಾಗಿದೆ. ಮಾತ್ರವಲ್ಲ ಇದರ ಸೇವನೆ ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೂ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಇದರ ಬಗ್ಗೆ ನಾವು ಎಂದಾದರೂ ಯೋಚಿಸಿದ್ದೇವೆಯೇ? ನಿಜವಾಗಿಯೂ ಇದು ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿ ಇರಬಹುದೇ? ಹೌದು. ನಾವು ಯಾರೂ ಕೂಡ ಇಂತಹ ವಿಷಯಗಳ ಬಗ್ಗೆ ಹೆಚ್ಚಿನ ತರ್ಕಕ್ಕೆ ಮುಂದಾಗುವುದಿಲ್ಲ. ಯಾರಾದರೂ ಏನನ್ನಾದರೂ ಹೇಳಿದರೆ ಅದೇ ಸತ್ಯ ಎಂದು ನಂಬುತ್ತೇವೆ. ಹಾಗಾದರೆ ರೆಡ್ ವೈನ್ ಆರೋಗ್ಯಕ್ಕೆ ಒಳ್ಳೆಯದಲ್ಲವೇ? ನಿಜವಾಗಿಯೂ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯೇ ಎಂಬಿತ್ಯಾದಿ ವಿಷಯಗಳ ಕುರಿತ ಮಾಹಿತಿ ಈ ಸ್ಟೋರಿಯಲ್ಲಿದೆ.

ಮಿತ ಸೇವನೆ ಮಾಡಿ

ಕೆಂಪು ವೈನ್ ಅಥವಾ ರೆಡ್ ವೈನ್ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ ಇದನ್ನು ಮಿತವಾಗಿ ಸೇವನೆ ಮಾಡಿದರೆ ಮಾತ್ರ ಒಳ್ಳೆಯದು. ಅತಿಯಾಗಿ ಸೇವನೆ ಮಾಡಿದರೆ ಅಮೃತವೂ ವಿಷವಾಗುವಂತೆ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಜೊತೆಗೆ ಇದರಲ್ಲಿ ಉತ್ಕರ್ಷಣ ನಿರೋಧಕಗಳಿದ್ದು ಇದರ ಸೇವನೆಯಿಂದ ಹೃದಯ ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ, ಆಲ್ಕೋಹಾಲ್ ಸೇವನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳೂ ಉಂಟಾಗಬಹುದು, ಆದ್ದರಿಂದ ಮಿತವಾಗಿ ಕುಡಿಯುವುದು ಒಳ್ಳೆಯದು.

ಇದನ್ನೂ ಓದಿ: ರೆಡ್ ವೈನ್ ಕುಡಿಯಬೇಕಾಗಿಲ್ಲ, ಮುಖಕ್ಕೆ ಹಚ್ಚಿದರೆ ಸಾಕು ಈ ಸಮಸ್ಯೆ ಬರಲ್ಲ

ಹಣ್ಣುಗಳ ಸೇವನೆ ಮಾಡಿ ರೆಸ್ವೆರಾಟ್ರೊಲ್ ಪಡೆಯಿರಿ

ಆಲ್ಕೋಹಾಲ್ ಆರೋಗ್ಯಕರ ಪಾನೀಯ ಎಂದು ಎಂದಿಗೂ ಸಾಬೀತಾಗಿಲ್ಲ. ಆರೋಗ್ಯ ತಜ್ಞೆ ಸೋನಲ್ ಹಾಲೆಂಡ್ ಹೇಳುವಂತೆ ವೈನ್ ಹೃದಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಆದರೆ ಅತಿಯಾಗಿ ಕೆಂಪು ವೈನ್ ಕುಡಿಯುವುದು ಅಷ್ಟೊಂದು ಪ್ರಯೋಜನಕಾರಿಯಲ್ಲ. ಆಹಾರದಲ್ಲಿ ಹಣ್ಣುಗಳು, ದ್ರಾಕ್ಷಿ ಮತ್ತು ಬೀಜಗಳನ್ನು ಸೇರಿಸುವ ಮೂಲಕ ಅಗತ್ಯವಿರುವ ರೆಸ್ವೆರಾಟ್ರೊಲ್ ಪಡೆಯಬಹುದು. ಹಾಗಾಗಿ ರೆಡ್ ವೈನ್ ಅನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಸೂಕ್ತವಾಗಿದೆ. ಅದೇ ರೀತಿ, ಮದ್ಯಪಾನ ಮಾಡುವವರಲ್ಲಿ ಸಿಹಿ ವೈನ್ ಅಗ್ಗ ಎಂಬ ತಪ್ಪು ಕಲ್ಪನೆಇದೆ ಆದರೆ ಇದು ನಿಜವಲ್ಲ. ಜಗತ್ತಿನಲ್ಲಿ ಅನೇಕ ರೀತಿಯ ಸಿಹಿ ವೈನ್‌ಗಳಿದ್ದು ಅದರಲ್ಲಿ ಕೆಲವು ತುಂಬಾ ದುಬಾರಿಯಾಗಿದೆ. ಅದರಲ್ಲಿಯೂ ಫ್ರಾನ್ಸ್ ಮತ್ತು ಹಂಗೇರಿಯ ವೈನ್‌ಗಳು ಅವುಗಳ ಗುಣಮಟ್ಟದ ಕಾರಣದಿಂದಾಗಿ ದುಬಾರಿಯಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ