AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರೋನಾ ವೈರಸ್ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಾಗಲು ಕಾರಣವೇನು?

ಕೋವಿಡ್ ನಂತರ ಹೃದ್ರೋಗಗಳು ಹೆಚ್ಚಾಗಿದೆ. ಹಾಗಾದರೆ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿರಲು ಕಾರಣವೇನು ಎಂಬುದು ತಿಳಿದಿದೆಯೇ? ಈ ವಿಷಯಕ್ಕೆ ಪೂರಕ ಎಂಬಂತೆ ಏಮ್ಸ್ ನಲ್ಲಿ ನಡೆದ ಅಂತರಾಷ್ಟ್ರೀಯ ಔಷಧಶಾಸ್ತ್ರ ಸಮ್ಮೇಳನದಲ್ಲಿ ಅಲ್ಲಿನ ತಜ್ಞರು ಈ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಮೆದುಳಿನಿಂದ ಬಿಡುಗಡೆಯಾಗುವ ಕ್ಯಾಟೆಕೊಲಮೈನ್ ಹಾರ್ಮೋನುಗಳೊಂದಿಗಿನ ಆಕ್ಸಿಡೇಟಿವ್ ಒತ್ತಡವು ಇಂತಹ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಕರೋನಾ ವೈರಸ್ ನಂತರ ಹೃದಯಾಘಾತ ಪ್ರಕರಣಗಳು ಹೆಚ್ಚಾಗಲು ಕಾರಣವೇನು?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Dec 03, 2024 | 5:34 PM

Share

ಕರೋನಾ ವೈರಸ್ ಎಲ್ಲರಿಗೂ ಚಿರಪರಿಚಿತವಾದ ಹೆಸರು. ಕೋವಿಡ್ -19 ಎಲ್ಲರನ್ನು ಒಂದಿಷ್ಟು ವರ್ಷ ಭಯದಲ್ಲಿ ಬದುಕುವಂತೆ ಮಾಡಿತ್ತು. ಆ ಹೆದರಿಕೆ ಕೆಲವರಲ್ಲಿ ಇನ್ನು ಕಡಿಮೆಯಾಗಿಲ್ಲ. ಅಲ್ಲದೆ ಕರೋನಾ ನಂತರದಲ್ಲಿ ಹೃದಯಾಘಾತ ಪ್ರಕರಣಗಳು ಕೂಡ ಗಮನಾರ್ಹವಾಗಿ ಹೆಚ್ಚಾಗಿದೆ. ಹಾಗಾದರೆ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿರಲು ಕಾರಣವೇನು ಎಂಬುದು ತಿಳಿದಿದೆಯೇ? ಈ ವಿಷಯಕ್ಕೆ ಪೂರಕ ಎಂಬಂತೆ ಏಮ್ಸ್ ನಲ್ಲಿ ನಡೆದ ಅಂತರಾಷ್ಟ್ರೀಯ ಔಷಧಶಾಸ್ತ್ರ ಸಮ್ಮೇಳನದಲ್ಲಿ ಅಲ್ಲಿನ ತಜ್ಞರು ಈ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಮೆದುಳಿನಿಂದ ಬಿಡುಗಡೆಯಾಗುವ ಕ್ಯಾಟೆಕೊಲಮೈನ್ ಹಾರ್ಮೋನುಗಳೊಂದಿಗಿನ ಆಕ್ಸಿಡೇಟಿವ್ ಒತ್ತಡವು ಇಂತಹ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಸಾವಿಗೆ ಕಾರಣವೇನು?

ತಜ್ಞರು ಹೇಳುವ ಪ್ರಕಾರ, ದೇಹದಲ್ಲಿರುವ ಎನ್ ಪ್ರೋಟೀನ್ ಗಳನ್ನು ಎಸಿಇ2 (ACE2) ನಿಯಂತ್ರಿಸುತ್ತದೆ. ದೇಹದಲ್ಲಿ ಆಕ್ಸಿಡೇಟಿವ್ ಒತ್ತಡ ಹೆಚ್ಚಾದಾಗ, ಹೃದಯ ಬಡಿತ ಹೆಚ್ಚಾಗುತ್ತದೆ. ಇದನ್ನು ನಿಯಂತ್ರಿಸಲು, ಕ್ಯಾಟೆಕೊಲಮೈನ್ ಹಾರ್ಮೋನುಗಳು ಮೆದುಳಿನಿಂದ ಬಿಡುಗಡೆಯಾಗುತ್ತವೆ. ಹೃದಯವನ್ನು ನಿಯಂತ್ರಿಸುವುದು ಇದರ ಕೆಲಸ, ಆದರೆ ಇದು ಅತಿಯಾಗಿ ಬಿಡುಗಡೆಯಾದಾಗ, ಹೃದಯದ ಪಂಪ್ ಮಾಡುವುದನ್ನು ನಿಲ್ಲಿಸುತ್ತದೆ, ಇದು ರೋಗಿಯ ಸಾವಿಗೆ ಕಾರಣವಾಗುತ್ತದೆ.

ಡಾ. ರಮೇಶ್ ಗೋಯಲ್ ಅವರು ಹೇಳುವ ಪ್ರಕಾರ ಆಂಜಿಯೋಟೆನ್ಸಿನ್-ಕನ್ವರ್ಟಿಂಗ್ ಕಿಣ್ವ 2 (ಎಸಿಇ 2) ನಿಯಂತ್ರಕವಾಗಿದೆ. ಇದು ಸೈಟೋಕಿನ್ ಗಳ ಸಂಪೂರ್ಣ ರಚನೆಯನ್ನು ಬದಲಾಯಿಸುತ್ತದೆ. ಈ ಕಾರಣದಿಂದಾಗಿ, ದೇಹದಲ್ಲಿ ಸೈಟೋಕಿನೇಸಿಯಾ ಅಥವಾ ಉರಿಯೂತದ ಗುರುತುಗಳು ಇದ್ದಕ್ಕಿದ್ದಂತೆ ಹೆಚ್ಚಾಗುತ್ತವೆ, ಇದರಿಂದಾಗಿ ರಕ್ತವು ದಪ್ಪವಾಗಲು ಪ್ರಾರಂಭಿಸುತ್ತದೆ. ಇದು ಹೃದಯದ ನರಗಳ ಮೇಲೆ ಒತ್ತಡ ಉಂಟು ಮಾಡುತ್ತದೆ. ನಂತರ ಇದು ಹೃದಯ ಸ್ತಂಭನಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಅದಲ್ಲದೆ ದೀರ್ಘಕಾಲದ ಕೋವಿಡ್ನಿಂದಾಗಿ, ಹೃದಯದ ಸ್ನಾಯುವಾದ ಏಟ್ರಿಯಲ್ ಫೈಬ್ರಿಲೇಷನ್ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ, ನಂತರ ಹಠಾತ್ ಸಾವು ಸಂಭವಿಸುತ್ತವೆ. ಇದಕ್ಕೆ ಹಲವು ಕಾರಣಗಳಿರಬಹುದು. ಮಾಲಿನ್ಯವೂ ಕೂಡ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದರಲ್ಲಿ ಪರಿಸರವು ದೊಡ್ಡ ಪಾತ್ರ ವಹಿಸುತ್ತದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ಶ್ವಾಸಕೋಶದ ಕ್ಯಾನ್ಸರ್​ಗೆ ಕಾರಣವೇನು? ಅದರ ಚಿಕಿತ್ಸೆಯ ವಿಧಾನ ತಿಳಿಯಿರಿ

55% ರೋಗಿಗಳು ಹೃದಯಾಘಾತದ ತೀವ್ರತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತರು;

ಏಮ್ಸ್ ನ ಡಾ. ಆನಂದ್ ಕೃಷ್ಣನ್ ಹೇಳುವ ಪ್ರಕಾರ, ಶೇ. 55 ರಷ್ಟು ರೋಗಿಗಳು ಹೃದಯಾಘಾತದ ತೀವ್ರತೆಯನ್ನು ಅರ್ಥಮಾಡಿಕೊಳ್ಳದೆ ಮೃತಪಟ್ಟಿದ್ದಾರೆ. ಆದ್ದರಿಂದ, ನೀವು ಹೃದಯಾಘಾತದ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಬರುವುದು ಬಹಳ ಮುಖ್ಯ. ಈ ಕ್ರಮವನ್ನು ಸರಿಯಾಗಿ ಪಾಲನೆ ಮಾಡಿದರೆ ರೋಗಿಯನ್ನು ಉಳಿಸುವ ಸಾಧ್ಯತೆಗಳೂ ಹೆಚ್ಚಾಗಿರುತ್ತವೆ. ಎದೆಯಲ್ಲಿ ನೋವು ಕಾಣಿಸಿಕೊಂಡಾಗ ತಕ್ಷಣ ಜಾಗರೂಕರಾಗುವುದು ಮುಖ್ಯ. ಅದಲ್ಲದೆ ಈಗಾಗಲೇ ಹೃದಯ ಸಂಬಂಧಿತ ಸಮಸ್ಯೆಗಳಿರುವವರು ಹೆಚ್ಚು ಅಲರ್ಟ್ ಆಗಿರಬೇಕು ಎಂದು ತಜ್ಞರು ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ