ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ಆಹಾರ ಪದಾರ್ಥಗಳು ಸಹಾಯಕ

ಆರೋಗ್ಯ ಸುಧಾರಣೆಗೆ ನೀವು ಸೇವಿಸುವ ಆಹಾರದ ಬಗ್ಗೆ ಗಮನವಿರಲಿ. ನಿಮ್ಮ ಆರೋಗ್ಯ ಸುರಕ್ಷತೆಗೆ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದು ಒಳ್ಳೆಯದು.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ಆಹಾರ ಪದಾರ್ಥಗಳು ಸಹಾಯಕ
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on: Nov 11, 2021 | 7:45 AM

ನೀವು ಸೇವಿಸುವ ಆಹಾರ ನಿಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಹಬ್ಬದ ಸಮಯದಲ್ಲಿ ಸಿಹಿ ತಿಂಡಿಗಳ ಅತಿಯಾದ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಿರಬಹುದು. ಆದಾಗ್ಯೂ ಮಧುಮೇಹ ಸಮಸ್ಯೆ ಹೊಂದಿರುವವರು ರಕ್ತದಲ್ಲಿನ ಸಕ್ಕರೆ ಮಟ್ಟದ ಬಗ್ಗೆ ಹೆಚ್ಚು ಗಮನವಹಿಸಲೇಬೇಕು. ವೈದ್ಯಕೀಯ ಮತ್ತು ವೈಜ್ಞಾನಿಕ ವ್ಯವಹಾರಗಳ ಸಹಾಯಕ ನಿರ್ದೇಶಕರಾದ ಡಾ. ಗಣೇಶ್ ಅವರು ಹೇಳಿರುವ ಸಲಹೆಗಳನ್ನು ಇಂಡಿಯನ್ ಡಾಟ್ ಕಾಮ್​ನಲ್ಲಿ ಉಲ್ಲೇಖಿಸಲಾಗಿದೆ.

ಬೀನ್ಸ್ ಮೂತ್ರಪಿಂಡದ ಆರೋಗ್ಯದ ಜೊತೆಗೆ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಬೀನ್ಸ್ ಸೇವನೆ ಒಳ್ಳೆಯದು. ನಿಮಗೆ ಶಕ್ತಿ ತುಂಬಲು ಯಾವುದೇ ರೀತಿಯ ಬೀನ್ಸ್ ಸೇವನೆ ಮಾಡಬಹುದು. ಆರೋಗ್ಯ ಸುಧಾರಣೆಗೆ ನೀವು ತಾಜಾ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುವುದು ಉತ್ತಮ.

ಸೇಬು ಸೇಬು ಹಣ್ಣು ನಿಮಗೆ ಪೌಷ್ಟಿಕಾಂಶವನ್ನು ನೀಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸೇಬು ಹಣ್ಣು ಫೈಬರ್, ವಿಟಮಿನ್ ಸಿ ಮತ್ತು ಕೊಬ್ಬಿನಾಂಶದಿಂದ ಸಮೃದ್ಧವಾಗಿರುತ್ತದೆ. ನಿಮ್ಮ ದೇಹಕ್ಕೆ ಬೇಕಾಗಿರುವ ಪೌಷ್ಟಿಕಾಂಶವನ್ನು ನೀಡುವ ಮೂಲಕ ನಿಮಗೆ ಶಕ್ತಿಯನ್ನು ತುಂಬುತ್ತದೆ.

ಬಾದಾಮಿ ಬಾದಾಮಿಯಲ್ಲಿ ಮೆಗ್ನೀಶಿಯಮ್ ಇರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಬಾದಾಮಿಯಂತಹ ಡ್ರೈಫ್ರೂಟ್​ಗಳು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು, ಪ್ರೋಟೀನ್ ಮತ್ತು ಫೈಬರ್​ಗಳಿಂದ ಸಮೃದ್ಧವಾಗಿರುತ್ತವೆ. ಇವುಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹಸಿರು ಸೊಪ್ಪು ಹಸಿರು ತರಕಾರಿಗಳು ಮತ್ತು ಕ್ಯಾಲೊರಿಗಳನ್ನು ನೀಡುತ್ತದೆ. ದೇಹಕ್ಕೆ ಬೇಕಾಗುವ ಮೆಗ್ನೀಶಿಯಮ್ ಮತ್ತು ಫೈಬರ್​ನಿಂದ ತುಂಬಿರುತ್ತದೆ. ಹಾಗಾಗಿ ತಾಜಾ ತರಕಾರಿಗಳು ಮತ್ತು ಹಸಿರು ಸೊಪ್ಪನ್ನು ಅಡುಗೆಯಲ್ಲಿ ಸೇರಿಸಿ.

ಬೆರಿ ಹಣ್ಣುಗಳು ಬೆರಿ ಹಣ್ಣುಗಳು ತಿನ್ನಲು ರುಚಿ ಜೊತೆಗೆ ಆರೋಗ್ಯ ಪ್ರಯೋಜನಗಳೂ ಇವೆ. ಬೆರಿ ಹಣ್ಣುಗಳು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇವು ಫೈಬರ್ ಮತ್ತು ವಿಟಮಿನ್ ಸಿ ಜೊತೆಗೆ ಆಂಟಿಆ್ಯಕ್ಸಿಡೆಂಟ್​ಗಳಂತಹ ಪೋಷಕಾಂಶಗಳ ಉತ್ತಮ ಮೂಲವಾಗಿದೆ.

ಇದನ್ನೂ ಓದಿ:

Health Tips: ಗಂಟಲು ನೋವೇ? ಇಲ್ಲಿದೆ ಮನೆಮದ್ದು

Health Tips: ದಾಲ್ಚಿನ್ನಿ ನೀರು ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸಲು ಸಹಾಯಕ