ಮಕ್ಕಳ ಹಠಕ್ಕೆ ಸೋಲಬೇಡಿ, ಈ ಆಹಾರಗಳಿಂದ ದೂರವಿಡಿ

ಮಕ್ಕಳು ಹಠ ಹಿಡಿಯುತ್ತಾರೆ ಎನ್ನುವ ಕಾರಣಕ್ಕೆ ಬಹಳಷ್ಟು ಪೋಷಕರು ಮಕ್ಕಳು ಕೇಳಿದ್ದೆವಲ್ಲವ್ನೂ ಕೊಟ್ಟುಬಿಡುತ್ತಾರೆ. ಅದರಲ್ಲೂ ಆಹಾರದ ವಿಚಾರದಲ್ಲಂತೂ ಕೇಳಲೇಬೇಡಿ.

ಮಕ್ಕಳ ಹಠಕ್ಕೆ ಸೋಲಬೇಡಿ, ಈ ಆಹಾರಗಳಿಂದ ದೂರವಿಡಿ
FoodImage Credit source: Medical.net
Follow us
TV9 Web
| Updated By: ನಯನಾ ರಾಜೀವ್

Updated on: Jul 08, 2022 | 8:30 AM

ಮಕ್ಕಳು ಹಠ ಹಿಡಿಯುತ್ತಾರೆ ಎನ್ನುವ ಕಾರಣಕ್ಕೆ ಬಹಳಷ್ಟು ಪೋಷಕರು ಮಕ್ಕಳು ಕೇಳಿದ್ದೆವಲ್ಲವ್ನೂ ಕೊಟ್ಟುಬಿಡುತ್ತಾರೆ. ಅದರಲ್ಲೂ ಆಹಾರದ ವಿಚಾರದಲ್ಲಂತೂ ಕೇಳಲೇಬೇಡಿ. ನಾವು ಕೊಡುವ ಆಹಾರ ಮಗುವಿಗೆ ಹಿಡಿಸುತ್ತಿಲ್ಲ, ಮಗು ಕೇಳಿದ್ದನ್ನೇ ಕೊಟ್ಟುಬಿಡೋಣ ಎಂದು ಸಾಕಷ್ಟು ಪೋಷಕರು ಯೋಚನೆ ಮಾಡುತ್ತಾರೆ.

ಆದರೆ ಆಹಾರದ ವಿಚಾರದಲ್ಲಿ ಎಂದೂ ರಾಜಿಮಾಡಿಕೊಳ್ಳಬೇಡಿ, ಮಕ್ಕಳು ಇಷ್ಟ ಪಡುವ ಆಹಾರಕ್ಕಿಂತ ದೇಹಕ್ಕೆ ಯಾವುದು ಒಳ್ಳೆಯದೋ ಅಂತಹ ಆಹಾರವನ್ನೇ ನೀಡಿ. ಸಕ್ಕರೆ ಪ್ರಮಾಣ ಹೆಚ್ಚಿರುವ ಆಹಾರಗಳು, ಜಂಕ್ ಫುಡ್​ಗಳು, ಅಥವಾ ಯಾವುದೇ ಪೋಷಕಾಂಶವಿಲ್ಲದ ಆಹಾರಗಳನ್ನು ನೀಡಬೇಡಿ. ಆರೋಗ್ಯಕರ ಆಹಾರವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಈ ಆಹಾರವನ್ನು ಮಕ್ಕಳಿಗೆ ಕೊಡಲೇಬೇಡಿ

ಹಸಿ ಹಾಲು ಹಾಗೂ ಸಾಫ್ಟ್​ ಚೀಸ್: ಹಸಿ ಹಾಲು ಅಥವಾ ಸಾಫ್ಟ್​ ಚೀಸ್​ ಅನ್ನು ಮಕ್ಕಳಿಗೆ ಕೊಡಬೇಡಿ,ಅದರ ಜತೆಗೆ ಸಾಶ್ಮಿ ಅಥವಾ ಸುಶಿ ರೀತಿಯ ಹಸಿ ಮಾಂಸವನ್ನೂ ನೀಡಬೇಡಿ. ಇದು ನಿಮ್ಮ ಮಕ್ಕಳ ಜೀರ್ಣಕ್ರಿಯೆ ಅಪಾಯವನ್ನುಂಟು ಮಾಡಿ ಆಯಾಸವನ್ನುಂಟು ಮಾಡುತ್ತದೆ.

ಚಿಪ್ಸ್​ ಹಾಗೂ ಕರಿದ ಪದಾರ್ಥಗಳು ಹೆಚ್ಚಿನ ಪ್ರಮಾಣದ ಉಪ್ಪಿನಾಂಶವು ಮಕ್ಕಳ ಕಿಡ್ನಿ ಮೇಲೆ ಪರಿಣಾಮ ಬೀರುತ್ತದೆ. ಚಿಪ್ಸ್​, ಉಪ್ಪಿನ ಕಾಯಿ ಸೇರಿದಂತೆ ಇತರೆ ಕರಿದ ತಿಂಡಿಗಳನ್ನು ಮಕ್ಕಳಿಗೆ ನೀಡಬೇಡಿ.

ಬಿಸ್ಕತ್ತು, ಚಾಕೊಲೇಟ್, ಕೇಕ್​: ಬಿಸ್ಕೇಟ್, ಚಾಕೊಲೇಟ್ ಅಥವಾ ಕೇಕ್​ಗಳನ್ನು ಮಕ್ಕಳಿಗೆ ನೀಡಬೇಡಿ, ಇದರಿಂದ ಮಲಬದ್ಧತೆ ಸಮಸ್ಯೆ ಉಂಟಾಗಬಹುದು, ಈ ಎಲ್ಲಾ ಆಹಾರ ಪದಾರ್ಥಗಳು ಬಹುಬೇಗ ಜೀರ್ಣವಾಗುವುದಿಲ್ಲ.

ಕಾಫಿ, ಟೀಯಿಂದ ದೂರವಿಡಿ: ಮಕ್ಕಳಿಗೆ ಕೆಫೀನ್ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರವನ್ನು ನೀಡಬೇಡಿ, ಇದರಿಂದ ಮಕ್ಕಳಲ್ಲಿ ನಿದ್ರಾಹೀನತೆ , ಖಿನ್ನತೆ ಉಂಟಾಗುವ ಸಾಧ್ಯತೆ ಇರುತ್ತದೆ. ಮಕ್ಕಳು ಬೆಳೆಯುತ್ತಿದ್ದಂತೆ ಮೂಳೆಗಳಿಗೆ ಕ್ಯಾಲ್ಶಿಯಂ ಅಂಶದ ಅವಶ್ಯಕತೆಯಿರುತ್ತದೆ.

ಹಸಿ ತರಕಾರಿಗಳನ್ನು ನೀಡಬೇಡಿ: ಬೀನ್ಸ್, ಬೆಂಡೆಕಾಯಿ, ಹೂಕೋಸು, ಬ್ರೊಕೊಲಿಯಂತಹ ಹಸಿ ತರಕಾರಿಗಳನ್ನು ಮಕ್ಕಳಿಗೆ ನೀಡಬೇಡಿ, ಅದರಲ್ಲಿ ಹೆಚ್ಚಿನ ಪ್ರಮಾಣದ ನೈಟ್ರೇಟ್ಸ್​ಗಳು ಇರಲಿವೆ.

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ