Teeth: ಎಚ್ಚರ! ಈ ಕೆಲವು ಅಭ್ಯಾಸಗಳು ನಿಮ್ಮ ಹಲ್ಲುಗಳನ್ನು ಹಾನಿಗೊಳಿಸಬಹುದು

| Updated By: shruti hegde

Updated on: Nov 08, 2021 | 11:48 AM

ನೀವು ಸಂಪೂರ್ಣವಾಗಿ ಆರೋಗ್ಯವಾಗಿರಲು ಹಲ್ಲುಗಳ ಆರೋಗ್ಯ ತುಂಬಾ ಮುಖ್ಯ. ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಮೊದಲಿಗೆ ಬಾಯಿಯ ಸ್ವಚ್ಛತೆ ಕಾಯ್ದುಕೊಳ್ಳಿ. ಈ ಕೆಲವು ಅಭ್ಯಾಸಗಳು ನಿಮ್ಮ ಹಲ್ಲುಗಳನ್ನು ಹಾನಿಗೊಳಿಸುತ್ತವೆ ಎಂಬುದು ನೆನಪಿನಲ್ಲಿರಲಿ.

Teeth: ಎಚ್ಚರ! ಈ ಕೆಲವು ಅಭ್ಯಾಸಗಳು ನಿಮ್ಮ ಹಲ್ಲುಗಳನ್ನು ಹಾನಿಗೊಳಿಸಬಹುದು
ಸಂಗ್ರಹ ಚಿತ್ರ
Follow us on

ಆಹಾರವನ್ನು ಚೆನ್ನಾಗಿ ಅಗಿಯಲು ಸಹಾಯಕವಾಗುವ ಹಲ್ಲುಗಳ ಆರೋಗ್ಯವೂ ಹೆಚ್ಚು ಮುಖ್ಯ. ಹಲ್ಲುಗಳ ಹಾನಿಯಾಗುವುದರಿಂದಲೂ ಅನೇಕ ಅರೋಗ್ಯ ಸಮಸ್ಯೆಗಳು ಕಾಡುತ್ತವೆ. ನಿಮ್ಮ ಮುಖದ ಸೌಂದರ್ಯ ಹೆಚ್ಚಿಸುವ ನಿಮ್ಮ ಹಲ್ಲುಗಳು ಸುಂದರವಾಗಿ ಕಾಣಿಸಲು ಮತ್ತು ಹಲ್ಲುಗಳ ಆರೈಕೆಯ ಬಗ್ಗೆ ಹೆಚ್ಚು ಗಮನವಿರಲಿ. ಅವುಗಳಲ್ಲಿ ಮುಖ್ಯವಾಗಿ ಗಮನವಹಿಸಬೇಕಾದ ವಿಷಯವೆಂದರೆ ಈ ಕೆಲವು ಅಭ್ಯಾಸಗಳು ನಿಮ್ಮ ಹಲ್ಲುಗಳನ್ನು ಹಾನಿಗೊಳಿಸುತ್ತವೆ ಎಂಬುದು ನೆನಪಿನಲ್ಲಿರಲಿ.

ನೀವು ಸಂಪೂರ್ಣವಾಗಿ ಆರೋಗ್ಯವಾಗಿರಲು ಹಲ್ಲುಗಳ ಆರೋಗ್ಯ ತುಂಬಾ ಮುಖ್ಯ. ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಮೊದಲಿಗೆ ಬಾಯಿಯ ಸ್ವಚ್ಛತೆ ಕಾಯ್ದುಕೊಳ್ಳಿ. ದಿನಕ್ಕೆ ಎರಡು ಬಾರಿ ಸರಿಯಾಗಿ ಹಲ್ಲುಜ್ಜುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಇದು ನಿಮ್ಮ ಆರೋಗ್ಯ ಸುಧಾರಣೆಗೆ ಸಹಾಯಕವಾಗಿದೆ. ಜೊತೆಗೆ ಈ ಕೆಲವು ಅಭ್ಯಾಸಗಳು ನಿಮ್ಮ ಹಲ್ಲುಗಳು ಮತ್ತು ವಸಡಿನ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.

ಹಲ್ಲಿನ ಆರೋಗ್ಯಕ್ಕೆ ಹಾನಿ ಮಾಡುವ ಈ ಕೆಲವು ಅಭ್ಯಾಸಗಳು
ಹಲ್ಲುಗಳನ್ನು ಸಾಧನವಾಗಿ ಬಳಸಬೇಡಿ
ಬಾಟಲಿಯ ಮುಚ್ಚಳ ತೆಗೆಯುವುದು ಅಥವಾ ಗಟ್ಟಿಯಾದ ವಸ್ತುವನ್ನು ಬಾಯಿಯಲ್ಲಿ ತುಂಡು ಮಾಡುವುದು, ಈ ರೀತಿಯ ಅಭ್ಯಾಸಗಳು ನಿಮ್ಮ ಹಲ್ಲುಗಳಿಗೆ ಹಾನಿಯುಂಟು ಮಾಡುತ್ತವೆ. ನಿಮ್ಮ ಹಲ್ಲುಗಳನ್ನು ಸಾಧನವಾಗಿ ಬಳಸುವುದರಿಂದ ಹಲ್ಲುಗಳು ಮತ್ತು ದವಡೆಗೆ ಹೆಚ್ಚು ಒತ್ತಡ ಬೀಳುತ್ತದೆ. ಇದು ನಿಮ್ಮ ದಂತಕ್ಕೆ ಪೆಟ್ಟು ಉಂಟು ಮಾಡುತ್ತದೆ.

ಉಗುರು ಕಚ್ಚುವುದು
ಆತಂಕ ಅಥವಾ ಒತ್ತಡದಿಂದಾಗಿ ಉಗುರು ಕಚ್ಚುವ ಅಭ್ಯಾಸ ಕೆಲವರಿಗಿರುತ್ತದೆ. ತಜ್ಞರು ಈ ಅಭ್ಯಾಸವನ್ನು ಒಬ್ಸೆಸಿವ್- ಕಂಪಲ್ಸಿವ್ ಡಿಸಾರ್ಡರ್​ನಂತಹ ಮಾನಸಿಕ ಆರೋಗ್ಯ ಅಸ್ವಸ್ಥತೆಗೆ ಸಂಬಂಧಿಸಿರುತ್ತದೆ. ಉಗುರು ಕಚ್ಚುವ ಅಭ್ಯಾಸ ನಿಮ್ಮ ಬಾಯಿಯ ಆರೋಗ್ಯ ಮಾತ್ರವಲ್ಲದೇ ನಿಮ್ಮ ಒಟ್ಟಾರೆ ಆರೋಗ್ಯವನ್ನೂ ಸಹ ಹದಗೆಡಿಸುತ್ತವೆ.

ಐಸ್​ಗಳನ್ನು ಹಲ್ಲುಗಳ ಮೇಲಿಡುವುದು
ಸಾಮಾನ್ಯವಾಗಿ ಕೋಲ್ಡ್ ಅಂದ್ರೆ ಎಲ್ಲರಿಗೂ ಇಷ್ಟ. ಐಸ್ ಕ್ರೀಮ್, ಐಸ್ ಕ್ಯೂಬ್​ಗಳನ್ನು ತಿನ್ನುತ್ತಿರುವುದು ಮನಸ್ಸಿಗೆ ಖುಷಿ ನೀಡುತ್ತದೆ. ಆದೆ ತುಂಬಾ ತಣ್ಣನೇಯ ಆಹಾರ ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆ. ಇವು ಹಲ್ಲುಗಳ ಅಂಗಾಂಶಗಳಿಗೆ ಮತ್ತು ನರಗಳಿಗೆ ಹಾನಿಯುಂಟು ಮಾಡುತ್ತವೆ.

ಹಲ್ಲುಜ್ಜುವ ಕ್ರಿಯೆ
ಸರಿಯಾದ ರೀತಿಯಲ್ಲಿ ಹಲ್ಲುಜ್ಜುವ ಮೂಲಕ ಹಲ್ಲುಗಳನ್ನು ಸ್ವಚ್ಛಗೊಳಿಸಬಹುದು. ಅತಿ ವೇಗದಲ್ಲಿ, ಒತ್ತಡದಲ್ಲಿ ಹಲ್ಲುಜ್ಜುವ ಕ್ರಿಯೆ ವಸಡುಗಳಿಗೆ ಮತ್ತು ಹಲ್ಲುಗಳಿಗೆ ಹಾನಿಯುಂಟು ಮಾಡುತ್ತವೆ. ಇದು ಕಿರಿಕಿರಿ, ನೋವು, ದಂತ ಕೆಂಪಾಗುವುದು ಈ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ:

Oral Health: ನೀವು ಆರೋಗ್ಯವಾಗಿರಲು ಬಾಯಿ ಸ್ವಚ್ಛವಾಗಿರುವುದು ಏಕೆ ಮುಖ್ಯ? ಇಲ್ಲಿದೆ ಮಾಹಿತಿ

Health Tips: ಬಾಯಿಯಿಂದ ದುರ್ವಾಸನೆ ಬರುತ್ತಿದೆಯೇ? ಸಮಸ್ಯೆ ಪರಿಹಾರಕ್ಕಾಗಿ ಇಲ್ಲಿದೆ ಸರಳ ಸಲಹೆಗಳು