ರಾತ್ರಿ ನಿಮ್ಮ ಈ ಅಭ್ಯಾಸಗಳು ಬೆಳಿಗ್ಗೆ ಬೇಗನೆ ಏಳಲು ಸಹಾಯ ಮಾಡುತ್ತೆ

ಸಾಮಾನ್ಯವಾಗಿ ಬೆಳಿಗ್ಗೆ ಹಾಸಿಗೆಯಿಂದ ಎದ್ದೇಳಲು ಕಾರಣವಿದ್ದರೂ ನಿಮ್ಮ ದೇಹ ಅದಕ್ಕೆ ಒಪ್ಪಿಗೆ ನೀಡುವುದಿಲ್ಲ. ಹಾಗಾಗಿ ಕೆಲವರು ಸಂಜೆ ಬೇಗನೆ ಮಲಗುತ್ತಾರೆ. ಈ ಅಭ್ಯಾಸದಿಂದ ಬೆಳಿಗ್ಗೆ ಬೇಗ ಎಚ್ಚರವಾಗುತ್ತದೆ. ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ರಾತ್ರಿ ಕೆಲವು ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಬಹಳ ಒಳ್ಳೆಯದು. ಇದರಿಂದ ನೀವು ಯಾವುದೇ ರೀತಿಯ ಆಲಸ್ಯವಿಲ್ಲದೆಯೇ ಬೆಳಿಗ್ಗೆ ಬೇಗ ಏಳಬಹುದು.

ರಾತ್ರಿ ನಿಮ್ಮ ಈ ಅಭ್ಯಾಸಗಳು ಬೆಳಿಗ್ಗೆ ಬೇಗನೆ ಏಳಲು ಸಹಾಯ ಮಾಡುತ್ತೆ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 04, 2025 | 11:38 AM

ರಾತ್ರಿ ಬೇಗ ಮಲಗಿ ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಬಹಳ ಒಳ್ಳೆಯದು. ಆದರೆ ಚಳಿ ಮತ್ತೆ ನಿದ್ರೆಯ ಮಂಪರಿನಿಂದಾಗಿ ಹಾಸಿಗೆ ಬಿಟ್ಟು ಏಳಲು ಮನಸ್ಸಾಗುವುದಿಲ್ಲ. ಅಲಾರಂ ಆಗುತ್ತಿದ್ದರೂ ಯಾವುದೋ ನೆಪ ಹೇಳಿ ಮತ್ತೆ ಮಲಗುವುದಕ್ಕೆ ಮನಸ್ಸು ಹಂಬಲಿಸುತ್ತದೆ. ಬೆಳಿಗ್ಗೆ ಹಾಸಿಗೆಯಿಂದ ಎದ್ದೇಳಲು ಮುಖ್ಯ ಉದ್ದೇಶವಿದ್ದರೂ ನಿಮ್ಮ ದೇಹ ಅದಕ್ಕೆ ಒಪ್ಪಿಗೆ ನೀಡುವುದಿಲ್ಲ. ಹಾಗಾಗಿ ಕೆಲವರು ಸಂಜೆ ಬೇಗನೆ ಮಲಗುತ್ತಾರೆ. ಈ ಅಭ್ಯಾಸದಿಂದ ಬೆಳಿಗ್ಗೆ ಬೇಗ ಎಚ್ಚರವಾಗುತ್ತದೆ. ಆದರೆ ಇದು ಎಲ್ಲರಿಗೂ ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ರಾತ್ರಿ ಕೆಲವು ಸರಳ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಬಹಳ ಒಳ್ಳೆಯದು. ಇದರಿಂದ ನೀವು ಯಾವುದೇ ರೀತಿಯ ಆಲಸ್ಯವಿಲ್ಲದೆಯೇ ಬೆಳಿಗ್ಗೆ ಬೇಗ ಏಳಬಹುದು.

ಮನಸ್ಸನ್ನು ಶಾಂತಗೊಳಿಸುವ ಪಾನೀಯಗಳನ್ನು ಸೇವನೆ ಮಾಡಿ:

ರಾತ್ರಿ ಸಮಯದಲ್ಲಿ ಮನಸ್ಸನ್ನು ಶಾಂತಗೊಳಿಸಲು ನಿಮಗೆ ತೊಂದರೆಯಾಗುತ್ತಿದ್ದರೆ, ನಿದ್ರೆಯನ್ನು ಪ್ರಚೋದಿಸುವ ಕೆಲವು ರೀತಿಯ ಪಾನೀಯಗಳನ್ನು ಕುಡಿಯಿರಿ. ಸಾಮಾನ್ಯವಾಗಿ ಕ್ಯಾಮೊಮೈಲ್ ಚಹಾವು ನಿಮ್ಮ ಮನಸ್ಸನ್ನು ಶಾಂತವಾಗಿಸುವುದಲ್ಲದೆ , ನಿದ್ರೆ ಚೆನ್ನಾಗಿ ಬರುವುದಕ್ಕೆ ಸಹಾಯ ಮಾಡುತ್ತದೆ. ಆದರೆ ಇದನ್ನು ಮುಂಜಾನೆ ಮಾತ್ರ ಸೇವಿಸಬೇಕು. ಇದರ ಹೊರತಾಗಿ ಕಾಶ್ಮೀರಿ ಕಹ್ವಾ, ಜೀರಾ ಮತ್ತು ಅಜ್ವೈನ್ ನೀರು ಅಥವಾ ಗುಲಾಬಿ ಚಹಾವನ್ನು ಕೂಡ ಸೇವಿಸಲು ಪ್ರಯತ್ನಿಸಬಹುದು. ಈ ಸಣ್ಣ ಅಭ್ಯಾಸವು ನಿಮ್ಮ ಮಲಗುವ ದಿನಚರಿಯನ್ನು ಹೆಚ್ಚು ಆನಂದದಾಯಕವಾಗಿಸುತ್ತದೆ.

ಸ್ವಲ್ಪ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳಿ:

ಶಾಲಾ ದಿನಗಳಲ್ಲಿ ಓದುವ ಅಭ್ಯಾಸ ನಿದ್ರೆ ಬರುವಂತೆ ಮಾಡುತ್ತಿತ್ತು ಎಂಬುದು ನೆನಪಿದೆಯೇ? ಹಾಗೆಯೇ ಮಲಗುವ ಮೊದಲು ಈ ಅಭ್ಯಾಸ ರೂಢಿಸಿಕೊಂಡರೆ ಚೆನ್ನಾಗಿ ನಿದ್ರೆ ಮಾಡಬಹುದು. ಈ ತಂತ್ರ ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತದೆ. ಎನ್ಐಎಚ್ ಅಧ್ಯಯನದ ಪ್ರಕಾರ, ಮಲಗುವ ಮೊದಲು ಹಾಸಿಗೆಯ ಮೇಲೆ ಕುಳಿತು ಯಾವುದಾದರೂ ಪುಸ್ತಕ ಓದುವ ಅಭ್ಯಾಸವು ನಿಮ್ಮ ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಪುಸ್ತಕ ಓದಬೇಕು ಎಂದು ಫೋನ್ ಗಳಲ್ಲಿ ಕಥೆ, ಕಾದಂಬರಿಗಳನ್ನು ಓದಬಾರದು. ಬದಲಾಗಿ, ಹಳೆಯ ಓದುವ ವಿಧಾನವನ್ನು ಅನುಸರಿಸುವುದು ಬಹಳ ಸೂಕ್ತ.

ನಿಮ್ಮ ಅಲಾರಂ ಅನ್ನು 6- 8 ಹೆಜ್ಜೆ ದೂರವಿಡಿ:

ಸಾಮಾನ್ಯವಾಗಿ ಗಾಢ ನಿದ್ರೆಯಲ್ಲಿದ್ದಾಗ ಅಲಾರಂ ಆಫ್ ಮಾಡಿ ಮಲಗುತ್ತೇವೆ. ಬಳಿಕ, ಎಚ್ಚರವಾದ ಮೇಲೆ ವಿಷಾದಿಸುತ್ತೇವೆ. ಈ ರೀತಿಯ ಅಭ್ಯಾಸ ನಿಮಗೂ ಇದ್ದರೆ ಹಾಸಿಗೆಯಲ್ಲಿದ್ದಾಗ ಅಲಾರಂ ಆಫ್ ಮಾಡದಂತೆ ಕೆಲವು ಅಡಿ ದೂರದಲ್ಲಿ ಇರಿಸಿ. ಈ ರೀತಿ ನಿಮ್ಮ ಅಲಾರಂ ಅನ್ನು ದೂರ ಇಡುವ ಅಭ್ಯಾಸವು ನಿಮ್ಮ ಕಾಲನ್ನು ನೆಲದ ಮೇಲೆ ಇರಿಸುವಂತೆ ಮಾಡುತ್ತದೆ. ಏಕೆಂದರೆ ಅದನ್ನು ಆಫ್ ಮಾಡಲು ನೀವು ಎದ್ದು ಹೋಗಬೇಕಾಗುತ್ತದೆ. ಆಗ ಗಾಢ ನಿದ್ರೆಯಿಂದ ಎಚ್ಚರವಾಗಿ ಬೇಗ ಏಳುವುದಕ್ಕೆ ಸಹಾಯ ಮಾಡುತ್ತದೆ.

ಇದನ್ನೂ ಓದಿ: ರಕ್ತ ಕ್ಯಾನ್ಸರ್‌ಗೆ ಕಾರಣವೇನು? ನಿಮ್ಮಲ್ಲಿ ಕ್ಯಾನ್ಸರ್‌ ಸೂಚನೆ ಕಂಡರೆ ಏನು ಮಾಡಬೇಕು?

ಆಲ್ಕೋಹಾಲ್ ಮತ್ತು ಕೆಫೀನ್ ಬಳಕೆಯನ್ನು ಮಿತಿಗೊಳಿಸಿ:

ಮಲಗುವ ಆರು ಗಂಟೆಗಳ ಮೊದಲು ಕೆಫೀನ್ ಸೇವನೆ ಮಾಡುವುದು ನಿದ್ರೆಗೆ ಅಡ್ಡಿಯಾಗಬಹುದು. ಅಂತೆಯೇ, ಮಲಗುವ ಮೊದಲು ಮದ್ಯಪಾನ ಮಾಡುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ ಎಂಬುದು ಅಧ್ಯಯನಗಳಿಂದಲೂ ಸಾಬೀತಾಗಿದೆ. ಬೆಳಿಗ್ಗಿನ ಆಲಸ್ಯ ಕಡಿಮೆ ಮಾಡಲು ಆಲ್ಕೋಹಾಲ್ ಮತ್ತು ಕೆಫೀನ್ ಸೇವನೆಯಿಂದ ದೂರವಿರಬೇಕು. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಅಧ್ಯಯನದಲ್ಲಿ ತಿಳಿಸಿರುವಂತೆ ಕೆಫೀನ್ ಸೇವನೆಯನ್ನು ಮಧ್ಯಾಹ್ನ 2 ಗಂಟೆಯ ಮೊದಲು ಸೀಮಿತಗೊಳಿಸುವುದರಿಂದ ನಿದ್ರೆ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು. ಜೊತೆಗೆ ಆಲಸ್ಯವನ್ನು ಕಡಿಮೆ ಮಾಡಬಹುದಾಗಿದೆ.

ಮಲಗುವ ಮೊದಲು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ:

ಸಾಮಾಜಿಕ ಮಾಧ್ಯಮವನ್ನು ರಾತ್ರಿ ಸಮಯದಲ್ಲಿ ಬಳಕೆ ಮಾಡುವುದು ಒಳ್ಳೆಯದಲ್ಲ. ಇದರಿಂದ ಸಮಯ ಕಳೆದದ್ದು ತಿಳಿಯುವುದಿಲ್ಲ. ಮಲಗುವ ಮೊದಲು ಸ್ಕ್ರಾಲ್ ಮಾಡುವುದರಿಂದ ನಮ್ಮ ಮಿದುಳಿಗೆ ಸರಿಯಾದ ವಿಶ್ರಾಂತಿ ಸಿಗುವುದಿಲ್ಲ. ಅದಲ್ಲದೆ ರಾತ್ರಿಯ ಸಮಯದಲ್ಲಿ ಅತಿಯಾದ ಕೃತಕ ಬೆಳಕು ಮೆಲಟೋನಿನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ