ಹಾಲಿಗೆ ತುಳಸಿ ಎಲೆಯನ್ನು ಹಾಕಿ ಕುಡಿಯುವುದರಿಂದ ನಿಮ್ಮ ಈ ಆರೋಗ್ಯ ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ
ಹಾಲನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ, ಇದು ನಮ್ಮ ದೇಹಕ್ಕೆ ಪ್ರಯೋಜನಕಾರಿಯಾದ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ.
ಹಾಲು (Milk) ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ, ಇದು ನಮ್ಮ ದೇಹಕ್ಕೆ ಪ್ರಯೋಜನಕಾರಿಯಾದ ಎಲ್ಲಾ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಲಿನ ಪ್ರಯೋಜನಗಳನ್ನು ಹೆಚ್ಚಿಸಲು, ನಾವು ಅದರಲ್ಲಿ ಅನೇಕ ವಸ್ತುಗಳನ್ನು ಮಿಶ್ರಣ ಮಾಡುತ್ತೇವೆ. ಅವುಗಳಲ್ಲಿ ಒಂದು ತುಳಸಿ ( Tulsi)ಎಲೆಗಳು, ಅವುಗಳಲ್ಲಿ ಔಷಧೀಯ ಗುಣಗಳಿವೆ.
ಇದರ ಸಸ್ಯವು ಭಾರತದ ಬಹುತೇಕ ಮನೆಗಳಲ್ಲಿ ಕಂಡುಬರುತ್ತದೆ. ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿದರೆ ಅದರಿಂದ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ಭಾರತದ ಖ್ಯಾತ ಪೌಷ್ಟಿಕತಜ್ಞ ನಿಖಿಲ್ ವಾಟ್ಸ್ ಹೇಳಿದ್ದಾರೆ. ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯುವುದರಿಂದ ಆಗುವ ಪ್ರಯೋಜನಗಳು
1. ಅಸ್ತಮಾ ಸಮಸ್ಯೆ ನಿವಾರಣೆ ನೀವು ಅಸ್ತಮಾ ಅಥವಾ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರೆ ಇದನ್ನು ತಪ್ಪಿಸಲು ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ಕುಡಿಯಿರಿ. ಹೀಗೆ ಮಾಡುವುದರಿಂದ ಅಸ್ತಮಾ ರೋಗಿಗೆ ಉಸಿರಾಟದ ಸಮಸ್ಯೆಯಿಂದ ಸ್ವಲ್ಪ ಪರಿಹಾರ ಸಿಗಲಿದೆ.
2. ಮೈಗ್ರೇನ್ ಪ್ರಸ್ತುತ ಮೈಗ್ರೇನ್ ರೋಗಿಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ, ಇದರಿಂದಾಗಿ ಜನರು ಆಗಾಗ ತಲೆನೋವಿನ ತೊಂದರೆಗೊಳಗಾಗುತ್ತಿದ್ದಾರೆ. ತುಳಸಿ ಮತ್ತು ಹಾಲನ್ನು ನಿಯಮಿತವಾಗಿ ಸೇವಿಸಿದರೆ, ಈ ಸಮಸ್ಯೆಯನ್ನು ಮೂಲದಿಂದ ನಿರ್ಮೂಲನೆ ಮಾಡಬಹುದು.
3. ಖಿನ್ನತೆ ಬಿಡುವಿಲ್ಲದ ಜೀವನಶೈಲಿ, ಕಚೇರಿಯಲ್ಲಿ ಕೆಲಸದ ಒತ್ತಡ, ಕೌಟುಂಬಿಕ ವೈಷಮ್ಯ, ಪ್ರೀತಿ ಮತ್ತು ಸ್ನೇಹದಲ್ಲಿ ದ್ರೋಹ, ಸಾಲದ ಕಾರಣದಿಂದ ಜನರು ಸಾಮಾನ್ಯವಾಗಿ ಖಿನ್ನತೆಗೆ ಒಳಗಾಗುತ್ತಾರೆ, ಇಂತಹ ಪರಿಸ್ಥಿತಿಯಲ್ಲಿ ತುಳಸಿ ಹಾಲನ್ನು ಸೇವಿಸುವುದರಿಂದ ಎಲ್ಲಾ ರೀತಿಯ ಚಿಂತೆಗಳು ದೂರವಾಗುತ್ತವೆ ಮತ್ತು ಉದ್ವೇಗವೂ ನಿವಾರಣೆಯಾಗುತ್ತದೆ.
4. ಮೂತ್ರಕೋಶದಲ್ಲಿ ಕಲ್ಲು ಇತ್ತೀಚಿನ ದಿನಗಳಲ್ಲಿ ಕಲುಷಿತ ಆಹಾರ ಸೇವನೆಯಿಂದ ಮೂತ್ರಕೋಶದಲ್ಲಿ ಸಮಸ್ಯೆ ಹೆಚ್ಚಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ತುಳಸಿ ಎಲೆಗಳನ್ನು ಹಾಲಿನಲ್ಲಿ ಕುದಿಸಿ ನಂತರ ಕುಡಿಯಬೇಕು. ಕಲ್ಲು ಮತ್ತು ಕಿಡ್ನಿ ನೋವಿನ ಸಮಸ್ಯೆ ದೂರವಾಗುತ್ತದೆ.
ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ