Vaginitis: ಮಹಿಳೆಯರೇ ಯೋನಿಯಲ್ಲಿ ಈ ಲಕ್ಷಣ ಕಂಡುಬಂದಾಗ ನಿರ್ಲಕ್ಷಿಸಬೇಡಿ

ಮಹಿಳೆಯರಲ್ಲಿ ಯೋನಿ ನಾಳದ ಉರಿಯೂತದಂತಹ ಸಮಸ್ಯೆ ಹೆಚ್ಚಾಗುತ್ತಿದ್ದು ಇದನ್ನು ಅಲಕ್ಷ್ಯ ಮಾಡುವವರೇ ಹೆಚ್ಚಾಗಿದ್ದಾರೆ. ಆದರೆ ಇದರ ಬಗ್ಗೆ ಸರಿಯಾಗಿ ಮಾಹಿತಿ ಪಡೆದುಕೊಂಡು ಆ ರೀತಿಯ ಲಕ್ಷಣ ಕಂಡು ಬಂದಾಗ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಹಾಗಾದರೆ ಈ ರೀತಿಯ ಸಮಸ್ಯೆ ಉಂಟಾಗಲು ಮುಖ್ಯ ಕಾರಣವೇನು? ಲಕ್ಷಣಗಳೇನು? ತಡೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ ಸಂಪೂರ್ಣ ಮಾಹಿತಿ ಇಲ್ಲಿದೆ.

Vaginitis: ಮಹಿಳೆಯರೇ ಯೋನಿಯಲ್ಲಿ ಈ ಲಕ್ಷಣ ಕಂಡುಬಂದಾಗ ನಿರ್ಲಕ್ಷಿಸಬೇಡಿ
ಸಾಂದರ್ಭಿಕ ಚಿತ್ರ
Image Credit source: Getty Images

Updated on: May 12, 2025 | 4:00 PM

ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಯೋನಿ (Vagina) ನಾಳದ ಉರಿಯೂತ (Vaginitis) ದಂತಹ ಸಮಸ್ಯೆ ಹೆಚ್ಚಾಗುತ್ತಿದ್ದು. ಈ ರೋಗವನ್ನು ನಿರ್ಲಕ್ಷಿಸಿದಷ್ಟು ಹೆಚ್ಚಾಗುತ್ತದೆ. ಇದು ಸಾಮಾನ್ಯವಾಗಿ ಬ್ಯಾಕ್ಟೀರಿಯಾ (Bacteria) ಅಥವಾ ಫಂಗಲ್ ಸೋಂಕಿನಿಂದ ಉಂಟಾಗುತ್ತದೆ. ಇದರಿಂದ ಯೋನಿಯಲ್ಲಿ ಬಿಳಿ ವಿಸರ್ಜನೆ, ತುರಿಕೆ, ಕಿರಿಕಿರಿ ಮತ್ತು ನೋವನ್ನು ಉಂಟುಮಾಡುತ್ತದೆ. ಇದು ಹೆಚ್ಚಿನ ಮಹಿಳೆಯರಲ್ಲಿ ಕಾಡುವ ಸಾಮಾನ್ಯ ಸಮಸ್ಯೆಯಾಗಿದ್ದರೂ ಕೂಡ ಇದನ್ನು ಅಲಕ್ಷ್ಯ ಮಾಡುವಂತಿಲ್ಲ. ಹಾಗಾದರೆ ಇದು ಉಂಟಾಗಲು ಕಾರಣವೇನು? ಲಕ್ಷಣಗಳೇನು? ತಡೆಯುವುದು ಹೇಗೆ? ನಮ್ಮ ಆರೋಗ್ಯದ (Health) ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಯೋನಿ ನಾಳದ ಉರಿಯೂತದ ಲಕ್ಷಣಗಳು;

  • ಲಘು ರಕ್ತಸ್ರಾವ
  • ಮೂತ್ರ ವಿಸರ್ಜಿಸುವಾಗ ಉರಿ
  • ಸಂಭೋಗದ ಸಮಯದಲ್ಲಿ ಅಸ್ವಸ್ಥತೆ
  • ಯೋನಿ ಶುಷ್ಕತೆ
  • ಯೋನಿಯ ಸುತ್ತ ಮುತ್ತ ಕೆಂಪಾಗುವುದು ಮತ್ತು ಊತ ಕಂಡುಬರುವುದು
  • ಯೋನಿ ಪ್ರದೇಶದ ಸುತ್ತ ತುರಿಕೆ ಮತ್ತು ಕಿರಿಕಿರಿ
  • ಸಾಮಾನ್ಯಕ್ಕಿಂತ ಹೆಚ್ಚು ಮೂತ್ರ ವಿಸರ್ಜನೆಯಾಗುವುದು
  • ಪದೇ ಪದೇ ಮೂತ್ರ ವಿಸರ್ಜನೆಯಾಗುವುದು

ಈ ಸಮಸ್ಯೆ ಕಂಡು ಬರುವುದಕ್ಕೆ ಕಾರಣವೇನು?​

  • ಮುಟ್ಟಿನ ಸಮಯದಲ್ಲಿ ಕಡಿಮೆ ಈಸ್ಟ್ರೊಜೆನ್ ಮಟ್ಟಗಳು ಯೋನಿ ನಾಳದ ಉರಿಯೂತಕ್ಕೆ ಕಾರಣವಾಗಬಹುದು.
  • ಬಿಗಿಯಾದ ಬಟ್ಟೆ ಅಥವಾ ಒದ್ದೆಯಾದ ಒಳ ಉಡುಪುಗಳನ್ನು ಧರಿಸುವುದು.
  • ಹೆಚ್ಚಿನವರಲ್ಲಿ ಗರ್ಭಾವಸ್ಥೆ ಸಮಯದಲ್ಲಿ ಈ ಸಮಸ್ಯೆ ಕಂಡುಬರುತ್ತದೆ.
  • ಸುಗಂಧ ಮತ್ತು ರಾಸಾಯನಿಕಗಳೊಂದಿಗೆ ಪರಿಮಳಯುಕ್ತ ಸ್ತ್ರೀ ನೈರ್ಮಲ್ಯ ಉತ್ಪನ್ನಗಳ ಅತಿಯಾದ ಬಳಕೆ.
  • ಕಳಪೆ ಆಹಾರ ಸೇವನೆ.
  • ಅತಿಯಾದ ಒತ್ತಡ.
  • ಗರ್ಭಾವಸ್ಥೆಯಲ್ಲಿ ಜೀವನಶೈಲಿ ಬದಲಾವಣೆ.
  • ಮಹಿಳೆಯರು ತಮ್ಮ ಯೋನಿ ನಾಳದ ನೈರ್ಮಲ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿರುವುದು ಕೂಡ ಈ ಸಮಸ್ಯೆಗೆ ಮುಖ್ಯ ಕಾರಣ.

ಇದನ್ನೂ ಓದಿ: ಆರಂಭಿಕ ಹಂತದಲ್ಲಿರುವ ಅಂಡಾಶಯದ ಕ್ಯಾನ್ಸರ್ ಗುರುತಿಸುವುದು ಹೇಗೆ?

ಯೋನಿ ನಾಳದ ಉರಿಯೂತವನ್ನು ತಡೆಯುವುದು ಹೇಗೆ?

  • ಬಿಗಿಯಾದ ಒಳ ಉಡುಪು ಮತ್ತು ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ.
  • ಹಗುರವಾದ ಮತ್ತು ದೇಹಕ್ಕೆ ಹಿತವಾಗಿರುವ ಮೆತ್ತನೆಯ ಕಾಟನ್ ಒಳ ಉಡುಪುಗಳನ್ನು ಆರಿಸಿಕೊಳ್ಳಿ.
  • ಯೋನಿ ಪ್ರದೇಶವನ್ನು ಪದೇ ಪದೇ ಉಜ್ಜುವುದನ್ನು ತಪ್ಪಿಸಿ.
  • ಪ್ರತಿ ಬಾರಿ ಮೂತ್ರ ವಿಸರ್ಜನೆ ಮಾಡಿದ ಮೇಲೆ ತಣ್ಣೀರಿನಿಂದ ಯೋನಿ ಭಾಗವನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.
  • ವಾಶ್‌ರೂಮ್ ಗೆ ಹೋಗಿ ಬಂದ ನಂತರ ಯೋನಿಯನ್ನು ಮೆತ್ತನೆಯ ಕಾಟನ್ ಟವೆಲ್‌ನಿಂದ ಒರೆಸಿಕೊಳ್ಳಿ. ಇದು ಒದ್ದೆ ಇರುವುದಕ್ಕೆ ಬಿಡಬೇಡಿ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಇದನ್ನೂ ಓದಿ
ಪ್ರತಿದಿನ ನೀವು ಮಾಡುವ ಈ ತಪ್ಪುಗಳೇ ರಾತ್ರಿ ನಿದ್ರೆಯನ್ನು ಹಾಳುಮಾಡುತ್ತೆ
ಮಹಿಳೆಯರೇ ಈ ರೀತಿ ಲಕ್ಷಣ ಕಂಡು ಬಂದಾಗ ನಿರ್ಲಕ್ಷಿಸಬೇಡಿ
ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ
ಕಣ್ಣುಗಳಲ್ಲಿ ಕಂಡುಬರುವ ತುರಿಕೆ ಈ ರೋಗದ ಮುನ್ಸೂಚನೆ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ