Urinary tract infection: ಲೈಂಗಿಕ ಕ್ರಿಯೆ ಬಳಿಕ ಶುಚಿತ್ವ ಕಾಪಾಡಿಕೊಳ್ಳದಿದ್ದರೆ ಏನಾಗುತ್ತೆ ? ಈ ರೋಗ ಬರುವುದು ಖಂಡಿತ
ಮೂತ್ರದ ಸೋಂಕು ಅಥವಾ ಯೂರಿನರಿ ಟ್ರ್ಯಾಕ್ ಇನ್ಫೆಕ್ಷನ್ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಇದು ಬಂದರೆ ಹೆದರಿ ನಾನಾ ರೀತಿಯ ಮಾತ್ರೆ, ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಈ ಸಮಸ್ಯೆಗೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಪರಿಹಾರ ಕಂಡುಕೊಳ್ಳಬಹುದು. ಅದಕ್ಕೂ ಹೆಚ್ಚಾಗಿ ಮೂತ್ರನಾಳದ ಸೋಂಕು ಬರದಂತೆ ತಡೆಯಲು ಅನೇಕ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಈ ಸಮಸ್ಯೆಯನ್ನು ಹಿಮ್ಮೆಟ್ಟಿಸಬಹುದು. ಹಾಗಾದರೆ ಇದಕ್ಕೆ ಪರಿಹಾರವೇನು? ಸೋಂಕು ತಗುಲಿದರೆ ಏನು ಮಾಡಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆಗಳಲ್ಲಿ ಮೂತ್ರದ ಸೋಂಕು ಅಥವಾ ಯೂರಿನರಿ ಟ್ರ್ಯಾಕ್ ಇನ್ಫೆಕ್ಷನ್ ಕೂಡ ಒಂದು. ಇದು ಬಂದರೆ ಹೆದರಿ ನಾನಾ ರೀತಿಯ ಮಾತ್ರೆ, ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಈ ಸಮಸ್ಯೆಗೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಪರಿಹಾರ ಕಂಡುಕೊಳ್ಳಬಹುದು. ಅದಕ್ಕೂ ಹೆಚ್ಚಾಗಿ ಮೂತ್ರನಾಳದ ಸೋಂಕು ಬರದಂತೆ ತಡೆಯಲು ಅನೇಕ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಈ ಸಮಸ್ಯೆಯನ್ನು ಹಿಮ್ಮೆಟ್ಟಿಸಬಹುದು. ಹಾಗಾದರೆ ಇದಕ್ಕೆ ಪರಿಹಾರವೇನು? ಸೋಂಕು ತಗುಲಿದರೆ ಏನು ಮಾಡಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಕಾರಣವೇನು?
ಸಾಮಾನ್ಯವಾಗಿ ಈ ಸಮಸ್ಯೆ ಕಂಡು ಬರಲು ಮುಖ್ಯ ಕಾರಣವೆಂದರೆ ಮೂತ್ರ ಮಾಡಿದ ಬಳಿಕ ಸರಿಯಾಗಿ ಸ್ವಚ್ಛ ಮಾಡಿಕೊಳ್ಳದಿರುವುದು ಅಥವಾ ಲೈಂಗಿಕ ಕ್ರಿಯೆ ಬಳಿಕ ಶುಚಿತ್ವ ಕಾಪಾಡಿಕೊಳ್ಳದಿರುವುದು ಜೊತೆಗೆ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿರುವುದು, ಪದೇ ಪದೇ ಸಾರ್ವಜನಿಕ ಶೌಚಾಲಯ ಬಳಕೆ ಮಾಡುವುದರಿಂದ ಮೂತ್ರಕೋಶದ ಸೋಂಕು ತಗಲುವ ಅಪಾಯ ಹೆಚ್ಚು ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ತೂಕ ನಿರ್ವಹಣೆಯಿಂದ ಜೀರ್ಣಕಾರಿ ಸಮಸ್ಯೆಗಳವರೆಗೆ, ಎಲ್ಲದಕ್ಕೂ ಒಂದೇ ಪರಿಹಾರ..!
ನಿವಾರಣೆ ಮಾಡುವುದು ಹೇಗೆ?
-ಈ ಸೋಂಕು ಕಂಡು ಬಂದಲ್ಲಿ ಅದಕ್ಕೆ ಉತ್ತಮ ಮನೆಮದ್ದು ಎಂದರೆ ಅದು ಎಳನೀರು. ಮೂತ್ರಕೋಶದಲ್ಲಿ ಸೋಂಕನ್ನು ನಿವಾರಿಸಿ ಮೂತ್ರ ಸರಿಯಾಗಿ ಹೋಗುವಂತೆ ಮಾಡುತ್ತದೆ. ಅಲ್ಲದೆ ದೇಹವನ್ನು ತಂಪಾಗಿಡಲು ಎಳನೀರು ಸಹಾಯ ಮಾಡುತ್ತದೆ. ಹಾಗಾಗಿ ಸೋಂಕು ಕಂಡುಬಂದಲ್ಲಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಎಳನೀರನ್ನು ಕುಡಿಯಿರಿ.
-ಕೊತ್ತಂಬರಿ ನೀರು, ಥೈರಾಯ್ಡ್ ಸಮಸ್ಯೆಯಿಂದ ಹಿಡಿದು ಮೂತ್ರದ ಸಮಸ್ಯೆವರೆಗೂ ಪರಿಹಾರ ನೀಡುವಲ್ಲಿ ಅತ್ಯುತ್ತಮ ಮದ್ದಾಗಿದೆ. ಜೊತೆಗೆ ಮುಟ್ಟಿನ ದಿನಗಳಲ್ಲಿ ಕಾಡುವ ನೋವಿಗೂ ಇದು ರಾಮಬಾಣವಾಗಿದೆ. ಎರಡು ಚಮಚ ಕೊತ್ತಂಬರಿ ಬೀಜವನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ದಿನಕ್ಕೆ ಮೂರು ನಾಲ್ಕು ಬಾರಿ ಸೇವಿಸಿ. ಇದರಿಂದಲೂ ಮೂತ್ರದ ಸೋಂಕು ನಿವಾರಣೆಯಾಗುತ್ತದೆ.
-ಅಕ್ಕಿ ತೊಳೆದ ನೀರು ಕೂಡ ಈ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ನೀವು ಮನೆಯಲ್ಲಿ ಬಳಸುವ ಅಕ್ಕಿ ಅಥವಾ ಕೆಂಪು ಅಕ್ಕಿಯನ್ನು2-3 ಬಾರಿ ಚೆನ್ನಾಗಿ ತೊಳೆದು, ಸ್ವಲ್ಪ ನೀರನ್ನು ಹಾಕಿ ಒಂದು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ನಂತರ ಅದನ್ನು ಕುಡಿಯಿರಿ. ಈ ನೀರನ್ನು ದಿನದಲ್ಲಿ ಯಾವಾಗ ಬೇಕಾದರೂ ಸೇವಿಸಬಹುದು.
-ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಒಮ್ಮೆಯಾದರೂ ಬಾಳೆದಿಂಡಿನ ಜ್ಯೂಸ್ ಸೇವನೆ ಮಾಡುವುದು ದೇಹಕ್ಕೆ ಒಳ್ಳೆಯದು. ಇದರಿಂದ ಯುರಿನ್ ಇನ್ಫೆಕ್ಷನ್ ಕಡಿಮೆಯಾಗುತ್ತದೆ. ಅಲ್ಲದೆ ಪಿರಿಯಡ್ಸ್ ಸಮಯದಲ್ಲಿ ಬರುವ ಹೊಟ್ಟೆ ನೋವು ಕೂಡ ಕಡಿಮೆಯಾಗುತ್ತದೆ.
-ಈ ಸೋಂಕು ಕಂಡು ಬಂದವರು ಹೆಚ್ಚು ಮಾಂಸ, ಮೊಟ್ಟೆ, ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಆದಷ್ಟು ಸೇವನೆ ಮಾಡಬೇಡಿ. ಇನ್ನು ಹೆಚ್ಚು ಉಪ್ಪು ಅಥವಾ ಖಾರ ಇರುವ ಮಸಾಲೆ ಪದಾರ್ಥಗಳು, ಉಪ್ಪಿನಕಾಯಿ ಸೇವನೆ ಮಾಡದಿರುವುದು ಒಳ್ಳೆಯದು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ