ವಿಟಮಿನ್ ಡಿ ನಿಮ್ಮ ದೇಹದ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾಗುತ್ತಾ ಹೋದ ಹಾಗೆ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಯನ್ನು ಉಂಟಾಗುತ್ತದೆ. ಆದರಂತೆಯೇ ನಿಮ್ಮ ನಾಲಿಗೆಯ ಮೇಲೆಯೂ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು. ನಿಮ್ಮ ನಾಲಿಗೆಯಲ್ಲಿ ಇಂತಹ ಕೆಲವೊಂದು ಲಕ್ಷಣಗಳು ಕಂಡುಬಂದರೆ ವಿಟಮಿನ್ ಡಿ ಕೊರತೆ ಉಂಟಾಗಿದೆ ಎಂಬುದನ್ನು ಸೂಚಿಸುತ್ತದೆ.
ಸನ್ಶೈನ್ ವಿಟಮಿನ್ ಅಥವಾ ಸೂರ್ಯನ ಕಿರಣ ಎಂದು ಕೂಡ ವಿಟಮಿನ್ ಡಿ ಯನ್ನು ಕರೆಯಲಾಗುತ್ತದೆ. ಬೆಳಗಿನ ಸೂರ್ಯನ ಕಿರಣಕ್ಕೆ ಒಡ್ಡಿಕೊಳ್ಳುವ ಹೊರತಾಗಿಯೂ ಕೆಲವು ಹಾಲಿನ ಉತ್ಪನ್ನ, ಧಾನ್ಯ, ಮೀನು ಹಾಗೂ ಮೊಟ್ಟೆಯ ಹಳದಿಗಳಂತಹ ಕೆಲವು ಆಹಾರಗಳಲ್ಲಿ ನೈಸರ್ಗಿಕವಾಗಿ ಇರುತ್ತದೆ.
ಬಾಯಿ ಉರಿ:
ಬಾಯಲ್ಲಿ ಉರಿ ಬಂದಂತೆ ಅಥವಾ ಬರ್ನಿಂಗ್ ಮೌತ್ ಸಿಂಡ್ರೋಮ್, ಬಾಯಲ್ಲಿ ಜುಮ್ಮೆನಿಸುವಿಕೆ ಮುಂತಾದ ಲಕ್ಷಣಗಳು ನಿಮ್ಮಲ್ಲಿ ಕಂಡು ಬಂದರೆ ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆ ಉಂಟಾಗಿದೆ ಎಂಬುದನ್ನು ತಿಳಿಸುತ್ತದೆ.
ಮರಗಟ್ಟುವಿಕೆ:
ನಿಮ್ಮ ದೇಹದಲ್ಲಿ ವಿಟಮಿನ್ ಡಿ ತುಂಬಾ ಕಡಿಮೆಯಾದರೆ ದೇಹವು ರಕ್ತದಲ್ಲಿ ಕಡಿಮೆ ಕ್ಯಾಲ್ಸಿಯಂ ಮಟ್ಟವನ್ನು ಹೊಂದಿರುತ್ತದೆ. ಇದು ನಿಮ್ಮ ನಾಲಿಗೆಯಲ್ಲಿ ಮರಗಟ್ಟುವಿಕೆ ಅಥವಾ ಸಂವೇದನೆಯ ಕೊರತೆಯ ಭಾವನೆಗಳನ್ನು ಉಂಟುಮಾಡುತ್ತದೆ.
ಇದನ್ನೂ ಓದಿ: ವಿಪರೀತ ಸೆಖೆ ಎಂದು ಐಸ್ ವಾಟರ್ ಕುಡಿಯುವ ಅಭ್ಯಾಸವಿದೆಯೇ? ಎಚ್ಚರ
ಒಣ ಬಾಯಿ:
ಒಣ ಬಾಯಿ ಅಥವಾ ಕ್ಸೆರೊಸ್ಟೊಮಿಯಾವು ನಿರ್ಜಲೀಕರಣ, ಆಲ್ಕೋಹಾಲ್ ಬಳಕೆ, ಧೂಮಪಾನ, ಆತಂಕ, ಕೆಲವು ಔಷಧಿಗಳು ಅಥವಾ ಯಾವುದೇ ಆಧಾರವಾಗಿರುವ ಪರಿಸ್ಥಿತಿಗಳು ಸೇರಿದಂತೆ ವಿಟಮಿನ್ ಕೊರತೆಗಳ ಜೊತೆಗೆ ಹಲವು ಕಾರಣಗಳನ್ನು ಹೊಂದಿದೆ.
ಇತರ ಲಕ್ಷಣಗಳು:
ಪ್ರತಿದಿನ ಸೂರ್ಯನ ಬೆಳಕಿನಲ್ಲಿ ಸ್ವಲ್ಪ ಸಮಯವನ್ನು ಕಳೆಯುವ ಮೂಲಕ ನಿಮ್ಮ ದೇಹವು ವಿಟಮಿನ್ ಡಿ ಹೆಚ್ಚಿಸಬಹುದು . ವಿಟಮಿನ್ ಡಿ ಕೊರತೆಯಿಂದ ಹೊರಬರಲು ಕನಿಷ್ಠ 10-20 ನಿಮಿಷಗಳ ಕಾಲ ಬೆಳಗಿನ ಬಿಸಿಲಿನ ಶಾಖವನ್ನು ಪಡೆದುಕೊಳ್ಳುವುದು ಉತ್ತಮ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಇದಲ್ಲದೇ ವಿಟಮಿನ್ ಡಿ ಹೆಚ್ಚಿಸಲು ನೈಸರ್ಗಿಕ ವಿಟಮಿನ್ ಡಿ ಭರಿತ ಆಹಾರಗಳನ್ನು ಸೇವಿಸಿ. ಸೊಪ್ಪು, ಬೆಂಡೆಕಾಯಿ, ಸೋಯಾಬೀನ್ಸ್, ಸಾಲ್ಮನ್ ಮೀನನ್ನು ನಿಮ್ಮ ಆಹಾರ ಕ್ರಮದಲ್ಲಿ ಜೋಡಿಸಿ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:44 am, Thu, 13 April 23