ತಡವಾಗಿ ಊಟ ಮಾಡುವುದರಿಂದ ಉಂಟಾಗುವ ಸಾಧಕ- ಬಾಧಕಗಳೇನು? ಡಾ. ಸುಧೀರ್ ಕುಮಾರ್ ನೀಡಿದ ಮಾಹಿತಿ ಇಲ್ಲಿದೆ

ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಹಲವಾರು ರೀತಿಯ ಕ್ರಮ ಅನುಸರಿಸಬೇಕಾಗುತ್ತದೆ. ಆದರೆ ಬಿಡುವಿಲ್ಲದ ಜೀವನಶೈಲಿಯಿಂದಾಗಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡಿರುತ್ತೇವೆ. ಅದರಲ್ಲಿ ತಡರಾತ್ರಿಯಲ್ಲಿ ಊಟ ಸೇವನೆ ಮಾಡುವುದು ಕೂಡ ಸೇರಿಕೊಂಡಿದೆ. ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ ಆದರೆ ತಡವಾಗಿ ತಿನ್ನುವ ಅಭ್ಯಾಸ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಹಾಗಾದರೆ ತಡವಾಗಿ ಊಟ ಮಾಡುವುದರಿಂದ ಉಂಟಾಗುವ ಸಾಧಕ- ಬಾಧಕಗಳೇನು? ಯಾವ ರೀತಿಯ ತತ್ವಗಳು ಒಳ್ಳೆಯದು? ಇಲ್ಲಿದೆ ತಜ್ಞರು ನೀಡಿದ ಮಾಹಿತಿ.

ತಡವಾಗಿ ಊಟ ಮಾಡುವುದರಿಂದ ಉಂಟಾಗುವ ಸಾಧಕ- ಬಾಧಕಗಳೇನು? ಡಾ. ಸುಧೀರ್ ಕುಮಾರ್ ನೀಡಿದ ಮಾಹಿತಿ ಇಲ್ಲಿದೆ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Oct 12, 2024 | 6:19 PM

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸಾಹಸವಾಗಿ ಬಿಟ್ಟಿದೆ. ಅದರಲ್ಲಿಯೂ ದೇಹದ ತೂಕವನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ನಾನಾ ರೀತಿಯ ಕಸರತ್ತು ಮಾಡಬೇಕಾಗಿದೆ. ಹಾಗಾಗಿ ನಾವು ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಹಲವಾರು ರೀತಿಯ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಆದರೆ ನಾವು ಬಿಡುವಿಲ್ಲದ ಜೀವನಶೈಲಿಯಿಂದಾಗಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಂಡಿರುತ್ತೇವೆ. ಅದರಲ್ಲಿ ತಡರಾತ್ರಿಯಲ್ಲಿ ಊಟ ಸೇವನೆ ಮಾಡುವುದು ಕೂಡ ಸೇರಿಕೊಂಡಿದೆ. ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ ಆದರೆ ತಡವಾಗಿ ತಿನ್ನುವ ಅಭ್ಯಾಸ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಹಾಗಾದರೆ ತಡವಾಗಿ ಊಟ ಮಾಡುವುದರಿಂದ ಉಂಟಾಗುವ ಸಾಧಕ- ಬಾಧಕಗಳೇನು? ಯಾವ ರೀತಿಯ ತತ್ವಗಳು ಒಳ್ಳೆಯದು? ಇಲ್ಲಿದೆ ತಜ್ಞರು ನೀಡಿದ ಮಾಹಿತಿ.

ಹೈದರಾಬಾದ್ ಅಪೋಲೋ ಆಸ್ಪತ್ರೆಯ ನರರೋಗ ತಜ್ಞರಾಗಿರುವ ಡಾ. ಸುಧೀರ್ ಕುಮಾರ್ ಅವರು ತಿಳಿಸಿರುವ ಪ್ರಕಾರ ಆರೋಗ್ಯ ಸಂಬಂಧಿತ ಪ್ರಯೋಜನಗಳನ್ನು ಪಡೆದುಕೊಳ್ಳಲು ಅಥವಾ ಅದನ್ನು ಉತ್ತಮಗೊಳಿಸಲು, ಅದರಲ್ಲಿಯೂ ವಿಶೇಷವಾಗಿ ದೇಹದ ತೂಕ, ಕಿಬ್ಬೊಟ್ಟೆಯ ಅಡಿಪೊಸಿಟಿ, ರಕ್ತದ ಗ್ಲೂಕೋಸ್, ಇನ್ಸುಲಿನ್ ಪ್ರತಿರೋಧಕ್ಕೆ ಅನುಸರಿಸಬೇಕಾದ ಎರಡು ಮೂಲಭೂತ ತತ್ವಗಳಿವೆ ಅವುಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದ್ದಾರೆ. ಇದರಿಂದ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದಾಗಿದೆ.

1. ಸಾಧ್ಯವಾದಷ್ಟು ಬೇಗ ಊಟ ಮಾಡಿ:

ಊಟದ ಸಮಯವನ್ನು ನಿಮ್ಮ ಸಾಮಾನ್ಯ ಸಮಯಕ್ಕಿಂತ ಅಂದರೆ ನೀವು ಪ್ರತಿನಿತ್ಯ ಊಟ ಮಾಡುವ ಒಂದು ಗಂಟೆ ಮುಂಚಿತವಾಗಿಯೇ ನಿಮ್ಮ ಸಮಯವನ್ನು ನಿಗದಿಪಡಿಸಿ. ಸಾಧ್ಯವಾದರೆ ಸಂಜೆ 7- 7: 30 ರ ಒಳಗೆ ಊಟ ಮಾಡಲು ಪ್ರಯತ್ನಿಸಿ. ಅಥವಾ ಅದಕ್ಕೂ ಮೊದಲೇ ಊಟ ಮಾಡಿ. ಪ್ರತಿನಿತ್ಯ ಈ ಸಮಯಕ್ಕೆ ಊಟ ಮಾಡಲು ಪ್ರಯತ್ನಿಸಿ.

ಇದನ್ನೂ ಓದಿ: ಪುರುಷರಲ್ಲಿ ಕೆಟ್ಟ ಆಲೋಚನೆ ಬರದಂತೆ ತಡೆಯುವುದು ಹೇಗೆ? ಇಲ್ಲಿದೆ ಸರಳ ಆರೋಗ್ಯ ಸಲಹೆ

2. ರಾತ್ರಿಯ ಊಟ ಮತ್ತು ಉಪಾಹಾರದ ನಡುವಿನ ಅಂತರವನ್ನು ಹೆಚ್ಚಿಸಿ:

ಪ್ರಸ್ತುತ ನಿಮ್ಮ ಊಟ ಮತ್ತು ಉಪಹಾರದ ನಡುವಿನ ಅಂತರವು 10 ಗಂಟೆಗಳಾಗಿದ್ದರೆ, ಒಂದು ಗಂಟೆ ಹೆಚ್ಚಿಸಲು ಪ್ರಾರಂಭಿಸಿ, ಅಂದರೆ ರಾತ್ರಿ ಊಟ ಮತ್ತು ಉಪಾಹಾರದ ನಡುವೆ 12- 16 ಗಂಟೆಗಳ ಅಂತರ ಇರುವಂತೆ ನೋಡಿಕೊಳ್ಳಿ. ಅಂದರೆ ರಾತ್ರಿ ಬೇಗ ಊಟ ಮಾಡಿದರೆ ಬೆಳಗ್ಗಿನ ತಿಂಡಿ ಬೇಗ ಮಾಡಬಹುದು ಇಲ್ಲವಾದಲ್ಲಿ ಊಟ ತಡವಾದರೆ ಬೆಳಗ್ಗಿನ ತಿಂಡಿಯನ್ನು ಬೇಗ ಮಾಡಲು ಆಗುವುದಿಲ್ಲ. ಹಾಗಾಗಿ ರಾತ್ರಿಯ ಊಟ ಮತ್ತು ಉಪಾಹಾರದ ನಡುವಿನ ಅಂತರವನ್ನು ಹೆಚ್ಚಿಸಿಕೊಳ್ಳಿ.

ಕೆಲವು ಸಂಶೋಧನೆಯ ಪ್ರಕಾರ ರಾತ್ರಿ 9 ಗಂಟೆಯ ನಂತರ ಊಟ ಮಾಡುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಏಕೆಂದರೆ ನಿದ್ರೆ ಮತ್ತು ಊಟದ ನಡುವೆ 2 ಗಂಟೆಗಳ ಅಂತರವನ್ನು ಹೊಂದಿರುವುದು ಬಹಳ ಮುಖ್ಯ. ಹಾಗಾಗಿ ತಜ್ಞರು ನೀಡಿರುವ ಈ ಮಾಹಿತಿ ಆರೋಗ್ಯಕ್ಕೆ ಒಳ್ಳೆಯದು. ಆದಷ್ಟು ಈ ಸಲಹೆಯನ್ನು ಅನುಸರಿಸಲು ಪ್ರಯತ್ನಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ