Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಉಸಿರಾಟದ ಸಮಸ್ಯೆಗೆ ಸಿಲುಕಿದವರಿಗೆ ರೆಮ್​​ಡೆಸಿವರ್​ ನೀಡುವುದೇಕೆ? ಯಾರಿಗೆ ಇದು ಅತ್ಯವಶ್ಯಕ?

ರೆಮ್​ಡೆಸಿವರ್ ಚುಚ್ಚುಮದ್ದನ್ನು 2014ರ ವೇಳೆಯಲ್ಲಿ ಎಬೊಲಾ ರೋಗ ಆವರಿಸಿದಾಗ ಕಂಡುಹಿಡಿಯಲಾಯ್ತು. ನಂತರ ಮರ್ಸ್​ ಖಾಯಿಲೆಗೂ ಇದನ್ನು ಬಳಸಲಾಯ್ತು. ಅದಾದ ನಂತರ ಈಗ ಕೊರೊನಾ ಸೋಂಕಿಗೆ ತುತ್ತಾಗಿ ಉಸಿರಾಟದ ಸಮಸ್ಯೆಗೆ ಸಿಲುಕುತ್ತಿರುವವರಿಗೆ ಈ ಆ್ಯಂಟಿ ವೈರಲ್ ಚುಚ್ಚುಮದ್ದನ್ನು ನೀಡಿ ಗುಣಪಡಿಸಲಾಗುತ್ತಿದೆ.

ಕೊರೊನಾದಿಂದ ಉಸಿರಾಟದ ಸಮಸ್ಯೆಗೆ ಸಿಲುಕಿದವರಿಗೆ ರೆಮ್​​ಡೆಸಿವರ್​ ನೀಡುವುದೇಕೆ? ಯಾರಿಗೆ ಇದು ಅತ್ಯವಶ್ಯಕ?
ರೆಮ್​​ಡೆಸಿವಿರ್​ ಚುಚ್ಚುಮದ್ದು
Follow us
Skanda
| Updated By: ಆಯೇಷಾ ಬಾನು

Updated on: Apr 15, 2021 | 7:01 AM

ಬೆಂಗಳೂರು: ದೇಶದೆಲ್ಲೆಡೆ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿದೆ, ರಾಜ್ಯದಲ್ಲಿಯೂ ಕೊರೊನಾ ಎರಡನೇ ಅಲೆ ಕಾವು ಜೋರಾಗಿದ್ದು ಸೋಂಕು ಹಬ್ಬದಂತೆ ತಡೆಯಲು ರಾಜ್ಯ ಸರ್ಕಾರ ಹರಸಾಹಸಪಡುತ್ತಿದೆ. ಇದೇ ಸಂದರ್ಭದಲ್ಲಿ ಕೊರೊನಾ ಲಸಿಕೆಯ ಜೊತೆಗೆ ರೆಮ್​ಡೆಸಿವರ್ ಚುಚ್ಚುಮದ್ದು ಸಹ ಸುದ್ದಿಯಲ್ಲಿದ್ದು, ಕೊರೊನಾ ಸೋಂಕಿತರಿಗೆ ರೆಮ್​ಡೆಸಿವರ್​ ಕೊಡುವ ಬಗ್ಗೆ ಬಗೆ ಬಗೆಯ ಅಭಿಪ್ರಾಯಗಳು ಹೊರಬೀಳುತ್ತಿವೆ. ಏತನ್ಮಧ್ಯೆ ಈ ಬಗ್ಗೆ ಎಚ್ಚರಿಕೆ ನೀಡಿರುವ ನೀತಿ‌ ಆಯೋಗದ ಸದಸ್ಯ ಡಾಕ್ಟರ್ ವಿ.ಕೆ.ಪೌಲ್, ರೆಮ್‌ಡೆಸಿವಿರ್ ಔಷಧವನ್ನು ಮನೆಯಲ್ಲೇ ತೆಗೆದುಕೊಳ್ಳಬಾರದು ಅದೇನಿದ್ದರೂ ಐಸಿಯುಗೆ ದಾಖಲಾದ ರೋಗಿಗಳಿಗೆ ಸೂಕ್ತ ಎಂದು ಹೇಳಿದ್ದಾರೆ. ಹಾಗಾದರೆ, ರೆಮ್​ಡೆಸಿವರ್​ ಏನು? ಅದನ್ನು ಕೊರೊನಾ ಸೋಂಕಿತರಿಗೆ ನೀಡುವುದಕ್ಕೆ ಕಾರಣಗಳೇನು? ಮನೆಯಲ್ಲೇ ಇದ್ದು ಈ ಚುಚ್ಚುಮದ್ದು ಪಡೆಯುವುದು ಏಕೆ ಉಚಿತವಲ್ಲ ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ರೆಮ್​ಡೆಸಿವರ್ ಚುಚ್ಚುಮದ್ದನ್ನು 2014ರ ವೇಳೆಯಲ್ಲಿ ಎಬೊಲಾ ರೋಗ ಆವರಿಸಿದಾಗ ಕಂಡುಹಿಡಿಯಲಾಯ್ತು. ನಂತರ ಮರ್ಸ್​ ಖಾಯಿಲೆಗೂ ಇದನ್ನು ಬಳಸಲಾಯ್ತು. ಅದಾದ ನಂತರ ಈಗ ಕೊರೊನಾ ಸೋಂಕಿಗೆ ತುತ್ತಾಗಿ ಉಸಿರಾಟದ ಸಮಸ್ಯೆಗೆ ಸಿಲುಕುತ್ತಿರುವವರಿಗೆ ಈ ಆ್ಯಂಟಿ ವೈರಲ್ ಚುಚ್ಚುಮದ್ದನ್ನು ನೀಡಿ ಗುಣಪಡಿಸಲಾಗುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ವಿಶ್ವಾದ್ಯಂತ ರೆಮ್​ಡೆಸಿವರ್ ಬಳಕೆ ಆಗುತ್ತಿದ್ದು, ಆಮ್ಲಜನಕದ ಸಮಸ್ಯೆ ಉಂಟಾಗಿ ಗಂಭೀರ ಸ್ಥಿತಿ ತಲುಪುತ್ತಿರುವ ಕೊರೊನಾ ಸೋಂಕಿತರನ್ನು ರೆಮ್​ಡೆಸಿವರ್​ ಮೂಲಕ ಬಚಾವು ಮಾಡುವ ಪ್ರಯತ್ನ ನಡೆಯುತ್ತಿದೆ.

ಒಂದು ವಯಲ್​ನಲ್ಲಿ 100ಎಂಜಿಯಷ್ಟಿರುವ ರೆಮ್​ಡೆಸಿವರ್​ ಅನ್ನು ಐದು ದಿನಗಳ ಕಾಲ ದಿನಕ್ಕೊಂದರಂತೆ ನೀಡಬೇಕಾಗುತ್ತದೆ. ಒಂದು ಚುಚ್ಚು ನೀಡಲು ಏನಿಲ್ಲವೆಂದರೂ ಅರ್ಧ ಗಂಟೆ ಬೇಕಾಗುತ್ತದೆ ಎನ್ನುವುದು ತಜ್ಞರ ಅಭಿಮತ. ಅಲ್ಲದೇ, ಚುಚ್ಚುಮದ್ದನ್ನು ನೀಡಿದ ನಂತರವೂ ಅದನ್ನು ಸ್ವೀಕರಿಸಿದ ವ್ಯಕ್ತಿಯ ಮೇಲೆ ನಿಗಾ ಇಡಬೇಕಾಗಿದ್ದು, ಅದೇ ಕಾರಣದಿಂದ ಇದು ಆಸ್ಪತ್ರೆಯಲ್ಲಿ ಮಾತ್ರ ಬಳಕೆಗೆ ಸೂಕ್ತ ಎಂದು ನೀತಿ‌ ಆಯೋಗದ ಸದಸ್ಯ ಡಾಕ್ಟರ್ ವಿ.ಕೆ.ಪೌಲ್ ಅಭಿಪ್ರಾಯಪಟ್ಟಿದ್ದಾರೆ.

ಬಹುಮುಖ್ಯವಾಗಿ ರೆಮ್​ಡೆಸಿವರ್​ ಚುಚ್ಚುಮದ್ದಿಗೆ ಭಾರೀ ಬೇಡಿಕೆ ಇದ್ದು, ಬೇಡಿಕೆಗೆ ಅನುಗುಣವಾಗಿ ಪೂರೈಕೆಯೇ ಕಷ್ಟವಾಗಿರುವ ಸಂದರ್ಭದಲ್ಲಿ ಹೋಂ ಐಸೋಲೇಶನ್​ನಲ್ಲಿ ಇರುವವರಿಗೆ, ಸೋಂಕಿನ ಲಕ್ಷಣ ಇಲ್ಲದವರಿಗೆ ಅಥವಾ ಸೋಂಕಿನ ಲಕ್ಷಣವಿದ್ದೂ ಉಸಿರಾಟದ ಸಮಸ್ಯೆಯನ್ನು ಎದುರಿಸದವರಿಗೆ ನೀಡುತ್ತಾ ಹೋದಲ್ಲಿ ನಿಜವಾಗಿಯೂ ಗಂಭೀರಾವಸ್ಥೆಗೆ ತಲುಪಿದವರಿಗೆ ನೀಡಲು ಚುಚ್ಚುಮದ್ದಿನ ಕೊರತೆ ಉಂಟಾಗುತ್ತದೆ. ಅದೆಲ್ಲದರ ಜೊತೆಗೆ, ರೆಮ್​ಡೆಸಿವರ್ ಪಡೆದ ವ್ಯಕ್ತಿಯು ವೈದ್ಯರ ನಿಗಾದಲ್ಲಿರಬೇಕಾದ ಕಾರಣ ಮನೆಯಲ್ಲೇ ಇದ್ದು ಈ ಚುಚ್ಚುಮದ್ದು ಪಡೆಯುವುದು ಸರ್ವಥಾ ಸಾಧುವಲ್ಲ ಎನ್ನುತ್ತಾರೆ ತಜ್ಞ ವೈದ್ಯರು.

ಇದನ್ನೂ ಓದಿ: ರೆಮ್​ಡೆಸಿವಿರ್ ಚುಚ್ಚುಮದ್ದಿನ ಉತ್ಪಾದನೆ ಹೆಚ್ಚಳ; ಬೆಲೆ ಇಳಿಕೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ 

ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ದಾಖಲೆ ಬರೆದ ದೆಹಲಿ: ಒಂದೇ ದಿನ 17,000 ಮಂದಿಗೆ ಕೊವಿಡ್-19

(What is Remdesivir Injection why it is using to treat Covid 19 Patients)

‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಸಾಧಾರಣ ಮೊತ್ತ ಗಳಿಸಿದ ಆರ್​ಸಿಬಿ, ಬೌಲರ್​ಗಳ ಮೇಲೆ ಹೆಚ್ಚಿನ ನಿರೀಕ್ಷೆ!
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಇನ್ಮುಂದೆ 108 ಆಂಬ್ಯುಲೆನ್ಸ್ ಸೇವೆ ಖಾಸಗಿಯಿಂದ ಸರ್ಕಾರದ ಕಂಟ್ರೋಲ್​ಗೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಬಿಹಾರದಲ್ಲಿ ಸಿಡಿಲು ಬಡಿದು 25 ಜನ ಸಾವು; ನಿತೀಶ್ ಕುಮಾರ್ ಪರಿಹಾರ ಘೋಷಣೆ
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್​ ಮೇಲೆ ಸರಣಿ ಅಪಘಾತ: ಫುಲ್ ಟ್ರಾಫಿಕ್ ಜಾಮ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ವಾಮನ ನೋಡಲು ದರ್ಶನ್ ಜತೆ ವಿಜಯಲಕ್ಷ್ಮಿ ಬರಲಿಲ್ಲ ಯಾಕೆ? ಉತ್ತರಿಸಿದ ಧನ್ವೀರ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
ಸ್ಟಾರ್ಕ್​ ಓವರ್​ನಲ್ಲಿ ಬೌಂಡರಿ ಸಿಕ್ಸರ್‌ಗಳ ಮಳೆಗರೆದ ಸಾಲ್ಟ್
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
‘ವಾಮನ’ ಸಿನಿಮಾನಲ್ಲಿ ದರ್ಶನ್​ಗೆ ಇಷ್ಟವಾದ ಅಂಶಗಳೇನು?
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಭಯೋತ್ಪಾದನೆ ವಿರುದ್ಧ ದೊಡ್ಡ ಹೆಜ್ಜೆ; ರಾಣಾ ಹಸ್ತಾಂತರಕ್ಕೆ ಪ್ರಲ್ಹಾದ್ ಜೋಶಿ
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್
ಬೇಗ ಸೆಟ್ಲ್ ಮಾಡದಿದ್ದರೆ ಎಲ್ಲರ ಬಣ್ಣ ಬಯಲು ಮಾಡ್ತೀವಿ: ಮಂಜುನಾಥ್