Herpes Simplex: ಅಗ್ನಿ ಸರ್ಪಸುತ್ತು ಎಂದರೇನು? ಸರ್ಪಸುತ್ತಿನ ವಿಧಗಳು, ಮನೆಮದ್ದುಗಳ ಕುರಿತು ಇಲ್ಲಿದೆ ಮಾಹಿತಿ
ಎಲ್ಲಾ ವೈರಲ್ ಇನ್ಫೆಕ್ಷನ್ಗಳಂತೆ ಸರ್ಪಸುತ್ತು ಕೂಡ ಒಂದು. ಅದಕ್ಕೆ ಹರ್ಪ್ಲಸ್ ಸಿಂಪ್ಲೆಕ್ಸ್ ವೈರಸ್ ಎಂದೂ ಕರೆಯುತ್ತಾರೆ. ಈ ವೈರಸ್ ದೇಹವನ್ನು ಸೇರಿ 2 ವಾರಗಳ ಬಳಿಕ ಸರ್ಪಸುತ್ತನ್ನು ಉಂಟು ಮಾಡುತ್ತದೆ. ಸರ್ಪಸುತ್ತಿನಲ್ಲಿ ಆರು ಬಗೆಗಳಿವೆ.
ಎಲ್ಲಾ ವೈರಲ್ ಇನ್ಫೆಕ್ಷನ್ಗಳಂತೆ ಸರ್ಪಸುತ್ತು ಕೂಡ ಒಂದು. ಅದಕ್ಕೆ ಹರ್ಪ್ಲಸ್ ಸಿಂಪ್ಲೆಕ್ಸ್ ವೈರಸ್ ಎಂದೂ ಕರೆಯುತ್ತಾರೆ. ಈ ವೈರಸ್ ದೇಹವನ್ನು ಸೇರಿ 2 ವಾರಗಳ ಬಳಿಕ ಸರ್ಪಸುತ್ತನ್ನು ಉಂಟು ಮಾಡುತ್ತದೆ. ಸರ್ಪಸುತ್ತಿನಲ್ಲಿ ಆರು ಬಗೆಗಳಿವೆ. -ವಾತಜ ವಿಸರ್ಪ -ಪಿತ್ತಜ ವಿಸರ್ಪ -ಕಫಜ ವಿಸರ್ಪ -ಸನ್ನಿವಾತಜ ವಿಸರ್ಪ -ಅಗ್ನಿ ವಿಸರ್ಪ -ಗ್ರಂಥಿ ವಿಸರ್ಪ ಇವುಗಳಲ್ಲಿ ಅತಿಯಾಗಿ ತೊಂದರೆಯನ್ನು ಉಂಟು ಮಾಡುವುದೇ ಅಗ್ನಿ ವಿಸರ್ಪ. ಒಂದೊಮ್ಮೆ ಅಗ್ನಿ ವಿಸರ್ಪಕ್ಕೆ ತುತ್ತಾದರೆ ಗುಳ್ಳೆಗಳು ಮಾಗಿದ ಬಳಿಕವು ಸುಮಾರು ನಾಲ್ಕೈದು ವರ್ಷಗಳ ಕಾಲ ಪದೇ ಪದೇ ನೋವು ಕಾಣಿಸಿಕೊಳ್ಳುತ್ತದೆ. ಸುಟ್ಟಂತಹ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದು ಕೊರಳು, ತೊಡೆಸಂಧಿಯಲ್ಲಿ ಕಾಣಿಸಿಕೊಳ್ಳುತ್ತವೆ. ಅಗ್ನಿ ಸರ್ಪಸುತ್ತು ಉಂಟಾದಾಗ ದೇಹವನ್ನು ದುರ್ಬಲವಾಗಿರುತ್ತದೆ. ಬೇರೆಲ್ಲಾ ಸರ್ಪಸುತ್ತು ಬಹುಬೇಗ ವಾಸಿಯಾಗುತ್ತದೆ. ಆದರೆ ಅಗ್ನಿ ಸರ್ಪಸುತ್ತು ಮಾತ್ರ ದೀರ್ಘಕಾಲ ನೋವು ನೀಡುತ್ತದೆ.
ವೈರಸ್ ತಗುಲಿ ಎರಡು ವಾರಗಳಲ್ಲಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇದ್ದರೆ ಎಲ್ಲಾ ವೈರಲ್ ಇನ್ಫೆಕ್ಷನ್ಗೆ ಸೃಷ್ಟಿಯಾಗುವಂತೆ ನಮ್ಮ ದೇಹದಲ್ಲಿ ಪ್ರತಿರೋಧಕ ಶಕ್ತಿ ಸೃಷ್ಟಿಯಾಗಿ ಎಚ್ಎಸ್ವಿಯನ್ನು ಕೊಲ್ಲುತ್ತದೆ. ಆ ವ್ಯಕ್ತಿ ಬೇಗ ಗುಣಮುಖನಾಗುತ್ತಾನೆ. ಒಂದೊಮ್ಮೆ ರೋಗ ಇರುವ ಸೋಂಕಿತ ಬಳಸಿದ ವಸ್ತು ಬಳಸಿದರೆ, ಯಾರೊಂದಿಗಾದರೂ ದೈಹಿಕ ಸಂಪರ್ಕ ಹೊಂದಿದರೆ ಅವರಿಗೂ ತಗುಲುವ ಸಾಧ್ಯತೆ ಇರುತ್ತದೆ.
ಅಗ್ನಿ ಸರ್ಪಸುತ್ತು ಕಾಣಿಸಿಕೊಂಡರೆ ಬಾಯಿ ಹಾಗೂ ಜನನಾಂಗದಲ್ಲಿ ಉಂಟಾಗುವ ಸರ್ಪಸುತ್ತು ನೀಡುವ ಯಾತನೆ ತುಂಬಾ ಭೀಕರವಾಗಿರುತ್ತದೆ. ಕೂರುವಂತಿಲ್ಲ, ಏಳುವಂತಿಲ್ಲ, ಮಲಗುವಂತಿಲ್ಲ. ಎಲ್ಲಿ ನೋವಾಗುತ್ತಿದೆ ಎನ್ನುವುದನ್ನು ತಿಳಿಯಲೂ ಸಾಧ್ಯವಾಗದಷ್ಟು ನೋವು. 2 ರಿಂದ 21 ದಿನಗಳವರೆಗೆ ಸೋಂಕಿನ ತೀವ್ರತೆ ಇರುತ್ತದೆ. ಸೋಂಕು ಕಾಯಿಲೆ ಬೇರೆ. ಇದರ ಇನ್ನೊಂದು ಅಪಾಯ ಎಂದರೆ, ಒಮ್ಮೆ ತಗುಲಿದ ಸೋಂಕು ಜೀವಮಾನವಿಡೀ ಶರೀರದಲ್ಲಿಯೇ ಇರುತ್ತದೆ, ಅದನ್ನು ಸಂಪೂರ್ಣವಾಗಿ ನಾಶಗೊಳಿಸುವುದು ಸಾಧ್ಯವಿಲ್ಲ.
ಸರ್ಪಸುತ್ತಿಗೆ ಕಾರಣವೇನು? -ಸಾಮಾನ್ಯವಾಗಿ ಪಿತ್ತದೋಷದಿಂದ ಸರ್ಪಸುತ್ತು ಕಾಡುತ್ತದೆ, ದೇಹದಲ್ಲಿ ತ್ರಿದೋಷಗಳು ಸಮುತೋಲನ ಕಳೆದುಕೊಂಡಾಗಲೂ ಈ ಸಮಸ್ಯೆ ಎದುರಾಗುತ್ತದೆ. -ಆಯುರ್ವೇದದ ಪ್ರಕಾರ , ಲಂಘನ ಅಂದರೆ ನಿರಾಹಾರ ಇಲ್ಲವೇ ಲಘು ಆಹಾರ ಸೇವನೆಯಿಂದ ಸರ್ಪಸುತ್ತನ್ನು ಹತೋಟಿಗೆ ತರಬಹುದು. -ರಕ್ತ ಶುದ್ಧಿಗಾಗಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಮೃತ ಬಳ್ಳಿಯ ಕಷಾಯ ಸೇವನೆ ಮಾಡಬಹುದು. -ಎಳನೀರನ್ನು ಕೆಂಪು ಕಲ್ಲುಸಕ್ಕರೆಯೊಂದಿಗೆ ಕುಡಿಯುವುದು -ಜ್ಯೇಷ್ಟಮಧು ಚೂರ್ಣ ಹಾಗೂ ಬೇವಿನ ಎಲೆಯನ್ನು ಅರೆದು ಲೇಪ ಹಚ್ಚುವುದರಿಂದ ಗಾಯಗಳು ವಾಸಿಯಾಗುತ್ತವೆ -ಲೋಳೆಸರ ಹಾಗೂ ಜೇನು ತುಪ್ಪವನ್ನು ಸಮಪ್ರಮಾಣದಲ್ಲಿ ಕಲಸಿ ಹಚ್ಚಬಹುದು, ಇದರಿಂದ ಗಾಯದಿಂದಾಗಿ ಕಲೆಗಳನ್ನುಹೋಗಲಾಡಿಸಬಹುದು -ರಕ್ತಚಂದನ ಚೂರ್ಣ, ಅರ್ಜುನ ಮರದ ತೊಗಟೆಯ ಚೂರ್ಣವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಬೇಕು. -ಪಂಚಕರ್ಮ ಚಿಕಿತ್ಸೆ ಮಾಡಿಸಿ ಬಳಿಕ ಔಷಧ ಮಾಡಿದರೆ ಉತ್ತಮ ಪರಿಹಾರ ದೊರೆಯಲಿದೆ -ಮಕ್ಕಳಿಂದ ಅಂತರ ಕಾಯ್ದುಕೊಳ್ಳಿ -ಸೋಂಕಿತರ ಸಂಪರ್ಕಕ್ಕೆ ಬಂದಿರುವ ವಸ್ತುಗಳ ನಡುವೆ ಅಂತರ ಕಾಯ್ದುಕೊಳ್ಳಿ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ