Sleeping vishnu pose: ವಿಷ್ಣುವಿನ ರೀತಿ ಅನಂತಾಸನದಲ್ಲಿ ಮಲಗುವ ಅಭ್ಯಾಸವಿದ್ದರೆ ಈ ಸಮಸ್ಯೆ ಬರುವುದಿಲ್ಲ
ಮಲಗಿರುವ ರೀತಿಯ ವಿಷ್ಣು ಭಂಗಿ ಅಥವಾ ಅನಂತಾಸನವನ್ನು ನಿಮ್ಮ ದಿನಚರಿಯ ಭಾಗವಾಗಿ ಮಾಡಿಕೊಳ್ಳುವುದು, ಆರೋಗ್ಯ ಕಾಪಾಡಿಕೊಳ್ಳಲು ನೀವು ಮಾಡಬಹುದಾದ ಉತ್ತಮ ಆಯ್ಕೆಯಾಗಿದೆ. ಇದು ಸರಳವಾಗಿ ಕಂಡರೂ, ಕೂಡ ಈ ಭಂಗಿ ಬಹಳ ಪರಿಣಾಮಕಾರಿಯಾಗಿದೆ. ಇದು ದೈಹಿಕ ಪ್ರಯೋಜನಗಳನ್ನು ಮಾತ್ರವಲ್ಲ ಮಾನಸಿಕ ಮತ್ತು ಭಾವನಾತ್ಮಕವಾಗಿಯೂ ನಮ್ಮನ್ನು ಶಾಂತವಾಗಿರುವಂತೆ ಮಾಡುತ್ತದೆ. ಹಾಗಾದರೆ ಇದನ್ನು ತಪ್ಪದೆ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು? ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಅನಂತಾಸನದ ಬಗ್ಗೆ ನೀವು ಕೇಳಿರಬಹುದು. ಇದು ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಮಲಗಿರುವ ರೀತಿಯ ವಿಷ್ಣು ಭಂಗಿ ಅಥವಾ ಅನಂತಾಸನವನ್ನು ನಿಮ್ಮ ದಿನಚರಿಯ ಭಾಗವಾಗಿ ಮಾಡಿಕೊಳ್ಳುವುದು, ಆರೋಗ್ಯ ಕಾಪಾಡಿಕೊಳ್ಳಲು ನೀವು ಮಾಡಬಹುದಾದ ಉತ್ತಮ ಆಯ್ಕೆಯಾಗಿದೆ. ಇದು ಸರಳವಾಗಿ ಕಂಡರೂ, ಕೂಡ ಈ ಭಂಗಿ ಬಹಳ ಪರಿಣಾಮಕಾರಿಯಾಗಿದೆ. ಇದು ದೈಹಿಕ ಪ್ರಯೋಜನಗಳನ್ನು ಮಾತ್ರವಲ್ಲ ಮಾನಸಿಕ ಮತ್ತು ಭಾವನಾತ್ಮಕವಾಗಿಯೂ ನಮ್ಮನ್ನು ಶಾಂತವಾಗಿರುವಂತೆ ಮಾಡುತ್ತದೆ. ಅಲ್ಲದೆ ಅನಂತಾಸನ ಉದ್ವೇಗ, ಆತಂಕ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ. ಯೋಗಕ್ಷೇಮ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ಭಂಗಿಯು ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ. ಆದರೆ ಇದರ ಪ್ರಯೋಜನಗಳನ್ನು ಪಡೆಯಲು ಸರಿಯಾದ ರೀತಿಯಲ್ಲಿ ಮಾಡಬೇಕಾಗುತ್ತದೆ. ಹಾಗಾದರೆ ಇದನ್ನು ತಪ್ಪದೆ ಮಾಡುವುದರಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು? ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ಮಲಗಿರುವ ವಿಷ್ಣುವಿನ ಭಂಗಿ ಯಾವುದು?
ಅನಂತ ಎಂದು ಆದಿಶೇಷನ ಮೇಲೆ ಮಲಗಿರುವ ಭಗವಂತ ವಿಷ್ಣುವಿಗೆ ಕರೆಯುತ್ತಾರೆ. ಅವನು ನಿದ್ರಿಸುತ್ತಿರುವ ಭಂಗಿಯನ್ನು ನೀವು ನೋಡಿರಬಹುದು. ಹಾಗಾಗಿ ಅನಂತಪದ್ಮನಾಭನು ಅನಂತಶಯನನಾಗಿ ಯೋಗನಿದ್ರೆಯಲ್ಲಿರುವ ಭಂಗಿಯನ್ನು ಹೋಲುವ ಸ್ಥಿತಿಗೆ ಅನಂತಾಸನ ಎಂದು ಕರೆಯುತ್ತಾರೆ. ಇದು ಒಂದು ರೀತಿಯ ವಿಶ್ರಾಂತಿ ಯೋಗ ಭಂಗಿಯಾಗಿದೆ. ಇದರಲ್ಲಿ ನೀವು ನಿಧಾನವಾಗಿ ಮೊದಲು ಬಲ ಮಗ್ಗುಲಿನಲ್ಲಿ ಮಲಗಬೇಕು. ಬಲಮೊಣಕೈಯನ್ನು ಮಡಿಸಿ ಬಲಹಸ್ತದ ಮೇಲೆ ತಲೆಯನ್ನಿಟ್ಟುಕೊಳ್ಳಬೇಕು. ನಂತರ ಎಡಗಾಲಿನ ಹೆಬ್ಬೆರಳನ್ನು ಎಡಗೈನಿಂದ ಹಿಡಿಯಬೇಕು. ಈಗ ಎಡಗಾಲನ್ನು ನೇರ ಮಾಡಬೇಕು. ದೃಷ್ಟಿ ನೇರವಾಗಿರಬೇಕು. ಈ ಸ್ಥಿತಿಯಲ್ಲಿ ಸಹಜವಾದ ಉಸಿರಾಟ ಕ್ರಿಯೆ ಇರಲಿ. ನಂತರ ಕಾಲನ್ನು ಕೆಳಗಿಳಿಸಿ ಕೈಯನ್ನು ಬಿಡಬೇಕು. ವಿಶ್ರಾಂತಿ ಪಡೆದು ಮತ್ತೊಂದು ಕಡೆ ಆಸನ ಮುಂದುವರೆಸಿ. ಇದು ದೈಹಿಕ ಪ್ರಯೋಜನಗಳ ಜೊತೆಗೆ ವಿಶ್ರಾಂತಿಯನ್ನು ನೀಡುತ್ತದೆ ಅಲ್ಲದೆ ಒತ್ತಡವನ್ನು ಕಡಿಮೆ ಮಾಡಿ ಆಂತರಿಕ ಶಾಂತಿಯನ್ನು ಉತ್ತೇಜಿಸುತ್ತದೆ.
ಅನಂತಾಸನ ಮಾಡುವುದರಿಂದ ಸಿಗುವ ಪ್ರಯೋಜನಗಳು (ಸ್ಲೀಪಿಂಗ್ ವಿಷ್ಣು ಭಂಗಿ)
1. ಸ್ನಾಯುಗಳನ್ನು ಬಲಪಡಿಸುತ್ತದೆ
ಅನಂತಾಸನ ನಿಮ್ಮ ಸ್ನಾಯುಗಳನ್ನು ಬಲಪಡಿಸುತ್ತದೆ. ಪಕ್ಕೆಲುಬುಗಳಲ್ಲಿನ ಕೊಬ್ಬಿನಾಂಶವನ್ನು ಕರಗಿಸುತ್ತದೆ. ಅಲ್ಲದೆ ಈ ಭಂಗಿ ಉದ್ವೇಗವನ್ನು ಕಡಿಮೆ ಮಾಡುತ್ತದೆ. ಅನಂತಾಸನವನ್ನು ನಿಯಮಿತವಾಗಿ ಅಭ್ಯಾಸ ಮಾಡುವ ಮೂಲಕ, ನಿಮ್ಮ ಒಟ್ಟಾರೆ ಆರೋಗ್ಯವನ್ನು ಗಮನಾರ್ಹವಾಗಿ ಸುಧಾರಿಸಬಹುದು, ಚಲನೆಗಳನ್ನು ಸುಲಭಗೊಳಿಸಬಹುದು ಮತ್ತು ಗಾಯಗಳ ಅಪಾಯವನ್ನು ಕೂಡ ಕಡಿಮೆ ಮಾಡಬಹುದು.
2. ಶಕ್ತಿಯನ್ನು ಹೆಚ್ಚಿಸುತ್ತದೆ
ಸ್ಲೀಪಿಂಗ್ ವಿಷ್ಣು ಭಂಗಿಯು ದೇಹದ ಶಕ್ತಿಯನ್ನು ಹೆಚ್ಚಿಸಲು, ವಿಶೇಷವಾಗಿ ಪ್ರಮುಖ ಸ್ನಾಯುಗಳಿಗೆ ಒಳ್ಳೆಯದು. ಈ ಭಂಗಿಯು ನಿಮ್ಮ ಭುಜ ಮತ್ತು ತೋಳಿಗೆ ಶಕ್ತಿ ನೀಡುತ್ತದೆ. ಅನಂತಾಸನದ ನಿಯಮಿತ ಅಭ್ಯಾಸವು ನಿಮ್ಮ ಪ್ರಮುಖ ಶಕ್ತಿ ಮತ್ತು ಒಟ್ಟಾರೆ ಸ್ಥಿರತೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಜರ್ನಲ್ ಆಫ್ ಆಯುರ್ವೇದ ಅಂಡ್ ಇಂಟಿಗ್ರೇಟೆಡ್ ಮೆಡಿಸಿನ್ ನಲ್ಲಿ ಪ್ರಕಟವಾದ ಅಧ್ಯಯನವು ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ನಿಮ್ಮ ಸ್ನಾಯು ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದನ್ನು ಕಂಡುಕೊಂಡಿದೆ.
3. ಸಮತೋಲನವನ್ನು ಹೆಚ್ಚಿಸುತ್ತದೆ
ನಿಮ್ಮ ದೇಹದ ಸಮತೋಲನವನ್ನು ಸುಧಾರಿಸಲು ಸ್ಲೀಪಿಂಗ್ ವಿಷ್ಣು ಭಂಗಿಯು ಅತ್ಯುತ್ತಮ ವಿಧಾನವಾಗಿದೆ. ಇದು ದೇಹದ ಸಮತೋಲನವನ್ನು ಪರಿಣಾಮಕಾರಿಯಾಗಿ ಕಾಪಾಡಿಕೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ.
4. ಬೆನ್ನುನೋವನ್ನು ಕಡಿಮೆ ಮಾಡುತ್ತದೆ
ಅನಂತಾಸನವು ಬೆನ್ನುಮೂಳೆ ಮತ್ತು ಸುತ್ತಮುತ್ತಲಿನ ಸ್ನಾಯುಗಳನ್ನು ನಿಧಾನವಾಗಿ ಹಿಗ್ಗಿಸುವ ಮೂಲಕ ಕೆಳ ಬೆನ್ನಿನ ಅಸ್ವಸ್ಥತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಈ ಆಸನ ಒತ್ತಡವನ್ನು ನಿವಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಭಂಗಿಯು ಸ್ನಾಯುಗಳು ಮತ್ತು ಸೊಂಟದ ಫ್ಲೆಕ್ಸರ್ ಗಳನ್ನು ಸಹ ವಿಸ್ತರಿಸುತ್ತದೆ, ಇದು ಬಿಗಿಯಾದರೆ ಕೆಳ ಬೆನ್ನುನೋವಿಗೆ ಕಾರಣವಾಗಬಹುದು. ಹಾಗಾಗಿ ಅನಂತಾಸನದ ನಿಯಮಿತ ಅಭ್ಯಾಸವು ಬೆನ್ನುಮೂಳೆಯನ್ನು ಗಟ್ಟಿಗೊಳಿಸುತ್ತದೆ ಜೊತೆಗೆ ಸ್ನಾಯುವಿನ ಉದ್ವೇಗವನ್ನು ಕಡಿಮೆ ಮಾಡಲು ಮತ್ತು ಕೆಳ ಬೆನ್ನುನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ವ್ಯಾಯಾಮ ಸುರಕ್ಷಿತವೇ? ತಜ್ಞರ ಸಲಹೆ ಇಲ್ಲಿದೆ
5. ಒತ್ತಡವನ್ನು ನಿವಾರಿಸುತ್ತದೆ
ಅನಂತಾಸನ ಹೆಚ್ಚು ಪರಿಣಾಮಕಾರಿಯಾಗಿದ್ದು ಒತ್ತಡ ನಿವಾರಕ ಮತ್ತು ವಿಶ್ರಾಂತಿ ಪಡೆಯುವುದಕ್ಕೆ ಸಹಕಾರಿಯಾಗಿದೆ. ಅಲ್ಲದೆ ಇದು ಕಾರ್ಟಿಸೋಲ್ ನಂತಹ ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ಅನಂತಾಸನವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ, ಇದರ ಪರಿಣಾಮವಾಗಿ ಒತ್ತಡ ಮುಕ್ತ ಜೀವನಶೈಲಿಯನ್ನು ರೂಢಿಸಿಕೊಳ್ಳಬಹುದು. ಇಂಟರ್ನ್ಯಾಷನಲ್ ಜರ್ನಲ್ ಆಫ್ ಪ್ರಿವೆಂಟಿವ್ ಮೆಡಿಸಿನ್ನಲ್ಲಿ ಪ್ರಕಟವಾದ ಅಧ್ಯಯನವು ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ನಿವಾರಿಸಲು ಯೋಗ ಉಪಯುಕ್ತವಾಗಿದೆ ಎಂದು ಕಂಡುಹಿಡಿದಿದೆ.
ಅಡ್ಡಪರಿಣಾಮಗಳು ಇವೆಯೇ?
ಈ ಭಂಗಿಯ ಕೆಲವು ಸಂಭಾವ್ಯ ಅಡ್ಡಪರಿಣಾಮಗಳನ್ನು ಹೊಂದಿದೆ. ಒಂದು ವೇಳೆ ಈ ಆಸನವನ್ನು ನೀವು ಸರಿಯಾಗಿ ಮಾಡದಿದ್ದರೆ, ಬೆನ್ನಿನ ಕೆಳಭಾಗಕ್ಕೆ ಹೆಚ್ಚು ಒತ್ತಡ ನೀಡುತ್ತದೆ. ಅದರಲ್ಲಿಯೂ ನಿಮಗೆ ಈ ಮೊದಲೇ ಬೆನ್ನು ನೋವಿನ ಸಮಸ್ಯೆ ಇದ್ದರೆ ಸ್ವಲ್ಪ ಜಾಗರೂಕರಾಗಿರಬೇಕು. ಜೊತೆಗೆ ನೀವು ಭುಜಕ್ಕೆ ಸಂಬಂಧ ಪಟ್ಟಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಈ ಆಸನವನ್ನು ವೈದ್ಯರ ಸಲಹೆ ತೆಗೆದುಕೊಂಡು ಮಾಡಿ. ಈ ಆಸನದಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳು ಇವೆ. ಅಲ್ಲದೆ ಕೆಲವು ಅಡ್ಡಪರಿಣಾಮಗಳು ಇವೆ. ಹಾಗಾಗಿ ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಆಸನವನ್ನು ಮಾಡಬೇಕು. ಅದಕ್ಕೂ ಮೊದಲು ವೈದ್ಯರ ಸಲಹೆ ಪಡೆದುಕೊಳ್ಳಬೇಕು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:02 am, Sat, 7 December 24