AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Winter Drink: ಚಳಿಗಾಲದಲ್ಲಿ ಕಾಡುವ ರೋಗಗಳಿಗೆ ಆಯುರ್ವೇದಿಕ್ ಪಾನೀಯಗಳು

ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಮತ್ತು ಕೆಮ್ಮು ಮತ್ತು ಶೀತವನ್ನು ತಡೆಗಟ್ಟಲು ಆಯುರ್ವೇದ ತಜ್ಞರು ಕೆಲವೊಂದು ಪಾನೀಯವನ್ನು ಶಿಫಾರಸು ಮಾಡುತ್ತಾರೆ. ನಿತ್ಯವೂ ಇದನ್ನು ಕುಡಿಯುವುದರಿಂದ ಆರೋಗ್ಯವಾಗಿರುತ್ತದೆ ಎನ್ನುತ್ತಾರೆ.

Winter Drink: ಚಳಿಗಾಲದಲ್ಲಿ ಕಾಡುವ ರೋಗಗಳಿಗೆ ಆಯುರ್ವೇದಿಕ್ ಪಾನೀಯಗಳು
ಚಳಿಗಾಲದಲ್ಲಿ ಉಂಟಾಗುವ ರೋಗಗಳಿಗೆ ಆಯುರ್ವೇದಿಕ್ ಪಾನೀಯ
TV9 Web
| Edited By: |

Updated on: Dec 02, 2022 | 6:01 AM

Share

ಮುಂಜಾನೆ ಬೀಸುವ ತಣ್ಣನೆಯ ಗಾಳಿ ಮೈ ನಡುಗುವಂತೆ ಮಾಡುತ್ತಿದೆ. ಕಡಿಮೆ ತಾಪಮಾನದೊಂದಿಗೆ ಹವಾಮಾನವು ಆಹ್ಲಾದಕರವಾಗಿದ್ದರೂ ಶೀತ, ಗ್ಯಾಸ್ಟ್ರಿಕ್ ಸಮಸ್ಯೆ, ಕೆಮ್ಮು, ತಲೆನೋವು ಮುಂತಾದ ಅನೇಕ ಆರೋಗ್ಯ ಸಮಸ್ಯೆ (Health Problems)ಗಳು ಉದ್ಭವಿಸುತ್ತವೆ. ಚಳಿಗಾಲದ ಸಮಯದಲ್ಲಿ (Winter season) ಪ್ರತಿರಕ್ಷಣಾ ವ್ಯವಸ್ಥೆಯು ಹೆಚ್ಚು ಪರಿಣಾಮ ಬೀರುತ್ತದೆ. ಇವುಗಳಲ್ಲಿ ಕೂದಲು ಉದುರುವುದು ಮುಖ್ಯ ಸಮಸ್ಯೆಯಾಗಿದೆ. ಅದಕ್ಕಾಗಿಯೇ ಈ ಋತುವಿನಲ್ಲಿ ಆರೋಗ್ಯಕರ ಜೀವನಶೈಲಿ (Lifestyle)ಯನ್ನು ಅನುಸರಿಸುವುದು ಬಹಳ ಮುಖ್ಯ. ಕೂದಲು ಉದುರುವುದು, ಮೈಗ್ರೇನ್, ತೂಕ ನಷ್ಟ, ಸಕ್ಕರೆ ಮಟ್ಟಗಳು, ಇನ್ಸುಲಿನ್ ಪ್ರತಿರೋಧ, ಹಾರ್ಮೋನ್ ಅಸಮತೋಲನ, ಉಬ್ಬುವುದು ಉದ್ಭವಿಸುತ್ತದೆ. ಈ ಅವಧಿಯಲ್ಲಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಮತ್ತು ಕೆಮ್ಮು ಮತ್ತು ಶೀತವನ್ನು ತಡೆಗಟ್ಟಲು ಆಯುರ್ವೇದ ತಜ್ಞರು ಪಾನೀಯವನ್ನು ಶಿಫಾರಸು ಮಾಡುತ್ತಾರೆ. ನಿತ್ಯವೂ ಇದನ್ನು ಕುಡಿಯುವುದರಿಂದ ಆರೋಗ್ಯವಾಗಿರುತ್ತದೆ ಎನ್ನುತ್ತಾರೆ. ಮೈಗ್ರೇನ್, ಅಧಿಕ ರಕ್ತದೊತ್ತಡ, ವಾಕರಿಕೆ ಕಡಿಮೆ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಿದೆ.

ಪಾನಿಯ ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ 2 ಗ್ಲಾಸ್ ನೀರು ಹಾಕಿ. 7-10 ಕರಿಬೇವಿನ ಎಲೆಗಳು, 3 ಲವಂಗ, 1 ಚಮಚ ಕೊತ್ತಂಬರಿ ಬೀಜಗಳು, 1 ಚಮಚ ಜೀರಿಗೆ, 1 ಒಣ ಏಲಕ್ಕಿ, 1 ಇಂಚಿನ ಶುಂಠಿ ಸೇರಿಸಿ. ನಂತರ ಮಧ್ಯಮ ಉರಿಯಲ್ಲಿ 5 ನಿಮಿಷ ಕುದಿಸಿ ಅದನ್ನು ತಣ್ಣಗಾಗಿಸಿ ಸೋಸಬೇಕು. ನೀವು ಈ ಪಾನೀಯವನ್ನು ಸ್ವಲ್ಪ ಸ್ವಲ್ಪವಾಗಿ ಸೇವನೆ ಮಾಡಬೇಕು. ಇದರಿಂದ ಆರೋಗ್ಯದ ಪ್ರಯೋಜನಗಳನ್ನು ಪಡೆಯುತ್ತೀರಿ. ತೂಕ ಇಳಿಸಿಕೊಳ್ಳಲು ಬಯಸುವವರು ನಿಂಬೆ ರಸ ಮತ್ತು ಜೇನುತುಪ್ಪವನ್ನು ಕೂಡ ಸೇರಿಸಬಹುದು.

ಇದನ್ನೂ ಓದಿ: Winter Tips: ಚಳಿಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೇ ಹಾಗಾದ್ರೆ ಈ ಆಹಾರಗಳಿಂದ ದೂರವಿರಿ

ಈ ಪಾನೀಯವನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ. ಕೂದಲು ಉದುರುವಿಕೆಗೆ ಕರಿಬೇವಿನ ಎಲೆಗಳು ಉಪಯುಕ್ತವಾಗಿವೆ. ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಿಮೋಗ್ಲೋಬಿನ್, ತೂಕ ನಷ್ಟವನ್ನು ಸುಧಾರಿಸುತ್ತದೆ. ಕೊತ್ತಂಬರಿ ಬೀಜಗಳು ಚಯಾಪಚಯ, ಹಾರ್ಮೋನುಗಳ ಸಮತೋಲನ, ತಲೆನೋವು, ಥೈರಾಯ್ಡ್ ಅನ್ನು ಪರಿಣಾಮಕಾರಿಯಾಗಿ ಸುಧಾರಿಸುತ್ತದೆ.

ಅಜವಾನ ಎಲೆಗಳು ಅಜೀರ್ಣ, ಕೆಮ್ಮು, ಉಬ್ಬುವುದು, ಮಧುಮೇಹ, ಅಸ್ತಮಾ, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಜೀರಿಗೆಯು ಸಕ್ಕರೆ, ಕೊಬ್ಬು ನಷ್ಟ, ಮೈಗ್ರೇನ್, ಆಮ್ಲೀಯತೆ ಮತ್ತು ಕೊಲೆಸ್ಟ್ರಾಲ್ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ಎಲ್ಲಾ ಚಳಿಗಾಲದ ಕಾಯಿಲೆಗಳಿಗೆ ಶುಂಠಿ ಅದ್ಭುತಗಳನ್ನು ಮಾಡುತ್ತದೆ. ಗ್ಯಾಸ್, ಹಸಿವು ನಷ್ಟ, ತೂಕ ನಷ್ಟ, ಅಜೀರ್ಣಕ್ಕೆ ಸಹಾಯ ಮಾಡುತ್ತದೆ.

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ