ಅನೇಕ ಮಹಿಳೆಯರು ಮುಟ್ಟಿನ ಸಮಯದಲ್ಲಿ ಅಥವಾ ಋತುಚಕ್ರದ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಅನೇಕರಿಗೆ ಹೊಟ್ಟೆ ಕೆಳ ಭಾಗದಲ್ಲಿ ಸೆಳೆತ ಉಂಟಾಗುತ್ತದೆ. ಕೆಲವೊಮ್ಮೆ ತೊಡೆ, ಕಾಲು ಮತ್ತು ಸೊಂಟದ ನೋವು ಕಾಣಿಸಿಕೊಳ್ಳುತ್ತದೆ. ಗರ್ಭಾಶಯದಲ್ಲಿ ರಕ್ತದ ಕೊರತೆಯಿಂದ ಹೊಟ್ಟೆ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ. ಹಾಗಿರುವಾಗ ನೀವು ಸೇವಿಸುವ ಆಹಾರ ಕ್ರಮ ಮತ್ತು ಕೆಲವು ವಿಷಯಗಳನ್ನು ನೆನಪಿನಲ್ಲಿಡಬೇಕು. ಈ ಕೆಲವು ಅಂಶಗಳು ಯುವತಿಯರಲ್ಲಿ ಅಥವಾ ಮಹಿಳೆಯರಲ್ಲಿ ಹೊಟ್ಟೆ ನೋವು ವಿಪರೀತವಾಗಿ ಕಾಣಿಸಿಕೊಳ್ಳಲು ಕಾರಣವಾಗುತ್ತದೆ.
ಮುಟ್ಟಿನ ಸಮಯದಲ್ಲಿ ಮಹಿಳೆಯರು ಹೆಚ್ಚು ಚಹ ಮತ್ತು ಕಾಫಿಯನ್ನು ಸೇವಿಸುತ್ತಾರೆ. ಆದರೆ ಇದರಲ್ಲಿನ ಕೆಫೀನ್ ನೋವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರಿಂದ ಹೊಟ್ಟೆಯಲ್ಲಿ ಹೆಚ್ಚು ಗ್ಯಾಸ್ ಅಥವಾ ವಾಯು ಸಮಸ್ಯೆ ಕಂಡು ಬರುತ್ತದೆ. ಆದ್ದರಿಂದ ಮುಟ್ಟಿನ ಸಮಯದಲ್ಲಿ ಹೆಚ್ಚು ಚಹಾ ಮತ್ತು ಕಾಫಿ ಸೇವನೆ ಒಳ್ಳೆಯದಲ್ಲ.
ಚಾಕಲೇಟ್ ಸೇವಿಸುವುದರಿಂದ ಹೊಟ್ಟೆ ಸೆಳೆತ ಇನ್ನಷ್ಟು ಹೆಚ್ಚಾಗುತ್ತದೆ. ಚಾಕಲೇಟ್ನಲ್ಲಿ ಕೆಫೀನ್ ಅಂಶವಿರುವುದರಿಂದ ಸ್ನಾಯುಗಳು ಸಂಕುಚಿತಗೊಳ್ಳುತ್ತದೆ. ಇದರಿಂದ ಹೊಟ್ಟೆ ನೋವಿನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ.
ಮದ್ಯಪಾನ ಮತ್ತು ಧೂಮಪಾನ ಸೇವನೆ ಆರೋಗ್ಯಕ್ಕೆ ಹಾನಿಕರ. ಅದರಲ್ಲಿಯೂ ಮುಖ್ಯವಾಗಿ ಋತುಚಕ್ರದ ಸಮಯದಲ್ಲಿ ಮದ್ಯಪಾನ ಅಥವಾ ಧೂಮಪಾನ ಸೇವನೆಯಿಂದ ಹೊಟ್ಟೆಯ ಕೆಳಭಾಗದಲ್ಲಿ ಊತ ಹೆಚ್ಚಾಗುತ್ತದೆ. ಈ ಕಾರಣದಿಂದ ಹೊಟ್ಟೆಯ ನೋವು ಕೂಡಾ ಹೆಚ್ಚಾಗುತ್ತದೆ. ಆದ್ದರಿಂದ ಋತು ಚಕ್ರದ ಸಮಯದಲ್ಲಿ ಎಂದಿಗೂ ಆಲ್ಕೋಹಾಲ್ ಸೇವಿಸಬೇಡಿ.
ಋತ ಚಕ್ರದ ಸಮಯದಲ್ಲಿ ತಣ್ಣನೆಯ ಪದಾರ್ಥವಾದ ಮೊಸರು, ಮಜ್ಜಿಗೆ, ತಂಪು ಪಾನೀಯಗಳನ್ನು ತೆಗೆದುಕೊಳ್ಳುವುದನ್ನು ಆದಷ್ಟು ತಪ್ಪಿಸಿ. ಇದು ಹೊಟ್ಟೆಯಲ್ಲಿ ಊತವನ್ನು ಹೆಚ್ಚಿಸುತ್ತದೆ. ಇದರಿಂದ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಇದರ ಜತೆಗೆ ಅತಿ ಖಾರವಾದ ತಿಂಡಿ, ಉಪ್ಪಿನಕಾಯಿ, ಹುಳಿ ಪದಾರ್ಥಗಳು, ನಿಂಬೆ ರಸ ಈ ರೀತಿಯ ಕೆಲವು ಪದಾರ್ಥಗಳನ್ನು ಆದಷ್ಟು ತಪ್ಪಿಸಿ.
ಋತುಚಕ್ರದ ಸಮಯದಲ್ಲಿ ಜಂಕ್ ಫುಡ್ಗಳು ಅಥವಾ ಪ್ಯಾಕೆಟ್ ಫುಡ್ಗಳನ್ನು ಸೇವಿಸುವುದನ್ನು ತಪ್ಪಿಸಿ. ಈ ಸಮಯದಲ್ಲಿ ದೇಹಕ್ಕೆ ಹೆಚ್ಚು ಪೋಷಕಾಂಶಗಳು ಬೇಕು. ಆದ್ದರಿಂದ ಮೃದು ಆಹಾರದ ಹತೆಗೆ ಜೀರ್ಣವಾಗುವ ಆಹಾರವನ್ನು ಸೇವಿಸಿ.
ಇದನ್ನೂ ಓದಿ:
Women Health: ಗರ್ಭಿಣಿಯರಿಗೆ ಎದೆ ನೋವು ಏಕೆ ಕಾಣಿಸಿಕೊಳ್ಳುತ್ತದೆ? ಇದು ಹೆಚ್ಚು ಅಪಾಯವೇ?
Women Health: ಗರ್ಭಿಣಿಯರು ಈ ಕೆಲಸಗಳನ್ನು ಮಾಡಲೇಬಾರದು; ಆರೋಗ್ಯ ಕಾಪಾಡಿಕೊಳ್ಳಿ