Sign In

By signing in or creating an account, you agree with Associated Broadcasting Company's Terms & Conditions and Privacy Policy.

Ashoka tree Benefits: ಅಶೋಕ ಮರದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಔಷಧೀಯ ಗುಣಗಳ ಜತೆಗೆ ಸಂಪೂರ್ಣ ಮಾಹಿತಿ

ಅಶೋಕ ಮರದ ತೊಗಟೆ ಮತ್ತು ಎಲೆಗಳಲ್ಲಿ ಅನೇಕ ಆರೋಗ್ಯ ಪ್ರಯೋಜನಗಳು ಅಡಗಿವೆ. ಆಯುರ್ವೇದದಲ್ಲಿಯೂ ಈ ಮರದಿಂದ ತಯಾರಿಸಿದ ಔಷಧಿಗಳ ಬಗ್ಗೆ ಹೇಳಲಾಗಿದೆ. ಈ ಮರವು ಯಾವ ರೋಗಗಳನ್ನು ನಾಶಮಾಡಲು ಸಹಾಯ ಮಾಡುತ್ತದೆ ಎಂಬುವುದಕ್ಕೆ ಉತ್ತರ ಇಲ್ಲಿದೆ.

Ashoka tree Benefits: ಅಶೋಕ ಮರದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಔಷಧೀಯ ಗುಣಗಳ ಜತೆಗೆ ಸಂಪೂರ್ಣ ಮಾಹಿತಿ
ಅಶೋಕ ಮರ
Follow us
TV9 Web
| Updated By: preethi shettigar

Updated on:Feb 20, 2022 | 12:23 PM

ನಮ್ಮ ಸುತ್ತಲೂ ಹಲವಾರು ರೀತಿಯ ಸಸ್ಯಗಳಿವೆ. ಅವುಗಳು ನಮ್ಮ ಅನೇಕ ಆರೋಗ್ಯ ಸಮಸ್ಯೆಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತವೆ. ಈ ಮರಗಳಲ್ಲಿ ಒಂದು ಅಶೋಕ ಮರ. ಅಶೋಕ ಮರವು(Ashoka Tree) ಅನೇಕ ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. ಈ ಮರವು ಹೆಚ್ಚಾಗಿ ಜನರ ಮನೆಗಳಲ್ಲಿ ಕಂಡುಬರುತ್ತದೆ. ಮನೆಗಳ(House) ಅಂದ ಹೆಚ್ಚಿಸಲು ಆಗಾಗ ಈ ಮರವನ್ನು ನೆಟ್ಟರೂ, ಇದರ ಔಷಧೀಯ ಗುಣಗಳ ಬಗ್ಗೆ ತಿಳಿದಿರುವುದಿಲ್ಲ. ಅಶೋಕ ಮರದ ತೊಗಟೆ ಮತ್ತು ಎಲೆಗಳಲ್ಲಿ ಅನೇಕ ಆರೋಗ್ಯ ಪ್ರಯೋಜನಗಳು ಅಡಗಿವೆ. ಆಯುರ್ವೇದದಲ್ಲಿಯೂ(Ayurveda) ಈ ಮರದಿಂದ ತಯಾರಿಸಿದ ಔಷಧಿಗಳ ಬಗ್ಗೆ ಹೇಳಲಾಗಿದೆ. ಈ ಮರವು ಯಾವ ರೋಗಗಳನ್ನು ನಾಶಮಾಡಲು ಸಹಾಯ ಮಾಡುತ್ತದೆ ಎಂಬುವುದಕ್ಕೆ ಉತ್ತರ ಇಲ್ಲಿದೆ.

ತ್ವಚೆಯನ್ನು ಆರೋಗ್ಯವಾಗಿಡುವಲ್ಲಿ ಸಹಾಯಕ

ಅಶೋಕ ಮರದಲ್ಲಿ ಇಂತಹ ಅನೇಕ ಅಂಶಗಳು ಕಂಡುಬರುತ್ತವೆ. ಇದು ದೇಹದ ರಕ್ತವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದರ ಪರಿಣಾಮವೆಂದರೆ ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಒಟ್ಟಾರೆ ತ್ವಚೆಯನ್ನು ಆರೋಗ್ಯವಾಗಿರಿಸುತ್ತದೆ.

ಮಧುಮೇಹ ಕಡಿಮೆ ಮಾಡುತ್ತದೆ

ಅಶೋಕ ಎಲೆಗಳಲ್ಲಿಯೂ ಹೈಪೊಗ್ಲಿಸಿಮಿಕ್ ಗುಣಗಳು ಹೇರಳವಾಗಿ ಕಂಡುಬರುತ್ತವೆ. ಇದನ್ನು ಸೇವಿಸಿದರೆ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಬಹುದು. ಅಶೋಕ ಮರದ ಎಲೆಯ ಪರಿಣಾಮವಾಗಿ ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯ ಕ್ರಿಯೆಯು ಸುಧಾರಿಸುತ್ತದೆ.

ಅಶೋಕ ಮರವು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ

ಅಶೋಕ ಮರದ ಎಲೆಗಳು ಮತ್ತು ತೊಗಟೆಯು ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುವ ಅನೇಕ ಗುಣಗಳನ್ನು ಹೊಂದಿದೆ. ಅದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳ ಸಹಾಯದಿಂದ ದೇಹದ ಆಂತರಿಕ ಮತ್ತು ಬಾಹ್ಯ ಸೋಂಕುಗಳಿಗೆ ಚಿಕಿತ್ಸೆ ನೀಡಬಹುದು.

ಅಶೋಕ ಮರವು ಅತಿಸಾರವನ್ನು ತಡೆಯುತ್ತದೆ

ಅಷ್ಟೇ ಅಲ್ಲ, ಅಶೋಕದ ಎಲೆಗಳು ಮತ್ತು ತೊಗಟೆಯಲ್ಲಿ ಅನೇಕ ವಿಶೇಷ ಆಯುರ್ವೇದ ಗುಣಗಳು ಸಹ ಕಂಡುಬರುತ್ತವೆ. ಇದು ಅತಿಸಾರದಂತಹ ಪ್ರಮುಖ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಅಶೋಕ ವೃಕ್ಷದ ಅನಾನುಕೂಲ

  • ಹೊಟ್ಟೆ ನೋವು
  • ಎದೆಯುರಿ
  • ವಾಂತಿ

ಅಶೋಕ ಮರವನ್ನು ಹೇಗೆ ಬಳಸುವುದು?

ನೀವು ಅಶೋಕ ಮರದ ತೊಗಟೆಯನ್ನು ಸೇವಿಸಲು ಬಯಸಿದರೆ, ಅದನ್ನು ಪುಡಿಮಾಡಿ ಮತ್ತು ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸಿ. ಅಶೋಕ ಎಲೆಗಳನ್ನು ಸೇವಿಸುವ ಮೊದಲು ನೀರಿನಲ್ಲಿ ಕುದಿಸಿ ತಣ್ಣಗಾಗಿಸಿ ನೀರನ್ನು ಕುಡಿಯಿರಿ. ಈ ಮರದ ಎಲೆಗಳು ಅಥವಾ ತೊಗಟೆಯನ್ನು ಪುಡಿಮಾಡಿ ಚರ್ಮದ ಮೇಲೆ ಕೂಡ ಹಚ್ಚಬಹುದು.

ಇದನ್ನೂ ಓದಿ: ಮೂತ್ರ ವಿಸರ್ಜನೆಯನ್ನು ಹೆಚ್ಚು ಹೊತ್ತು ತಡೆಯುವುದರಿಂದಾಗುವ ಆರೋಗ್ಯ ಸಮಸ್ಯೆಗಳೇನು?

Child Care: ನಿಮ್ಮ ಮಗು ಆಗಾಗ್ಗೆ ಹೊಟ್ಟೆ ನೋವಿನಿಂದ ಬಳಲುತ್ತಿದೆಯೇ? ಇಲ್ಲಿದೆ ತಜ್ಞರಿಂದ ಸೂಕ್ತ ಸಲಹೆ

Published On - 12:21 pm, Sun, 20 February 22