Bay Leaves: ದಾಲ್ಚಿನ್ನಿ ಎಲೆಯನ್ನು ಪುಲಾವಿಗೆ ಹಾಕುವುದು ಮಾತ್ರವಲ್ಲ, ಆರೋಗ್ಯಕರ ಗುಣದ ಬಗ್ಗೆ ತಿಳಿದು ಪ್ರತಿನಿತ್ಯ ಸೇವಿಸಿ

ದಾಲ್ಚಿನ್ನಿ ಎಲೆಯನ್ನು ಒಣಗಿಸಿ ನಂತರ ಉಪಯೋಗಿಸಲಾಗುತ್ತದೆ. ಇದರ ಬಳಕೆ ಹೆಚ್ಚಾಗಿ ಅಡುಗೆಯಲ್ಲಿಯಾದರೂ ಈ ಎಲೆಯಲ್ಲಿ ಆರೋಗ್ಯಕರ ಗುಣಗಳು ಸಾಕಷ್ಟಿದೆ.

Bay Leaves: ದಾಲ್ಚಿನ್ನಿ ಎಲೆಯನ್ನು ಪುಲಾವಿಗೆ ಹಾಕುವುದು ಮಾತ್ರವಲ್ಲ, ಆರೋಗ್ಯಕರ ಗುಣದ ಬಗ್ಗೆ ತಿಳಿದು ಪ್ರತಿನಿತ್ಯ ಸೇವಿಸಿ
ದಾಲ್ಚಿನ್ನಿ ಎಲೆ
Follow us
TV9 Web
| Updated By: Skanda

Updated on: Jun 29, 2021 | 7:46 AM

ದಾಲ್ಚಿನ್ನಿ ಎಲೆ ಇದರ ಸುವಾಸನೆಯಿಂದಲೇ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಹೀಗಾಗಿ ಅಡುಗೆ ಮಾಡುವಾಗ ಅದರಲ್ಲೂ ಬಿರಿಯಾನಿ ಅಥವಾ ಪುಲಾವ್​ ತಯಾರಿಸುವಾಗ ಸುವಾಸನೆಗಾಗಿಯೇ ಇದನ್ನು ಬಳಸುತ್ತಾರೆ. ದಾಲ್ಚಿನ್ನಿ ಎಲೆಯನ್ನು ಪುಲಾವ್ ಎಲೆ ಎಂದು ಕೂಡ ಹಲವರು ಕರೆಯುವುದುಂಟು. ದಾಲ್ಚಿನ್ನಿ ಎಲೆಯನ್ನು ಒಣಗಿಸಿ ನಂತರ ಉಪಯೋಗಿಸಲಾಗುತ್ತದೆ. ಇದರ ಬಳಕೆ ಹೆಚ್ಚಾಗಿ ಅಡುಗೆಯಲ್ಲಿಯಾದರೂ ಈ ಎಲೆಯಲ್ಲಿ ಆರೋಗ್ಯಕರ ಗುಣಗಳು ಸಾಕಷ್ಟಿದೆ. ಹೀಗಾಗಿಯೇ ದಾಲ್ಚಿನ್ನಿ ಎಲೆಯನ್ನು ಹೆಚ್ಚಾಗಿ ಬಳಸುವುದು ಉತ್ತಮ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

ಹುಣ್ಣು ದೂರ ಮಾಡುತ್ತದೆ ದಾಲ್ಚಿನ್ನಿ ಎಲೆ ಜಠರ ಮತ್ತು ಕರುಳಿನ ಕಾಯಿಲೆಗಳನ್ನು ದೂರ ಮಾಡುತ್ತದೆ. ಹೊಟ್ಟೆಯಲ್ಲಾಗುವ ಹುಣ್ಣಿನ ಸಮಸ್ಯೆಗೂ ಕೂಡ ಈ ಎಲೆಗಳು ರಾಮಬಾಣವಾಗಿವೆ. ಇನ್ನು ಗ್ಯಾಸ್ಟ್ರಿಕ್ ಸಮಸ್ಯೆಗಳಿಂದ ಬಳಲುತ್ತಿರುವವರು ಕೂಡ ದಾಲ್ಚಿನ್ನಿ ಎಲೆಯನ್ನು ಸೇವಿಸುವುದು ಉತ್ತಮ ಅಭ್ಯಾಸವಾಗಿದೆ.

ಉರಿಯೂತ ಕಡಿಮೆ ಮಾಡುತ್ತದೆ ಪ್ರತಿರಕ್ಷಣಾ ವ್ಯವಸ್ಥೆಯು ಇಂಟರ್ಲ್ಯುಕಿನ್ ಎಂಬ ಪ್ರೋಟೀನ್‌ನ ಸಣ್ಣ ಪ್ರಮಾಣವನ್ನು ಬಿಡುಗಡೆ ಮಾಡುತ್ತದೆ. ಇದು ಉಸಿರಾಟದ ವ್ಯವಸ್ಥೆಯಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ. ಹೀಗಾಗಿ ದಾಲ್ಚಿನ್ನಿ ಎಲೆಯನ್ನು ಸೇವಿಸುವುದು ಸೂಕ್ತ. ಇದು ಉರಿಯುತದ ಸಮಸ್ಯೆಯನ್ನು ಕಡಿಮೆ ಮಾಡಿ, ದೇಹಕ್ಕೆ ಹೆಚ್ಚು ಶಕ್ತಿ ನೀಡುತ್ತದೆ.

ಮಧುಮೇಹ ನಿವಾರಕ ದಾಲ್ಚಿನ್ನಿ ಎಲೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಕಾರಿಯಾಗಿದೆ. ಅಲ್ಲದೆ ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ಉಪಯುಕ್ತವಾಗಿದೆ. ಜತೆಗೆ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಉತ್ಪತ್ತಿಯಾಗಲು ಈ ಎಲೆಗಳು ಸಹಾಯ ಮಾಡುತ್ತವೆ.

ಕ್ಯಾನ್ಸರ್​ನಿಂದ ರಕ್ಷಣೆ ನೀಡುತ್ತದೆ ಅಡುಗೆಯಲ್ಲಿ ದಾಲ್ಚಿನ್ನಿ ಎಲೆಯನ್ನು ಆಗಾಗ್ಗೆ ಬಳಸುವುದರಿಂದ ಕ್ಯಾನ್ಸರ್ ದೂರವಾಗುತ್ತದೆ. ಮುಖ್ಯವಾಗಿ ಕೊಲೊರೆಕ್ಟಲ್ ಕ್ಯಾನ್ಸರ್​ನ ಅಪಾಯವನ್ನು ಇದು ಕಡಿಮೆ ಮಾಡುತ್ತದೆ.

ನಿದ್ರಾಹೀನತೆಯನ್ನು ದೂರ ಮಾಡುತ್ತದೆ ಉತ್ತಮ ನಿದ್ರೆ ಪಡೆಯಲು ಪ್ರತಿದಿನ ರಾತ್ರಿ ಸ್ವಲ್ಪ ದಾಲ್ಚಿನ್ನಿ ಎಲೆಗಳನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ ಅಥವಾ ಮಲಗುವ ಸಮಯದಲ್ಲಿ ದಿಂಬಿನ ಪಕ್ಕದಲ್ಲಿ ಅಥವಾ ಟವೆಲ್ ಮೇಲೆ ಇಟ್ಟು ಮಲಗಿರಿ. ಇದರಿಂದ ಚೆನ್ನಾಗಿ ನಿದ್ರೆ ಬರುತ್ತದೆ. ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ದಾಲ್ಚಿನ್ನಿ ಎಲೆಗಳ ಸೇವನೆ ಉತ್ತಮ ಅಭ್ಯಾಸವಾಗಿದೆ.

ಕಿಡ್ನಿ ಸ್ಟೋನ್​ನಿಂದ ಮುಕ್ತಿ ದಾಲ್ಚಿನ್ನಿ ಎಲೆಯನ್ನು ತಿನ್ನುವುದು ಮತ್ತು ಈ ಎಲೆಯ ಬೇಯಿಸಿದ ನೀರನ್ನು ಕುಡಿಯುವುದರಿಂದ ಮೂತ್ರಪಿಂಡದಲ್ಲಿನ ಕಲ್ಲು ಮತ್ತು ಇತರ ಮೂತ್ರಪಿಂಡಕ್ಕೆ ಸಂಬಂಧಿತ ಕಾಯಿಲೆಗಳಿಂದ ರಕ್ಷಣೆ ದೊರೆಯುತ್ತದೆ.

ಒತ್ತಡ ನಿವಾರಕ ದಾಲ್ಚಿನ್ನಿ ಎಲೆಯಲ್ಲಿ ಒತ್ತಡ ನಿವಾರಿಸುವ ಗುಣಗಳಿವೆ. ಆದ್ದರಿಂದ ಇದು ಅರೋಮಾಥೆರಪಿಯ ಭಾಗವಾಗಿದೆ. ಒತ್ತಡಕ್ಕೊಳಗಾಗಿದ್ದರೆ, ಚೆನ್ನಾಗಿ ಒಣಗಿದ ದಾಲ್ಚಿನ್ನಿ ಎಲೆಯನ್ನು ಹುರಿದು ಅದರ ಸುವಾಸನೆಯನ್ನು ತೆಗೆದುಕೊಳ್ಳಿ. ಅಥವಾ ಈ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ ಸ್ಟೀಮ್ ರೀತಿ ತೆಗೆದುಕೊಳ್ಳಿ. ಹೀಗೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಮತ್ತು ಒತ್ತಡ ನಿವಾರಣೆಯಾಗುತ್ತದೆ.

ಇದನ್ನೂ ಓದಿ:

Clove Health Benefits: ಲವಂಗದ ಆರೋಗ್ಯಕರ ಪ್ರಯೋಜನದ ಬಗ್ಗೆ ನೀವು ತಿಳಿದರೆ ನಿತ್ಯವೂ ಇದನ್ನು ಸೇವಿಸುತ್ತಿರಾ

Health Tips: ನುಗ್ಗೆಕಾಯಿ ಮಾತ್ರವಲ್ಲ, ಸೊಪ್ಪಿನಲ್ಲೂ ಸಾಕಷ್ಟು ಔಷಧೀಯ ಗುಣಗಳು ಅಡಗಿವೆ

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್