AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rashi Bhavishya: ಈ ರಾಶಿಯವರು ಅನಗತ್ಯ ಸಮಸ್ಯೆಯನ್ನ ಮೈಮೇಲೆ‌ ತಂದುಕೊಳ್ಳುವಿರಿ-ಎಚ್ಚರ

ಭವಿಷ್ಯದ ಬಗ್ಗೆ ಚಿಂತೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಒಂದಷ್ಟು ಮಂದಿ ದಿನಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯ ಪಂಚಾಂಗವನ್ನೂ ವೀಕ್ಷಿಸುತ್ತಾರೆ. ಹಾಗಿದ್ದರೆ, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ ಇಂದಿನ (ಫೆಬ್ರವರಿ​​​​ 04) ಭವಿಷ್ಯ ಹೇಗಿದೆ ಎಂಬುದು ಇಲ್ಲಿದೆ.

Rashi Bhavishya: ಈ ರಾಶಿಯವರು ಅನಗತ್ಯ ಸಮಸ್ಯೆಯನ್ನ ಮೈಮೇಲೆ‌ ತಂದುಕೊಳ್ಳುವಿರಿ-ಎಚ್ಚರ
ರಾಶಿ ಭವಿಷ್ಯ
TV9 Web
| Edited By: |

Updated on: Feb 04, 2024 | 12:29 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ದಶಮೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ವೃದ್ಧಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 07 ಗಂಟೆ 01 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 31 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 05:05 ರಿಂದ 06:32ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:47 ರಿಂದ 02:13 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:39 ರಿಂದ 05:05ರ ವರೆಗೆ.

ಸಿಂಹ ರಾಶಿ : ಇಂದು ನೀವು ಪುಣ್ಯ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ನಿಮ್ಮ ಆದಾಯದ ಸ್ವಲ್ಪ ಭಾಗವನ್ನು ಭವಿಷ್ಯಕ್ಕೆ ಹೂಡಿಕೆ ಮಾಡುವಿರಿ. ಮಾತಿನ ಸೌಮ್ಯತೆಯು ನಿಮಗೆ ಗೌರವವನ್ನು ಕೊಡುವುದು. ವ್ಯಾಪಾರಸ್ಥರಿಗೆ ದಿನವು ಅಲ್ಪ ಲಾಭದಾಯಕವಾಗಲಿದೆ. ನಿಮ್ಮ ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡುವುದನ್ನು ನೀವು ತಪ್ಪಿಸುವಿರಿ. ಯಾವುದೋ ಒತ್ತಡದಲ್ಲಿ ನಿಮ್ಮ ಕೆಲಸದ ಪ್ರದೇಶದಲ್ಲಿ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ವೈವಾಹಿಕ ಜೀವನವನ್ನು ನಡೆಸಲು ನಿಮಗೆ ಕಷ್ಟ ಎನಿಸಬಹುದು. ಸಂಗಾತಿಯೂ ನಿಮಗೆ ಮಾನಸಿಕವಾಗಿ ಘಾಸಿ ಮಾಡಬಹುದು. ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ, ಇನ್ನೊಬ್ಬರಿಗೆ ಸಹಾಯ ಮಾಡುವಿರಿ. ನಿಮ್ಮ ಮನಸ್ಸಿನ ತಾದಾತ್ಮ್ಯದಿಂದ ನಿಮಗೆ ಕಷ್ಟದ ಪೂರ್ಣ ಪ್ರಭಾವವು ನಿಮ್ಮ‌ ಮೇಲೆ ಆಗದೇಹೋದೀತು. ಮಕ್ಕಳಿಗೆ ಶಿಸ್ತನ್ನು ಕಲಿಸಲು ನಿಮಗೆ ಆಗದೇ ಹೋದೀತು. ಪ್ರೀತಿಯಲ್ಲಿ ಸಡಿಲಿಕೆ ಬೇಡ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಪತ್ನಿಯಿಂದ ಪ್ರಚೋದಿತರಾಗುವಿರಿ.

ಕನ್ಯಾ ರಾಶಿ : ಇಂದು ನಿಮ್ಮ ಕಾರ್ಯದಲ್ಲಿ ಸುಧಾರಣೆ ಇರಲಿದೆ. ನಿಮ್ಮ ದೊಡ್ಡ ಗುರಿಯ ಮೇಲೆ ನೀವು ಸಂಪೂರ್ಣವಾಗಿ ಗಮನಹರಿಸಲು ಸಾಧ್ಯವಾಗುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಕ್ರಿಯಾತ್ಮಕ ಕೆಲಸದಲ್ಲಿ ಉತ್ತಮ ಚಿಂತನೆ ಇರಲಿದೆ. ನೀವು ಏನಾದರೂ ದೊಡ್ಡದನ್ನು ಸಾಧಿಸಬೇಕು ಎಂಬ ಹಂಬಲವಿರಲಿದೆ. ಭೂಮಿಯ ವ್ಯವಹಾರವನ್ನು ನೀವು ಮಾಡುವುದು ಕಷ್ಟವೆನಿಸಬಹುದು. ನೀವು ಹೂಡಿಕೆ ವಿಷಯಗಳಲ್ಲಿ ಉತ್ತಮ ಆದಾಯವನ್ನು ಪಡೆಯುವ ಸಾಧ್ಯತೆಯಿದೆ. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಗೊಂದಲವು ನಿವಾರಣೆಯಾಗಬಹು. ಕೆಲವು ಮಾತನ್ನು ನೀವು ನಿರ್ಲಕ್ಷಿಸುವುದೇ ಉತ್ತಮ. ನಿಮ್ಮ ನಿರೀಕ್ಷೆಯ ಸಮಯವು ಬಾರದೇ ನಿಮಗೆ ಬೇಸರವಾಗುವುದು. ಅತಿಯಾದ ಚಿಂತೆಯಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳುವಿರಿ. ಬೇಕಾದಷ್ಟು ಸಂಪತ್ತಿದ್ದರೂ ನಿಮಗೆ ಸರಿಯಾದ ನೆಮ್ಮದಿಯ ಸಿಗದು.

ತುಲಾ ರಾಶಿ : ನೀವು ಮಾನಸಿಕ ಸುರಕ್ಷತೆಯಿಂದ ಹೊರಬರಬೇಕಾಗುವುದು. ನಿಮ್ಮ ಜೀವನಶೈಲಿ ಕೂಡ ಸುಧಾರಿಸುತ್ತದೆ. ನಿಮ್ಮ ಮುಖ್ಯ ವಿಷಯಗಳು ಕುಟುಂಬದಲ್ಲಿ ಚರ್ಚೆಯಾಗಬಹುದು. ರಾಜಕೀಯದಲ್ಲಿ ಆಸಕ್ತಿಯಿದ್ದರೂ ಪ್ರವೇಶಕ್ಕೆ ದಾರಿಯ ಕೊರತೆ ಇದೆ ಎನ್ನಿಸಬಹುದು. ಯಾರನ್ನೋ ನಿಮಗೆ ಹೋಲಿಸಿಕೊಂಡು ಸಂಕಟಪಡುವಿರಿ. ಸಮಯದ ದುರುಪಯೋಗವನ್ನು ಮಾಡಿಕೊಳ್ಳುವಿರಿ. ಕೆಲವರು ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವಿರಿ. ಮಾನಸಿಕ ಅಶಾಂತಿಗೆ ನಿಮ್ಮಲ್ಲಿಯೇ ಮದ್ದು ಇರುವುದು. ಭೂಮಿಯ ವ್ಯವಹಾರವು ಸಾಕೆನಿಸಬಹುದು. ನಿಮ್ಮ ಶಿಸ್ತಿನ ಜೀವನವನ್ನು ಯಾರೂ ಕೇಳರು. ಹಣದ ವ್ಯವಹಾರವನ್ನು ಆಪ್ತರ ಜೊತೆ ಸೇರಿ ಮಾಡುವುದು ಉತ್ತಮ. ನಂಬಿಕಸ್ಥರನ್ನು ಮಾತ್ರ ನಿಮ್ಮ ಹತ್ತಿರ ಸೇರಿಸಿಕೊಳ್ಳುವಿರಿ.

ವೃಶ್ಚಿಕ ರಾಶಿ : ಇಂದು ನೀವು ಸಂತೋಷದಿಂದ ಇರುವಿರಿ. ಸಾಮಾಜಿಕ ಪ್ರಯತ್ನಗಳಿಗೆ ಬಲ ಸಿಗಲಿದೆ. ಬಹಳ ದಿನಗಳಿಂದ ಬಾಕಿಯಿದ್ದ ಕೆಲಸ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಯಾರನ್ನೋ ನಂಬಿ ವಸ್ತುವನ್ನಾಗಿ ಕೊಟ್ಟುಹೋಗುವುದು ಬೇಡ. ಸಹೋದರಿಯಿಂದ ಹಣಕಾಸಿನ ಬೆಂಬಲವನ್ನು ಪಡೆಯುವಿರಿ. ಅನಗತ್ಯ ಕೆಲಸವನ್ನು ಮೈಮೇಲೆ‌ ತಂದುಕೊಳ್ಳುವಿರಿ. ಸ್ನೇಹಿತರ ಅನಾರೋಗ್ಯಕ್ಕೆ ಸಹಕಾರ ಮಾಡುವಿರಿ. ನಿಮ್ಮ ಜೀವನ ಸಂಗಾತಿಯ ಜೊತೆ ಉಪಯುಕ್ತವಾದ ವಿಚಾರದಲ್ಲಿ ಚರ್ಚೆ ಮಾಡುವಿರಿ. ಹೂಡಿಕೆಯ ಬಗ್ಗೆ ನಿಮ್ಮ ಸ್ನೇಹಿತರು ನಿಮ್ಮೊಂದಿಗೆ ಮಾತನಾಡಬಹುದು. ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಲು ಇಷ್ಟಪಡುವಿರಿ. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ. ಅಧಿಕಾರಿಗಳಿಂದ ನಿಮಗೆ ಅಪಮಾನವೂ ಆದೀತು. ನಿಮ್ಮ ಸಹಜ ವರ್ತನೆಯೂ ನಿಮ್ಮರಿಗೆ ಸಿಟ್ಟನ್ನು ಉಂಟುಮಾಡೀತು. ಪಕ್ಷಪಾತ ಮಾಡದೇ ನೀವು ಸಮಾನಭಾವದಿಂದ ನೋಡಿ.‌ ದೇಹವನ್ನು ದಂಡಿಸಿ ಹೆಚ್ಚು ಲಾಭವನ್ನು ಗಳಿಸುವಿರಿ.

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ