Astrology: ಶಶಿ – ಮಂಗಳ ಯೋಗ ಎಂಬುದು ನಿಮ್ಮ ಜಾತಕದಲ್ಲೂ ಇದೆಯಾ? ಅದರ ಫಲ ಏನು ಗೊತ್ತಾ?

ಈ ಲೇಖನದಲ್ಲಿ ಶಶಿ (ಚಂದ್ರ)- ಮಂಗಳ (ಕುಜ) ಯೋಗದ ಬಗ್ಗೆ ತಿಳಿಸಲಾಗಿದೆ. ನಿಮ್ಮ ಜಾತಕವನ್ನು ನೋಡಿಕೊಳ್ಳಿ. ರಾಶಿಕುಂಡಲಿಯಲ್ಲಿ ಇವೆರಡು ಗ್ರಹ ಒಂದೇ ರಾಶಿಯಲ್ಲಿ ಇದ್ದರೆ ನಿಮಗೆ ಈ ಯೋಗ ಇದೆ ಎಂದರ್ಥ. ಅದರ ಫಲ ಏನು ತಿಳಿಯಿರಿ.

Astrology: ಶಶಿ - ಮಂಗಳ ಯೋಗ ಎಂಬುದು ನಿಮ್ಮ ಜಾತಕದಲ್ಲೂ ಇದೆಯಾ? ಅದರ ಫಲ ಏನು ಗೊತ್ತಾ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on: Jun 15, 2021 | 6:50 AM

ಈ ದಿನದ ಲೇಖನದಲ್ಲಿ ಒಂದು ಯೋಗದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅದರ ಹೆಸರು ಶಶಿ-ಮಂಗಳ ಯೋಗ. ಚಂದ್ರ ಹಾಗೂ ಕುಜ ಇವೆರಡೂ ಒಂದೇ ರಾಶಿಯಲ್ಲಿ (ರಾಶಿ ಕುಂಡಲಿಯಲ್ಲಿ) ಇದ್ದರೆ ಅದನ್ನು ಶಶಿಮಂಗಳ ಯೋಗ ಎನ್ನಲಾಗುತ್ತದೆ. ಈ ಯೋಗದಿಂದ ಅನುಕೂಲಗಳೂ ಇವೆ, ಅದೇ ಥರ ಅಡ್ಡ ಪರಿಣಾಮಗಳೂ ಇವೆ. ಈ ಯೋಗದ ಅದೃಷ್ಟ ಇದ್ದಲ್ಲಿ ಆ ವ್ಯಕ್ತಿಗೆ ಹಣದ ಹರಿವಿಗೇ ಸಮಸ್ಯೆಯೇ ಇರುವುದಿಲ್ಲ. ಒಂದಲ್ಲಾ ಒಂದು ಮೂಲದಿಂದ ಹಣ ಬರುತ್ತಲೇ ಇರುತ್ತದೆ. ಆ ವ್ಯಕ್ತಿ ಶ್ರೀಮಂತರಾಗಿರುತ್ತಾರೆ. ಆದರೆ ಈ ವ್ಯಕ್ತಿಗಳ ಜೀವನದ ಮಾನಸಿಕ ತೊಳಲಾಟ ಹೆಚ್ಚಿರುತ್ತದೆ. ವೈಯಕ್ತಿಕ ಜೀವನದಲ್ಲಿ ತಾಕಲಾಟಗಳು ಇರುತ್ತವೆ. ವೃಷಭದಲ್ಲಿ ಚಂದ್ರ (ಬಲಿಷ್ಠ) ಹಾಗೂ ವೃಶ್ಚಿಕದಲ್ಲಿ ಕುಜ (ರಾಶ್ಯಾಧಿಪತಿ) ಹಾಗೂ ಕುಜನು ಮಕರದಲ್ಲಿ (ಉಚ್ಚ ಸ್ಥಾನ), ಚಂದ್ರನು ಕರ್ಕಾಟಕದಲ್ಲಿ ಇದ್ದಲ್ಲಿ ಅದು ಬಹಳ ಬಲಿಷ್ಠವಾದ ಸ್ಥಾನಗಳಲ್ಲಿವೆ ಎಂದು ಪರಿಗಣಿಸಲಾಗುತ್ತದೆ. ಒಂದೋ ಈ ಎರಡೂ ಗ್ರಹಗಳು ಒಟ್ಟಿಗೆ ಇರಬೇಕು ಅಥವಾ ಈಗಾಗಲೇ ಪ್ರಸ್ತಾಪಿಸಿದಂತೆ ಬಲಿಷ್ಠ ಸ್ಥಾನಗಳಲ್ಲಿ ಇರಬೇಕು. ಇಂಥವರ ತಿಜೋಡಿ ಎಂದೂ ಬರಿದಾಗಲ್ಲ. ಶಶಿಮಂಗಳ ಯೋಗ ಕೊಡಮಾಡುವ ಗರಿಷ್ಠ ಫಲ ಇದು.

ಚಂದ್ರ ಸಾತ್ವಿಕ ಸ್ವಭಾವದವನು. ಕುಜ ಪಾಪಗ್ರಹ. ಇವೆರಡೂ ಒಟ್ಟಿಗೆ ಇದ್ದಾಗ ಈ ಕೆಳಕಂಡ ಪರಿಣಾಮಗಳು ಉಂಟಾಗುತ್ತವೆ: * ಆ ವ್ಯಕ್ತಿಯ ಮಾನಸಿಕ ಸ್ಥಿರತೆ ಅಷ್ಟಾಗಿ ಚೆನ್ನಾಗಿರಲ್ಲ * ಸ್ವಭಾವ ಬದಲಾಗುತ್ತಲೇ ಇರುತ್ತದೆ. ತೀರಾ ಭಾವುಕರಾಗ್ತಾರೆ, ಸುತ್ತಮುತ್ತಲವರು ಹಾಗೂ ಕೆಲವು ಸಲ ತಮ್ಮನ್ನು ತಾವೇ ಮರೆಯುತ್ತಾರೆ. ಆ ವ್ಯಕ್ತಿಯ ಸ್ವಭಾವಕ್ಕೆ ಕುಜ ಗ್ರಹ ಕಾರಣ ಆಗುತ್ತದೆ. * ಹೀಗೆ ನಿರ್ಧರಿಸಲು ಸಾಧ್ಯವಿಲ್ಲದಂಥ ಸ್ವಭಾವದ ಕಾರಣಕ್ಕೆ ಪತ್ನಿ ಹಾಗೂ ಸಂಬಂಧಿಕರ ಜತೆಗೆ ಬಾಂಧವ್ಯ ಸರಿಯಾಗಿರಲ್ಲ.

ಲಗ್ನದಿಂದ ಚಂದ್ರ ನಾಲ್ಕನೇ ಮನೆ ಅಧಿಪತಿ ಉತ್ತಮ ಫಲಿತಾಂಶ ತರುತ್ತಾನೆ. ಕುಜನು ತನ್ನದೇ ರೀತಿಯಲ್ಲಿ ಫಲ ನೀಡುತ್ತಾರೆ. ಲಗ್ನದಿಂದ 4ನೇ ಮನೆಯಲ್ಲಿ ಕುಜ ಇದ್ದಲ್ಲಿ ಭೂಮಿ- ಆಸ್ತಿಗಳನ್ನು ಅನುಗ್ರಹಿಸುತ್ತಾನೆ. ಆದ್ದರಿಂದ ಎರಡೂ ಗ್ರಹ ಅನುಗ್ರಹ ತರುತ್ತದೆ. ಚಂದ್ರ ಹಾಗೂ ಕುಜ ದಶಾಕಾಲದಲ್ಲಿ ಉತ್ತಮ ಫಲ ನೀಡುತ್ತವೆ. ಲಗ್ನದಿಂದ 1, 3, 5, 6, 8, 9 ಹಾಗೂ 10ನೇ ಮನೆಯಲ್ಲಿ ಕುಜ ಬಲಿಷ್ಠ. ಇನ್ನು ಚಂದ್ರ 2, 4., 7, 11 ಮತ್ತು 12ರಲ್ಲಿ ಬಲಿಷ್ಠ. ಲಗ್ನದಿಂದ ಬಲಿಷ್ಠ ಸ್ಥಾನದಲ್ಲಿ ಚಂದ್ರ ಇದ್ದಲ್ಲಿ ಹೆಚ್ಚು ಅನುಕೂಲ ಪಡೆಯುತ್ತಾರೆ.

* ಮೇಷ, ವೃಶ್ಚಿಕ ಲಗ್ನವಾಗಿದ್ದು, ಅಲ್ಲೇ ಯೋಗ ಏರ್ಪಟ್ಟಿದ್ದಲ್ಲಿ ಅದು ಹೆಚ್ಚು ಅನುಕೂಲ. ಇಲ್ಲದಿದ್ದಲ್ಲಿ ಆರೋಗ್ಯ ಸಮಸ್ಯೆಗಳಾಗುತ್ತವೆ. * ಎರಡನೇ ಮನೆಯಲ್ಲಿ ಯೋಗ ಏರ್ಪಟ್ಟಲ್ಲಿ ಹೆಚ್ಚಿನ ಸಂಪತ್ತಿರುತ್ತದೆ. ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಇರುತ್ತದೆ ಮತ್ತು ಆಗಾಗ ಅಪಘಾತಗಳು ಏರ್ಪಡುತ್ತವೆ. * ಮೂರನೇ ಮನೆಯಲ್ಲಾದರೆ ವ್ಯಕ್ತಿಗೆ ಉತ್ತಮ ಅಭಿರುಚಿ ಇರುತ್ತದೆ. ಆದರೆ ಸಾಕಷ್ಟು ಚಿಂತೆಗಳು ಇರುತ್ತವೆ. ಬಹಳ ಚಿಕ್ಕ ವಯಸ್ಸಿಗೇ ಸಂಗಾತಿಯನ್ನು ಕಳೆದುಕೊಳ್ಳಬೇಕಾಗುತ್ತದೆ/ * ನಾಲ್ಕನೇ ಮನೆಯಲ್ಲಾದರೆ ಅದೃಷ್ಟವಂತರು. ಹೃದಯದಿಂದ ಇವರು ಬಲಿಷ್ಠರು. ಆದರೆ ಸೋದರ- ಸೋದರಿಯರ ಜತೆಗೆ ಸಂಬಂಧ ಚೆನ್ನಾಗಿರಲ್ಲ. * ಐದನೇ ಮನೆಯಲ್ಲಿ ಇವರು ಬಹಳ ಆಕ್ರಮಣಕಾರಿ ಸ್ವಭಾವದವರಾಗಿರುತ್ತಾರೆ. ಹಲವು ವಿಷಯಗಳ ಬಗ್ಗೆ ಆಳವಾದ ಜ್ಞಾನ ಇರುತ್ತದೆ. * ಆರನೇ ಮನೆಯಲ್ಲಿದ್ದರೆ ಇವರಿಗೆ ಶತ್ರುಗಳು ಹೆಚ್ಚಿರುತ್ತಾರೆ. ಆಗಾಗ ಅಪಘಾತಗಳು ಸಂಭವಿಸುತ್ತವೆ. * ಏಳನೇ ಮನೆಯಲ್ಲಿ ಇವರಿಗೆ ಅಧಿಕಾರ ಮತ್ತು ಸಂಪತ್ತು ಲಭಿಸುತ್ತದೆ. ಆದರೆ ವೈವಾಹಿಕ ಜೀವನದಲ್ಲಿ ಸಮಸ್ಯೆ ಇರುತ್ತದೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಇರುತ್ತದೆ. * ಎಂಟನೇ ಮನೆಯಲ್ಲಿ ಇದ್ದರೆ ದಿಢೀರ್​ ನಷ್ಟ ತರುತ್ತದೆ. ಸಾಂಸಾರಿಕ ಜೀವನವೂ ಚೆನ್ನಾಗಿರಲ್ಲ. ಕೆಲವು ಸಲ ವಿಪರೀತ ಸಂಪತ್ತನ್ನೂ ತರುತ್ತದೆ. ಆದರೆ ಈ ವ್ಯಕ್ತಿಯ ಆಯುಷ್ಯ ಕಡಿಮೆ ಆಗುತ್ತದೆ. * ಒಂಬತ್ತನೇ ಮನೆಯಲ್ಲಿ ಅಧಿಕಾರ, ಸಂಪತ್ತು, ಗೌರವ ಮತ್ತು ಬಲ ತರುತ್ತದೆ. ಗಂಭೀರವಾದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. * ಹತ್ತನೇ ಮನೆಯಲ್ಲಿ ಇದ್ದಲ್ಲಿ ಉದ್ಯೋಗದ ಮೂಲಕ ಸಾಕಷ್ಟು ಹಣ ಸಂಪಾದಿಸುತ್ತಾರೆ. ಇವರು ದೈಹಿಕವಾಗಿ ಬಲವಾಗಿದ್ದರೂ ಮಾನಸಿಕವಾಗಿ ಕುಗ್ಗಿರುತ್ತಾರೆ. * 11ನೇ ಮನೆಯಲ್ಲಿದ್ದಲ್ಲಿ ಸಿಕ್ಕಾಪಟ್ಟೆ ಸ್ನೇಹಿತರಿರುತ್ತಾರೆ. ಸಮಾಜ ಸೇವಕರಾಗಿ ಉತ್ತಮ ಹೆಸರು ಪಡೆಯುತ್ತಾರೆ. ಸದಾ ಹಣದ ಹರಿವಿರುತ್ತದೆ. ಒಂದು ವೇಳೆ ಕುಜ ನೀಚನಿದ್ದಲ್ಲಿ ಯಾವುದರ ಬಗ್ಗೆಯೂ ಆಸಕ್ತಿ ಇರಲ್ಲ. ಆದರೂ ಇವರು ಶ್ರೀಮಂತರಿರುತ್ತಾರೆ. * ಹನ್ನೆರಡನೇ ಮನೆಯಲ್ಲಿ ಇದ್ದರೆ ಅನುಕೂಲಕ್ಕಿಂತ ನಷ್ಟವೇ ಹೆಚ್ಚು. ಆರೋಗ್ಯ ನಷ್ಟ, ಮಾನಸಿಕ ನೆಮ್ಮದಿ ಇಲ್ಲದಂತಾಗುವುದು, ಸ್ನೇಹನಷ್ಟ, ಸಂಬಂಧ ಹಾಗೂ ಹಣ ಎಲ್ಲದರಲ್ಲೂ ನಷ್ಟವಾಗುತ್ತದೆ.

ಇದನ್ನೂ ಓದಿ: Astrology: ಏನಿದು ಪಂಚ ಮಹಾಪುರುಷ ಯೋಗ? ಏನಿದರ ಶುಭ ಫಲಗಳು ಎಂಬುದನ್ನು ತಿಳಿಯಿರಿ

ಇದನ್ನೂ ಓದಿ: Astrology: ಈ ನಾಲ್ಕು ರಾಶಿಯವರಿಗೆ ಜನರನ್ನು ಮೂರ್ಖರನ್ನಾಗಿ ಮಾಡುವುದು ನೀರು ಕುಡಿದಷ್ಟೇ ಸಲೀಸು

(Shashi- Mangala yoga benefits and it’s side effects according to vedic astrology explained here)