Horoscope Today 22 April: ಈ ರಾಶಿಯವರಿಗೆ ಸಿಕ್ಕ ವರವು ಶಾಪದಂತೆ ಆಗುವುದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ನವಮೀ ತಿಥಿ, ಮಂಗಳವಾರ ಬರುವ ಸಂಪತ್ತಿನ ರಕ್ಷಣೆ, ಅತಿಯಾದ ಆಹಾರ ಭಕ್ಷಣೆ, ಭವಿಷ್ಯದ ವೀಕ್ಷಣೆ ಇವೆಲ್ಲ ಇರಲಿದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ನವಮೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಶುಭ, ಕರಣ: ತೈತಿಲ, ಸೂರ್ಯೋದಯ – 06 : 15 am, ಸೂರ್ಯಾಸ್ತ – 06 : 46 pm, ಇಂದಿನ ಶುಭಾಶುಭಕಾಲ: ರಾಹು ಕಾಲ 15:39 – 17:13, ಯಮಘಂಡ ಕಾಲ 09:24 – 10:57, ಗುಳಿಕ ಕಾಲ 12:31 – 14:05
ಮೇಷ ರಾಶಿ: ಹಳೆಯದಾದ ದೈಹಿಕ ಹಾಗೂ ಮಾನಸಿಕ ನೋವುಗಳು ಕಾಡಬಹುದು. ನಿಮ್ಮ ಉತ್ತಮವಾದ ನಡವಳಿಕೆಯೇ ಸಮೀಪಕ್ಕೆ ಜನರು ಬರುವಂತೆ ಮಾಡುವುದು. ಆತ್ಮವಿಶ್ವಾಸದಿಂದ ನೀವು ದಿನವನ್ನು ಸುಗಮವಾಗಿ ಕಳೆಯುತ್ತೀರಿ. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯೊಂದಿಗೆ ಜಗಳವಾದರೂ, ತಾಳ್ಮೆ ಬೇಕು. ಆಸೆಗೆ ಪೂರಕ ವಾತಾವರಣ ಸಿಕ್ಕಿದ್ದು ತೃಪ್ತಿ ನೀಡುವುದು. ಹಿರಿಯರಿಂದ ಮಾರ್ಗದರ್ಶನ ಸಿಗಬಹುದು. ಸಹಾಯ ಮಾಡುವ ಮನೋಭಾವನೆ ನಿಮಗೆ ಸಂತೋಷ ನೀಡುತ್ತದೆ. ನಿಮ್ಮ ಸಹಾಯವನ್ನು ಪಡೆದವರು ನಿಮ್ಮನ್ನು ಭೇಟಿಯಾಗಿ ಕೃತಜ್ಞತೆಯ ಭಾವವನ್ನು ಅರ್ಪಿಸುವರು. ಉದ್ಯೋಗವು ನಿಮ್ಮ ಹಿಡಿತಕ್ಕೆ ಬರಲು ಪ್ರಯತ್ನಿಸುವಿರಿ. ಹೂಡಿಕೆಯನ್ನು ಇತರರ ಒತ್ತಾಯದ ಮೇಲೆ ಮಾಡಬೇಕಾದೀತು. ಮನೆಯ ಖರೀದಿಯ ಬಗ್ಗೆ ಆಲೋಚನೆಗಳು ಬರಲಿವೆ. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದ್ದು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ನಿರ್ಧಾರವನ್ನು ಮಾಡಲು ಸರಿಯಾದ ವ್ಯಕ್ತಿಗಳು ಸಿಗುವರು.
ವೃಷಭ ರಾಶಿ: ಆಡಳಿತ ವರ್ಗದಲ್ಲಿ ನಿಮ್ಮ ಮಾತು ನಡೆಯದು. ಕ್ಷಣಕಾಲ ಏನನ್ನೂ ಯೋಚಿಸದೇ ಇರಿ. ಗಂಭೀರ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಿ. ವ್ಯವಹಾರದಲ್ಲಿ ಲಾಭ ಸಾಧ್ಯ. ಮಕ್ಕಳಿಗೆ ಸಹಾಯ ಮಾಡಿ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಿ. ಯಾರ ವ್ಯಕ್ತಿತ್ವವನ್ನೂ ಕೇವಲವಾಗಿ ನೋಡುವುದು ಬೇಡ. ಪ್ರೇಮ ಜೀವನದಲ್ಲಿ ಪ್ರಾಮಾಣಿಕತೆ ಮುಖ್ಯ. ದಿವಸದ ಕೊನೆಯಲ್ಲಿ ಆತ್ಮೀಯರೊಂದಿಗೆ ಸಮಯ ಕಳೆಯಬಹುದು. ಸಂಗಾತಿಯ ಪ್ರೀತಿ ನಿಮ್ಮ ನೆನಪಿನಲ್ಲಿ ಉಳಿಯುವ ರೀತಿಯಲ್ಲಿರುತ್ತದೆ. ಅದಕ್ಕೆ ಉತ್ತರಿಸಲು ಹೋಗಿ ಇನ್ನೊಂದಿಷ್ಟು ಕೆಸರಿನ್ನು ಮೈಗೆ ಹಚ್ಚಿಕೊಳ್ಳುವ ಕೆಲಸವಾದೀತು. ನೀವು ಉದ್ಯೋಗವನ್ನು ಹುಡುಕುತ್ತಿದ್ದರೆ ಉತ್ತಮ ಉದ್ಯೋಗ ಸಿಗುವ ಸಾಧ್ಯತೆ. ವ್ಯಾಪಾರದಲ್ಲಿ ಕೆಲವಾರು ಸಂಗತಿಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಯಾರೊಂದಿಗೂ ಮುಕ್ತವಾಗಿ ಮಾತನಾಡಲು ಅವಕಾಶ ಸಿಗದು. ಕೆಲವು ಸನ್ನಿವೇಶವು ನಿಮಗೆ ಇಷ್ಟವಾಗದು. ಅದರೂ ಅನಿವಾರ್ಯ ಎನಿಸೀತು. ಕೋಪವನ್ನು ಬಿಟ್ಟರೂ ಬಿಡಲಾಗದು. ನಕಾರಾತ್ಮಕ ಸೂಚನೆ ನಿಮಗೆ ಸಿಗಲಿದ್ದು, ಅದನ್ನು ನಿರ್ಲಕ್ಷ್ಯ ಮಾಡುವಿರಿ.
ಮಿಥುನ ರಾಶಿ: ಎರಡು ಆಲೋಚನೆಯ ನಡುವೆ ವೈಮನಸ್ಸು ಬಂದರೂ ತಾಳ್ಮೆ, ಹೊಂದಾಣಿಕೆಯು ಎಲ್ಲವನ್ನೂ ಮಾಯಮಾಡವುದು. ಹಣದ ಹೂಡಿಕೆ ಕುರಿತು ಯೋಚಿಸಿ ನಿರ್ಧಾರ ಮಾಡಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಇರುವಾಗ ಸಹನೆವಹಿಸಿ. ಪ್ರೇಮದಲ್ಲಿ ವಿಶಿಷ್ಟ ಅನುಭವ ಸಾಧ್ಯ. ಕೆಲಸಕ್ಕಾಗಿ ಕೈಗೊಂಡ ಪ್ರಯಾಣ ಯಶಸ್ಸು ತರುತ್ತದೆ. ಭೂಮಿಯನ್ನು ಪಡೆಯಲು ಓಡಾಟಮಾಡುವಿರಿ. ಸಂಗಾತಿಯ ಪ್ರೀತಿ ಮತ್ತೆ ಜೀವಮಾನದಲ್ಲೇ ಹೊಸ ಬೆಳಕು ತರಬಹುದು. ವ್ಯಾಪಾರದಲ್ಲಿ ತೊಡಗಿರುವವರು ಅಪರಿಚಿತರನ್ನು ಪೂರ್ಣವಾಗಿ ನಂಬುವುದು ಬೇಡ. ಉದ್ಯೋಗಸ್ಥರಿಗೆ ಇಂದು ಬಿಡುವಿಲ್ಲದ ದಿನವಾಗಿರುತ್ತದೆ. ನಿಮಗೆ ಕೆಲವು ಹೆಚ್ಚುವರಿ ಜವಾಬ್ದಾರಿಗಳನ್ನು ಕೊಡಬಹುದು. ಆರ್ಥಿಕ ಪರಿಸ್ಥಿತಿಯಲ್ಲಿ ಬದಲಾವಣೆ ಇರಲಿದೆ. ವ್ಯವಹಾರದಲ್ಲಿ ನಿಮ್ಮ ನಿರ್ಧಾರಗಳೇ ಅಂತಿಮವಾಗುವುದು. ಯಶಸ್ಸಿನ ಗುಟ್ಟನ್ನು ನೀವು ಯಾರಿಗೂ ಹೇಳಲಾರಿರಿ. ಮನೆಯಲ್ಲಿ ಹರ್ಷದ ವಾತಾವರಣ, ಬಂಧುಗಳ ಸಮಾಗಮ.
ಕರ್ಕಾಟಕ ರಾಶಿ: ಯಾವುದನ್ನೂ ಸರಳವಾಗಿ ಒಪ್ಪಿಕೊಳ್ಳುವ ಸ್ಥಿತಿ ಇರದು. ಪಾಪಪ್ರಜ್ಞೆಯು ನಿಮ್ಮನ್ನು ಕಾಡಿ ಮನಸ್ಸು ದುರ್ಬಲವಾಗಬಹುದು. ದ್ವಿಚಕ್ರ ವಾಹನಚಾಲನೆ ಮಾಡುವಾಗ ಎಚ್ಚರಬೇಕು. ಅನಿರೀಕ್ಷಿತ ಲಾಭವು ಉತ್ಸಾಹ ತರುವುದು. ಪ್ರೇಮ ಜೀವನದಲ್ಲಿ ಅನಿರೀಕ್ಷಿತ ಶಾಂತಿ. ಹೆಚ್ಚು ಕೆಲಸವಿದ್ದರೂ ನೀವು ಶಕ್ತಿವಂತನಂತೆ ಕಾಣಬಹುದು. ಕೆಲಸ ಮುಗಿದ ಅನಂತರ ಮನೆಯಲ್ಲಿಯೂ ಸಮಯ ಕಳೆಯಲು ಪ್ರಯತ್ನ ಮಾಡಿ. ಸಂಗಾತಿಯ ಕಾರಣದಿಂದ ದೂರಪ್ರಯಾಣ. ನೆಮ್ಮದಿಗೆ ಭಂಗವನ್ನು ತರುವ ಘಟನೆಗಳು ನಡೆಯಲಿವೆ. ನಿಮ್ಮ ಸ್ವಂತ ಉದ್ಯೋಗದ ಕನಸನ್ನು ನನಸು ಮಾಡಿಕೊಳ್ಳಲು ಕಷ್ಟವಾದೀತು. ಸಹೋದರರ ಜೊತೆ ಮನಸ್ತಾಪ ಬರಬಹುದು. ಕೊಡಬೇಕಾದವರ ಹಣವನ್ನು ಹಾಗೆಯೇ ಇಟ್ಟುಕೊಳ್ಳುವಿರಿ. ನಿಮ್ಮ ತಪ್ಪನ್ನು ಒಪ್ಪಿಕೊಳ್ಳಲು ನಿಮಗೆ ಸಂಕೋಚವಾಗಬಹುದು. ವಾಹನ ಮುಂತಾದ ಉದ್ಯಮವನ್ನು ನಡೆಸುತ್ತಿದ್ದರೆ ಲಾಭವು ಇರುವುದು. ಉದ್ವೇಗಕ್ಕೆ ಒಳಗಾಗಿ ಏನನ್ನಾದರೂ ಎಡವಟ್ಟು ಮಾಡಿಕೊಳ್ಳುವಿರಿ. ಯಾರಿಂದಲೋ ನಿಮಗೆ ಸಂಕಟವಾಗುವುದು.
ಸಿಂಹ ರಾಶಿ: ಅನ್ಯಮಾನಸಿಕತೆಯಿಂದ ಆಪ್ತರ ನಡುವೆ ವೈಷಮ್ಯ ಬರಲಿದೆ. ಯಾರನ್ನೋ ಮೆಚ್ಚಿಸಲು ನಿಮ್ಮ ಸಮಯವನ್ನು ವ್ಯಯಿಸುವಿರಿ. ಅದರಿಂದ ಯಾವ ಲಾಭವೂ ಆಗದು. ಭೂವ್ಯವಹಾರದಲ್ಲಿ ಅನುಕೂಲಕರವಾದ ಸನ್ನಿವೇಶಗಳನ್ನು ಸೃಷ್ಟಿ ಮಾಡಿಕೊಳ್ಳುವಿರಿ. ಸ್ಥಾನಮಾನಕ್ಕೆ ಶೀತಲ ಸಮರ ಆರಂನಬವಾಗಲಿದೆ. ಹಣದ ಬದಲು ಸುರಕ್ಷಿತ ಹೂಡಿಕೆ ಅತ್ಯುತ್ತಮ. ಮನೆಯಲ್ಲಿ ಸಮಸ್ಯೆಗಳಿದ್ದರೂ ನೀವು ಸಮಾಧಾನದಿಂದಿರುವುದು ಉತ್ತಮ. ಉಚಿತ ಸಮಯದಲ್ಲಿ ಹೊಸದನ್ನು ಕಲಿಯಿರಿ. ಸಂಗಾತಿಯ ಬೆಂಬಲ ನಿಮಗೆ ಬೆರಗಾಗಿಸುವಷ್ಟು ಉತ್ತಮವಾಗಿರಬಹುದು. ನಿಮ್ಮ ಮೇಲೆ ತಪ್ಪಾದ ಆರೋಪವು ಬರಬಹುದು. ಕಾನೂನನ್ನು ಪಾಲಿಸಬೇಕಾಗುವುದು. ನಿಮ್ಮ ಗಮನಾಗಮನವನ್ನು ಯಾರಾದರೂ ತಿಳಿದುಕೊಳ್ಳುತ್ತಿರಬಹುದು. ಕುಟುಂಬದ ಚಿಂತೆಯಿಂದ ಆರೋಗ್ಯ ಹಾಳು. ಅನವಶ್ಯಕವಾಗಿ ಹಣವನ್ನು ವ್ಯರ್ಥ ಮಾಡಿಕೊಳ್ಳುವಿರಿ. ಸಂಗಾತಿಯ ಬೆಂಬಲ ಸಿಗಲಿದೆ. ಜೀವನಕ್ಕೆ ಕೆಲವು ಮಾರ್ಪಾಡುಗಳು ಅನಿವಾರ್ಯವಾದೀತು.
ಕನ್ಯಾ ರಾಶಿ: ಮಕ್ಕಳಲ್ಲಿ ಸದ್ಭಾವ ಮೂಡಿಸುವ ಪ್ರಯತ್ನ ಮಾಡುವಿರಿ. ಹಣ ಉಳಿಸುವ ಯತ್ನ ಇಂದು ಯಶಸ್ವಿ ಸಂಬಂಧಿಗಳೊಂದಿಗೆ ಸಣ್ಣ ಪ್ರಯಾಣ ನೆಮ್ಮದಿ ತರಬಹುದು. ಸಂಗಾತಿ ಪುನರಾವರ್ತನೆಯನ್ನು ಸಹಿಸಲಾರಿರಿ. ಪ್ರೇಮ ಜೀವನದಲ್ಲಿ ಗಾಢತೆಯ ಅನುಭವ. ನಿಮ್ಮ ಶ್ರಮದ ಫಲವನ್ನು ಇತರರು ಪಡೆದರೆ ವ್ಯಥೆ ಆಗಬಹುದು. ಹಳೆ ಸ್ನೇಹಿತರ ಭೇಟಿಗೆ ಯೋಜನೆ ಮಾಡುವಿರಿ. ಹಿತಶತ್ರುಗಳು ನಿಮಗೆ ಮಾಡಿದ ಕೆಡುಕು ನಿಮಗೆ ಒಳ್ಳೆಯದೇ ಆಗಲಿದೆ. ಸರ್ಕಾರಿ ಕೆಲಸ ಮಾಡುವವರಿಗೆ ಉನ್ನತ ಸ್ಥಾನದ ವಾರ್ತೆ ಬರುವುದು. ದೇವಾಲಯದಲ್ಲಿ ನಿಮ್ಮ ಹೆಚ್ಚಿನ ಸಮಯವು ಕಳೆದುಹೋಗುವುದು. ನೀವು ಉದ್ಯೋಗ ಬದಲಾವಣೆಯ ನಿರೀಕ್ಷೆಯಲ್ಲಿದ್ದರೆ, ನೀವು ಬಹಳ ದಿನಗಳ ಅನಂತರ ವಿವಿಧ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಹೊಸ ಉದ್ಯೋಗವನ್ನು ಆರಂಭಿಸಲು ತೀವ್ರತೆಯು ಇರಲಿದೆ. ಮಕ್ಕಳನ್ನು ದೂರ ಮಾಡಿಕೊಂಡು ಬೇಸರಗೊಳ್ಳುವಿರಿ. ಸಹೋದ್ಯೋಗಿಗಳನ್ನು ಅನೌಪಚಾರಿಕವಾಗಿ ಭೇಟಿಯಾಗುವಿರಿ. ಓಡಾಟದಿಂದ ಸಮಯ ವ್ಯರ್ಥ ಮಾಡುವಿರಿ.
ತುಲಾ ರಾಶಿ: ಇರುವುದಕ್ಕಿಂತ ಹೇಳುವುದೇ ಹೆಚ್ಚಾಗುವುದು. ಇಂದು ಅನಗತ್ಯ ತಿರುಗಾಟ, ಖರ್ಚುಗಳು ನಿಮ್ಮ ಆಲೋಚನೆಯ ದಿಕ್ಕನ್ನು ಬದಲಿಸಬಹುದು. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಕುಟುಂಬದ ಕೇಂದ್ರಬಿಂದುವಾಗಿ ನೀವು ಬೆಳಗಬಹುದು. ನಿಮ್ಮ ವಸ್ತು ಕೈಗೆ ಸಿಗದೇ ಇರುವುದನ್ನು ನೀವು ಮಾಡಿದ ತ್ಯಾಗ ಎಂದು ತಿಳಿಯಿರಿ. ಸಂಗಾತಿಯ ಅತಿಯಾದ ಆಸಕ್ತಿ ನಿಮ್ಮ ಮನಸ್ಸಿಗೆ ಒತ್ತಡ ತರಬಹುದು. ಆದರೆ ಅವರ ನಿಜವಾದ ಉದ್ದೇಶ ನಿಮಗೆ ನಂತರ ಸ್ಪಷ್ಟವಾಗಲಿದೆ. ಅನುಭವಿ ವ್ಯಕ್ತಿಯಿಂದ ನೀವು ಪ್ರಯೋಜನಕಾರಿ ಸಲಹೆಯು ಸಿಗುವುದು. ಇಷ್ಟವಾದ ಭೂಮಿಯನ್ನು ಖರೀದಿಸಲು ಮುಂದಾಗುವಿರಿ. ಹಣದ ಹರಿವು ಇಂದು ಚನ್ನಾಗಿದ್ದು ಎಷ್ಟೋ ದಿನಗಳಿಂದ ಉಳಿಸಿಕೊಂಡ ಬಯಕೆಯನ್ನು ನೀವು ಪೂರ್ತಿ ಮಾಡಿಕೊಳ್ಳುವಿರಿ. ಮಾರುಕಟ್ಟೆಯಿಂದ ಹೆಚ್ಚಿನ ಲಾಭವನ್ನು ಪಡೆಯಲು ಆಗುವುದು. ನಿಮ್ಮ ವ್ಯಾಪಾರ ವಿಸ್ತರಣೆಯನ್ನು ಮಾಡಲು ನಿರ್ಧಾರ ಮಾಡುವಿರಿ. ಹಳೆಯ ಘಟನೆಯನ್ನು ನೆನಪಿಸಿಕೊಂಡು ಸಂಕಟಪಡುವುದು ಬೇಡ.
ವೃಶ್ಚಿಕ ರಾಶಿ: ನಿಮ್ಮ ಜೀವನದ ದಿಕ್ಕು ಕೆಲವು ಸನ್ನಿವೇಶಗಳಿಂದಾಗಿ ಬದಲಾಗುವುದು. ನಿಮ್ಮ ಇಂದಿನ ಕಾರ್ಯದ ಒತ್ತಡ ನಿಮ್ಮನ್ನು ಒತ್ತಡಕ್ಕೆ, ಉದ್ವೇಗಕ್ಕೆ ಒಯ್ಯಬಹುದು. ಇಂತಹ ಸಂದರ್ಭಗಳಲ್ಲಿ ಸುಮ್ಮನೆ ಸ್ವಲ್ಪ ಹೊತ್ತು ಮಾಡುವ ಕೆಲಸಗಳತ್ತ ಗಮನಹರಿಸಿ. ಅನಿರೀಕ್ಷಿತ ಆರ್ಥಿಕ ನಷ್ಟ ಸಂಭವನೀಯ. ನಿಮಗೆ ಅರಿವಿಲ್ಲದೇ ಯೋಗವು ನಷ್ಟವಾಗುವುದು. ಅಪರೂಪದ ಭೇಟಿಗಳು ಸಂತೋಷ ತರಬಹುದು. ಪ್ರೇಮದಲ್ಲಿ ಹೊಸ ಚೈತನ್ಯ ಜಾಗರೂಕವಾಗಲಿ. ವೃತ್ತಿ ಯೋಜನೆಗಳು ಸಕಾರಾತ್ಮಕ ಫಲಿತಾಂಶ ತರುತ್ತವೆ. ಹಳೆಯ ನೆನಪುಗಳನ್ನು ಕಳೆಯುವ ಸಂದರ್ಭ ಬರುತ್ತದೆ. ದುಃಖವನ್ನು ಹಂಚಿಕೊಳ್ಳಲು ಆಪ್ತರು ಬೇಕೆನಿಸಬಹುದು. ನಿಮ್ಮ ವೃತ್ತಿಯಲ್ಲಿ ಕೆಲವರು ನಿಮ್ಮ ಮೇಲೆ ಕಣ್ಣಿಡಬಹುದು. ಸಂಗಾತಿಯನ್ನು ವೃತ್ತಿಯ ಕಡೆಗೆ ತಿರುಗಿಸುವ ಪ್ರಯತ್ನ ಮಾಡುವಿರಿ. ಕಚೇರಿಯ ವಾತಾವರಣವು ಸಕಾರಾತ್ಮಕವಾಗಿ ಇರುವಂತೆ ತೋರುತ್ತದೆ. ವಹಿಸಿಕೊಂಡ ಕೆಲಸವನ್ನು ಸರಿಯಾದ ಸಮಯಕ್ಕೆ ಪೂರ್ಣ ಮಾಡುವಿರಿ. ತೊಂದರೆಗಳನ್ನು ನೀವು ಎದುರಿಸಲು ಸಕ್ಷಮರಾಗಿರುವಿರಿ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಳ್ಳಬಹುದು.
ಧನು ರಾಶಿ: ಹಣದ ಆಸೆ ನಿಮ್ಮ ದಾರಿಯನ್ನು ತಪ್ಪಿಸಬಹುದು. ಇಲ್ಲವಾದರೆ ಅಧಿಕವಾದ ಹಣವು ವ್ಯಯವಾದೀತು. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರ ವಹಿಸಿ. ಮನೆಯವರೊಂದಿಗೆ ಹೆಚ್ಚು ಕಾಲ ಇಲ್ಲದಿದ್ದರೆ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ಅವಶ್ಯಕತೆ ಇಲ್ಲದಿದ್ದರೂ ಕೃತಜ್ಞತೆಯನ್ನು ಅರ್ಪಿಸುವುದು ಕರ್ತವ್ಯ. ಸಹೋದ್ಯೋಗಿಗಳ ಜೊತೆ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಿ. ಕೆಲಸದಲ್ಲಿ ಹೊಸ ಜನರನ್ನು ಭೇಟಿಯಾಗಿ ಮುಂದಿನ ಅವಕಾಶಗಳತ್ತ ಗಮನ ಹರಿಸಿ. ಸಮಯದ ಪೂರಕವಾಗಿ ಕೆಲಸ ಮಾಡಿದರೆ ಯಶಸ್ಸು ಖಚಿತ. ಆತುರದಿಂದ ನಿಮ್ಮ ಸರಳವಾದ ಕಾರ್ಯವನ್ನು ವ್ಯತ್ಯಾಸ ಮಾಡಿಕೊಳ್ಳುವಿರಿ. ಎಲ್ಲರೆದುರು ನಿಮಗೆ ಮುಜುಗರವಾಗುವ ಸನ್ನಿವೇಶವು ಬರಬಹುದು. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ಸೂಕ್ತ. ತುರ್ತು ಹಣವು ಬೇಕಿದ್ದರಿಂದ ಸ್ನೇಹಿತರನ್ನು ಕೇಳುವಿರಿ. ಮನೆಯ ಕಾರ್ಯದಲ್ಲಿ ನಿಮ್ಮ ಇಡೀ ದಿನವು ಕಳೆದು ಹೋದುದ್ದು ಗೊತ್ತಾಗದೇ ಹೋಗಬಹುದು.
ಮಕರ ರಾಶಿ: ನಿಮಗೆ ಕೊಡುವ ಕೆಲಸವನ್ನು ಪೂರ್ಣಪ್ರಮಾಣದಿಂದ ತೊಡಗಿ ಮಾಡಲಾರಿರಿ. ಇಂದು ನಿಮ್ಮ ವ್ಯಾಪಾರದಲ್ಲಿ ಚೇತರಿಕೆ ಕಾಣಿಸುವುದು. ಜನರೊಡನೆ ಬಾಂಧವ್ಯವನ್ನು ಚೆನ್ನಾಗಿಸಿಕೊಳ್ಳಿ. ಆತುರಪಟ್ಟು ಅವಗಢಕ್ಕೆ ಸಿಲುಕಬೇಡಿ. ನೀವು ಉದ್ಯೋಗವನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ತಾನಾಗಿಯೇ ಬೀಳುವ ಮರವನ್ನು ನೀವು ತಲೆಯ ಮೇಲೆ ಬೀಳಿಸಿಕೊಳ್ಳುವಿರಿ. ಹಣದ ವಿಚಾರದಲ್ಲಿ ಜಾಣೆ ಅಗತ್ಯ ಸಂಗಾತಿಯೊಂದಿಗೆ ಜಗಳ ಉಂಟಾದರೂ ಅವರು ಶಾಂತಿ ಕಾಪಾಡುತ್ತಾರೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ ಮನಸ್ಸಿಗೆ ನೆಮ್ಮದಿ ಪಡೆಯಿರಿ. ಸಂಗಾತಿಯ ಪ್ರೀತಿಯ ಸ್ಪರ್ಶ ಇಂದು ನಿಮಗೆ ಹೊಸ ಉತ್ಸಾಹ ನೀಡಬಹುದು. ಯಾರದೋ ಹಸ್ತಕ್ಷೇಪದಿಂದಾಗಿ ನಿಮ್ಮ ನಡುವೆ ತಪ್ಪು ತಿಳುವಳಿಕೆ ಬರುವುದು. ನೀವು ಪರಸ್ಪರ ನಂಬಿಕೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ. ನಿಮ್ಮ ಸಂಗಾತಿಯ ಆರೋಗ್ಯವೂ ವ್ಯತ್ಯಾಸವಾಗಿ ಉದ್ವೇಗಕ್ಕೆ ಒಳಗಾಗುವರು. ಶುಭಕರ್ಮವನ್ನು ಮಾಡುವ ಉತ್ಸಾಹವಗಬಹುದು. ಸಂಗಾತಿಯ ಜೊತೆಗಿನ ಕಲಹವು ನಿಮ್ಮ ಇಡೀ ದಿನವನ್ನು ಸರಿಯಾಗಿ ಕಳೆಯುವಂತೆ ಮಾಡದು.
ಕುಂಭ ರಾಶಿ: ಅಧ್ಯಯನದ ಜೊತೆ ದುಡಿಮೆ ಅನಿವಾರ್ಯವಾಗಬಹುದು. ಆತ್ಮವಿಶ್ವಾಸದ ಮೂಲಕ ನೀವು ಅನಾರೋಗ್ಯವನ್ನು ಎದುರಿಸುವಿರಿ. ಹಣಕಾಸು ಯೋಜನೆಗಳಲ್ಲಿ ಜಾಗ್ರತೆ ಅವಶ್ಯಕ. ಮನೆಯ ಒತ್ತಡ ಹೆಚ್ಚಾಗಬಹುದು, ಆದರೆ ಸಹಕಾರದಿಂದ ಅದು ಕಡಿಮೆಯಾಗುತ್ತದೆ. ಜನರೊಂದಿಗೆ ಇಣುಕು ನೋಟದಿಂದ ವ್ಯವಹರಿಸಬೇಕು. ಸೋತೆನೆಂದು ಹತಾಶರಾಗುವ ಬದಲು ಗೆಲವಿಗೆ ಇನ್ನೊಂದು ಅವಕಾಶ ಎಂದುಕೊಂಡರೆ ಸುಖ. ದಿನದ ಕೊನೆಯಲ್ಲಿ ನಿಮ್ಮ ತಾಳ್ಮೆ ಯಶಸ್ಸಿಗೆ ಕಾರಣವಾಗಲಿದೆ. ದುಃಖವನ್ನು ಅನುಭವಿಸುವ ಸಂದರ್ಭ ಬರಬಹುದು. ಮನಸ್ಸು, ಬುದ್ಧಿಗಳನ್ನು ನಿಶ್ಚಲಗೊಳಿಸಿ. ಇಂದು ನೀವು ಸೋಮಾರಿತನವನ್ನು ಬೆಳೆಸಿಕೊಳ್ಳುವಿರಿ. ನೀವು ಕುತ್ತಿಗೆಯ ಮಟ್ಟಕ್ಕೆ ಬರುವತನಕವೂ ನೀವು ಜಾಗರೂಕರಾಗಲಾರಿರಿ. ವ್ಯಾಪಾರದಲ್ಲಿ ಪರಿಚಿತರ ಸಹಾಯದಿಂದ ಪ್ರಗತಿ ಕಾಣುವುದು. ಹಣಕ್ಕೆ ಸಂಬಂಧಿಸಿದ ಯಾವುದಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಸುಲಭದ ದಾರಿಯು ನಿಮಗೆ ಕಾಣಿಸುವುದು. ವೃತ್ತಿಶೀಲರು ತಮ್ಮನ್ನು ಅತಿಮಾನುಷರಂತೆ ತೋರ್ಪಡಿಸುವರು.
ಮೀನ ರಾಶಿ: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳುವುಸು ಬೇಡ. ಅದಕ್ಕೆ ಸಮಯ ಕೊಡಲಾಗದು. ನೀವು ಅಕಾರಣವಾಗಿ ಚಿಂತೆಗಳನ್ನು ಮಾಡಬೇಡಿ. ಉದ್ವೇಗಕ್ಕೆ ಒಳಗಾಗಬಹುದು. ಎಲ್ಲವೂ ಖಾಲಿ ಖಾಲಿ ಎನ್ನುವ ಮನೋಭಾವ ಬರಬಹುದು. ಶಕ್ತಿಯ ಮಟ್ಟವನ್ನು ಬಾಕಿಯಿರುವ ಕೆಲಸಗಳಿಗೆ ಬಳಸಬಹುದು. ಹಣಕಾಸಿನ ಕಾರ್ಯದಿಂದ ಯಶಸ್ಸು ಸಿಗಬಹುದು. ಸಂಗಾತಿಯ ಕುಟುಂಬದ ಅಡ್ಡಿ ಕೆಲವೊಂದು ವ್ಯತ್ಯಯ ತಂದರೂ, ನಿಮ್ಮ ಸಹನೆಗೆ ಅದರ ಬಗ್ಗೆ ಪ್ರಭಾವ ಬೀರುವುದಿಲ್ಲ. ನೀವು ನಿರೀಕ್ಷೆ ಮಾಡದ ರೀತಿ ದಿನ ನಡೆಯಲಿದೆ. ವೃತ್ತಿಯಲ್ಲಿ ಸಮಾಧಾನ ತರುವ ಸಂಗತಿಗಳು ಇರಲಿದೆ. ಕೆಲವು ನಿರ್ಧಾರವು ಕೈ ಮೀರಿ ಇಂದು ನಡೆಯಬಹುದು. ಹಠದ ಸ್ವಭಾವವು ವೈವಾಹಿಕ ಜೀವನದಲ್ಲಿ ಅಪಶ್ರುತಿ ಬರಬಹುದು. ನಿಮ್ಮ ಪ್ರೀತಿಪಾತ್ರರು ಇಂದು ತುಂಬಾ ದುರ್ಬಲರಾಗುತ್ತಾರೆ. ಆರ್ಥಿಕಸ್ಥಿತಿಯಲ್ಲಿ ಪ್ರಗತಿಯ ಲಕ್ಷಣವಿದೆ. ವ್ಯವಹಾರದಲ್ಲಿ ಇಂದು ನಿಮಗೆ ತುಂಬಾ ಒತ್ತಡದ ದಿನವಾಗಿರುತ್ತದೆ. ನಿಮ್ಮ ಹಣವನ್ನು ಬಲಾತ್ಕಾರದಿಂದ ಪಡೆಯಬೇಕಾಗಬಹುದು.
-ಲೋಹಿತ ಹೆಬ್ಬಾರ್ – 8762924271 (what’s app only)