
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಗುರುವಾರ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಮೂಲಾ, ಯೋಗ: ಸಿದ್ಧ, ಕರಣ: ವಣಿಜ, ಸೂರ್ಯೋದಯ – 06 : 06 am, ಸೂರ್ಯಾಸ್ತ – 06 : 51 pm, ಇಂದಿನ ಶುಭಾಶುಭಕಾಲ: ರಾಹು ಕಾಲ 14:05 – 15:41, ಯಮಘಂಡ ಕಾಲ 06:06 – 07:42, ಗುಳಿಕ ಕಾಲ 09:18 – 10:53
ಮೇಷ ರಾಶಿ: ಇಷ್ಟವಿಲ್ಲದ ವಿಚಾರಗಳೇ ನಿಮ್ಮ ಸುತ್ತ ಮಾತನಾಡಿ ಮಾನಸಿಕ ಹಿಂಸೆ ಕೊಡುವರು. ಇಂದು ಸ್ವಲ್ಪ ಮಟ್ಟಿಗೆ ಆರ್ಥಿಕ ಬೆಳವಣಿಗೆ ಕಾಣಿಸಿ ಸಮಾಧಾನವಾಗುವುದು. ಮನೆಯಲ್ಲಿರುವ ಮಕ್ಕಳಿಂದ ನಿಮಗೆ ಅನುಕೂಲವಾಗಲಿದೆ. ಪ್ರೇಮದಲ್ಲಿ ವಿಜಯಿಯಾಗುವಿರಿ. ವಿದ್ಯಾಭ್ಯಾಸದಲ್ಲಿ ನಿಮಗೆ ಸಮಾಧಾನ ಸಿಗಲಿದೆ. ಆಪ್ತರ ಮೇಲಿನ ನಂಬಿಕೆ ಹುಸಿಯಾಗುವುದು. ಉದ್ಯೋಗದಲ್ಲಿ ನಿಮ್ಮ ಚುರುಕು ಗಮನ ಸೆಳೆಯುತ್ತದೆ. ಆಪದ್ಧನ ಖಾಲಿಯಾಗದಂತೆ ಜಾಗರೂಕರಾಗಿರಿ. ಕುಟುಂಬದ ಸದಸ್ಯರೊಂದಿಗಿನ ಸಂಪರ್ಕ ಬಲಗೊಳ್ಳಲಿದೆ. ಹಣಕಾಸು ಯೋಜನೆಗಳಲ್ಲಿ ಸ್ಪಷ್ಟತೆ ಇರಲಿ. ನಿದ್ದೆಯ ಕೊರತೆ ದೈನಂದಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವರ ಮಾತಿನಿಂದ ನಿಮ್ಮ ವ್ಯಕ್ತಿತ್ವವು ಬದಲಾಗುವುದು. ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾದರೂ ಸ್ವಲ್ಪ ನೆಮ್ಮದಿಯು ಇರಲಿದೆ. ಸ್ತ್ರೀಯರಿಗೆ ಅಭದ್ರತೆಯು ಕಾಡಬಹುದು. ಮಕ್ಕಳ ವಿಚಾರದಲ್ಲಿ ನೀವು ಮೃದುವಾಗುವಿರಿ. ಅಪರಿಚಿತರ ಕರೆಯಿಂದ ನಿಮಗೆ ಪೀಡೆ. ಹೆಚ್ಚು ಶ್ರಮ ವಹಿಸಬೇಕಾಗುವುದು.
ವೃಷಭ ರಾಶಿ: ನಿಮ್ಮವರನ್ನು ನೀವು ಗುರುತುಹಿಡಿಯಲು ಆಗದು. ಇಂದು ನಿಮಗೆ ಬರಬೇಕಾದ ಹಣವು ಬಾರದೇ ಸಾಲ ಮಾಡುವ ಪರಿಸ್ಥಿತಿ ಬರಬಹುದು. ಆಹಾರ ವ್ಯತ್ಯಾಸದಿಂದ ಉದರ ಬಾಧೆ ಹೆಚ್ಚಾಗುವುದು. ಹಿರಿಯರ ಸೇವೆಯ ಬಗ್ಗೆ ಹೆಮ್ಮೆ ಇರಲಿದೆ. ಸರ್ಕಾರದ ಉದ್ಯೋಗದಲ್ಲಿ ಹೊಸ ಜವಾಬ್ದಾರಿಯನ್ನು ಪಡೆಯಬೇಕಾಗುವುದು. ಉದ್ಯೋಗದಲ್ಲಿ ಸಣ್ಣ ಯತ್ನದಿಂದಲೇ ದೊಡ್ಡ ಫಲ ಸಿಗಬಹುದು. ಹಳೆಯ ಸ್ನೇಹಿತರ ಸಂಪರ್ಕದಿಂದ ಉತ್ಸಾಹ ಮೂಡುತ್ತದೆ. ಆಂತರಿಕ ಕಲಹವು ಎಲ್ಲರಿಗೂ ಗೊತ್ತಾಗುವಂತೆ ಮಾಡಿಕೊಳ್ಳುವಿರಿ. ಹಣದ ವ್ಯವಹಾರದಲ್ಲಿ ತಾಳ್ಮೆ ಮತ್ತು ಯುಕ್ತಿಯ ಅಗತ್ಯವಿದೆ. ಸಂಗಾತಿಯೊಂದಿಗೆ ಸಂದೇಹಗಳಿಗೆ ಸ್ಪಷ್ಟತೆ ನೀಡುವ ಸಮಯ. ಮಿತ್ರರ ಸಹಕಾರವನ್ನು ಬಹಳ ದಿನಗಳ ಅನಂತರ ಕೇಳುವಿರಿ. ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡೀತು. ಯಾರನ್ನೂ ಅಪಮಾನ ಮಾಡುವುದು ಬೇಡ. ಅಪ್ರಯೋಜಕ ಮಾತುಗಳಿಗೆ ಕಿವಿಯಾಗುವಿರಿ. ನಿಮ್ಮ ಗುರಿಯ ಬಗ್ಗೆ ಸ್ಪಷ್ಟವಾದ ನಿರ್ಧಾರವಿರಲಿ. ಸ್ನೇಹಿತರಿಂದ ಉಡುಗೊರೆ ಸಿಗಬಹುದು.
ಮಿಥುನ ರಾಶಿ: ಅಂದಿಕೊಂಡ ಸ್ಥಿತಿ ಬಾರದೇ ಬೇಸರವಾಗವುದು. ಹಿರಿಯರ ವಚನದಿಂದ ಸಾಂತ್ವನ ಸಿಗಲಿದೆ. ನೀವು ಪಾಲುದಾರಿಕೆಯಲ್ಲಿ ಹೂಡಿಕೆ ಮಾಡುವ ಯೋಜನೆ ಇರಲಿದೆ. ಪ್ರೀತಿಯಲ್ಲಿ ಅಂದುಕೊಂಡಷ್ಟು ಅನುಕೂಲವಾಗದಿದ್ದರೂ ಭರವಸೆ ಇರುವುದು. ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯ ಕಾರಣ ಕಾರ್ಯವು ಸೂಚಿಸದೇ ಬಹಳ ಜಡರಾಗುವಿರಿ. ಹಣ ನಷ್ಟದಿಂದ ಚಿಂತೆ ಆಗಬಹುದಾದರೂ ಶೀಘ್ರವೇ ಪರಿಹಾರ ಕಂಡುಬರಲಿದೆ. ನಿಮಗೆ ಸರಿಕಂಡ ಕಾರ್ಯವನ್ನು ಯಾವುದೇ ಹಿಂಜರಿಕೆ ಇಲ್ಲದೇ ಮಾಡುವಿರಿ. ಸ್ನೇಹಿತರಿಂದ ಸಣ್ಣ ಹಾಸ್ಯದ ಸಂದರ್ಭಗಳು ಒತ್ತಡ ತಗ್ಗಿಸಬಲ್ಲವು. ದಿನದ ಅಂತ್ಯದಲ್ಲಿ ಆನಂದದ ಕ್ಷಣಗಳು ನಿಮ್ಮನ್ನು ಹತ್ತಿರದಿಂದ ತಲುಪುತ್ತವೆ. ಜನರ ಜೊತೆ ಬೆರೆಯಲು ಹಿಂದೇಟು ಹಾಕುವಿರಿ. ಅನಿರೀಕ್ಷಿತ ನಿಧಿಯ ನಿರೀಕ್ಷೆಯಲ್ಲಿ ಇರುವಿರಿ. ಅಂದುಕೊಂಡಿದ್ದರ ವಿರುದ್ಧ ನಡೆಯುವುದು ನಿಮಗೆ ಬೇಸರ ತರಿಸಬಹುದು. ಹಣವನ್ನು ಹೊಂದಿಸಲು ಕಷ್ಟವಾಗುವುದು. ನಿಮ್ಮ ವ್ಯಕ್ತಿತ್ವದ ಬಗ್ಗೆ ಇತರರು ಹೆಮ್ಮೆಪಡುವರು. ಉದ್ಯಮವನ್ನು ಅನ್ಯ ಮಾರ್ಗದಲ್ಲಿ ಮುಂದುವರಿಸುವ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ.
ಕರ್ಕಾಟಕ ರಾಶಿ: ನಿಮ್ಮ ಎದುರಾಳಿಯನ್ನು ಯುಕ್ತಿಯಿಂದ ಗೆಲ್ಲಬಹುದು. ನಿಮ್ಮ ಸಾಮರ್ಥ್ಯಕ್ಕೆ ಶತ್ರುಗಳು ತಾನಾಗಿಯೇ ಕಡಿಮೆಯಾಗುವರು. ತುರ್ತು ಆಗಬೇಕಾದ ಕೆಲಸವು ಆಗದೇ ಒತ್ತಡದಲ್ಲಿ ಇರುವಿರಿ. ಮಕ್ಕಳಿಗಾಗಿ ವಿಶೇಷ ಅಡುಗೆಯನ್ನು ಮಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಕಲ್ಪನೆಯ ಶಕ್ತಿ ಹೆಚ್ಚಾಗುತ್ತದೆ, ಆದರೆ ಅದು ದುರ್ಬಳಕೆಗೆ ಕಾರಣವಾಗಬಾರದು. ಕೆಲಸದಲ್ಲಿ ಗಮನ ಹರಿಸುವ ಅಗತ್ಯವಿದೆ. ವಾಹನ ದುರಸ್ತಿ ಅನಿರೀಕ್ಷಿತವಾಗಬಹುದು. ಖರ್ಚು ನಿಯಂತ್ರಣ ಮಾಡದಿದ್ದರೆ ಹಣಕಾಸಿನಲ್ಲಿ ಅಸ್ವಸ್ಥತೆ ಉಂಟಾಗಬಹುದು. ಕುಟುಂಬ ಸದಸ್ಯರೊಂದಿಗಿನ ವ್ಯವಹಾರದಲ್ಲಿ ಸಹಾನುಭೂತಿ ಅಗತ್ಯವಿದೆ. ಹಿತಶತ್ರುಗಳ ಕಾರಣದಿಂದ ಅವಕಾಶ ವಂಚಿತರಾಗುವಿರಿ. ದೀರ್ಘಕಾಲದ ಸಾಲ ಬಾಧೆಯಿಂದ ಮುಕ್ತರಾಗಿ ನಿಶ್ಚಿಂತರಾಗುವಿರಿ. ಅಧಿಕ ಚಿತ್ತಚಾಂಚ್ಯಲ್ಯವು ನಿಮ್ಮ ಜೊತೆಗಾರರಿಗೆ ಕಷ್ಟವಾದೀತು. ವಿವಾಹಕ್ಕೆ ಸಂಬಂಧಿಸಿದಂತೆ ಓಡಾಟವನ್ನು ಮಾಡಬೇಕಾಗುವುದು. ಅಸೂಯೆಯ ಕಾರಣ ದ್ವೇಷಭಾವವು ಸಹೋದ್ಯೋಗಿಯ ಬಗ್ಗೆ ನಿಮ್ಮಲ್ಲಿ ಮೂಡಬಹುದು.
ಸಿಂಹ ರಾಶಿ: ಮಾತಿಲ್ಲದೇ ಸಂಬಂಧಗಳು ಸ್ತಬ್ಧವಾಗಲಿವೆ. ಉದ್ಯೋಗಕ್ಕೆ ಹಲವು ಅವಕಾಶಗಳು ತೆರೆದುಕೊಳ್ಳುವುದು. ಸಾಮಾಜಿಕವಾಗಿ ಬೆಳೆಯುವ ಆಸೆ ಚಿಗುರುವುದು. ಭವಿಷ್ಯದ ಬಗ್ಗೆ ಸರಿಯಾದ ದೃಷ್ಟಿಯು ಬೇಕೆನಿಸುವುದು. ನಿಮ್ಮನ್ನು ಉಪಯೋಗಿಸಿಕೊಳ್ಳುವವರ ಜೊತೆ ವಾಗ್ವಾದ. ಕಠಿಣ ಪರಿಶ್ರಮ ಇಂದು ಫಲ ನೀಡಲಿದೆ. ಉದ್ಯೋಗದಲ್ಲಿ ಉನ್ನತಿ ಅಥವಾ ಬದಲಾವಣೆಯ ಸೂಚನೆ ಇದೆ. ಹಣಕಾಸಿನಲ್ಲಿ ಲಾಭದ ಸಂದರ್ಭ ಎದುರಾಗಬಹುದು. ಕುಟುಂಬದಲ್ಲಿ ಸಣ್ಣ ಸಂಗತಿಗಳು ಸಂತೋಷ ನೀಡಬಹುದು. ಮಿತಭಾಷಿಯಾಗಿ ನೀವು ಎಲ್ಲರಿಂದ ಅಪಹಾಸ್ಯಕ್ಕೆ ಒಳಗಾಗುವಿರಿ. ಶತ್ರುಗಳ ಪಿತೂರಿಯಿಂದ ನಿಮಗೆ ವ್ಯವಹಾರದಲ್ಲಿ ಹಿನ್ನಡೆಯಾದೀತು. ಎಲ್ಲರನ್ನೂ ದೂರುವುದು ನಿಮಗೆ ಇಷ್ಟವಾಗದು. ನಿಮಗೆ ವಹಿಸಿದ ಕೆಲಸವನ್ನು ಅದ್ಭುತವಾಗಿ ಮಾಡಲು ಪ್ರಯತ್ನಿಸುವಿರಿ. ಮನೋರಂಜನೆಗೆ ನಿಮಗೆ ಸಮಯವು ಸಿಗುವುದು. ಇನ್ನೊಬ್ಬರ ಕೆಲಸದ ಹೊರೆಯೂ ನಿಮಗೆ ಬರಲಿದೆ. ನಿಮ್ಮ ಕಾಯುವಿಕೆಯು ಸಾರ್ಥಕವಾಗಬಹುದು. ಮಾತಿನಲ್ಲಿ ಮಾರ್ದವ ಇರಲಿ. ವೈಯಕ್ತಿಕ ಕಾರ್ಯದ ಕಾರಣ ಪ್ರಯಾಣ ಮಾಡುವಿರಿ.
ಕನ್ಯಾ ರಾಶಿ: ತಂದೆಗೆ ಆರ್ಥಿಕ ಸಹಕಾರವನ್ನು ಕೊಡುವಿರಿ. ಕೆಲವು ವಿಚಾರಕ್ಕೆ ಹೊಂದಾಣಿಕೆಯ ಕೊರತೆ ಕಂಡು ದಾಂಪತ್ಯದಲ್ಲಿ ಕಲಹವಾಗುವುದು. ಉದ್ಯೋಗದಲ್ಲಿ ಒತ್ತಡ ನಿವಾರಣೆಯನ್ನು ನೀವೇ ಸ್ವತಃ ಮಾಡಿಕೊಳ್ಳಬೇಕಾಗುವುದು. ಮಾತುಗಳು ಇನ್ನೊಬ್ಬರ ಮೇಲೆ ಪರಿಣಾಮ ಬೀರಬಹುದು, ಆದ್ದರಿಂದ ಎಚ್ಚರಿಕೆಯಿಂದ ಮಾತನಾಡಿ. ಒಪ್ಪಂದಗಳಿಂದ ಜಾರಿಕೊಳ್ಳುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಪಡೆಯುವ ಸಂಭವ. ಹಣಕಾಸಿನಲ್ಲಿ ಜ್ಞಾನದಿಂದ ನಿರ್ವಹಣೆ ಅಗತ್ಯವಿದೆ. ಕುಟುಂಬದ ಹಿರಿಯರ ಸಲಹೆ ಉಪಯುಕ್ತವಾಗಬಹುದು. ಉದ್ಯೋಗದಲ್ಲಿ ಮಕ್ಕಳಿಗೆ ಪ್ರವೇಶವನ್ನು ಕೊಡುವಿರಿ. ನಿಮ್ಮ ಬಗ್ಗೆ ಶತ್ರುಗಳು ಅಪಪ್ರಚಾರ ಮಾಡುವರು. ಬಂಧುಗಳು ನಿಮ್ಮನ್ನು ಬಹಳವಾಗಿ ದೂರುವರು. ಸಂಗಾತಿಯ ಆರೋಗ್ಯವನ್ನು ನೋಡಿಕೊಳ್ಳುವ ಭರದಲ್ಲಿ ಕೆಲವು ಕಾರ್ಯಗಳನ್ನು ಮರೆಯಬಹುದು. ಪಾಲುದಾರಿಕೆಯಲ್ಲಿ ಆದ ಮನಸ್ತಾಪವನ್ನು ಮುಂದುವರಿಸದೇ ಸುಮ್ಮನಿರಿ. ಅಥವಾ ಅನ್ಯ ಮಾರ್ಗವೆಂದರೆ ಕಂಡುಕೊಳ್ಳಿ. ಆಕಸ್ಮಿಕ ಧನಾಗಮನವಾದರೂ ಖರ್ಚು ನಿಶ್ಚಿತ.