
ಆಗಸ್ಟ್ 09ರಿಂದ 15ರ ತನಕದ ಎರಡನೇ ವಾರದಲ್ಲಿ ಪ್ರೀತಿಯ ರೀತಿಯನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲಾಗದು. ಪೂರ್ವಭಾವೀ ಆಲೋಚನೆಯಿಲ್ಲದೇ ಮುಂದೆಹೋಗಿ ದುಃಖಿಸಬೇಕಾಗುವುದು. ಪ್ರಯಾಣದಿಂದ ಪ್ರಯಾಸ ಸಾಧ್ಯತೆ ಇದೆ. ಎಲ್ಲರ ಪ್ರೇಮವೂ ಸಫಲವಾಗಲಿ.
ನಿಮ್ಮ ರಾಶ್ಯಧಿಪತಿ ಮಂಗಳ ಮಿಥುನದಲ್ಲಿದ್ದರೆ, ಶನಿ ಮೀನದಲ್ಲಿದ್ದಾನೆ. ಇದರಿಂದ ಪ್ರೇಮ ಸಂಬಂಧದಲ್ಲಿ ತಾಳ್ಮೆ ಬಹಳ ಮುಖ್ಯ. ಸಣ್ಣಪುಟ್ಟ ವಿಚಾರಗಳಿಗೂ ಸಂಗಾತಿಯ ಮೇಲೆ ಕೋಪಗೊಳ್ಳುವ ಸಾಧ್ಯತೆ ಇದೆ. ಭಾವನೆಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಮಾತುಕತೆ ನಡೆಸಿದರೆ ಬಾಂಧವ್ಯ ಗಟ್ಟಿಯಾಗುತ್ತದೆ.
ಕನ್ಯಾ ರಾಶಿಯಲ್ಲಿ ಶುಕ್ರ ಮತ್ತು ಚಂದ್ರರು ಒಟ್ಟಾಗಿರುವುದರಿಂದ ನಿಮ್ಮ ಪ್ರೇಮ ಜೀವನ ಅತ್ಯಂತ ಸುಂದರವಾಗಿರಲಿದೆ. ನಿಮ್ಮ ಆಕರ್ಷಣೆ ಹೆಚ್ಚುತ್ತದೆ. ಅವಿವಾಹಿತರಿಗೆ ಹೊಸ ಪ್ರೇಮ ಪ್ರಸ್ತಾಪಗಳು ಒದಗಿಬರಲಿವೆ. ಪ್ರೇಮಿಗಳ ನಡುವೆ ಪರಸ್ಪರ ಪ್ರೀತಿ ಮತ್ತು ಗೌರವ ಹೆಚ್ಚಾಗುತ್ತದೆ.
ಮಂಗಳ ನಿಮ್ಮ ರಾಶಿಯಲ್ಲಿಯೇ ಇರುವುದರಿಂದ ಸ್ವಭಾವದಲ್ಲಿ ಕೊಂಚ ಉಗ್ರತೆ ಅಥವಾ ಚಂಚಲತೆ ಕಾಣಿಸಬಹುದು. ಪ್ರೇಮ ವಿಚಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಸಂಗಾತಿಯ ಅಭಿಪ್ರಾಯಗಳಿಗೆ ಬೆಲೆ ನೀಡುವುದು ಸಂಶಯ ಮತ್ತು ಮನಸ್ತಾಪಗಳನ್ನು ದೂರ ಮಾಡುತ್ತದೆ.
ಗುರು, ಸೂರ್ಯ ಮತ್ತು ಬುಧ ನಿಮ್ಮ ರಾಶಿಯಲ್ಲಿ ಒಟ್ಟಾಗಿರುವುದರಿಂದ ಪ್ರೇಮ ಮತ್ತು ದಾಂಪತ್ಯದಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಸಂಬಂಧದಲ್ಲಿ ಪರಸ್ಪರ ಬೆಂಬಲ ಸಿಗಲಿದೆ. ಪ್ರೇಮಿಗಳು ತಮ್ಮ ಸಂಬಂಧವನ್ನು ಮದುವೆಯ ಹಂತಕ್ಕೆ ಕೊಂಡೊಯ್ಯಲು ಇದು ಸೂಕ್ತ ಸಮಯ.
ನಿಮ್ಮ ರಾಶಿಯಲ್ಲಿ ಕೇತು ಇರುವುದರಿಂದ ಮನಸ್ಸಿನಲ್ಲಿ ಕಾರಣವಿಲ್ಲದೆ ಆತಂಕ ಅಥವಾ ಗೊಂದಲ ಮೂಡಬಹುದು. ಪ್ರೇಮ ಜೀವನದಲ್ಲಿ ಸ್ಪಷ್ಟತೆ ಕೊರತೆಯಾಗದಂತೆ ನೋಡಿಕೊಳ್ಳಿ. ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡುವುದರಿಂದ ಪ್ರೀತಿಯಲ್ಲಿ ಆಪ್ತತೆ ಹೆಚ್ಚಾಗುತ್ತದೆ.
ನಿಮ್ಮ ರಾಶಿಯಲ್ಲಿ ಶುಕ್ರ ಹಾಗೂ ಚಂದ್ರರ ಶುಭ ಸಂಯೋಜನೆ ಇದೆ. ಪ್ರೇಮಿಗಳಿಗೆ ಇದು ಅತ್ಯಂತ ರೋಮಾಂಚನಕಾರಿ ಸಮಯ. ನವ ಜೋಡಿಗಳ ನಡುವೆ ಮಧುರವಾದ ಕ್ಷಣಗಳು ಸೃಷ್ಟಿಯಾಗಲಿವೆ. ಹಳೆಯ ಮನಸ್ತಾಪಗಳು ಕಳೆದು ಪ್ರೀತಿ ಚಿಗುರೊಡೆಯುತ್ತದೆ.
ನಿಮ್ಮ ರಾಶ್ಯಧಿಪತಿ ಶುಕ್ರ ೧೨ನೇ ಮನೆಯಲ್ಲಿ ಚಂದ್ರನೊಂದಿಗೆ ಇರುವುದರಿಂದ ಪ್ರೇಮ ವಿಷಯದಲ್ಲಿ ಕೊಂಚ ಭಾವನಾತ್ಮಕ ಒತ್ತಡವಿರಬಹುದು. ಸಂಗಾತಿಯ ಆರೋಗ್ಯ ಅಥವಾ ಅವರ ವೈಯಕ್ತಿಕ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಬಹುದು. ಕಾಳಜಿ ವಹಿಸುವುದು ಒಳಿತು.
ಕರ್ಕಾಟಕದ ಗುರು ಹಾಗೂ ಕನ್ಯೆಯ ಶುಕ್ರನ ಶುಭ ದೃಷ್ಟಿಯಿಂದ ಪ್ರೇಮ ಜೀವನದಲ್ಲಿ ಪ್ರಗತಿ ಕಂಡುಬರುತ್ತದೆ. ಪ್ರೀತಿಯಲ್ಲಿರುವವರಿಗೆ ಮನೆಯವರಿಂದ ಸಮ್ಮತಿ ಸಿಗುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಕಿರು ಪ್ರವಾಸ ಕೈಗೊಳ್ಳಲು ಇದು ಅನುಕೂಲಕರ ಸಮಯ.
ವೃತ್ತಿ ಜೀವನದ ಒತ್ತಡದಿಂದಾಗಿ ಪ್ರೇಮ ಜೀವನಕ್ಕೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗದಿರಬಹುದು. ಆದಾಗ್ಯೂ, ಸಂಗಾತಿಯು ನಿಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಬೆಂಬಲವಾಗಿ ನಿಲ್ಲುತ್ತಾರೆ. ಸಣ್ಣ ಸಣ್ಣ ಗಿಫ್ಟ್‌ಗಳ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿ.
ಇದನ್ನೂ ಓದಿ: ಈ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಸೂರ್ಯನ ಬೆಳಕು…?
ಪ್ರೇಮ ಸಂಬಂಧಗಳಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಸಂಗಾತಿಯೊಂದಿಗೆ ಆಧ್ಯಾತ್ಮಿಕ ಅಥವಾ ದೂರದ ಪ್ರಯಾಣ ಬೆಳೆಸುವ ಯೋಗವಿದೆ. ದೂರದಲ್ಲಿದ್ದ ಪ್ರೇಮಿಗಳು ಪರಸ್ಪರ ಭೇಟಿಯಾಗಲು ಹಾಗೂ ಸಂಬಂಧವನ್ನು ಗಟ್ಟಿಗೊಳಿಸಲು ಉತ್ತಮ ಅವಕಾಶ ಸಿಗಲಿದೆ.
ನಿಮ್ಮ ರಾಶಿಯಲ್ಲಿ ರಾಹು ಹಾಗೂ ಎಂಟನೇ ಮನೆಯಲ್ಲಿ ಶುಕ್ರ-ಚಂದ್ರರ ಪ್ರಭಾವವಿರುವುದರಿಂದ ಸಂಬಂಧದಲ್ಲಿ ಅನಗತ್ಯ ಅನುಮಾನಗಳಿಗೆ ಆಸ್ಪದ ನೀಡಬೇಡಿ. ಮೂರನೇ ವ್ಯಕ್ತಿಯ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳುವುದು ಒಳಿತಲ್ಲ. ಪಾರದರ್ಶಕತೆ ಕಾಯ್ದುಕೊಳ್ಳಿ.
ಇದೇ ರಾಶಿಯಲ್ಲಿ ಶನಿ ಹಾಗೂ ಸಪ್ತಮ ರಾಶಿಯಲ್ಲಿ ಶುಕ್ರ, ಚಂದ್ರರ ಸಂಚಾರವಿರುವುದರಿಂದ ದಾಂಪತ್ಯ ಮತ್ತು ಪ್ರೇಮ ಜೀವನದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಸಣ್ಣಪುಟ್ಟ ತಪ್ಪು ತಿಳುವಳಿಕೆಗಳು ಬಂದರೂ ಪ್ರೀತಿಯ ಗಾಂಭೀರ್ಯ ಕಡಿಮೆಯಾಗುವುದಿಲ್ಲ.
– ಲೋಹಿತ್ ಹೆಬ್ಬಾರ್
ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ