Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ

ಈ ಆಗಸ್ಟ್ ವಾರದಲ್ಲಿ ಸೂರ್ಯ, ಗುರು, ಬುಧ ಕಟಕ ರಾಶಿಯಲ್ಲಿದ್ದು ಶುಭ ಯೋಗಗಳನ್ನು ಸೃಷ್ಟಿಸುತ್ತಿವೆ. ಚಂದ್ರ, ಶುಕ್ರ ಕನ್ಯಾದಲ್ಲಿದ್ದರೆ, ಮಂಗಳ ಮಿಥುನದಲ್ಲಿದೆ. ಈ ಗ್ರಹಗತಿಗಳು 12 ರಾಶಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಪ್ರತಿಯೊಂದು ರಾಶಿಯವರಿಗೂ ವೃತ್ತಿ, ಆರೋಗ್ಯ, ಹಣಕಾಸು ಮತ್ತು ಸಂಬಂಧಗಳಲ್ಲಿ ಯಾವ ಅವಕಾಶಗಳು, ಸವಾಲುಗಳು ಕಾದಿವೆ? ತಿಳಿಯಿರಿ ಸಂಪೂರ್ಣ ವಾರದ ಭವಿಷ್ಯ.

Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ
ವಾರ ಭವಿಷ್ಯ
Image Credit source: Getty Images
Edited By:

Updated on: Aug 09, 2026 | 3:23 PM

ಆಗಷ್ಟ್ ನ ಈ ವಾರದಲ್ಲಿ ಸೂರ್ಯ, ಗುರು ಮತ್ತು ಬುಧ ಕಟಕ ರಾಶಿಯಲ್ಲಿದ್ದು ಶುಭ ಯೋಗಗಳನ್ನು ರೂಪಿಸುತ್ತಿವೆ. ಚಂದ್ರ ಮತ್ತು ಶುಕ್ರ ಕನ್ಯಾ ರಾಶಿಯಲ್ಲಿದ್ದರೆ, ಮಂಗಳ ಮಿಥುನ ರಾಶಿಯಲ್ಲಿದ್ದಾನೆ. ಮೀನ ರಾಶಿಯಲ್ಲಿ ಶನಿ, ಕುಂಭದಲ್ಲಿ ರಾಹು ಹಾಗೂ ಸಿಂಹ ರಾಶಿಯಲ್ಲಿ ಕೇತು ಸಂಚರಿಸುತ್ತಿದ್ದಾರೆ. ಇದು ಅಯಾ ರಾಶಿಗಳಿಗೆ ಮಹತ್ತ್ವದ ತಿರುವಿನ ಸಂದರ್ಭ ಆಗಲಿ.

​ಮೇಷ ರಾಶಿ:

ಸಹೋದರರೊಂದಿಗೆ ಬಾಂಧವ್ಯ ವೃದ್ಧಿಸಲಿದ್ದು, ಅವರ ಸಹಾಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ದೊರೆಯಲಿದೆ. ಆದರೆ, ಆರೋಗ್ಯದ ವಿಚಾರದಲ್ಲಿ, ವಿಶೇಷವಾಗಿ ರಕ್ತದೊತ್ತಡ ಮತ್ತು ಶಿರೋವೇದನೆಯಂತಹ ಸಮಸ್ಯೆಗಳಿದ್ದರೆ ಎಚ್ಚರವಹಿಸಿ. ಸಾಲದ ವಹಿವಾಟಿನಿಂದ ದೂರವಿರುವುದು ಸೂಕ್ತ.

​ವೃಷಭ ರಾಶಿ:

ಪಂಚಮ ಭಾವದಲ್ಲಿ ಶುಕ್ರ ಮತ್ತು ಚಂದ್ರರ ಅನುಕೂಲಕರ ಸ್ಥಿತಿಯಿಂದ ಸೃಜನಶೀಲತೆ ಹೆಚ್ಚಾಗಲಿದೆ. ಕಲಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಹೊಸ ಅವಕಾಶಗಳು ಒದಗಿಬರಲಿವೆ. ಆರ್ಥಿಕವಾಗಿ ಲಾಭದಾಯಕ ವಾರವಾಗಿದ್ದು, ವ್ಯಾಪಾರ-ವಹಿವಾಟಿನಲ್ಲಿ ಹೊಸ ಹೂಡಿಕೆಗೆ ವಾತಾವರಣ ಅನುಕೂಲಕರವಾಗಿದೆ. ಕುಟುಂಬದಲ್ಲಿ ಮಾಂಗಲ್ಯ ಕಾರ್ಯಗಳ ಚರ್ಚೆ ನಡೆಯಬಹುದು. ಸಣ್ಣಪುಟ್ಟ ಪ್ರಯಾಣಗಳು ಸಂತಸ ತರಲಿವೆ.

​ಮಿಥುನ ರಾಶಿ :

ನಿಮ್ಮ ಲಗ್ನದಲ್ಲೇ ಮಂಗಳನಿರುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗಬಹುದು, ಕೋಪ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ದ್ವಿತೀಯದ ಗುರು ಮತ್ತು ಬುಧರ ಕೃಪೆಯಿಂದ ಮಾತು ಲಲಿತವಾಗಿರಲಿದ್ದು, ಮಾತಿನಿಂದಲೇ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಏಕಾಗ್ರತೆ ಹೆಚ್ಚಲಿದೆ. ಹಣಕಾಸಿನ ಸ್ಥಿತಿ ಉತ್ತಮವಾಗಿದ್ದರೂ, ಅನಗತ್ಯ ಖರ್ಚುಗಳನ್ನು ಕಡಿತಗೊಳಿಸುವುದು ಸೂಕ್ತ.

​ಕರ್ಕಾಟಕ ರಾಶಿ:

ನಿಮ್ಮ ರಾಶಿಯಲ್ಲಿಯೇ ಸೂರ್ಯ, ಗುರು ಹಾಗೂ ಬುಧರ ಸಂಯೋಜನೆಯು ಜ್ಞಾನ ಮತ್ತು ನಾಯಕತ್ವ ಗುಣಗಳನ್ನು ಹೆಚ್ಚಿಸುತ್ತದೆ. ಸಮಾಜ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಹೆಸರು ಹಾಗೂ ಗೌರವ ಸಿಗಲಿದೆ. ಆಡಳಿತಾತ್ಮಕ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಆಸ್ತಿ ಅಥವಾ ವಾಹನ ಖರೀದಿಗೆ ಸೂಕ್ತ ಯೋಜನೆ ರೂಪಿಸುವಿರಿ.

​ಸಿಂಹ ರಾಶಿ :

ನಿಮ್ಮ ರಾಶಿಯಲ್ಲಿ ಕೇತು ಸಂಚರಿಸುತ್ತಿರುವುದರಿಂದ ಮನಸ್ಸಿನಲ್ಲಿ ಅಸ್ಥಿರತೆ ಮತ್ತು ಚಿಂತೆಗಳು ಉಂಟಾಗಬಹುದು. ಖರ್ಚು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಬಜೆಟ್ ನಿಯಂತ್ರಣದಲ್ಲಿಡಬೇಕು. ದ್ವಾದಶ ಭಾವದ ಗ್ರಹಗಳ ಪ್ರಭಾವದಿಂದಾಗಿ ವಿದೇಶಿ ವ್ಯಾಪಾರ ಅಥವಾ ವಿದೇಶಿ ಸಂಪರ್ಕಗಳಿಂದ ಲಾಭ ಸಿಗಬಹುದು. ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಲಿದ್ದು, ಧ್ಯಾನ ಮತ್ತು ಯೋಗದಿಂದ ಮನಸ್ಸಿಗೆ ಶಾಂತಿ ಸಿಗಲಿದೆ.

ಕನ್ಯಾ ರಾಶಿ :

ನಿಮ್ಮ ರಾಶಿಯಲ್ಲಿ ಶುಕ್ರ ಮತ್ತು ಚಂದ್ರರ ಯುತಿಯು ವ್ಯಕ್ತಿತ್ವದಲ್ಲಿ ಆಕರ್ಷಣೆ ತರಲಿದೆ. ಏಕಾದಶ ಭಾವದಲ್ಲಿರುವ ಸೂರ್ಯ-ಗುರುಗಳ ಬಲದಿಂದ ಆರ್ಥಿಕ ಅಭಿವೃದ್ಧಿ ಸ್ಪಷ್ಟವಾಗಿ ಗೋಚರಿಸಲಿದೆ. ದೀರ್ಘಕಾಲದ ಕನಸುಗಳು ನನಸಾಗುವ ಸಮಯವಿದು. ಉದ್ಯೋಗಸ್ಥರಿಗೆ ಬಡ್ತಿ ಅಥವಾ ಆರ್ಥಿಕ ಲಾಭದ ಸೂಚನೆಗಳಿವೆ. ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತೋಷವಾಗಲಿದೆ.

​ತುಲಾ ರಾಶಿ :

ದಶಮ ಭಾವದಲ್ಲಿ ಬಲವಾದ ಗ್ರಹಗಳ ಉಪಸ್ಥಿತಿಯಿಂದಾಗಿ ವೃತ್ತಿಜೀವನದಲ್ಲಿ ದೊಡ್ಡ ಯಶಸ್ಸು ಸಿಗಲಿದೆ. ಉದ್ಯೋಗ ಬದಲಾವಣೆಗೆ ಬಯಸುವವರಿಗೆ ಹೊಸ ಅವಕಾಶಗಳು ಒದಗಿಬರಲಿವೆ. ರಾಜಕೀಯ ಅಥವಾ ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಉತ್ತಮ ಬೆಂಬಲ ದೊರೆಯಲಿದೆ. ನೂತನ ಗೃಹ ನಿರ್ಮಾಣ ಅಥವಾ ವಾಹನ ಖರೀದಿ ವಿಚಾರದಲ್ಲಿ ಸಕಾರಾತ್ಮಕ ಮುನ್ನಡೆ ಕಾಣಬಹುದು. ಕುಟುಂಬದಲ್ಲಿ ನೆಮ್ಮದಿ ಇರಲಿದೆ.

​ವೃಶ್ಚಿಕ ರಾಶಿ:

ಭಾಗ್ಯಸ್ಥಾನದಲ್ಲಿ ಗುರು ಮತ್ತು ಬುಧರ ಅನುಕೂಲಕರ ಸಂಚಾರದಿಂದ ಕೈಗೊಂಡ ಎಲ್ಲಾ ಕೆಲಸಗಳಲ್ಲಿ ಅದೃಷ್ಟ ಒಲಿಯಲಿದೆ. ಉನ್ನತ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಸಿಗಲಿದೆ. ದೂರದ ಕ್ಷೇಮಾಭಿವೃದ್ಧಿ ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ತಂದೆಯವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರಿಸುವಿರಿ.

​ಧನುಸ್ಸು ರಾಶಿ:

ಅಷ್ಟಮ ಭಾವದಲ್ಲಿ ಗ್ರಹಗಳ ಸಂಚಾರವಿರುವುದರಿಂದ ಅನಗತ್ಯ ಗೊಂದಲ ಮತ್ತು ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗ್ರತೆ ವಹಿಸಬೇಕು. ಚಾಲನೆ ಮಾಡುವಾಗ ಎಚ್ಚರವಿರಲಿ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ಆದಾಗ್ಯೂ, ಸಂಶೋಧನೆ ಹಾಗೂ ಗೂಢಶಾಸ್ತ್ರಗಳಲ್ಲಿ ಆಸಕ್ತಿ ಇರುವವರಿಗೆ ಇದು ಉತ್ತಮ ಸಮಯ. ಹಿರಿಯರ ಸಲಹೆಯನ್ನು ನಿರ್ಲಕ್ಷಿಸಬೇಡಿ.

ಇದನ್ನೂ ಓದಿ: ಈ ರಾಶಿಗೆ ಸೂರ್ಯನ ಆಗಮನ, ಈ ರಾಶಿಗಳಿಗೆ ಸೂರ್ಯನ ಬೆಳಕು…?

​ಮಕರ ರಾಶಿ:

ಸಪ್ತಮ ಭಾವದಲ್ಲಿರುವ ಗ್ರಹಗಳ ಅನುಗ್ರಹದಿಂದ ದಾಂಪತ್ಯ ಜೀವನದಲ್ಲಿ ಮಧುರತೆ ಹೆಚ್ಚಲಿದೆ. ವ್ಯಾಪಾರ ಮತ್ತು ಪಾಲುದಾರಿಕೆ ವಹಿವಾಟುಗಳಲ್ಲಿ ಉತ್ತಮ ಪ್ರಗತಿ ಕಾಣಬಹುದು. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಹೊಸ ಪರಿಚಯಸ್ಥರಿಂದ ವೃತ್ತಿಬದುಕಿಗೆ ಸಹಾಯ ಸಿಗಲಿದೆ. ಆರೋಗ್ಯ ಸ್ಥಿರವಾಗಿರುತ್ತದೆ.

​ಕುಂಭ ರಾಶಿ:

ನಿಮ್ಮ ರಾಶಿಯಲ್ಲಿ ರಾಹುವಿನ ಸ್ಥಿತಿ ಹಾಗೂ ಆರನೇ ಭಾವದ ಬಲದಿಂದಾಗಿ ಶತ್ರುಗಳ ಮೇಲೆ ಮೇಲುಗೈ ಸಾಧಿಸುವಿರಿ. ಹಳೆಯ ಕೋರ್ಟ್ ವ್ಯಾಜ್ಯಗಳು ಅಥವಾ ತಂಟೆ-ತಕರಾರುಗಳು ನಿಮ್ಮ ಪರವಾಗಿ ಬಗೆಹರಿಯುವ ಸಾಧ್ಯತೆಯಿದೆ. ಕೆಲಸದ ಸ್ಥಳದಲ್ಲಿ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ಸಾಲದ ಹೊರೆ ಕಡಿಮೆಯಾಗಲಿದೆ, ಆದರೆ ಅತಿಯಾದ ಕೆಲಸದ ಒತ್ತಡದಿಂದ ದೈಹಿಕ ಆಯಾಸ ಉಂಟಾಗದಂತೆ ನೋಡಿಕೊಳ್ಳಿ.

​ಮೀನ ರಾಶಿ:

ನಿಮ್ಮ ರಾಶಿಯಲ್ಲೇ ಶನಿ ಇರುವುದರಿಂದ ಮಾನಸಿಕ ಒತ್ತಡ ಅಥವಾ ಕೆಲಸಗಳಲ್ಲಿ ನಿಧಾನಗತಿ ಅನುಭವಕ್ಕೆ ಬರಬಹುದು. ಆದರೆ ಪಂಚಮ ಭಾವದಲ್ಲಿರುವ ಗುರು ಮತ್ತು ಬುಧರ ಶುಭ ದೃಷ್ಟಿಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಪರೀಕ್ಷಾ ಫಲಿತಾಂಶ ಸಿಗಲಿದೆ. ಸಂತಾನ ಅಪೇಕ್ಷಿಗಳಿಗೆ ಶುಭ ವಾರ್ತೆ ಸಿಗುವ ಸಾಧ್ಯತೆಯಿದೆ. ಆಲೋಚಿಸಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಉತ್ತಮ ಫಲ ದೊರೆಯಲಿದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:22 pm, Sun, 9 August 26

Loading...
Unable to load recommendations.
Follow Us