Horoscope: ರಾಶಿ ಭವಿಷ್ಯ; ಹಿತಶತ್ರುಗಳ ಕಾರಣದಿಂದ ಇಂದಿನ ವ್ಯವಹಾರವು ಹಿಂದೆ ಸಾಗಲಿದೆ
ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮೇ 08 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ 08) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಭರಣೀ, ಯೋಗ: ಆಯುಷ್ಮಾನ್, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 50 ನಿಮಿಷಕ್ಕೆ, ರಾಹು ಕಾಲ 12:29 ರಿಂದ 14:04ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:44 ರಿಂದ 09:19ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:54 ರಿಂದ 12:29ರ ವರೆಗೆ.
ಸಿಂಹ ರಾಶಿ :ನಿಮ್ಮ ವಸ್ತುವೇ ಆಗಿದ್ದರೂ ನೀವು ಅದನ್ನು ಪಡೆಯಲು ಮುಜುಗರ ಮಾಡಿಕೊಳ್ಳುವಿರಿ. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಇರಲಿವೆ. ಮೇಲಧಿಕಾರಿಗಳು ನಿಮ್ಮನ್ನು ಪ್ರಶಂಸಿಸುವರು. ಪ್ರವಾಸವನ್ನು ಮಾಡುವ ನಿರ್ಧಾರಕ್ಕೆ ಬರಲಿದ್ದೀರಿ. ಮನಸ್ಸಿಗೆ ಖುಷಿಯಾಗುವಂಥ ಕೆಲಸಗಳನ್ನು ಮಾಡಲಿದ್ದೀರಿ. ಇಂದು ಹಣದ ಹರಿವು ಬಹಳ ಉತ್ತಮವಾಗಿರಲಿದೆ. ಅಪರಿಚಿತರು ನಿಮ್ಮ ಹಾದಿ ತಪ್ಪಿಸಬಹುದು. ಪಾಲುದಾರಿಕೆಯಲ್ಲಿ ಅಸಹಜ ಮಾತುಕತೆಗಳು ಬರಬಹುದು. ಆರ್ಥಿಕ ವಿಚಾರಕ್ಮೆ ದಾಂಪತ್ಯದಲ್ಲಿ ಮನಸ್ತಾಪಬರಬಹುದು. ಸಂಪೂರ್ಣವಾದ ಮನಸ್ಸಿನಿಂದ ಕಾರ್ಯವನ್ನು ಮಾಡಲಾಗದು. ಪ್ರತಿಷ್ಠಿತ ಸಂಸ್ಥೆಯ ಉನ್ನತ ಅಧಿಕಾರದ ಪ್ರಾಪ್ತಿಯ ಅವಕಾಶವು ಬರಬಹುದು. ಲಾಭವಿಲ್ಲದ ಕಾರ್ಯದಲ್ಲಿ ಆಸಕ್ತಿಯು ಇರದು. ಕೆಲವು ವಿಚಾರದಲ್ಲಿ ನಿಮ್ಮ ಊಹೆಯು ತಪ್ಪಾದೀತು. ಕೆಲವು ಸ್ವಭಾವವನ್ನು ಬದಲಾಯಿಸಬೇಕು ಎನಿಸುವುದು.
ಕನ್ಯಾ ರಾಶಿ :ಒತ್ತಡಗಳಿಂದ ದೂರವಾಗಲು ಕಷ್ಡವಾಗುವುದು. ಇಂದು ನಿಮ್ಮವರ ಬಗ್ಗೆ ಅನುಮಾನ ಕಾಡಬಹುದು. ಪರೀಕ್ಷಿಸದೇ ಯಾವ ತೀರ್ಮಾನಕ್ಕೂ ಬರುವುದು ಬೇಡ. ಉದ್ವೇಗಕ್ಕೆ ಒಳಗಾಗಲು ಅನೇಕ ಸಂದರ್ಭಗಳು ಬರಬಹುದು. ತಾಳ್ಮೆಯಿಂದಲೇ ಇರಿ. ಹಣಕಾಸಿನ ಒತ್ತಡದಿಂದ ಮನೆಯಲ್ಲಿ ಅಶಾಂತಿಯು ನಿರ್ಮಾಣವಾದೀತು. ಮನಸ್ಸನ್ನು ಹಿಡಿತದಲ್ಲಿ ಶಾಂತರಾಗಿರಿ. ಯಾವುದೇ ಅಹಿತಕರ ಭಾವವನ್ನು ತೋರಿಸಬೇಡಿ. ಇನ್ನೊಬ್ಬರ ಸಮಸ್ಯೆಯನ್ನು ಪರಿಹರಿಸಲು ಹೋಗಿ ನೀವೇ ಸಿಕ್ಕಿಕೊಳ್ಳಬೇಕಾಗುವುದು. ಬೇಕಾದಷ್ಟು ಅನುಕೂಲತೆಗಳಿದ್ದರೂ ಬೇಕೆಂಬ ಆಸೆಯು ನಿಮ್ಮನ್ನು ಬಿಡದು. ಸಂಗಾರಿಯ ಮೇಲಿನ ಪ್ರೀತಿಯು ಕಡಿಮೆಯಾದಂತೆ ತೋರುವುದು. ಕೆಲವರಿಗೆ ಸೌಕರ್ಯಗಳು ಕಡಿಮೆಯಾದಂತೆ ಅನ್ನಿಸುವುದು. ಕಛೇರಿಯ ಕಾರ್ಯದ ನಿಮಿತ್ತ ಓಡಾಟವನ್ನು ಮಾಡಬೇಕಾಗಿದ್ದು ನಿಮಗೆ ಕಷ್ಟವಾದೀತು.
ತುಲಾ ರಾಶಿ :ಗೌರವ ಸಿಗಲೆಂದೇ ಇಂದು ಕಾರ್ಯವನ್ನು ಮಾಡುವಿರಿ. ಅವಿವಾಹಿತರಿಗೆ ವಿವಾಹವಾಗುವ ಸೂಚನೆಯು ಗೊತ್ತಾಗಬಹುದು. ಬಂಧುಗಳ ಭೇಟಿಯಾಗಲಿದ್ದೀರಿ. ಇದು ನಿಮ್ಮ ಮುಂದಿನ ಕಾರ್ಯಕ್ಕೆ ಅನುಕೂಲಕರವಾಗಿರಲಿದೆ. ಮನೆಯಲ್ಲಿ ದೇವಕಾರ್ಯಗಳು ನಡೆಯುವುವು. ವ್ಯಕ್ತಿ ಅವನ ಯೋಗ್ಯತೆಗೆ ಅನುಸಾರವಾಗಿ ಅಭಿವೃದ್ಧಿಯನ್ನು ಹೊಂದುವನು. ಕಛೇರಿಯಲ್ಲಿ ನಿಮ್ಮ ವರ್ತನೆಯ ಬಗ್ಗೆ ಸಂದೇಹ ಬರಬಹುದು. ನಿಮ್ಮ ಮೇಲೆ ಯಾರಾದರೂ ಕಣ್ಣಿಟ್ಟಾರು. ಬಾಂಧವರ ನಡುವೆ ಕಾರ್ಯದಲ್ಲಿ ಜಯವಿದ್ದರೂ ಆರ್ಥಿಕ ನಷ್ಟವು ಆಗಬಹುದು. ಹಿತಶತ್ರುಗಳ ಕಾರಣದಿಂದ ಇಂದಿನ ವ್ಯವಹಾರವು ಹಿಂದೆ ಸಾಗಲಿದೆ. ನಿಮ್ಮ ವರ್ತನೆಗಳು ಯಾರ ಮೇಲಾದರೂ ಪ್ರಭಾವ ಬೀರಬಹುದು. ಮೇಲಧಿಕಾರಿಗಳ ಜೊತೆ ಸಭ್ಯತೆಯಿಂದ ವರ್ತಿಸಿ. ವಿವಾಹದ ವಿಳಂಬದಿಂದ ನಿಮಗೆ ಬೇಸರವಾದೀತು. ನಿಮ್ಮ ತಪ್ಪಿನಿಂದ ಹಿರಿಯರ ಕೆಂಗಣ್ಣಿಗೆ ಗುರಿಯಾಗುವಿರಿ.
ವೃಶ್ಚಿಕ ರಾಶಿ :ಇಂದು ನೀವು ಬಹಳ ನಿಧಾನವಾಗಲಿದೆ. ನಿಮ್ಮಮೇಲೆ ಅಪವಾದವನ್ನು ತರಲಿದ್ದಾರೆ. ನಿಃಸ್ವಾರ್ಥವಾಗಿ ಇಚಮಷ್ಟಪಡುವವರನ್ನು ಸಂಶಯಿಸಬೇಡಿ. ನಿಮ್ಮ ಜೊತೆಗಿರುವವರು ಯಾರು ಯಾವ ರೀತಿಯವರು ಎಂಬುದು ಗೊತ್ತಾಗುತ್ತದೆ. ನೀವು ನಡೆಯಬೇಕಾದ ದಾರಿಯು ಸರಿ ಇದ್ದು ಅತ್ತ ಸಾಗುವಿರಿ. ಅಧ್ಯಾತ್ಮದಲ್ಲಿ ಇರಲು ಹೆಚ್ಚು ಮನಸ್ಸು ಬಯಸುತ್ತಿದೆ. ಅನಿರೀಕ್ಷಿತ ಗೆಲುವಿನಿಂದ ಖುಷಿ ಸಿಗುವುದು. ಇಂದು ನಿಮ್ಮ ಪ್ರೀತಿಪಾತ್ರರ ಭೇಟಿಯಾಗಲಿದೆ. ಶುಭ ಕಾರ್ಯದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರಲಿದೆ. ಮಕ್ಕಳ ನಿರೀಕ್ಷೆಯಲ್ಲಿ ಇರುವವರಿಗೆ ಶುಭಸುದ್ದಿಯು ಸಿಗಬಹುದು. ಆಸ್ತಿಯ ಮಾರಾಟದಿಂದ ನಿಮಗೆ ಹೆಚ್ಚಿನ ಲಾಭವು ಸಿಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವವು ಹೆಚ್ಚಾಗಿ ತೋರುವುಸು. ಭೂಸ್ವಾದೀನವನ್ನು ಮಾಡಿಕೊಳ್ಳುವ ಸಂದರ್ಭವು ಬರಬಹುದು. ಆದಾಯದ ಸ್ವಲ್ಪ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುವಿರಿ.




