ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಗಂಡ, ಕರಣ: ಭವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:30 ಗಂಟೆ, ರಾಹು ಕಾಲ ಮಧ್ಯಾಹ್ನ 12:27 ರಿಂದ 01:58, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:25ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:56 ರಿಂದ ಮಧ್ಯಾಹ್ನ 12:27ರ ವರೆಗೆ.
ಮೇಷ ರಾಶಿ : ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದೇ ಇಂದು ನಿಮಗೆ ಲಾಭವಾಗುವುದು. ಸ್ಥಿರಾಸ್ತಿಯನ್ನು ಖರೀದಿಸುವ ಸಂದರ್ಭದಲ್ಲಿ ನಾನಾ ತೊಂದರೆಗಳು ಬರಬಹುದು. ಗೊಂದಲಗಳು ನಿಮ್ಮ ಖರೀದಿಸುವ ತೀರ್ಮಾನವನ್ನು ಬದಲಿಸಲೂಬಹುದು. ಆರ್ಥಿಕ ಒತ್ತಡದಿಂದ ನೀವು ಆಚೆ ಬಂದು ನೆಮ್ಮದಿಯನ್ನು ಕಾಣುವಿರಿ. ನಿಮ್ಮಲ್ಲಿ ಇಂದು ಹೆಚ್ಚು ಉತ್ಸಾವಿರಲಿದ್ದು ಕೆಲಸಕ್ಕೆ ಪೂರಕವಾಗಲಿದೆ. ಯಾರನ್ನೋ ದೂರುವ ಬದಲು ನಿಮ್ಮ ನೇರಕ್ಕೆ ಕೆಲಸವನ್ನು ಮಾಡಿ. ಹಣದ ಹರಿವು ಸಾಧಾರಣವಾಗಿ ಇರುವುದು. ಪ್ರೀತಿಪಾತ್ರರ ವರ್ತನೆಯಿಂದ ಕಿರಿಕಿರಿ ಉಂಟಾಗಲಿದೆ. ನೀವೇ ನಿಮ್ಮ ಬಗ್ಗೆ ಹೇಳಿಕೊಳ್ಳುವುದು ಸರಿಯಾಗಲಾರದು. ಉಳಿದವರಿಗೆ ಇದು ಮುಜುಗರವನ್ನು ತಂದೀತು. ಉದ್ಯೋಗದಲ್ಲಿ ಆಲಸ್ಯದಿಂದ ಇರುವ ಕಾರಣ ಅಧಿಕಾರಿಗಳಿಂದ ಎಚ್ಚರಿಕೆಯ ಮಾತುಗಳೂ ಬರಬಹುದು. ವ್ಯಾಪಾರದ ನಷ್ಟವನ್ನು ಬೇರೆ ರೀತಿಯಿಂದ ಸರಿಮಾಡಿಕೊಳ್ಳುವಿರಿ. ಯಾರ ಜೊತೆಯೂ ನಿರ್ದಯೆಯಿಂದ ವ್ಯವಹರಿಸುವುದು ಬೇಡ.
ವೃಷಭ ರಾಶಿ : ಇಂದು ನಿಮಗೆ ಸಿಕ್ಕ ಸಂತೋಷವನ್ನು ಇತರರಿಗೂ ಹಂಚುವಿರಿ. ನಿಮಗೆ ಪ್ರಾಪ್ತವಾದ ಸ್ಥಾನದಿಂದ ನಿಮ್ಮ ಆಲೋಚನಾ ಕ್ರಮಗಳೂ ವ್ಯತ್ಯಾಸವಾಗುವುದು. ಸಹಭಾಗಿಗಳ ಜೊತೆ ಸ್ನೇಹದಿಂದ ಇರಬೇಕಾಗುವುದು. ಉದ್ಯೋಗವನ್ನು ಬದಲಿಸಲು ಇಚ್ಛೆ ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆದೀತು. ಬಿದ್ದು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ. ಬಂಧುಗಳು ನಿಮಗೆ ಸಹಕಾರವನ್ನು ಕೊಡದೇ ಹೋಗಬಹುದು. ಮಾನಸಿಕ ನೋವನ್ನು ಮರೆಯಲು ಎಲ್ಲಿಗಾದರೂ ದೂರ ಹೋಗಲಿದ್ದೀರಿ. ಅಧ್ಯಾತ್ಮಕ್ಕೆ ಸಮಯ ಕೊಡುವುದು ಕಷ್ಟವಾದೀತು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಕೊಡುವಿರಿ. ಇನ್ನೊಬ್ಬರ ಮಾತಿನ್ನು ಕೇಳಿ ಯಾವ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ. ಹಿರಿಯರ ಮಾರ್ಗದರ್ಶನ ಸಿಗಲಿದೆ. ನಿಮ್ಮ ಗುಟ್ಟನ್ನು ಯಾರ ಬಳಿಯೂ ಬಿಟ್ಟುಕೊಡಲಾರಿರಿ. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು.
ಮಿಥುನ ರಾಶಿ : ಕಾರ್ಯದ ಸ್ಥಳದಲ್ಲಿ ನಿಮಗೆ ಕಹಿಯಾದ ಅನುಭವವಾಗಲಿದೆ. ಇಂದು ನಿಮ್ಮ ಅನುಭವದ ಆಧಾರದ ಯೋಗ್ಯವಾದ ಕೆಲವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಮತ್ತೆ ನಡೆಯುವ ಘಟನೆಗಳನ್ನುಬಗಂಭೀರವಾಗಿ ಸ್ವೀಕರಿಸುವುದು ಬೇಡ. ಮಾನಸಿಕ ನೋವಿನಿಂದ ಬಳಲುವಿರಿ. ಹೊಸತನ್ನು ಅಭ್ಯಾಸ ಮಾಡಬೇಕು ಎನ್ನುವ ಹಂಬಲವು ನಿಲ್ಲುವುದು. ನಟನೆಗೆ ಆಸಕ್ತಿಯು ಬರಲಿದೆ. ಸಾಮಾಜಿಕ ಕಾರ್ಯದಲ್ಲಿ ಮೆಚ್ಚುಗೆ ಸಿಗಲಿದೆ. ಕುಲದೇವರ ದರ್ಶನವನ್ನು ಮಾಡುವಿರಿ. ಆಕರ್ಷಣೆಯಿಂದ ಖರ್ಚನ್ನು ಹೆಚ್ಚು ಮಾಡಿಕೊಳ್ಳುವಿರಿ. ರಾಜಕಾರಿಣಿಗಳ ಭೇಟಿಯಾಗಲಿದೆ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವಿರಿ. ಪ್ರವಾಸದಿಂದ ನಿಮಗೆ ತೊಂದರೆಯಾಗಲಿದೆ. ಹೂಡಿಕೆಯ ಹಣವನ್ನು ತೆಗೆಯುವ ನಿರ್ಧಾರಕ್ಕೆ ಬರಬೇಕಾದೀತು. ಪರಿಸ್ಥಿತಿಯನ್ನು ನೋಡಿ ತೀರ್ಮಾನಿಸಿ.
ಕಟಕ ರಾಶಿ : ಧಾರ್ಮಿಕ ಕಾರ್ಯಗಳ ಸಿದ್ಧತೆಯಲ್ಲಿ ನೀವಿರುವಿರಿ. ನಿಮ್ಮ ಸ್ನೇಹಪರವಾದ ವ್ಯಕ್ತಿತ್ವವು ಎಲ್ಲರಿಗೂ ಇಷ್ಟವಾಗುತ್ತದೆ ಎನ್ನಲಾಗದು. ವೃತ್ತಿಯಲ್ಲಿ ಯಾವುದೇ ತೊಂದರೆಗಳಿಲ್ಲದೇ ಎಲ್ಲವೂ ಮುಗಿಯಬಹುದು. ಅಪಕ್ವವಾದ ಆಹಾರಸೇವನೆಯಿಂದ ತೊಂದರೆಯಾಗಲಿದೆ. ಸ್ತ್ರೀಯರಿಗೆ ಸಂಬಂಧಿಸಿದ ಖಾಯಿಲೆಯು ಹೆಚ್ಚಾಗಬಹುದು. ಬೇರೆ ಊರಿಗೆ ಹೋಗಿ ಸಂಕಟಪಡುವಿರಿ. ದಾಂಪತ್ಯದಲ್ಲಿ ಹೊಂದಾಣಿಯನ್ನು ತರಲು ಬಹಳ ಶ್ರಮವನ್ನು ವಹಿಸಬೇಕಾದೀತು. ಅಪರಿಚಿತ ವ್ಯಕ್ತಿಯಿಂದ ನೀವು ಹೆದರಿ ಸಂಪತ್ತನ್ನು ಕಳೆದುಕೊಳ್ಳಲಿದ್ದೀರಿ. ನಿಮ್ಮವರನ್ನು ನೀವು ಕಳೆದುಕೊಳ್ಳುವ ಭೀತಿಯಲ್ಲಿ ಇರುವಿರಿ. ಮಕ್ಕಳ ಜೊತೆ ಕಾಲವನ್ನು ಕಳೆಯುವಿರಿ. ನಿಮ್ಮದಲ್ಲದ್ದನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ವೃತ್ತಿಯ ಬಗ್ಗೆ ನಿಮ್ಮಲ್ಲಿ ಹಲವು ಗೊಂದಲಗಳು ಕಾಣಿಸುವುದು. ತಾಯಿಯ ಆಸೆಯನ್ನು ಸ್ವಲ್ಪವಾದರೂ ತೀರಿಸುವಿರಿ. ನೀವು ಇಂದು ಅನೇಕ ಪಾತ್ರಗಳನ್ನು ನಿರ್ವಹಿಸಬೇಕಾಗಬಹುದು.
ಸಿಂಹ ರಾಶಿ : ಗೌರವವನ್ನು ಕೊಡುವವರಿಗೆ ಅಗೌರವ ತೋರಿಸಿದರೆ ಶತ್ರುಗಳಾಗುವರು. ಇಂದು ವಾಹನದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸಲು ಕಷ್ಟವಾದೀತು. ಆಪ್ತ ಸಮಾಲೋಚನೆಯಿಂದ ನಿಮ್ಮ ಮನಸ್ಸು ಹಗುರಾಗಲಿದೆ. ಸಾಲಗಾರರ ಕಿರಿಕಿರಿ ಅತಿಯಾಗಲಿದೆ. ಜನಜಾಗರಣ ಕಾರ್ಯದಲ್ಲಿ ಇಂದು ತೊಡಗಿಕೊಳ್ಳುವಿರಿ. ವಿದೇಶಕ್ಕೆ ಬರಲು ಆಹ್ವಾನವೂ ಬರಲಿದೆ. ಆತುರದ ಪ್ರಯಾಣವು ಬೇಡ. ಇಚ್ಛೆ ಇಲ್ಲದಿದ್ದರೂ ಸ್ನೇಹಿತರ ಮನೆಗೆ ಹೊಇಗಬೇಕಸದೀತು. ಆದಾಯದ ಬಗ್ಗೆ ಗಮನಹರಿಸಿ ಆರೋಗ್ಯವನ್ನು ಕಡೆಗಣಿಸುವಿರಿ. ನಿಮ್ಮವರ ಮಾತಿನಲ್ಲಿ ಸತ್ತ್ವವಿಲ್ಲ ಎನಿಸಬಹುದು. ಉದ್ಯೋಗವನ್ನು ಹುಡುಕುವಲ್ಲಿ ಮಗ್ನರಾಗುವಿರಿ. ನಿಮ್ಮ ನಕಾರಾತ್ಮಕ ಭಾವವನ್ನು ಇನ್ನೊಬ್ಬರ ಮೇಲೆ ಹೇರುವಿರಿ. ನಿಮ್ಮ ಪ್ರತಿಕ್ರಿಯೆ ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ. ಬಳಸಿಕೊಳ್ಳುವ ಸಂಬಂಧವು ಹಾಳಾಗುವುದು.
ಕನ್ಯಾ ರಾಶಿ : ಹಣದ ಆಸೆಗೆ ದಾರಿ ತಪ್ಪಬಹುದು. ಇಂದು ಯಾರ ಬಳಿಯೂ ಸಹಾಯವನ್ನು ಕೇಳುವ ಮನಸ್ಸು ಇರದು. ಯಾರು ಏನೇ ಅಂದರೂ ನಿಮ್ಮ ತೀರ್ಮಾನವನ್ನು ಬದಲಿಸಿಕೊಳ್ಳಲಾರಿರಿ. ಸಾಮರಸ್ಯವನ್ನು ತಂದುಕೊಳ್ಳಲು ದಂಪತಿಗಳು ಶ್ರಮಿಸುವರು. ನಿಮ್ಮ ವ್ಯವಹಾರದಲ್ಲಿ ಪರಿಚಿತರು ಬರುವುದು ಇಷ್ಡವಾಹದು. ನಿಮಗೆ ಹಳೆಯ ಘಟನೆಗಳು ನೆನಪಾಗಿ ದುಃಖಿಸುವಿರಿ. ನೀವು ತಪ್ಪುಗಳನ್ನು ಒಪ್ಪಿಕೊಳ್ಳದೇ ಅಹಂಕಾರವನ್ನು ತೋರುವಿರಿ. ನಿಮ್ಮ ಬಗ್ಗೆ ಕಲಿಕಾರಭಾವವು ಇರಲಿದೆ. ನಿಮ್ಮಅಸಾಮಾನ್ಯ ಚಿಂತನೆಯಿಂದ ನೀವು ದೊಡ್ಡವರಾಗಬಹುದು. ಇನ್ನೊಬ್ಬರ ಬಗ್ಗೆ ಅನುಮಾನವೇ ಹೆಚ್ಚಾಗುವುದು. ಹೊಸ ಉದ್ಯೋಗವನ್ನು ಆರಂಭಿಸುವ ಬಗ್ಗೆ ನಿಮ್ಮೊಳಗೆ ಚಿಂತನೆಗಳು ನಡೆಯಬಹುದು. ನಿಮ್ಮ ಮಾತುಗಳು ನೇರವೂ ಕಠೋರವೂ ಅಗಿರಲಿದ್ದು, ನಿಮ್ಮ ಇಷ್ಟಪಡದವರ ಗುಂಪೊಂದು ತಯಾರಾಗಲಿದೆ. ದೂರ ಹೋಗುವವರಿದ್ದರೆ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ. ಸಂಗಾತಿಯ ಬಗ್ಗೆ ಇರುವ ನಿಮ್ಮ ಅಭಿಪ್ರಾಯ ಬದಲಾಗುವುದು.
ತುಲಾ ರಾಶಿ : ವೈವಾಹಿಕ ತೀರ್ಮಾನವನ್ನು ನೀವು ಮುಂದಕ್ಕೆ ಹಾಕುವಿರಿ. ಇಂದು ಭೂಮಿಯ ಖರೀದಿಯ ಬಗ್ಗೆ ಚಿಂತನೆ ಇದ್ದರೆ ಮುಂದುವರಿಯಬಹುದು. ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಅಧಿಕವಾಗಿ ಕಾಣಲಿದೆ.ವಾಹನವನ್ನು ಚಲಾಯಿಸುವಾಗ ಸಾವಧಾನತೆ ಇರಲಿ. ಕಳೆದ ದಿನಗಳಿಗಿಂತ ಇಂದು ವಿದ್ಯಾಭ್ಯಾಸವು ಉತ್ತಮ. ದೂರ ಹೋಗುವವರಿದ್ದರೆ ಹಿರಿಯರ ಆಸೀರ್ವಾದವನ್ನು ಪಡೆಯುವುದು ಉತ್ತಮ. ಸಂಗಾತಿಯು ನಿಮ್ಮ ಜೊತೆ ಜಗಳವಾಡಿ ಹಳೆಯ ವಿಚಾರವನ್ನು ಕೆದಕಿ ತೆಗೆಯಬಹುದು. ಸ್ತ್ರೀಸಂಬಂಧವಾದ ಅಪವಾದಗಳೂ ಬರಲಿದೆ. ಸಾರ್ವಜನಿಕ ಕೆಲಸದಲ್ಲಿ ನಿಮಗೆ ಮುಜುಗರವು ಹೆಚ್ಚಾದೀತು. ವಿದೇಶದ ವ್ಯಾಪಾರದಲ್ಲಿ ಸರಿಯಾದ ನಿರ್ವಹಣೆ ಸಾಧ್ಯವಾಗದು. ಸಜ್ಜನರ ಜೊತೆ ಸಮಯವನ್ನು ಕಳೆಯುವಿರಿ. ನಿಮ್ಮ ಹೆಸರಿನಿಂದ ಬೇರೆಯವರು ಕೆಲಸ ಮಾಡಿಕೊಳ್ಳಬಹುದು. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ. ಉದ್ಯೋಗದಲ್ಲಿ ಗಾಂಭೀರ್ಯವಿರಲಿದೆ. ಉನ್ನತ ವಿದ್ಯಾಭ್ಯಾಸಕ್ಕೆ ಸರಿಯಾದ ದಿಕ್ಕು ಕಾಣಿಸದು.
ವೃಶ್ಚಿಕ ರಾಶಿ : ಗಂಭೀರವಾದ ಆಲೋಚನೆಯಿಂದ ಹೊಸ ಯೋಜನೆಯು ಹೊರಬರುವುದು. ನೀವು ಇಂದು ಅನೇಕ ದಿನಗಳಿಂದ ನಿಂತಿದ್ದ ಕೆಲಸಗಳನ್ನು ಪೂರ್ಣಗೊಳ್ಳಬಹುದು. ಒಂಟಿಯಾಗಿ ಸುತ್ತಾಡಬೇಕು ಎಂದು ಅನ್ನಿಸಬಹುದು. ನ್ಯಾಯವನ್ನು ಕೊಡಿಸುವವರಿಗೆ ಸೂಕ್ತ ಆಧಾರಗಳು ಸಿಗಲಿವೆ. ನಿಮ್ಮ ಬಳಿ ಸಾಮಾಜಿಕ ಕಳಕಳಿಯಿಂದ ಜನರು ಬರಬಹುದು. ಬಾರದೆಂದು ತಿಳಿದ ಹಣವು ಇಂದು ನಿಮ್ಮ ಕೈ ಸೇರಬಹುದು. ಕರ್ತವ್ಯಗಳತ್ತ ನಿಮ್ಮ ಗಮನವಿರಲಿದೆ. ನಿಮ್ಮ ಮೇಲೆ ಬಂದ ಅಪವಾದವನ್ನು ನೀವು ಇನ್ನೊಬ್ಬರ ಮೇಲೆ ಹಾಕಲಿದ್ದೀರಿ. ನಿಮ್ಮ ಆಯ್ಕೆಯ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಆಸೆ ಇರುವುದು. ಮಾನಸಿಕ ನೋವನ್ನು ಕೊಡುವಲ್ಲಿ ಇಂದು ಆನಂದವನ್ನು ಹೊಂದುವಿರಿ. ಪ್ರಾಣಿಗಳ ಮೇಲೆ ಪ್ರೀತಿ ಅತಿಯಾಗಬಹುದು. ಅನುಮಾನವನ್ನು ಬಿಟ್ಟು ನೇರವಾಗಿ ಇರಲು ಪ್ರಯತ್ನಿಸಿ. ಇಂದು ನೀವು ಹೆಚ್ಚು ನಗಲಿದ್ದೀರಿ. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ. ಇನ್ನೊಬ್ಬರ ಅವಲಂಬನೆಯಿಂದ ನಿಮಗೆ ಮುಜುಗರವಾಗುವುದು. ದುಡಿಮೆಯಿಂದ ಸುಮ್ಮನಿರುವುದು ನಿಮಗೆ ಆಗದು.
ಧನು ರಾಶಿ : ಅಧಿಕಾರಿ ವರ್ಗದವರಿಗೆ ಇಂದು ಮೇಲಿನಿಂದ ಒತ್ತಡ ಬರುವುದು. ಇಂದು ನಿಮಗೆ ಸಾಲ ಕೊಡಲಿಕ್ಕಾಗಿ ಒಂದರಮೇಲೆ ಒಂದರಂತೆ ಕರೆಗಳು ಬರಬಹುದು. ನಿಮ್ಮ ಚೌಕಟ್ಟನ್ನು ಬಿಟ್ಟು ಆಚೆ ಇರಲಾರಿರಿ. ಪರಿಹಾರವಿಲ್ಲದ ಸಮಸ್ಯೆಯು ಇಲ್ಲವೆಂಬುದು ಅರಿವಿಗೆ ಬರುವುದು. ನೀವು ಸ್ವಾರ್ಥಿಗಳಂತೆ ತೋರಬಹುದು. ಸರ್ಕಾರದ ಸೌಲಭ್ಯವನ್ನು ಪಡೆಯಲು ನೀವು ಓಡಾಟ ಮಾಡಬೇಕಾದೀತು. ಮಾತಿನಿಂದ ನೀವು ಗೆಲ್ಲಲು ಯತ್ನಿಸುವಿರಿ. ಆರ್ಥಿಕತೆಗಾಗಿ ನಿರಂತರ ಶ್ರಮಿಸಬೇಕಾದೀತು. ನಿಮ್ಮ ಲೆಕ್ಕಾಚಾರದ ದಾಖಲೆಯನ್ನು ಸರಿಯಾಗಿ ಇರಿಸಿಕೊಳ್ಳಿ. ಚಿತ್ತವನ್ನು ಸಮಾಧಾನವಾಗಿ ಇಟ್ಟಕೊಳ್ಳಲು ಪ್ರಯತ್ನಿಸಿ ವಿಫಲರಾಗುವಿರಿ. ಮನೋರಂಜನೆಗೆ ಹೆಚ್ಚಿನ ಸಮಯವನ್ನು ನೀವು ಕೊಡುವಿರಿ. ಇನ್ನೊಬ್ಬರಿಗೆ ಕೊಡುವುದು ನಿಮಗೆ ಇಷ್ಟವಾಗದು. ಆರೋಗ್ಯವು ಸ್ಥಿರವಾಗಿರಲಿದೆ. ಧಾರ್ಮಿಕ ಆಚರಣೆಗಳು ನಿಮಗೆ ಇಷ್ಟವಾಗದ ವಿಚಾರವಾಗಲಿದೆ. ನಿಮ್ಮ ಕ್ರಮವನ್ನು ನೀವು ಮಾಡಿ. ಸ್ತ್ರೀಯರ ವಿಚಾರದಲ್ಲಿ ನಿಮಗೆ ಬುದ್ಧಿಯು ಸರಿಯಾಗಿ ಸೂಚಿಸದು. ಇಂದಿನ ವೈಯಕ್ತಿಕ ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು.
ಮಕರ ರಾಶಿ : ನಿಮಗೆ ಗೊತ್ತಿರುವುದನ್ನು ಹೇಳಲು ನಿಮಗೆ ನಿರ್ಭೀತಿ ಇರುವುದು. ಕಿಂಚಿತ್ತಾದರೂ ನಿಮ್ಮಿಂದ ಸಹಕರಾವಾದರೆ ನಿಮಗೆ ಸಮಾಧಾನ ಸಿಗಲಿದೆ. ನೀವು ಏನಾದರೂ ನಿರ್ಧರಿಸಿದರೆ ನಿಮಗೆ ಸಂಪೂರ್ಣ ಬೆಂಬಲವು ಸಿಗಲಿದೆ. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸಲಿದ್ದೀರಿ. ವಾತಕ್ಕೆ ಸಂಬಂಧಿಸಿದ ಖಾಯಿಲೆಯನ್ನು ಶಮನ ಮಾಡಿಕೊಳ್ಳುವುದು ಉತ್ತಮ. ಆಯ್ಕೆಯ ವಿಚಾರ ಬಂದಾಗ ಸ್ವಲ್ಪ ಸಮಯವನ್ನು ಪಡೆದು ತಾಳ್ಮೆಯಿಂದ ಉತ್ತರಿಸುವಿರಿ. ಸಂಗಾತಿಯ ಮಾತು ನಿಮಗೆ ಸಿಟ್ಟನ್ನು ತಂದೀತು. ಮಕ್ಕಳ ವಿಚಾರದಲ್ಲಿ ಕರುಣೆ ಬಂದು ಅವರಿಗೆ ಇಷ್ಟವಾದುದನ್ನು ಮಾಡುವಿರಿ. ಕಛೇರಿಯಲ್ಲಿ ನಿಮಗೆ ಸ್ವಲ್ಪ ಬಿಡುವುದು ಸಿಗಲಿದೆ. ಆಟದತ್ತ ನಿಮಗೆ ಗಮನ ಹೆಚ್ವಿರಲಿದೆ. ನಿಮ್ಮ ಬೇಸರವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ. ಸಮಾರಂಭಗಳಿಗೆ ತೆರಳುವಿರಿ. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ. ಹಿರಿಯರಿಂದ ಆದ ದೋಷವನ್ನು ಸರಿ ಮಾಡಿಕೊಳ್ಳುವಿರಿ. ಹಿರಿಯರ ಜೊತೆಗೆ ನಿಮ್ಮ ಸಂಬಂಧವು ಆಪ್ತವಾಗುವುದು.
ಕುಂಭ ರಾಶಿ : ಆಕಸ್ಮಿಕವಾಗಿ ಬರುವ ಜವಾಬ್ದಾರಿಗಳನ್ನು ಧೈರ್ಯವಾಗಿ ನಿರ್ವಹಿಸುವಿರಿ. ನಿಮ್ಮ ಇಂದಿನ ಯೋಜನೆಗಳು ತಲೆಕೆಳಗಾಗುವುದು. ಹಿತವಚನವು ನಿಮಗೆ ಯಾವ ಪರಿವರ್ತನೆಯನ್ನೂ ತರದು. ನಿಮ್ಮದು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು. ಅನಿರೀಕ್ಷಿತ ಬದಲಾವಣೆಯನ್ನು ನೀವು ಸ್ವೀಕರಿಸಬೇಕಸದೀತು. ಎಂದೋ ಕಳೆದುಕೊಂಡ ವಸ್ತುವು ಇಂದು ಪ್ರಾಪ್ತವಾಗಿ ಸಂತೋಷವಾಗುವುದು. ಸಾಮಾಜಿಕ ಕಾರ್ಯಗಳಿಂದ ಪ್ರಶಂಸೆಯನ್ನು ಅಪೇಕ್ಷಿಸುವಿರಿ. ಹಣದ ಅಭಾವವಿದ್ದರೂ ಖರ್ಚನ್ನು ಮಾಡಬೇಕಾದೀತು. ಮನೆಯಿಂದ ದೂರವಿದ್ದು ಬೇಸರವಾಗಬಹುದು. ನಿಮ್ಮ ಅಭಿಪ್ರಾಯಗಳನ್ನು ಹೇಳಲು ನೀವು ಮುಜುಗರ ಪಡುವಿರಿ. ಆಸ್ತಿಯ ವಿಚಾರವಾಗಿ ಮನೆಯಲ್ಲಿ ಮಾತನಾಡುವಿರಿ. ಜೊತೆಗಿರುವವರಿಂದ ಏನನ್ನಾದರೂ ನಿರೀಕ್ಷಿಸುವಿರಿ. ವ್ಯಾಪಾರವು ಸಾಧಾರಣವಾಗಿ ಇರಲಿದೆ. ಹಣವು ಬರುವ ನಿರೀಕ್ಷೆಯಲ್ಲಿ ಎಲ್ಲವನ್ನೂ ಮಾಡುವಿರಿ.
ಮೀನ ರಾಶಿ : ಆಪ್ತರಿಗೆ ನಿಮ್ಮಿಂದ ಸಹಾಯ ಸಿಗಲಿದೆ. ನಿಮ್ಮ ಕನಸುಗಳು ನನಸಾಗಿಸುವ ಸಮಯವನ್ನು ನಿರೀಕ್ಷಿಸುವಿರಿ. ಸಮಯವನ್ನು ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ. ಯಾವ ಫಲಾಪೇಕ್ಷೆಯನ್ನೂ ಇಂದು ಇಟ್ಟುಕೊಳ್ಳಲಾರಿರಿ. ಇಂದು ನೀವು ನಿಮ್ಮ ಜವಾಬ್ದಾರಿಯ ಕಾರ್ಯದಲ್ಲಿ ಮಗ್ನರಾಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಆಸಕ್ತಿಯು ಇರಲಿದೆ. ನಿಮ್ಮ ಪ್ರಾಮಾಣಿಕತೆಯನ್ನು ಪ್ರಶ್ನಿಸಬಹುದು. ವ್ಯಾಪಾರವನ್ನು ಬಹಳ ಉತ್ಸಾಹದಿಂದ ಮಾಡುವಿರಿ. ಸಂಗಾತಿಯನ್ನು ಭೇಟಿಯಾಗಲು ಕಾರಣವನ್ನು ಹುಡುಕುವಿರಿ. ತಾಯಿಗೆ ನೋವನ್ನು ಕೊಡುವ ಸಾಧ್ಯತೆ ಇದೆ. ವೃತ್ತಿಯಲ್ಲಿ ನಿಮ್ಮ ಸೇವೆಯು ಗಣನೀಯವಾಗಿರಲಿದೆ. ನಿಮ್ಮ ಕ್ರೀಡಾಮನೋಭಾವವೇ ಇಂದು ಹೆಚ್ಚಿರುವುದು. ಏರು ದನಿಯಲ್ಲಿ ಹಿರಿಯ ಜೊತೆ ಮಾತನಾಡುವುದು ನಿಮಗೆ ಶೋಭೆ ತರದು. ನಿಮ್ಮನ್ನು ನಂಬಿಸಿ ಕೆಲಸವನ್ನು ಮಾಡಿಕೊಳ್ಳುವರು. ಆರ್ಥಿಕ ಒತ್ತಡದಿಂದ ನೀವು ಹೊರಬರುವ ಮಾರ್ಗವನ್ನು ಹುಡುಕುವಿರಿ. ಯಾವದೇ ಸಂದರ್ಭದಲ್ಲಿಯೂ ಗಾಬರಿಯಾಗದೇ ಸಮಯಪ್ರಜ್ಞೆಯಿಂದ ಮುನ್ನಡೆಯಿರಿ.
-ಲೋಹಿತ ಹೆಬ್ಬಾರ್-8762924271 (what’s app only)