Horoscope: ಇನ್ನೊಬ್ಬರ ಮಾತನ್ನು ಕೇಳಿ ಯಾವ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ

ಸೆಪ್ಟೆಂಬರ್​ 18,​ 2024ರ​​ ನಿಮ್ಮ ರಾಶಿಭವಿಷ್ಯ: ಆರ್ಥಿಕ ಒತ್ತಡದಿಂದ ನೀವು ಆಚೆ ಬಂದು ನೆಮ್ಮದಿಯನ್ನು ಕಾಣುವಿರಿ. ನಿಮ್ಮಲ್ಲಿ ಇಂದು ಹೆಚ್ಚು ಉತ್ಸಾವಿರಲಿದ್ದು ಕೆಲಸಕ್ಕೆ ಪೂರಕವಾಗಲಿದೆ. ಯಾರನ್ನೋ ದೂರುವ ಬದಲು ನಿಮ್ಮ ನೇರಕ್ಕೆ ಕೆಲಸವನ್ನು ಮಾಡಿ. ಹಾಗಾದರೆ ಸೆಪ್ಟೆಂಬರ್​ 18ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಇನ್ನೊಬ್ಬರ ಮಾತನ್ನು ಕೇಳಿ ಯಾವ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ
ಇನ್ನೊಬ್ಬರ ಮಾತನ್ನು ಕೇಳಿ ಯಾವ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 18, 2024 | 12:02 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಗಂಡ, ಕರಣ: ಭವ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:30 ಗಂಟೆ, ರಾಹು ಕಾಲ ಮಧ್ಯಾಹ್ನ 12:27 ರಿಂದ 01:58, ಯಮಘಂಡ ಕಾಲ ಬೆಳಿಗ್ಗೆ 07:54 ರಿಂದ 09:25ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 10:56 ರಿಂದ ಮಧ್ಯಾಹ್ನ 12:27ರ ವರೆಗೆ.

ಮೇಷ ರಾಶಿ: ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದೇ ಇಂದು ನಿಮಗೆ ಲಾಭವಾಗುವುದು. ಸ್ಥಿರಾಸ್ತಿಯನ್ನು ಖರೀದಿಸುವ ಸಂದರ್ಭದಲ್ಲಿ ನಾನಾ ತೊಂದರೆಗಳು ಬರಬಹುದು. ಗೊಂದಲಗಳು ನಿಮ್ಮ ಖರೀದಿಸುವ ತೀರ್ಮಾನವನ್ನು ಬದಲಿಸಲೂಬಹುದು. ಆರ್ಥಿಕ ಒತ್ತಡದಿಂದ ನೀವು ಆಚೆ ಬಂದು ನೆಮ್ಮದಿಯನ್ನು ಕಾಣುವಿರಿ. ನಿಮ್ಮಲ್ಲಿ ಇಂದು ಹೆಚ್ಚು ಉತ್ಸಾವಿರಲಿದ್ದು ಕೆಲಸಕ್ಕೆ ಪೂರಕವಾಗಲಿದೆ. ಯಾರನ್ನೋ ದೂರುವ ಬದಲು ನಿಮ್ಮ ನೇರಕ್ಕೆ ಕೆಲಸವನ್ನು ಮಾಡಿ. ಹಣದ ಹರಿವು ಸಾಧಾರಣವಾಗಿ ಇರುವುದು. ಪ್ರೀತಿಪಾತ್ರರ ವರ್ತನೆಯಿಂದ ಕಿರಿಕಿರಿ ಉಂಟಾಗಲಿದೆ. ನೀವೇ ನಿಮ್ಮ ಬಗ್ಗೆ ಹೇಳಿಕೊಳ್ಳುವುದು ಸರಿಯಾಗಲಾರದು.‌ ಉಳಿದವರಿಗೆ ಇದು ಮುಜುಗರವನ್ನು ತಂದೀತು. ಉದ್ಯೋಗದಲ್ಲಿ ಆಲಸ್ಯದಿಂದ ಇರುವ ಕಾರಣ ಅಧಿಕಾರಿಗಳಿಂದ ಎಚ್ಚರಿಕೆಯ ಮಾತುಗಳೂ ಬರಬಹುದು. ವ್ಯಾಪಾರದ ನಷ್ಟವನ್ನು ಬೇರೆ ರೀತಿಯಿಂದ ಸರಿಮಾಡಿಕೊಳ್ಳುವಿರಿ. ಯಾರ ಜೊತೆಯೂ ನಿರ್ದಯೆಯಿಂದ ವ್ಯವಹರಿಸುವುದು ಬೇಡ.

ವೃಷಭ ರಾಶಿ: ಇಂದು ನಿಮಗೆ ಸಿಕ್ಕ ಸಂತೋಷವನ್ನು ಇತರರಿಗೂ ಹಂಚುವಿರಿ. ನಿಮಗೆ ಪ್ರಾಪ್ತವಾದ ಸ್ಥಾನದಿಂದ ನಿಮ್ಮ ಆಲೋಚನಾ ಕ್ರಮಗಳೂ ವ್ಯತ್ಯಾಸವಾಗುವುದು. ಸಹಭಾಗಿಗಳ ಜೊತೆ ಸ್ನೇಹದಿಂದ ಇರಬೇಕಾಗುವುದು. ಉದ್ಯೋಗವನ್ನು ಬದಲಿಸಲು ಇಚ್ಛೆ ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆದೀತು. ಬಿದ್ದು ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ. ಬಂಧುಗಳು ನಿಮಗೆ ಸಹಕಾರವನ್ನು ಕೊಡದೇ ಹೋಗಬಹುದು. ಮಾನಸಿಕ ನೋವನ್ನು ಮರೆಯಲು ಎಲ್ಲಿಗಾದರೂ ದೂರ ಹೋಗಲಿದ್ದೀರಿ. ಅಧ್ಯಾತ್ಮಕ್ಕೆ ಸಮಯ ಕೊಡುವುದು ಕಷ್ಟವಾದೀತು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಕೊಡುವಿರಿ. ಇನ್ನೊಬ್ಬರ ಮಾತಿನ್ನು ಕೇಳಿ ಯಾವ ತೀರ್ಮಾನವನ್ನು ತೆಗೆದುಕೊಳ್ಳುವುದು ಬೇಡ. ಹಿರಿಯರ ಮಾರ್ಗದರ್ಶನ ಸಿಗಲಿದೆ. ನಿಮ್ಮ ಗುಟ್ಟನ್ನು ಯಾರ ಬಳಿಯೂ ಬಿಟ್ಟುಕೊಡಲಾರಿರಿ. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು.

ಮಿಥುನ ರಾಶಿ: ಕಾರ್ಯದ ಸ್ಥಳದಲ್ಲಿ ನಿಮಗೆ ಕಹಿಯಾದ ಅನುಭವವಾಗಲಿದೆ. ಇಂದು ನಿಮ್ಮ ಅನುಭವದ ಆಧಾರದ ಯೋಗ್ಯವಾದ ಕೆಲವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಮತ್ತೆ ನಡೆಯುವ ಘಟನೆಗಳನ್ನುಬಗಂಭೀರವಾಗಿ ಸ್ವೀಕರಿಸುವುದು ಬೇಡ. ಮಾನಸಿಕ ನೋವಿನಿಂದ ಬಳಲುವಿರಿ. ಹೊಸತನ್ನು ಅಭ್ಯಾಸ ಮಾಡಬೇಕು ಎನ್ನುವ ಹಂಬಲವು ನಿಲ್ಲುವುದು. ನಟನೆಗೆ ಆಸಕ್ತಿಯು ಬರಲಿದೆ. ಸಾಮಾಜಿಕ ಕಾರ್ಯದಲ್ಲಿ ಮೆಚ್ಚುಗೆ ಸಿಗಲಿದೆ. ಕುಲದೇವರ ದರ್ಶನವನ್ನು ಮಾಡುವಿರಿ. ಆಕರ್ಷಣೆಯಿಂದ ಖರ್ಚನ್ನು ಹೆಚ್ಚು ಮಾಡಿಕೊಳ್ಳುವಿರಿ. ರಾಜಕಾರಿಣಿಗಳ ಭೇಟಿಯಾಗಲಿದೆ. ನಿಮ್ಮ‌ ಸಾಮರ್ಥ್ಯವನ್ನು ಪ್ರದರ್ಶಿಸುವಿರಿ. ಪ್ರವಾಸದಿಂದ ನಿಮಗೆ ತೊಂದರೆಯಾಗಲಿದೆ. ಹೂಡಿಕೆಯ ಹಣವನ್ನು ತೆಗೆಯುವ ನಿರ್ಧಾರಕ್ಕೆ ಬರಬೇಕಾದೀತು.‌ ಪರಿಸ್ಥಿತಿಯನ್ನು ನೋಡಿ ತೀರ್ಮಾನಿಸಿ.

ಕಟಕ ರಾಶಿ: ಧಾರ್ಮಿಕ ಕಾರ್ಯಗಳ ಸಿದ್ಧತೆಯಲ್ಲಿ ನೀವಿರುವಿರಿ. ನಿಮ್ಮ ಸ್ನೇಹಪರವಾದ ವ್ಯಕ್ತಿತ್ವವು ಎಲ್ಲರಿಗೂ ಇಷ್ಟವಾಗುತ್ತದೆ ಎನ್ನಲಾಗದು. ವೃತ್ತಿಯಲ್ಲಿ ಯಾವುದೇ ತೊಂದರೆಗಳಿಲ್ಲದೇ ಎಲ್ಲವೂ ಮುಗಿಯಬಹುದು. ಅಪಕ್ವವಾದ ಆಹಾರಸೇವನೆಯಿಂದ ತೊಂದರೆಯಾಗಲಿದೆ. ಸ್ತ್ರೀಯರಿಗೆ ಸಂಬಂಧಿಸಿದ ಖಾಯಿಲೆಯು ಹೆಚ್ಚಾಗಬಹುದು. ಬೇರೆ ಊರಿಗೆ ಹೋಗಿ ಸಂಕಟಪಡುವಿರಿ. ದಾಂಪತ್ಯದಲ್ಲಿ ಹೊಂದಾಣಿಯನ್ನು ತರಲು ಬಹಳ ಶ್ರಮವನ್ನು ವಹಿಸಬೇಕಾದೀತು. ಅಪರಿಚಿತ ವ್ಯಕ್ತಿಯಿಂದ ನೀವು ಹೆದರಿ ಸಂಪತ್ತನ್ನು ಕಳೆದುಕೊಳ್ಳಲಿದ್ದೀರಿ. ನಿಮ್ಮವರನ್ನು ನೀವು ಕಳೆದುಕೊಳ್ಳುವ ಭೀತಿಯಲ್ಲಿ ಇರುವಿರಿ. ಮಕ್ಕಳ‌ ಜೊತೆ ಕಾಲವನ್ನು ಕಳೆಯುವಿರಿ. ನಿಮ್ಮದಲ್ಲದ್ದನ್ನು ಉಳಿಸಿಕೊಳ್ಳುವುದು ಕಷ್ಟವಾಗುವುದು. ವೃತ್ತಿಯ ಬಗ್ಗೆ ನಿಮ್ಮಲ್ಲಿ ಹಲವು ಗೊಂದಲಗಳು ಕಾಣಿಸುವುದು. ತಾಯಿಯ ಆಸೆಯನ್ನು ಸ್ವಲ್ಪವಾದರೂ ತೀರಿಸುವಿರಿ. ನೀವು ಇಂದು ಅನೇಕ ಪಾತ್ರಗಳನ್ನು ನಿರ್ವಹಿಸಬೇಕಾಗಬಹುದು.

ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ