ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪ್ರತಿಪತ್ / ದ್ವಿತೀಯಾ, ನಿತ್ಯನಕ್ಷತ್ರ: ಉತ್ತರಾಭಾದ್ರ / ರೇವತೀ, ಯೋಗ: ವೃದ್ಧಿ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:39 ಗಂಟೆ, ರಾಹು ಕಾಲ ಮಧ್ಯಾಹ್ನ 01:57 ರಿಂದ 03:28, ಯಮಘಂಡ ಕಾಲ ಬೆಳಿಗ್ಗೆ 06:23 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 09:24 ರಿಂದ ಮಧ್ಯಾಹ್ನ 10:55ರ ವರೆಗೆ.
ಮೇಷ ರಾಶಿ : ಸ್ವಂತ ವಾಹನ ಸವಾರರಿಗೆ ಖರ್ಚು ಬರುವುದು. ಇಂದು ನಿಮ್ಮ ಮಾತಿನ ಮೇಲೆ ನಿಯಂತ್ರಣ ಅತ್ಯವಶ್ಯಕ. ನಿಮ್ಮ ವಸ್ತುವು ಕಳ್ಳತನ ಆಗುವ ಭಯವು ಕಾಡಲಿದೆ. ಇನ್ನೊಬ್ಬರ ಬಳಿ ಇರುವ ನಿಮ್ಮ ವಸ್ತುವನ್ನು ನೀವು ಪಡೆದುಕೊಳ್ಳುವಿರಿ. ಅಧಿಕ ವೆಚ್ಚವನ್ನು ಅಲ್ಪ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ನಿಮ್ಮ ಬಂಧುಗಳ ಸಹಕಾರದಿಂದ ನಿಮ್ಮ ಸಾಲಬಾಧೆಯು ಪರಿಹಾರವಾಗಲಿದೆ. ಅನಾರೋಗ್ಯವನ್ನು ಸರಿ ಮಾಡಿಕೊಳ್ಳುವಲ್ಲಿ ನಿಮ್ಮ ಪ್ರಯತ್ನವಿರುವುದು. ಇಂದು ವಿವಾಹದ ಮಾತುಕತೆಗಳನ್ನು ಆಡಲು ಹೋಗಲಿದ್ದೀರಿ. ನಿಮ್ಮ ಸಮಯವನ್ನು ಇತರರು ವ್ಯರ್ಥ ಮಾಡಬಹುದು. ಸರ್ಕಾರದಿಂದ ನಿಮಗೆ ಬರುವ ಸಂಪತ್ತು ವಿಳಂಬವಾಗಲಿದೆ. ನಿಮ್ಮ ಬಗ್ಗೆ ಕೆಲವು ಊಹಾಪೋಹಗಳು ಹರಡುವುವು. ಗೊತ್ತಿಲ್ಲದೇ ನಿಮ್ಮದಲ್ಲದ ವಸ್ತುವನ್ನು ತೆಗೆದುಕೊಳ್ಳುವಿರಿ. ದೂರ ಪ್ರಯಾಣವನ್ನು ಜಾಗರೂಕತೆಯಿಂದ ಮಾಡುವುದು ಅವಶ್ಯಕ. ನಿಮ್ಮ ದಾಖಲೆಗಳನ್ನು ಬಹಳ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಾಗುವುದು.
ವೃಷಭ ರಾಶಿ : ಇಂದು ನೀವು ಗೌಪ್ಯವಾಗಿ ಸಮಾಲೋಚನೆ ನಡೆಸಿ ಮುಂದಿನ ಯೋಜನೆಯನ್ನು ಹೇಳುವಿರಿ. ಇಂದಿನ ನಿಮ್ಮ ವ್ಯವಹಾರವನ್ನು ಸರಿಯಾಗಿ ನಿರ್ವಹಿಸಿ. ನಿಮ್ಮ ವ್ಯವಹಾರದಲ್ಲಿ ನಿಮಗೆ ವಂಚನೆಯಾಗಲಿದೆ. ಪ್ರೇಮಪಾಶದಿಂದ ನಿಮಗೆ ತಪ್ಪಿಸಿಕೊಳ್ಳುವುದು ಕಷ್ಟ. ನಿಮ್ಮ ಕಳುವಾದ ವಸ್ತುವು ಸಿಗಲಿದೆ. ರಾಜಕೀಯದಿಂದ ಪ್ರೇರಿತವಾದ ಮಾತುಗಳು ನಿಮಗೆ ಶೋಭೆಯನ್ನು ತರದು. ಆಸಕ್ತಿ ಇಲ್ಲದೇ ಇದ್ದರೂ ಕೆಲವು ಕೆಲಸಗಳನ್ನು ಮಾಡಲೇಬೇಕಾದೀತು. ಮನಸ್ಸು ಚಂಚಲವಾಗಿವ ಯಾರ ಮಾತನ್ನೂ ಕೇಳುವ ಮನಃಸ್ಥಿತಿ ಇರದು. ದೂರದ ಬಂಧುಗಳು ಪರಿಚಿತರಾಗಿ ಹತ್ತಿರವಾಗಬಹುದು. ಚರಸ್ವತ್ತಿನಲ್ಲಿ ಒಂದಿಲ್ಲೊಂದು ನಷ್ಟಗಳು ಆಗುವುದು. ವಿದ್ಯಾರ್ಥಿಗಳು ಓದಿನತ್ತ ಗಮನಕೊಡುವುದು ಒಳ್ಳೆಯದು. ಕೃತಜ್ಞತೆ ಇರಲಿ. ಎಲ್ಲದರಲ್ಲಿಯೂ ಉತ್ತಮವಾದುದನ್ನೇ ಆರಿಸಿಕೊಳ್ಳುವಿರಿ. ಆಪ್ತರು ಕಾರಣಾಂತರಗಳಿಂದ ದೂರಾಗಬಹುದು. ಸಕಾರಾತ್ಮಕ ಆಲೋಚನೆಯನ್ನು ನೀವು ಹೆಚ್ಚು ಮಾಡಿ. ಕಲೆಗಾರಿಕೆಯನ್ನು ಸಿದ್ಧಿಸಿಕೊಳ್ಳುವ ಬಗೆಯನ್ನು ಚಿಂತಿಸುವಿರಿ.
ಮಿಥುನ ರಾಶಿ : ಸಂಗಾತಿಯ ದುರಭ್ಯಾಸವನ್ನು ನಿಲ್ಲಿಸುವುದು ಸುಲಭವಲ್ಲ. ಆರ್ಥಿಕ ಲಾಭದಿಂದ ನೀವು ಸಂತೋಷವಾಗಿ ಇರಲಿದ್ದು ನಿಮ್ಮ ಮುಖದಲ್ಲಿ ನೆಮ್ಮದಿಯು ಕಾಣಲಿದೆ. ವಾಹನವನ್ನು ಖರೀದಿಸುವ ಮೊದಲು ಆಪ್ತರ ಸಲಹೆಯನ್ನು ಪಡೆಯಿರಿ. ಸಾಲ ಮಾಡುವಾಗ ನಿಮ್ಮ ಆದಾಯವನ್ನು ಗಮನದಲ್ಲಿ ಇಟ್ಟುಕೊಳ್ಳಿ. ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ. ತಾಯಿಯ ಆರೋಗ್ಯವನ್ನು ಸರಿಮಾಡಿಸಲು ಹಣಕಾಸಿನ ವ್ಯಯವಾಗಲಿದೆ. ಪ್ರಭಾವೀ ಜನರ ಭೇಟಿಯಿಂದ ನಿಮಗೆ ಅನೇಕ ಲಾಭಗಳು ಆಗಲಿದೆ. ಮಹತ್ಕಾರ್ಯಕ್ಕೆ ನಿಮ್ಮದೊಂದು ಸಣ್ಣ ಕೊಡುಗೆ ಇರಲಿದೆ. ನಿಮಗೆ ಕೊಟ್ಟ ಜವಾಬ್ದಾರಿಯಿಂದ ನೀವು ಹಿಮ್ಮುಖರಾಗುವಿರಿ. ಕೊಟ್ಟಿದ್ದಕ್ಕೆ ಕೃತಜ್ಞತೆ ಇರಲಿ. ನಿಮಗೆ ಪರೀಕ್ಷೆಯ ದಿನವಾಗಿರುವುದು. ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಿಕೊಳ್ಳುವುದು ಮುಖ್ಯವಾಗುವುದು. ಮುಖ್ಯ ಕಾರ್ಯವು ನೆನಪಾಗದೇಹೋಗಬಹುದು.
ಕರ್ಕಾಟಕ ರಾಶಿ : ನಿಮ್ಮ ಮನಸ್ಸಿಗೆ ಯೋಗ್ಯರಾದವರ ಜೊತೆ ಮಾತ್ರ ಬಿಚ್ಚುಮನಸ್ಸಿನಿಂದ ಇರುವಿರಿ. ಇಂದು ಯಾರ ಜೊತೆಗೂ ವಿವಾದಕ್ಕೆ ಸಿಲುಕುವುದು ಬೇಡ. ಯಂತ್ರೋಪಕರಣವನ್ನು ಬಳಸಿಕೊಂಡು ಹೊಸ ಉದ್ಯೋಗವನ್ನು ನೀವು ಆರಂಭಿಸಲಿದ್ದೀರಿ. ಯಾರೂ ನಿಮಗೆ ಸುಮ್ಮನೇ ಸಹಾಯ ಮಾಡಲಾರರು. ವಿದೇಶದಲ್ಲಿ ಇರುವವರಿಗೆ ಸಂಕಟವಾಗಬಹುದು. ಪುರಾಣಪ್ರವಚನದಲ್ಲಿ ನೀವು ಭಾಗವಹಿಸುವಿರಿ. ನಿಮ್ಮ ದೌರ್ಬಲ್ಯವನ್ನು ನೀವು ವರವಾಗಿ ಪಡೆದು ಸಾಧಿಸಬೇಕೆನಿಸಬಹುದು. ವಿದೇಶದ ಬಂಧುಗಳು ನಿಮ್ಮ ಉದ್ಯಮಕ್ಕೆ ಬೇಕಾದ ಸಹಾಯವನ್ನು ಮಾಡುವರು. ದಿನನಿತ್ಯದ ವ್ಯಾಪಾರದಲ್ಲಿ ಗೊಂದಲವೇಳಬಹುದು. ಪೂರ್ವಯೋಜಿತ ಕಾರ್ಯಕ್ಕೆ ನೀವು ಸಮಯವನ್ನು ಹೊಂದಿಸಿಕೊಳ್ಳುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಬೇಕು. ಕಾನೂನಿನ ಚೌಕಟ್ಟಿನಲ್ಲಿ ನಿಮ್ಮ ನಡೆವಳಿಕೆ ಇರಲಿ. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು. ಇಂದು ನಿಮಗೆ ಏಕಾಂತದ ಅನುಭವವಾಗಲಿದೆ.
ಸಿಂಹ ರಾಶಿ : ನಿಮ್ಮನ್ನು ನೀವು ಇನ್ನೊಬ್ಬರಿಗೆ ಸಾಕ್ಷಿಯಾಗಿ ತೋರಿಸಬೇಕಿಲ್ಲ. ನಂಬಿಕೆ ಇದ್ದವರು ಇರುತ್ತಾರೆ. ಇಂದು ನೀವು ಮನಸ್ಸಿಗೆ ಹಿಡಿಸದ ಸಂಗತಿಗಳ ವಿರುದ್ಧ ಧೈರ್ಯವಾಗಿ ಮಾತನಾಡುವಿರಿ. ಮೇಲಧಿಕಾರಿಗಳ ಕಿರುಕುಳವು ನಿಮಗೆ ಬಹಳ ಕಷ್ಟವಾದೀತು. ಉದ್ಯೋಗವನ್ನು ಬದಲಿಸಲು ಸ್ನೇಹಿತರ ಸಲಹೆಯನ್ನು ಪಡೆಯುವಿರಿ. ಸ್ವಾರ್ಥವನ್ನು ಬಿಡಲು ನಿಮಗೆ ಇಂದು ಸುಸಂದರ್ಭ. ಬಹಳ ಶ್ರಮದಿಂದ ಪಡೆಯಲು ಹೊರಟ ಭೂಮಿಯು ಕೈ ತಪ್ಪಬಹುದು. ಬೇಸರಗೊಳ್ಳದೇ ಮುಂದಿನ ಯೋಜನೆಯನ್ನು ರೂಪಿಸಿಕೊಳ್ಳಿ. ಪ್ರೀತಿಯನ್ನು ನೀವು ಲಘುವಾಗಿ ಸ್ವೀಕರಿಸಿ ಪ್ರಿಯಕರನಿಂದ ದೂರಾಗುವ ಸಾಧ್ಯತೆ ಇದೆ. ಬೇಗ ಮುಗಿಯಬಹುದಾದ ಕೆಲಸವನ್ನು ಮೊದಲು ಮಾಡಿ ಮುಗಿಸಿ. ಸಹೋದರನ ಆರೋಗ್ಯವು ನಿಮ್ಮನ್ನು ಕುಗ್ಗಿಸಬಹುದು. ಇಂದು ವಾಹನದಿಂದ ಬಿದ್ದು ಗಾಯಮಾಡಿಕೊಳ್ಳುವಿರಿ. ಸೌಕರ್ಯಗಳಿಂದ ನಿಮಗೆ ಅಹಂಕಾರ ಬರಬಹುದು. ನಿಂದನೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಬೇಡ. ನಿಮ್ಮ ವಸ್ತುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ.
ಕನ್ಯಾ ರಾಶಿ : ಯಾರದೋ ಹಂಗಿನಿಂದ ದೂರವಿರಲು ಬಯಸುವಿರಿ. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ಕಷ್ಟವಾಗುವುದು. ಭೂಮಿಯನ್ನು ಖರೀದಿಸುವ ಯೋಗವು ಬಂದಿದ್ದರೂ ಹಣವನ್ನು ಸೇರಿಸಲು ಕಷ್ಟವಾದೀತು. ದುಬಾರಿ ವಸ್ತುಗಳನ್ನು ಖರೀದಿಸಬೇಕಾದರೂ ಅದನ್ನು ಮುಂದೂಡುವಿರಿ. ನಿಮ್ಮ ಸಮಯಪಾಲನೆಗೆ ಅಧಿಕಾರಿಗಳಿಂದ ಪ್ರಶಂಸೆಯು ಸಿಕ್ಕೀತು. ನೀವು ನಿಮ್ಮದೇ ಆದ ಚೌಕಟ್ಟನ್ನು ರಚಿಸಿಕೊಳ್ಳಬೇಕಾಗಬಹುದು. ಸ್ನೇಹಿತರ ಜೊತೆ ಸುತ್ತಾಟ ಮಾಡುವಿರಿ. ಅನಿರೀಕ್ಷಿತ ಆರ್ಥಿಕ ನೆರವು ನಿಮಗೆ ಆಗಲಿದೆ. ನಿಮ್ಮ ಸ್ಥಾನಕ್ಕಾಗಿ ಮತ್ಯಾರನ್ನೋ ಕೆಳಗಿಳಿಸುವ ಹುನ್ನಾರ ನಡೆಸುವಿರಿ. ನಿಮ್ಮ ಬಂಧುಗಳನ್ನು ನೀವು ಬಹಳ ಎಚ್ಚರಿಕೆಯಿಂದ ಕರೆದುಕೊಂಡು ಹೋಗಬೇಕಾದೀತು. ನಿಮ್ಮ ಪ್ರತಿ ಮಾತೂ ತೂಕಕ್ಕೆ ಹೋಗಬಹುದು. ಯಾವ ಕಾರ್ಯಕ್ಕೂ ಸಹಾಯ ಸಿಗದೇ ಕಷ್ಟವಾದೀತು. ಹೊಂದಾಣಿಕೆಯನ್ನು ಸುಲಭದಲ್ಲಿ ಮಾಡಿಕೊಳ್ಳುವಿರಿ. ಹೂಡಿಕೆಯನ್ನು ಮಾಡುವುದು ನಿಮಗೆ ಅನಿವಾರ್ಯವಾಗಬಹುದು.
ತುಲಾ ರಾಶಿ : ಸಣ್ಣ ಕಾರ್ಯಗಳಿಗೆ ಇಂದು ಹೆಚ್ಚು ಸಮಯ ಬೇಕಾಗುವುದು. ಪಡೆದ ಸಾಲವನ್ನು ಬೇರೆ ರೀತಿಯಲ್ಲಿ ಹಿಂದಿರುಗಿಸುವಿರಿ. ಇಂದಿನ ಕಾರ್ಯದ ಗುರಿಯನ್ನು ನೀವು ಸಹೋದ್ಯೋಗಿಗಳ ಸಹಕಾರದಿಂದ ಮಾಡುವಿರಿ. ನಿಮಗೆ ನಿರೀಕ್ಷಿತ ಉದ್ಯೋಗವು ಸಿಗಲಿದ್ದು ಮನೆಯಲ್ಲಿ ಚರ್ಚೆಗಳು ನಡೆಯಬಹುದು. ನಿಮ್ಮ ದಿವಸದ ವ್ಯವಸ್ಥೆಯನ್ನು ಸರಿಮಾಡಿಕೊಳ್ಳಿ. ಇನ್ನೊಬ್ಬರ ಮಾತಿನಿಂದ ಯಾರನ್ನೂ ಅಳೆಯುವುದು ಬೇಡ. ಕೆಲವರ ಮಾತಿನಿಂದ ಮನಸ್ಸಿಗೆ ಕಷ್ಟವಾಗುವುದು. ನಿಮ್ಮದೇ ಆದ ಸಂಸ್ಥೆಯನ್ನು ಹುಟ್ಟು ಹಾಕಲು ಪ್ರಯತ್ನಿಸುವಿರಿ. ಆಯಾಸದಿಂದ ನೀವು ವಿಶ್ರಾಂತಿಯನ್ನು ಪಡೆಯುವಿರಿ. ನಿಮ್ಮವರ ಮೇಲೆ ಸಿಡಿಮಿಡಿಗೊಳ್ಳುವಿರಿ. ಸಂಗಾತಿಯು ನಿಮ್ಮನ್ನು ಸಮಾಧಾನ ಮಾಡಬಹುದು. ಅಪರಿಚಿತ ಕರೆಗಳಿಗೆ ಸೊಪ್ಪು ಹಾಕಬೇಡಿ. ಉದ್ಯೋಗದಲ್ಲಿ ಕೆಲವನ್ನು ಪಾಲಿಸುವುದು ಅನಿವಾರ್ಯವಾಗುವುದು. ಯಾವುದನ್ನೇ ಆದರೂ ಸ್ವಾಭಿಮಾನವನ್ನು ಬಿಟ್ಟು ಇರಲಾಗದು. ನಿಮ್ಮ ಘನತೆಗೆ ಧಕ್ಕೆ ಬರುವುದು.
ವೃಶ್ಚಿಕ ರಾಶಿ : ನಿಮ್ಮ ಸಹೋದ್ಯೋಗಿಗಳ ಬಗ್ಗೆ ಸದಭಿಪ್ರಾಯವನ್ನು ಇಟ್ಟುಕೊಳ್ಳುವುದು ಸಾಧ್ಯವಾಗದು. ನೀವು ಭೇಟಿಯಾಗುವ ವ್ಯಕ್ತಿಗಳಿಂದ ನಿಮ್ಮೊಳಗೆ ಧನಾತ್ಮಕತೆ ತುಂಬುವುದು. ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗಲಿದೆ. ಇದು ನಿಮ್ಮ ಇಂದಿನ ಖುಷಿಯ ಸಂಗತಿಯೂ ಹೌದು. ಪರರ ವಸ್ತುವನ್ನು ಅವರಿಗೆ ಹಿಂತಿರುಗಿಸಿ. ನಿಂತ ಕಾರ್ಯವನ್ನು ಬಂಧುಗಳ ಸಹಕಾರದಿಂದ ಮುನ್ನಡೆಸುವಿರಿ. ನಿಮ್ಮಿಂದ ಆಗದ ಕೆಲಸವನ್ನು ಮತ್ತೊಬ್ಬರು ಮಾಡಿ ಮುಗಿಸುವರು. ಸಣ್ಣ ವಿಚಾರವನ್ನು ದೊಡ್ಡ ಮಾಡಿಕೊಳ್ಳಬೇಡಿ. ಸುಮ್ಮನೇ ಸಮಯವು ವ್ಯರ್ಥವಾಗುತ್ತಿದೆ ಎಂದನಿಸಬಹುದು. ಆಸ್ತಿಯ ಹಂಚಿಕೆಯು ನಿಮಗೆ ಸಮಾಧಾನ ತರದು. ಸಣ್ಣ ಕೆಲಸವಾದರೂ ಶ್ರದ್ಧೆಯಿಂದ ಮಾಡುವಿರಿ. ನಿಮ್ಮ ಹೆಚ್ಚಿನವರ ಭೇಟಿಯಾಗುವುದು. ಸಣ್ಣ ಉದ್ಯಮಿಗಳು ಬಂದ ಕೆಲಸವನ್ನು ಬಿಡದೇ ಮಾಡಿಕೊಡುವುದು ಉತ್ತಮ. ಹಿರಿಯರ ಆಶೀರ್ವಾದದಿಂದ ಉತ್ಸಾಹವಿರಲಿದೆ.
ಧನು ರಾಶಿ : ವ್ಯವಹಾರದಲ್ಲಿ ಆಗುವ ಮಂದಗತಿಯಿಂದ ಬೇಸರವಾಗಲಿದೆ. ಇಂದು ನೀವು ಕುಟುಂಬದ ಜೊತೆ ಕುಳಿತು ಕುಶಲೋಪರಿಗಳನ್ನು ಹಂಚಿಕೊಳ್ಳುವಿರಿ. ಇನ್ನೊಬ್ಬರ ವಿಷಯದಲ್ಲಿ ಮೂಗುತೂರಿಸುವ ಕೆಲಸವು ಅನವಶ್ಯಕ. ನಿಮ್ಮ ಶ್ರಮಕ್ಕೆ ಯೋಗ್ಯ ಆದಾಯವು ಇಲ್ಲ ಎನಿಸಬಹುದು. ಕುಟುಂಬವನ್ನು ಇಷ್ಟಪಡುವಿರಿ. ಕಾನೂನಿಗೆ ವಿರುದ್ಧ ಕಾರ್ಯಗಳಿಂದ ಸಂಕಟವಾಗಲಿದೆ. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗಬಹುದು. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ನೀವು ಮೋಸದ ಜಾಲಕ್ಕೆ ಸಿಕ್ಕಿಕೊಳ್ಳುವ ಸಂದರ್ಭವಿರಲಿದೆ. ನಿಮ್ಮ ಬೇಡಿಕೆಯನ್ನು ಮೇಲಧಿಕಾರಿಗಳು ಸ್ವೀಕರಿಸುವರು. ನಿಮ್ಮನ್ನು ಸಂಗಾತಿಯು ದೂರಬಹುದು. ಒತ್ತಡಗಳು ಸ್ವಲ್ಪ ಮಟ್ಟಿಗೆ ಕಡಿಮೆ ಆಗಲಿದೆ. ನಿಮ್ಮ ತಿಳುವಳಿಕೆಯ ಬಗ್ಗೆ ಅಹಂಕಾರ ಬೇಡ. ಪ್ರಶಂಸೆಯಿಂದ ಅಹಂಕಾರವು ಬರುವುದು. ಮಿತ್ರರಿಗೆ ವಂಚಿಸುವ ಆಲೋಚನೆ ಬರಲಿದೆ.
ಮಕರ ರಾಶಿ : ಹಳೆಯ ವಸ್ತುಗಳನ್ನು ಕೊಟ್ಟು ಹೊಸ ವಸ್ತುಗಳನ್ನು ಖರೀದಿ ಮಾಡುವಿರಿ. ಇಂದು ಸಂಬಂಧವನ್ನು ಖುಷಿಪಡಿಸಲು ನಿಮಗೆ ಅವಕಾಶ ಸಿಗುವುದು. ಇಂದು ಒತ್ತಡವಿಲ್ಲದೇ ಕಾರ್ಯವನ್ನು ಮಾಡುವಿರಿ. ದುರಭ್ಯಾಸವನ್ನು ನೀವು ರೂಢಿಸಿಕೊಂಡಿರುವುದು ಅರಿವಿಗೆ ಬರಲಿದೆ. ಸಾರ್ವಜನಿಕವಾಗಿ ನಿಮ್ಮೊಳಗೆ ಅಳುಕು ಇರಲಿದ್ದು ಅದನ್ನು ಬಿಟ್ಟು ಮುನ್ನಡೆಯಬೇಕು. ಸಾಮಾಜಿಕ ಕಾರ್ಯಕ್ಕೆ ನಿಮಗೆ ಬೆಂಬಲವು ಸಿಗಲಿದೆ. ಸ್ನೇಹಿತರಿಂದ ನಿಮಗೆ ಉಡುಗೊರೆ ಸಿಗಲಿದೆ. ಖುಷಿಯಾಗಿರಲು ನಿಮಗೆ ಅನೇಕ ಕಾರಣಗಳು ಸಿಗಲಿದೆ. ಪ್ರಾಮಾಣಿಕತೆಯು ನಿಮಗೆ ಇಷ್ಟವಾಗಲಿದೆ. ಮಕ್ಕಳ ಜೊತೆ ಕಳೆಯಬೇಕು ಎನಿಸಬಹುದು. ತಾಳ್ಮೆಯ ಪರೀಕ್ಷೆಯೂ ಆಗಬಹುದು. ನಿಮ್ಮನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗಲಿದೆ. ಕುಟುಂಬದ ಜೊತೆ ಇದ್ದರೂ ಅಲ್ಲಿಂದ ದೂರವಿರಲು ಪ್ರಯತ್ನಿಸುವಿರಿ. ಧಾರ್ಮಿಕ ಆಚರಣೆಗಳನ್ನು ಬಹಳ ಶ್ರದ್ಧೆ ಭಕ್ತಿಯಿಂದ ಮಾಡುಬಿರಿ. ತಾರತಮ್ಯ ಭಾವವನ್ನು ಬಿಡಬೇಕಾಗುವುದು.
ಕುಂಭ ರಾಶಿ : ನಿಮ್ಮ ಔಷಧದ ಸೇವೆಯಿಂದ ಅಡ್ಡಪರಿಣಾಮ ಉಂಟಾಗುವುದು. ಇಂದು ನಿಮ್ಮ ಮಾತು ಆಕರ್ಷಣೀಯವಾಗಿ ಇರುವುದು. ನಿಮ್ಮ ಆಲೋಚನೆಯಲ್ಲಿ ವ್ಯತ್ಯಾಸವಾಗಲಿದೆ. ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುವಿರಿ. ಕಣ್ಣಿಗೆ ಕಾಣಿಸಿದ್ದನ್ನು ನೀವು ನಂಬಲಾರಿರಿ. ವಿದೇಶದವರ ಸ್ನೇಹವು ಉಂಟಾಗಬಹುದು. ಸ್ನೇಹಿತರಿಂದ ಹಣಕಾಸಿನ ಸಹಾಯವನ್ನು ಬಯಸುವಿರಿ. ಹೊಸ ರೀತಿಯ ಆಲೋಚನೆಯಲ್ಲಿ ಮಾನಸಿಕ ಹಿತವು ಸಿಗಲಿದೆ. ಯಾರನ್ನೂ ಮೆಚ್ಚುವ ನಿಮ್ಮ ಗುಣವು ಶ್ಲಾಘನೀಯವಾಗಲಿದೆ. ಮನೆಯಿಂದ ಹೊರಗೆ ಭೋಜನವನ್ನು ಮಾಡುವಿರಿ. ಪ್ರಾರಂಭಿಸಿದ ಕೆಲಸದಲ್ಲಿ ಉತ್ಸಾಹ ಹೆಚ್ಚಿರಲಿದೆ. ತಲೆ ನೋವು ಇಂದು ಪೀಡಿಸಬಹುದು. ಪ್ರತ್ಯೇಕತೆಯಲ್ಲಿ ನಿಮಗೆ ಸುಖವಿದೆ ಎನಿಸಬಹುದು. ಇಂದು ವೃತ್ತಿಯಲ್ಲಿ ಕೆಲಸ ಮಾಡುವ ಹುಮ್ಮಸ್ಸು ಇರದು. ಎಲ್ಲರ ಮೇಲೂ ವಿನಾ ಕಾರಣ ಕೋಪ ಮಾಡಿಕೊಳ್ಳುವಿರಿ. ಹಸಿವು ಹೆಚ್ಚಾಗಿ ಸಂಕಟಪಡುವಿರಿ. ವಿದೇಶ ಪ್ರವಾಸಕ್ಕೆ ವಿಘ್ನಗಳು ಬರಬಹುದು. ಧೈರ್ಯದಿಂದ ಮುನ್ನಡೆಯುವಿರಿ. ಬಂಧುಗಳ ನಡುವೆಯೂ ರಾಜಕೀಯವನ್ನು ಮಾಡುವಿರಿ.
ಮೀನ ರಾಶಿ : ಕಛೇರಿಯ ಕಾರ್ಯಗಳಲ್ಲಿ ಆತುರತೆ ಬೇಡ. ಏಕೆಂದರೆ ಸಣ್ಣ ತಪ್ಪಾದರೂ ಪುನಃ ಮಾಡಬೇಕಾಗುವುದು. ನಿಮ್ಮ ಆಶಾವಾದಕ್ಕೆ ಸರಿಯಾದ ಉತ್ತರ ಸಿಗಲಿದೆ. ಸಮಸ್ಯೆಯ ಕುರಿತೇ ಹೆಚ್ಚು ಆಲೋಚನೆಯನ್ನು ಮಾಡುವಿರಿ. ಅಪ್ರಧಾನವಾದ ವಿಚಾರವು ನಿಮನ್ನು ಕಾಡಬಹುದು. ದೇಹದಲ್ಲಿ ಕೆಲವು ಕೆಲಸಗಳನ್ನು ಬಿಡುವಿರಿ. ನಾಯಕತ್ವವನ್ನು ನೀವು ನಿರಾಕರಿಸಬಹುದು. ಸಂಗಾತಿಯಿಂದ ನಿಮಗೆ ನಕಾರಾತ್ಮಕ ಆಲೋಚನೆ ಬರುವುದು. ಕೃಷಿಯಲ್ಲಿ ಆಸಕ್ತಿಯು ಹೆಚ್ಚಿದ್ದು ಮಾರ್ಗದರ್ಶನವನ್ನು ನೀವು ಬಯಸುವಿರಿ. ಅಪವ್ಯಯವನ್ನು ಕಡಿಮೆ ಮಾಡಿಕೊಳ್ಳಿ. ಉಳಿತಾಯಕ್ಕೆ ಬೇಕಾದ ಯೋಚನೆ ಇರಲಿ. ಮೌನವಾಗಿದ್ದು ನಿಮ್ಮ ಕಾರ್ಯವನ್ನು ಸಾಧಿಸುವಿರಿ. ಕುಟುಂಬದವರ ಜೊತೆ ಹೆಚ್ಚು ಕಾಲವನ್ನು ಕಳೆಯಲು ಆಗದು. ಸಂಗಾತಿಯ ಪ್ರೀತಿಯು ನಿಮಗೆ ಸಿಗಲಿದೆ. ನಿಮಗೆ ಸಿಕ್ಮಿದ್ದನ್ನು ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ. ನಿಮ್ಮ ವಸ್ತುವು ಕಳ್ಳರಿಂದ ಅಪಹರಣ ಆಗುವುದೆಂಬ ಭಯವು ಇರುವುದು.
-ಲೋಹಿತ ಹೆಬ್ಬಾರ್-8762924271 (what’s app only)