ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಉತ್ತರಾಫಲ್ಗುಣೀ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ತೃತೀಯಾ, ನಿತ್ಯ ನಕ್ಷತ್ರ: ರೇವತೀ, ಯೋಗ: ಧ್ರುವ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 22 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 29 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:55 ರಿಂದ 12:26, ಯಮಘಂಡ ಕಾಲ ಮಧ್ಯಾಹ್ನ 03:27 ರಿಂದ 04:58ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:53 ರಿಂದ ಮಧ್ಯಾಹ್ನ 09:24ರ ವರೆಗೆ.
ಮೇಷ ರಾಶಿ : ಯಾವುದನ್ನೇ ಒಪ್ಪಿಕೊಳ್ಳುವುದಾದರೂ ನಿಮಗೆ ಬಲವಾದ ಕಾರಣ ಬೇಕಾಗುತ್ತದೆ. ಪಾಲುದಾರಿಕೆಯಲ್ಲಿ ಹೊಸ ಉದ್ಯಮವನ್ನು ಆರಂಭಿಸುವಿರಿ. ಕುಟುಂಬವು ನಿಮ್ಮ ಶ್ರೇಯಸ್ಸನ್ನು ಹಾರೈಸಲಿದೆ. ಪಾಲುದಾರಿಕೆಯಲ್ಲಿ ಹಣಕಾಸಿನ ವಿಚಾರವು ವಿವಾದಕ್ಕೆ ಕಾರಣವಾಗಲಿದೆ. ಕಾರ್ಯಗಳಲ್ಲಿ ಉಂಟಾದ ವಿಘ್ನವನ್ನು ಪುರುಷಪ್ರಯತ್ನದಿಂದ ಸಾಧಿಸುವಿರಿ. ದಾಂಪತ್ಯದ ಭಿನ್ನಾಭಿಪ್ರಾಯಗಳು ಅಲ್ಪಕಾಲದಲ್ಲಿಯೇ ಸರಿಯಾಗುವುದು. ಸಂಗಾತಿಯನ್ನು ಬೇಸರದಲ್ಲಿದ್ದು ನೀವು ಸಮಾಧಾನ ಮಾಡುವಿರಿ. ನಿಮಗೆ ಸಾಕಷ್ಟು ಸಮಯವುವ ಇಂದು ಇರಲಿದ್ದು ಏನನ್ನೂ ಮಾಡದೇ ಕಾಲವನ್ನು ಕಳೆಯುವಿರಿ. ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳುವ ಹಂಬಲವಿರುವುದು. ನಿಮ್ಮನ್ನು ನೀವು ಪ್ರಕಟಮಾಡಿಕೊಳ್ಳು ತಯಾರಾಗುವಿರಿ. ನಿಮ್ಮ ಮೇಲೆ ಕೆಟ್ಟ ಕಣ್ಣುಗಳು ಬೀಳಬಹುದು. ಸಮಯದ ನಿರೀಕ್ಷೆಯಲ್ಲಿ ಇರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ.
ವೃಷಭ ರಾಶಿ : ಯಾವುದನ್ನೇ ಪಡೆಯುವುದಿದ್ದರೂ ಸುಲಭಕ್ಕೆ ಸಿಕ್ಕುವುದಿಲ್ಲ. ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವಿರಿ. ನಿಮ್ಮ ಇಂದಿನ ಸುತ್ತಾಟ ವ್ಯರ್ಥವಾಗುವುದು. ಅಶುಭ ಸೂಚನೆಗಳನ್ನು ಗಮನಿಸಿಯೂ ಉದ್ಧಟತನದಿಂದ ಮುನ್ನುಗ್ಗುವಿರಿ. ಯಾರಾದರೂ ನಿಮ್ಮನ್ನು ಪೀಡಿಸಬಹುದು. ಆಪ್ತಬಂಧುವನ್ನೊಬ್ಬರನ್ನು ಕಳೆದುಕೊಳ್ಳಲೂಬಹುದು. ಎಲ್ಲರೆದುರು ಮುಖಭಂಗವಾಗಬಹುದು. ವೈವಾಹಿಕ ಜೀವನದ ಕನಸನ್ನು ನೀವು ಕಾಣುವಿರಿ. ನಿಮ್ಮ ದೂರಾಲೋಚನೆಯು ವಾಸ್ತವಕ್ಕಿಂತ ದೂರವಿರುವುದು. ಇಂದು ನಿಮಗೆ ಒಂಟಿಯಾಗಿ ಇರುವುದು ಹೆಚ್ಚು ಇಷ್ಟವಾಗುವುದು. ಸದಭಿರುಚಿಯು ನಿಮಗೆ ವರವಾಗಬಹುದು. ನಿಮ್ಮ ಭಾವವನ್ನು ಪ್ರಕಟಗೊಳಿಸಿ. ಅವಶ್ಯಕ ವಸ್ತುಗಳು ಕಣ್ಮರೆಯಾದಾವು. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಿವಿರುವಂತೆ ತೋರುತ್ತದೆ. ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು. ನಿಮ್ಮ ದುಃಖವನ್ನು ಹಂಚಿಕೊಳ್ಳಲು ವ್ಯಕ್ತಿಯನ್ನು ಹುಡುಕುವಿರಿ.
ಮಿಥುನ ರಾಶಿ : ಸಾಲವನ್ನು ತೀರಿಸಲು ಮತ್ತೊಂದು ಸಾಲವನ್ನು ಮಾಡಬೇಕಾಗುವುದು. ನೀವು ಇಂದು ಅಸಾಧ್ಯವೆಂದು ಬಿಟ್ಟ ಕಾರ್ಯಗಳನ್ನು ಪುನಃ ಕೈಗೆತ್ತಿಕೊಳ್ಳುವಿರಿ. ಸಹೋದರನ ಸಹಾಕಾರವು ಸ್ವಲ್ಪಮಟ್ಟಿಗೆ ಅನುಕೂಲವಾಗುವುದು. ನೂತನ ವಾಹನದ ಖರೀದಿಯನ್ನು ಮಾಡುವ ಬಯಕೆಯು ಇಂದು ಪೂರ್ಣಗೊಳ್ಳಬಹುದು. ಹಿತಶತ್ರು ನಿಮ್ಮ ಪತನವನ್ನೇ ನಿರೀಕ್ಷಿಸುತ್ತ ಅದಕ್ಕೆ ಬೇಕಾದುದನ್ನು ಮಾಡುವರು. ನಿಮ್ಮ ಕೈಗೆ ಸಿಕ್ಕ ಹಣವು ಗೊತ್ತಾಗದಹಾಗೆ ಖರ್ಚಾಗುವುದು. ಇಂದಿನ ಕಾರ್ಯದ ಯಾದಿ ಮಾಡಿಕೊಂಡು ಕಾರ್ಯದಲ್ಲಿ ಮಗ್ನರಾಗಿ. ನಿಮ್ಮ ಸಂಪೂರ್ಣ ತಲ್ಲೀನತೆಯು ಕಾರ್ಯವನ್ನು ಮುಗಿಸಲು ಸಹಾಯಕವಾಗಲಿದೆ. ಕಾನೂನಾತ್ಮಕ ವಿಚಾರಕ್ಕೆ ಮಾತ್ರ ನಿಮ್ಮ ಬೆಂಬಲವು ಇರಲಿ. ಇಂದು ನೀವು ತಾಳ್ಮೆಯನ್ನು ಅಭ್ಯಾಸದಿಂದ ಗಳಿಸಬೇಕಾಗುವುದು. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ. ಆಸ್ತಿಯ ವಿಚಾರಕ್ಕೆ ದಾಯಾದಿ ಕಲಹವಾಗಬಹುದು. ನಿಮ್ಮವರ ಪ್ರೀತಿಗೆ ನೀವು ಮನಸೋಲುವಿರಿ.
ಕರ್ಕಾಟಕ ರಾಶಿ : ಪಾಲುದಾರಿಕೆಯನ್ನು ಬಿಡುವ ಆಲೋಚನೆ ಬರಬಹುದು. ಇಂದು ನಿಮ್ಮ ಕಷ್ಟಕರ ಸಂದರ್ಭದಲ್ಲಿಯೂ ಧೈರ್ಯವನ್ನು ಬಿಡದೇ ಎದುರಿಸಬೇಕು. ನಿಮ್ಮ ಮನೆಯ ಕೆಲಸವು ಹಲವು ದಿನಗಳಿಂದ ನಿಂತಿದ್ದು ಮತ್ತೆ ಆರಂಭವಾಗಲಿದೆ. ಇದು ನಿಮಗೆ ಅನಿರೀಕ್ಷಿತ ಆನಂದವನ್ನು ತರಬಹುದು. ಬಹಳ ದಿನಗಳ ಅನಂತರ ತಂದೆಯ ಜೊತೆ ಮಾತನಾಡಿ ಅವರ್ಣನೀಯ ನೆಮ್ಮದಿಯು ಪಡೆಯುವಿರಿ. ಅಪರಿಚಿತರಿಂದ ನಿಮಗೆ ಗೌರವ ಪ್ರಾಪ್ತವಾಗುವುದು. ಇನ್ನೊಬ್ಬರ ನೋವಿಗೆ ಸ್ಪಂದಿಸುವ ನಿಮ್ಮ ಗುಣವು ಹಲವವರಿಗೆ ಮೆಚ್ಚುಗೆಯಾಗಬಹುದು. ನಿಮಗೆ ಸಿಕ್ಕ ವ್ಯಕ್ತಿಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ಸಾಹಸದ ಪ್ರವೃತ್ತಿಯು ಸದ್ಯಕ್ಕೆ ಬೇಡ. ನಿಮಗೆ ತಾಳ್ಮೆಯು ಕಡಿಮೆ ಇರುವುದು ಗೊತ್ತಾಗುವುದು. ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ನಂಬಿಕೆ ದ್ರೋಹವು ನಿಮಗೆ ಕಷ್ಟವಾದೀತು. ನಿಮ್ಮ ಕೋಪಕ್ಕೆ ಒಂದು ಮಿತಿ ಇರಲಿ. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ. ಕೋಪಕ್ಕಿಂತ ತಾಳ್ಮೆಯೇ ನಿಮಗೆ ಸುಖವೆನಿಸಬಹುದು.
ಸಿಂಹ ರಾಶಿ : ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲಾಗದೇ ಬೇಸರವಾವುವುದು. ಇಂದು ನಿಮ್ಮ ನಿಮಗೆ ಹಣವನ್ನು ಉಳಿಸುಕೊಳ್ಳಬೇಕು ಎಂಬ ಇಚ್ಛೆ ಇದ್ದರೂ ಬಂದ ಹಣವು ನಿಲ್ಲದೆ ಖಾಲಿಯಾಬಹುದು. ಬಂಧುಗಳ ಆಗಮನವು ನಿಮ್ಮ ಯೋಜನೆಗೆ ಪೂರಕವಾಗಿ ಇರದು. ಮಕ್ಕಳಿಂದ ಆಸ್ತಿಗೆ ಸಂಬಂಧಿಸಿದ ವಿಚಾರವನ್ನು ಪ್ರಸ್ತಾಪಿಸಿ ಒಪ್ಪಿಗೆಯನ್ನು ಪಡೆಯುವಿರಿ. ಸುಧಾರಿಸಿದ ಆರೋಗ್ಯವು ನಿಮಗೆ ಉತ್ಸಾಹವನ್ನು ಕೊಡಲಿದೆ. ದೈವಾನುಗ್ರಹದಿಂದ ನೀವು ಆಪತ್ತಿನಿಂದ ದೂರಾಗುವಿರಿ. ಜೀವನದ ಆಕಸ್ಮಿಕ ತಿರುವುಗಳಿಗೆ ನೀವು ಚಿಂತೆಗೆ ಒಳಗಾಗುವುದಿಲ್ಲ. ಹಣದ ಉಳಿತಾಯಕ್ಕೆ ಮಾರ್ಗವನ್ನು ಹುಡುಕುವಿರಿ. ಉದ್ಯೋಗದ ಕೆಲವು ಗೌಪ್ಯ ವಿಚಾರಗಳು ನಿಮಗೆ ಗೊತ್ತಾಗಬಹುದು. ವಿಷಯಾಸಕ್ತಿಯು ಇಂದು ಅಧಿಕವಾಗಿ ಇರಲಿದೆ. ನ್ಯಾಯವಲ್ಲದ ಮಾರ್ಗದಲ್ಲಿ ನಿಮ್ಮ ಯೋಚನೆಯು ಸಾಗಬಹುದು. ನಿಮ್ಮ ಇಂದಿನ ಕೆಲಸಗಳು ಬೇಗನೆ ಮುಕ್ತಾಯವಾಗುವುದು.
ಕನ್ಯಾ ರಾಶಿ : ಮಿತ್ರನಿಂದ ಅನಿರೀಕ್ಷಿತ ಸಹಕಾರ ದೊರೆಯುವುದು. ನಿಮ್ಮ ಶಿಕ್ಷಣದಿಂದ ಪ್ರತಿಷ್ಠಿತ ಕಂಪೆನಿಯ ಉದ್ಯೋಗವನ್ನು ಪಡೆಯುವಿರಿ. ನೀವು ಅಂದುಕೊಂಡಿದ್ದು ಆಗುತ್ತಿದ್ದರೂ ಮಾನಸಿಕ ಕಿರಿಕಿರಿ ಅಧಿಕವಾಗುವುದು. ನಿಮಗೆ ಕೊಟ್ಟ ವಸ್ತುವನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಕಷ್ಟ. ಮಕ್ಕಳ ಕಾರಣದಿಂದ ನಿಮಗೆ ಕೆಟ್ಟ ಹೆಸರು ಬರಬಹುದು. ಪ್ರೇಮವನ್ನು ಸರಿಯಾದ ಕ್ರಮದಲ್ಲಿ ನಿರ್ವಹಿಸಿ. ಯಾವ ಕೆಲಸದಲ್ಲಿಯೂ ಸಿಕ್ಕಿಹಾಕಿಕೊಳ್ಳದೇ ಇರುವಿರಿ. ಎಲ್ಲವನ್ನೂ ತಿಳಿದೂ ನೀವು ಸುಮ್ಮನಿರುವುದು ನಿಮಗೆ ಇಷ್ಟವಾಗುವುದು. ಅಧಿಕಾರಿಗಳ ವರ್ಗದಿಂದ ನಿಮಗೆ ಗೌರವ ಸಿಗಲಿದೆ. ನಿಮ್ಮವರಿಗೆ ನಿಮ್ಮ ಸರಿಯಾದ ಪರಿಚಯ ಆಗಿಲ್ಲವೆನಿಸುವುದು. ತಂದೆಗೆ ನಿಮ್ಮ ಕಡೆಯಿಂದ ಧನಸಹಾಯ ಸಿಗುವುದು. ವ್ಯಾಪರವು ಒಂದೇ ಹದದಲ್ಲಿ ಹೋಗುವುದು. ಪತ್ನಿಯ ಆರೋಗ್ಯವು ಕೆಡುವ ಸಾಧ್ಯತೆ ಇದೆ. ಆದರೆ ಸ್ನೇಹಿತರ ಮನೆಯಲ್ಲಿ ಉತ್ತಮ ಭೋಜನ ಮಾಡುವಿರಿ. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಇಷ್ಟಪಡಲಾರಿರಿ.
ತುಲಾ ರಾಶಿ : ಮುಂದೆ ಬರುವ ಅವಕಾಶಕ್ಕೆ ಈಗಲೇ ಉದ್ಯೋಗವನ್ನು ಕೈಚೆಲ್ಲಿ ಕುಳಿತಿರುವುದು ಮೂರ್ಖತನವಾದೊಇತು. ನೀವು ಬಹಳ ನಾಜೂಕಿನಿಂದ ಕೆಲಸ ಮಾಡಿಕೊಂಡು ಎಲ್ಲಿಯೂ ಸಿಕ್ಕಿಹಾಕಿಕೊಳ್ಳಲಾರಿರಿ. ಶತ್ರುಗಳು ನಿಮ್ಮ ಮಿತ್ರರಾಗಲು ಬಯಸಬಹುದು. ನಿಮ್ಮ ಗಮನವು ಅವರ ಮೇಲಿರಲಿ. ಆಸ್ತಿಯನ್ನು ಪಡೆಯಲು ಎದುರಾಳಿಗಳ ಬಲ ಹೆಚ್ಚಾಗುವುದು. ವಿದ್ಯಾರ್ಥಿಗಳಿಗೆ ದುಡಿಮೆಯ ಬಗ್ಗೆ ಹೆಚ್ಚು ಆಸಕ್ತಿಯು ಹೆಚ್ಚಾಗಿ ಅಭ್ಯಾಸವನ್ನು ನಿಲ್ಲಿಸುವಿರಿ. ಬಂಧುಗಳ ಮನೆಯ ಸಮಾರಂಭಕ್ಕೆ ಹೋಗಲಿದ್ದೀರಿ. ದಾಂಪತ್ಯದಲ್ಲಿ ಮಾತಿನ ಬಿರುಸು ಅತಿಯಾಗಬಹುದು. ಎಷ್ಟೇ ದೂರವಿದ್ದರೂ ಮನೆಯ ನೆನಪು ನಿಮ್ಮನ್ನು ಕಾಡುವುದು. ಕಬ್ಬಿಣದ ವ್ಯಾಪಾರವನ್ನು ಮಾಡಲು ಧನಸಹಾಯವು ಸಿಗಬಹುದು. ನಿಷ್ಟುರದ ಮಾತುಗಳನ್ನು ಆಡಿ ಸಂಬಂಧವನ್ನು ಕಳೆದುಕೊಳ್ಳುವಿರಿ. ಅಪಜಯವು ನಿಮಗೆ ಅಪಮಾನದಂತೆ ಆಗುವುದು. ನಿಮ್ಮ ಸದ್ಭಾವವನ್ನು ಆಡಿಕೊಳ್ಳಬಹುದು. ಇಂದು ನಿಮ್ಮ ತಾಯಿಯ ಬಗ್ಗೆ ನಿಮ್ಮ ಪ್ರೀತಿ ಹೆಚ್ಚಾಗುತ್ತದೆ.
ವೃಶ್ಚಿಕ ರಾಶಿ : ಉದ್ಯೋಗದ ಒತ್ತಡವು ಮನೆಯಲ್ಲಿ ನೆಮ್ಮದಿಯಿಂದ ಇರಲು ಬಿಡದು. ಇಂದಿನ ನಿಮ್ಮ ಶ್ರಮವು ಫಲಿಸಿ, ಉತ್ಸಾಹವನ್ನೂ ಹೆಚ್ಚಿಸುವುದು. ನಿಮ್ಮ ಅಪೇಕ್ಷೆಗಳನ್ನು ನಿಯಂತ್ರಣದಲ್ಲಿ ಇರಿಸಿಕೊಂಡು ಎಂದಿನ ಕೆಲಸದಲ್ಲಿ ಪ್ರವೃತ್ತರಾಗುವಿರಿ. ಆಸ್ತಿಯ ಖರೀದಿಯಲ್ಲಿ ತಂದೆಯ ಕಡೆಯಿಂದ ನಿಮಗೆ ಸಿಂಹಪಾಲು ಸಿಗಲಿದೆ. ಧೈರ್ಯವನ್ನು ಕಳೆದುಕೊಂಡರೆ ಗೆಲ್ಲುವುದನ್ನೂ ಸೋಲಬೇಕಾಗುತ್ತದೆ. ಗಂಭೀರವಾದ ಚರ್ಚೆಯಲ್ಲಿ ನಿಮ್ಮ ಹಾಸ್ಯೊದರಜ್ಞೆಯು ಎಲ್ಲರನ್ನು ನಗಿಸುವುದು. ಸಂಕೀರ್ಣವಾದ ಕೆಲಸವನ್ನು ಸರಳ ಮಾಡಿಕೊಳ್ಳುವುದು ನಿಮಗೆ ಕರಗತವಾಗಲಿದೆ. ನಿಮ್ಮ ಸಮಯವು ವ್ಯರ್ಥ ಎಂದನಿಸಬಹುದು. ನಿಮಗೆ ಬರಬೇಕಾದ ಹಣವನ್ನು ಬಲವಂತವಾಗಿ ಪಡೆದುಕೊಳ್ಳುವಿರಿ. ನಿಮಗೆ ಸರಿಯಾದ ನಿರ್ಧಾರಕ್ಕೆ ಬರಲು ಕಷ್ಟವಾದೀತು. ಇಂದು ನಿಮ್ಮ ವ್ಯವಹಾರದಲ್ಲಿ ಬೇರೆಯವರ ಮಾತನ್ನು ಕೇಳಬೇಕಾಗಿಬರಬಹುದು. ವಿದೇಶದ ಕಡೆ ನಿಮ್ಮ ಗಮನವಿರಲಿದೆ. ಸುಪ್ತಪ್ರಜ್ಞೆಯು ಮುಂದಾಗುವುದನ್ನು ತಿಳಿಸುವುದು.
ಧನು ರಾಶಿ : ಹಿಂದೆ ಮಾಡಿದ ಖರ್ಚಿನ ತಪ್ಪಿಗೆ ಇಂದು ತಿಳಿವಳಿಕೆ ಬರಬಹುದು. ಇಂದು ನೀವು ಅಂದುಕೊಂಡಿದ್ದನ್ನು ಸಾಧಿಸಿಕೊಂಡು ನೆಮ್ಮದಿಯಿಂದ ನಿದ್ರಿಸುವಿರಿ. ಮಹಿಳೆಯರು ತಾಯಿಯಿಂದ ಲಾಭವನ್ನು ನಿರೀಕ್ಷಿಸುವರು. ಏನನ್ನಾದರೂ ಮಾಡಬೇಕು ಎಂಬ ನಿಮ್ಮ ಹಂಬಲ ಅತಿಯಾಗಿರುವುದು. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸುವಿರಿ. ಮಾತು ಕೊಟ್ಟಿದ್ದನ್ನು ಸ್ನೇಹಿತರು ನೆರವೇರಿಸಲಾರರು. ವೃತ್ತಿಯನ್ನು ಬಹಳ ಹಗುರಾಗಿ ಭಾವಿಸಿ ಕೆಲಸವನ್ನು ಮಾಡುವಿರಿ. ಸಮಯಕ್ಕೆ ಬೆಲೆ ಕೊಡುವುದು ಬಾರದು. ಕೆಲವನ್ನು ನೀವು ಸರಳೀಕರಿಸಿಕೊಳ್ಳುವುದು ಉತ್ತಮ. ಮಾತನ್ನು ಅಹಂಕಾರದಿಂದ ಮಾತನಾಡಿದಂತೆ ಕೇಳುವುದು. ಸಂಯಮವನ್ನು ಬೆಳೆಸಿಕೊಳ್ಳುವ ಅಗತ್ಯ ಅತಿಯಾಗಿ ಇರಲಿದೆ. ಎಲ್ಲವನ್ನೂ ಅನುಮಾನದ ದೃಷ್ಟಿಯಿಂದ ನೋಡುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಬೇಡ. ಅಧಿಕಾರಿಗಳಿಂದ ನಿಮಗೆ ಸರಿಯಾದ ಮಾಹಿತಿ ಲಭ್ಯವಾಗದು. ಹಲವಾರು ಗೊಂದಲಗಳು ನಿಮ್ಮ ಮನಸ್ಸಿನಲ್ಲಿ ಓಡಾಡಬಹುದು.
ಮಕರ ರಾಶಿ : ಇಂದಿನ ನಿಮ್ಮ ಅನಾರೋಗ್ಯದಿಂದ ವ್ಯಾಪಾರದಲ್ಲಿ ಉತ್ಸಾಹ ಕಡಿಮೆ ಆಗಲಿದೆ. ಇನ್ನೊಬ್ಬರಿಗೆ ಮಾಡುವ ಸಹಾಯದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ನಿಮ್ಮವರ ಪ್ರೀತಿಯಲ್ಲಿ ನೀವು ಮನಸೋಲುವಿರಿ. ನಿಮ್ಮ ಕೆಲಸವು ಶಿಸ್ತಿನದ್ದಾಗಿದ್ದು ಪ್ರಶಂಸೆಯೂ ಸಿಗಲಿದೆ. ನೀವು ಎಲ್ಲರ ನಡುವೆ ಅಂತರವನ್ನು ಕಾಯ್ದುಕೊಂಡು ವ್ಯವಹಾರವನ್ನು ನಡೆಸುವಿರಿ. ವಿದ್ಯಾಭ್ಯಾಸದ ತೊಂದರೆಯನ್ನು ಇನ್ನೊಬ್ಬರ ಮೂಲಕ ಸರಿಮಾಡಿಕೊಳ್ಳುವಿರಿ. ಬಂಧುಗಳ ಭೇಟಿಯಾಗಿ ಸಂತೋಷಪಡುವಿರಿ. ಕಷ್ಟವಾದರೂ ಕೆಲಸವನ್ನು ಮಾಡುವ ನಿಮ್ಮ ಒಪ್ಪಂದಕ್ಕೆ ಮೆಚ್ಚಿಗೆ ಸಿಗಲಿದೆ. ಹೂಡಿಕೆಯ ಹಣವನ್ನು ಪಡೆದುಕೊಳ್ಳುವಿರಿ. ನಿಮ್ಮ ಕೆಲಸಕ್ಕೆ ಮತ್ತಾರಿಗೋ ಹೆಸರು ಸಿಗಬಹುದು. ಕಾರ್ಯದ ಸ್ಥಳವನ್ನು ಒತ್ತಡದಿಂದ ಮುಕ್ತಮಾಡಿಕೊಳ್ಳಿ. ಉದ್ಯೋಗಕ್ಕಾಗಿ ಬಂದ ಬಂಧುವಿಗೆ ಮಾರ್ಗದರ್ಶನ ಮಾಡುವಿರಿ. ನೀವೇ ಅಸಹಕಾರ ತೋರಿದರೆ ನಿಮ್ಮ ಜೊತೆಗಾರರೂ ಹಿಂದೇಟು ಹಾಕುವರು.
ಕುಂಭ ರಾಶಿ : ನಿಮ್ಮ ಭಾವನೆಗಳನ್ನು ಇತರರು ಸುಲಭವಾಗಿ ಅರ್ಥಮಾಡಿಕೊಳ್ಳುವುದು ಕಷ್ಟ. ನೀವು ಕೆಲವು ಸಮಸ್ಯೆಗಳು ಇದ್ದರೂ ಅದನ್ನು ಬದಿಗೊತ್ತಿ ಏನೂ ಇಲ್ಲದವರ ತೋರುವಿರಿ. ಹೊಸ ವಿಚಾರವನ್ನು ಹುಡುಕುವುದು ನಿಮಗೆ ಪ್ರಿಯವಾದುದಾಗಿದೆ. ನೇರ ಮಾತುಗಳು ನಿಮಗೆ ಸಹಿಸಲು ಅಶಕ್ಯವಾದ ನೋವನ್ನು ಕೊಡಲಿದೆ. ನಿಮ್ಮ ದೌರ್ಬಲ್ಯಗಳನ್ನು ನೀವು ಮೀರುವುದು ಅಸಾಧ್ಯವಾಗಲಿದೆ. ನೀವು ಊಹಿಸದಷ್ಟು ಸಂಗಾತಿಯ ಸ್ವಭಾವವು ಇರುವುದಿಲ್ಲ. ಇದು ನಿಮಗೆ ಅನಂತರ ಬೇಸರವನ್ನು ತರಿಸಬಹುದು. ನಿಮ್ಮ ಕೆಲಸವು ಮುಂದಿನ ಅನೇಕರಿಗೆ ಉಪಯೋಗವಾಗುವುದು. ನಿಮ್ಮ ಮಾತುಗಳು ಅಸ್ಪಷ್ಟವಾಗಿ ಇರಲಿದೆ. ತಾಳ್ಮೆಯಿಂದ ನೀವು ಜಯಗಳಿಸುವಿರಿ. ಅಧಿಕ ಒತ್ತಡವನ್ನು ಇಂದು ನೀವು ಮಾಡಿಕೊಳ್ಳಲಾರಿರಿ. ಸ್ವತಂತ್ರ ನಿರ್ಧಾರವು ನಿಮಗೆ ಭಯ ಹುಟ್ಟಿಸೀತು. ಯಂತ್ರೋಪಕರಣಗಳು ದುರಸ್ತಿಗೆ ಬರಬಹುದು. ಯಾರಿಂದಲಾದರೂ ದುಷ್ಕೃತ್ಯಕ್ಕೆ ಪ್ರೇರಣೆ ಸಿಗಬಹುದು. ಅಶುಭ ಸೂಚನೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯದಲ್ಲಿ ಪ್ರವೃತ್ತರಾಗಿ.
ಮೀನ ರಾಶಿ : ಸಾಲದಿಂದ ಸ್ವಲ್ಪ ಸಮಾಧಾನ ಸಿಗಲಿದೆ. ಇದು ನಿಮ್ಮ ಆರೋಗ್ಯದ ಮೇಲೂ ಒಳ್ಳೆಯ ಪರಿಣಾಮವನ್ನು ಕೊಡುವುದು. ನೀವು ಉತ್ತಮ ಕ್ರಮವನ್ನು ರೂಢಿಸಿಕೊಳ್ಳಲು ಪ್ರಯತ್ನಿಸಿ. ಆದಾಯಕ್ಕಿಂತ ಅಧಿಕವಾದ ಖರ್ಚನ್ನು ನೀವು ತೋರಿಸುವಿರಿ. ನಿಮ್ಮ ಪರೀಕ್ಷೆಯ ಕಾಲವು ಇದಾಗಿದ್ದು ಎಚ್ಚರಿಕೆಯಿಂದ ಮಾತನಾಡಿ. ಗುರುಹಿರಿಯರಲ್ಲಿ ಶ್ರದ್ಧೆ, ಗೌರವದ ಅಗತ್ಯವಿದೆ. ನೇರ ನುಡಿಯಿಂದ ಶತ್ರುಗಳು ಹುಟ್ಟಿಕೊಂಡಾರು. ಸಮಯಸ್ಫೂರ್ತಿಯಿಂದ ಕೆಲಸವನ್ನು ಮಾಡುವಿರಿ. ದುರಭ್ಯಾಸದಿಂದ ನಿಮಗೆ ತೊಂದರೆಗಳು ಕಾಣಿಸಿಕೊಳ್ಳುವುದು. ಮನೆಯ ಸೇವಕನಿಂದ ನಿಮಗೆ ಕೆಲವು ನಷ್ಟವಾಗಲಿದೆ. ಸಂಗಾತಿಯ ಜೊತೆ ವಾಯುವಿಹಾರವನ್ನು ಮಾಡಿ ಸುಖಪಡುವಿರಿ. ಕರ್ತವ್ಯದ ವಿಚಾರದಲ್ಲಿ ಆಲಸ್ಯವೋ ಬೇಜವಾಬ್ದಾರಿಯೋ ಒಳ್ಳೆಯದಲ್ಲ. ಬಂಧುಗಳಿಂದ ಬೇಗ ಹಣವನ್ನು ಕೊಡುವುದಾಗಿ ಪಡೆಯುವಿರಿ. ಪುರುಷಪ್ರಯತ್ನದಿಂದ ಇಂದು ಹೆಚ್ಚು ಇರುವುದು.
-ಲೋಹಿತ ಹೆಬ್ಬಾರ್-8762924271 (what’s app only)
Published On - 12:00 am, Fri, 20 September 24