Horoscope: ದಿನಭವಿಷ್ಯ: ಇಂದು ಎಲ್ಲವೂ ವಿರುದ್ಧವಾಗಬಹುದು, ಯಾರ ಮೇಲೂ ದ್ವೇಷ ಬೇಡ
ರಾಶಿ ಭವಿಷ್ಯ ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮೇ 07 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ಆರ್ಥಿಕಸ್ಥಿತಿ ಸುಧಾರಣೆ, ನೆಚ್ಚಿನ ವ್ಯಕ್ತಿಯ ಭೇಟಿ ಮಾರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ 07) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಪ್ರೀತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ 15:40 ರಿಂದ 17:15ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:19 ರಿಂದ 10:54 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 14:04ರ ವರೆಗೆ.
ಧನು ರಾಶಿ: ನಿಮಗಾದ ವಂಚನೆಯನ್ನು ಸರಿ ಮಾಡಿಕೊಳ್ಳಲು ಕಾನೂನಿಗೆ ವಿರುದ್ಧವಾಗಿ ಹೋಗುವಿರಿ. ವ್ಯಾಪಾರದಲ್ಲಿ ಅಧಿಕಲಾಭವನ್ನು ಗಳಿಸಲಿದ್ದೀರಿ. ಸರ್ಕಾರಿ ಅಧಿಕಾರಿಗಳು ಸಂಕಷ್ಟದಲ್ಲಿ ಸಿಲುಕಿಕೊಳ್ಳುವರು. ತಂದೆ ಹಾಗೂ ತಾಯಿಯರ ಸೇವೆಯ ಅವಕಾಶ ಸಿಗುವುದು. ನಿಮ್ಮ ಪ್ರೇಮನಿವೇದನೆಯಿಂದ ನಕಾರಾತ್ಮಕ ಪ್ರತಿಕ್ರಿಯೆಗಳು ಬರಬಹುದು. ಯಾವುದೂ ನಿಮ್ಮ ಆಲೋಚನೆಗೆ ಅನುಸಾರವಾಗಿ ನಡೆಯುತ್ತಿಲ್ಲವೆಂಬ ಬೇಸರವೂ ಆಗಬಹುದು. ಬೇರೆಯವರಿಗೆ ನಿಮ್ಮ ಬಗ್ಗೆ ನಕಾರಾತ್ಮಕ ಭಾವವು ಇರಬಹುದು. ಗುರಿಯನ್ನು ಬದಲಿಸದೇ ಮುನ್ನಡೆಯುವಿರಿ. ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡುವಿರಿ. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ. ಆಪ್ತರ ಬಗ್ಗೆ ಇರುವ ನಕಾರತ್ಮಕ ಭಾವವನ್ನು ನೀವು ಅವರಿಗೆ ಹೇಳುವಿರಿ. ಭೂಮಿಯ ಉತ್ಪನ್ನದಿಂದ ಲಾಭವು ಸಿಗುವುದು. ಆತುರದಲ್ಲಿ ಯಾವ ನಿರ್ಧಾರವನ್ನೂ ಮಾಡದೇ ಯೋಚಿಸಿ ಮುಂದುವರಿಯಬೇಕಾಗುವುದು.
ಮಕರ ರಾಶಿ: ಇಂದು ನೀವು ಮಾಡಿದ ಪ್ರಯಾಣದಿಂದ ಸುಖವಿಲ್ಲ. ಹತಾಶೆಯಿಂದ ಹೊರಬಂದು ಒಳ್ಳೆಯ ಕಾರ್ಯದವನ್ನು ಮಾಡುವತ್ತ ಗಮನಹರಿಸಿ. ನಕಾರಾತ್ಮಕ ಭಾವನೆಗಳಿಗೆ ದಾರಿ ಮಾಡಿ ಕೊಡಬೇಡಿ. ಎಲ್ಲವನ್ನೂ ಸಮಾಧಾನಚಿತ್ತದಿಂದ ಸ್ವೀಕರಿಸುವುದನ್ನು ಇಂದಿನಿಂದ ಬೆಳೆಸಿಕೊಳ್ಳಿ. ಮಾನಸಿಕ ನೆಮ್ಮದಿಯೂ ಸಿಗುವುದು. ಜೀವನೂ ಸರಳವಾಗುವುದು. ಕುಟುಂಬದವರೊಂದಿಗೆ ನಗುತ್ತಾ ಇರಿ. ಕಾರ್ಯದ ಒತ್ತಡವು ಇಂದು ಅಧಿಕವಾಗಿರಲಿದೆ. ಆರೋಗ್ಯವನ್ನೂ ಗಮನಿಸಿಕೊಳ್ಳಿ. ನಿಮ್ಮ ಯೋಜನೆಯು ಪೂರ್ಣ ವ್ಯತ್ಯಾಸವಾದ ಕಾರಣ ಮನೆಯಲ್ಲಿ ಕಲಹವಾಡುವಿರಿ. ಸೂಕ್ತ ಪರಿಹಾರದ ಕಡೆ ಗಮನವಿರಲಿ. ನಿವೃತ್ತಿಯ ಅಂಚಿನಲ್ಲಿದ್ದು ನಡತೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಮನೆಮಂದಿಯವರ ಜೊತೆ ಸಿಟ್ಟಗೊಂಡರೆ ನಿಮಗೇ ತೊಂದರೆಯಾದೀತು. ನಿಮ್ಮ ಇಂದಿನ ಕಾರ್ಯದಿಂದ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು.
ಕುಂಭ ರಾಶಿ: ನಿಮ್ಮ ಯೋಜನೆಗೆ ಇಂದು ಎಲ್ಲವೂ ವಿರುದ್ಧವಾಗಬಹುದು. ಯಾರ ಮೇಲೂ ದ್ವೇಷವನ್ನು ಸಾಧಿಸುವುದು ಬೇಡ. ಮನಸ್ಸು ಕೆಡುತ್ತದೆಯಷ್ಟೇ. ಇನ್ನೊಬ್ಬರು ಆಡುವ ಮಾತುಗಳು ಅಸತ್ಯವೆನಿಸುವುದು. ನಿಮ್ಮವರನ್ನು ಪ್ರೀತಿಸಿ. ಆಗದಿದ್ದರೆ ಸುಮ್ಮನಿರಿ. ನಿಮಗೆ ಬರುವ ಹಣವಿಂದು ಬರಬಹುದು. ಸಂಗಾತಿಯ ಜೊತೆಗಿರುವ ಮನಸ್ತಾಪ ದೂರಾಗುವುದು. ನಿಮ್ಮ ಸಲಹೆಯನ್ನು ಕುಟುಂಬವು ತಿರಸ್ಕರಿಸಬಹುದು. ಇಷ್ಟವಾದ ವಸ್ತುಗಳನ್ನು ಖರೀದಿಸುವಿರಿ. ಉದ್ಯೋಗದ ಕಾರಣಕ್ಕೆ ದೂರಪ್ರಯಾಣವನ್ನು ಮಾಡುವಿರಿ. ಬಂಧುಗಳ ಒಡನಾಟ ನಿಮಗೆ ಸಿಗಲಿದೆ. ಸ್ನೇಹಿತರ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳುವಿರಿ. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ನೀವು ಖರೀದಿಸುವ ಭೂಮಿಯ ದಾಖಲೆಯನ್ನು ಸಮಾಧಾನಚಿತ್ತದಿಂದ ಕೂಲಂಕಷವಾಗಿ ಪರಿಶೀಲಿಸಿ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು.
ಮೀನ ರಾಶಿ: ನಿಮಗೆ ಯಾರಾದರೂ ಆಸರೆ ಬೇಕೆನಿಸಬಹುದು. ನಿಮ್ಮ ಬುದ್ಧಿ, ಮನಸ್ಸುಗಳಿಗೆ ಕೆಲಸವನ್ನು ಕೊಡಿ. ಸಂಗಾತಿಯ ಜೊತೆ ವಿವಾದವಾಗುವುದು. ಯಾವುದೇ ವಿವಾದವನ್ನು ಎಳೆದುಕೊಳ್ಳಬೇಡಿ. ಇಂದು ನಿಮಗೆ ಕೊಟ್ಟಿರುವ ಜವಾಬ್ದಾರಿಯನ್ನು ಯೋಗ್ಯರೀತಿಯಲ್ಲಿ ಮಾಡಿ ಮುಗಿಸುವಿರಿ. ಹಣವನ್ನು ಉಳಿಸಲು ಪ್ರಯತ್ನಿಸಿದಷ್ಟೂ ಅನಿರೀಕ್ಷಿತವಾದ ದಾರಿಯಲ್ಲಿ ಖರ್ಚಾಗುವುದು. ಆತಂಕ ಮತ್ತು ಉದ್ವೇಗ ಇರುತ್ತದೆ. ಪ್ರವಾಸದಿಂದ ಉತ್ಸಾಹವು ಹೆಚ್ಚಾಗುವುದು. ದುಷ್ಟ ಜನರಿಂದ ದೂರವಿರಿ. ದಾಂಪತ್ಯದ ವಾಗ್ವಾದವು ಅತಿರೇಕಕ್ಕೆ ಹೋಗಬಹುದು. ಮಿತ್ರರು ನಿಮ್ಮಆಸಕ್ತಿಯ ಕ್ಷೇತ್ರವನ್ನು ಬದಲಿಸಬಹುದು. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ನಿಮ್ಮ ಗುಣಗಳನ್ನು ಇತರರು ಆಡಿಕೊಳ್ಳಬಹುದು. ಪೋಷಕರನ್ನು ಕಡೆಗಣಿಸಿದ್ದು ನಿಮಗೆ ಪಾಪಪ್ರಜ್ಞೆ ಕಾಡಬಹುದು. ಕುಟುಂಬದಲ್ಲಿ ಸಂತಸದ ವಾತಾವರಣವು ಇರುವಂತೆ ಮಾಡುವಿರಿ.




