AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನಿತ್ಯ ಭವಿಷ್ಯ; ಯಾರ ಒತ್ತಾಯಕ್ಕೂ ಮಣಿದು ನಿಮ್ಮ ನಿರ್ಧಾರಗಳನ್ನು ಬದಲಿಸಿಕೊಳ್ಳಬೇಡಿ

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 07 ಮೇ​​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ನಿತ್ಯ ಭವಿಷ್ಯ; ಯಾರ ಒತ್ತಾಯಕ್ಕೂ ಮಣಿದು ನಿಮ್ಮ ನಿರ್ಧಾರಗಳನ್ನು ಬದಲಿಸಿಕೊಳ್ಳಬೇಡಿ
ಪ್ರಾನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: May 07, 2024 | 12:02 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ​​​​​ 07) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಪ್ರೀತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ 15:40 ರಿಂದ 17:15ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:19 ರಿಂದ 10:54 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:29 ರಿಂದ 14:04ರ ವರೆಗೆ.

ಮೇಷ ರಾಶಿ: ಇಂದು ನಿಮ್ಮ ಜೀವನ ಬಹಳ ಸುಂದರ ಎನಿಸುವುದು. ತೆರೆದರೆ ಬೆಳಕು, ತೆರೆಯದಿದ್ದರೆ ಕತ್ತಲು ಇರುತ್ತದೆ ಎನ್ನುವುದನ್ನು ಅರಿತುಕೊಳ್ಳಿ. ಸಂಗಾತಿಯ ಆಯ್ಕೆಯನ್ನು ನೀವೇ ಮಾಡಿ. ಶ್ರಮದಿಂದ ಸುಖವು ಪ್ರಾಪ್ತಿಯಾಗುವುದು. ವಿವೇಚನೆಯನ್ನು ಮೀರಿ ಕೆಲಸವನ್ನು ಮಾಡಬೇಡಿ. ನಿಮ್ಮ ಬಳಿ ಚಾಲೆಂಜ್ ಮಾಡಿದ್ದರೆ ನೀವು ಛಲವನ್ನು ಇಟ್ಟುಕೊಳ್ಳುವಿರಿ. ಬದಲಾವಣೆಯೇ ಶಾಶ್ವತ ಎನ್ನುವ ವಾಕ್ಯವನ್ನು ಸ್ಮರಿಸುತ್ತ ಮುಂದಡಿಯಿಡಿ. ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡಿ ಅವಮಾನಕ್ಕೆ ಒಳಗಾಗುವಿರಿ. ನೆಮ್ಮದಿ ನಿಮ್ಮೆದುರು ಇರಲಿದೆ. ದೇಹಕ್ಕೆ ವಿಶ್ರಾಂತಿಯ ಅವಶ್ಯಕತೆ ಇದ್ದರೂ ಸಮಯವು ಮಾತ್ರ ಸಿಗದೇಹೋದೀತು. ಹಿತಶತ್ರುಗಳಿಂದ ಸಣ್ಣ ಆಪತ್ತು ಬರಬಹುದು. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಜೊತೆ ದೂರ ಪ್ರಯಾಣ ಮಾಡುವಿರಿ. ನಿಮಗಿರುವ ಆಲಸ್ಯದ ಪಟ್ಟದಿಂದ ಕೆಳಗಿಳಿಯುವುದು ಅಸಾಧ್ಯ.

ವೃಷಭ ರಾಶಿ: ನಿಮ್ಮ ಗಟ್ಟಿಯಾದ ಸಂಕಲ್ಪವು ಯಶಸ್ಸಿನ ಗುಟ್ಟೂ ಆಗುವುದು. ಹಣವನ್ನು ಗಳಿಸುವ ಆಸೆಯು ತೀರ್ವವಾಗಿದ್ದರೂ ಸಫಲವಾಗುವುದಿಲ್ಲ‌. ಸಾಲದ ವಿಚಾರ ಬಂದರೆ ಮೌನವಹಿಸಿ, ಎದ್ದು ಹೋಗಿ ಅಥವಾ ವಿಷಯಾಂತರಿಸಿ. ಕಲಹಕ್ಕೆ ದಾರಿ ಮಾಡಿ ಕೊಡಬೇಡಿ. ಮನಸ್ಸು ದುರ್ಬಲವಾಗಿ, ಎಲ್ಲದಕ್ಕೂ ಬೇಸರ ಮಾಡಿಕೊಳ್ಳುವಿರಿ. ಪಿತ್ರಾರ್ಜಿತ ಸಂಪತ್ತು ನಿಮಗೆ ಇಂದು ಉಪಯೋಗಕ್ಕೆ ಬರಲಿದೆ. ಸಂಗಾತಿಯು ನಿಮ್ಮ ಮೇಲೆ ಬೇಸರಗೊಂಡಾನು. ವೃತ್ತಿಯಲ್ಲಿ ಕಿರಿಕಿರಿ ಅಧಿಕವಾಗಬಹುದು. ಮೆಚ್ಚುಗೆಯ ಮಾತುಗಳಿಂದ ದೂರವಾದ ಸಂಬಂಧವು ಹತ್ತಿರವಾಯಬಹುದು. ಸರಳ ಮಾರ್ಗದಿಂದ ಕೆಲಸವನ್ನು ಪೂರ್ಣ ಮಾಡಿಕೊಳ್ಳಿ. ಆರೋಗ್ಯದ ಬಗ್ಗೆ ಆತಂಕ ಬೇಡ. ವಿನೀತಭಾವವು ನಿಮ್ಮನ್ನು ಇಷ್ಟಪಡುವಂತೆ ಮಾಡಬಹುದು. ಉದ್ಯೋಗದಲ್ಲಿ ನೀವು ಪ್ರಗತಿಯನ್ನು ಸಾಧಿಸುವಿರಿ. ಪಶ್ಚಾತ್ತಾಪವು ನಿಮ್ಮ ನೋವನ್ನು ಪರಿಹರಿಸೀತು.

ಮಿಥುನ ರಾಶಿ: ಅಪರೂಪಕ್ಕೆ ಸಿಕ್ಕ ಸ್ನೇಹಿತರು ನಿಮ್ಮ ಬಳಿ ಹಣವನ್ನು ಖಾಲಿ‌ಮಾಡಿಸಬಹುದು. ದಾಂಪತ್ಯಜೀವನವು ಜೀವನ್ಮರಣದ ಮಧ್ಯದಲ್ಲಿ ಒದ್ದಾಗುತ್ತಿದ್ದು ಬದುಕಿಸಿಕೊಳ್ಳಿ. ಇನ್ನೊಂದು ಜೀವವನ್ನು ಗರ್ಭದಲ್ಲಿ ಹೊತ್ತಿರುವವರು ನಡಿಗೆಯಲ್ಲೂ ಮನಸ್ಸಿನಲ್ಲೂ ಮಾತಿನಲ್ಲೂ ಎಚ್ಚರ, ಸಮಾಧಾನದಿಂದ ಇರಿ. ನಿಮ್ಮ ನ್ಯೂನತೆಗಳನ್ನು ಇನ್ನೊಬ್ಬರ ಬಾಯಿಗೆ ಸಿಕ್ಕ ರಸಗವಳದಂತೆ ಚಪ್ಪರಿಸಿ ಸೇವಿಸುತ್ತಿರುತ್ತಾರೆ. ಹೊಸ ವಸ್ತುಗಳನ್ನು ಹಾಳುಮಾಡಿಕೊಳ್ಳುವಿರಿ. ಉದ್ಯೋಗವನ್ನು ಬದಲಿಸಿದ ಕಾರಣ ಸಮಯವು ಓಡಾಟದಲ್ಲಿ ವ್ಯರ್ಥವಾಗಬಹುದು. ಸಾಮಾಜಿಕ ಕಾರ್ಯಕ್ಕೆ ನಿಮಗೆ ಪ್ರಶಂಸೆಯು ಸಿಗುವುದು. ಕಛೇರಿಯಲ್ಲಿ ಕೆಲವರ ವರ್ತನೆಯು ಬದಲಾದಂತೆ ತೋರುವುದು. ನಿಮಗೆ ಇಷ್ಟವಾದದನ್ನು ಪಡೆಯುವುದು ಕಷ್ಟವಾಗುವುದು.

ಕಟಕ ರಾಶಿ: ಇಂದು ಅನವಶ್ಯಕ ಖರ್ಚಿನ ಕಡೆ ಗಮನ ಬೇಕು. ಹೆಚ್ಚು ಕೋಪವನ್ನು ತೋರಿಸಲಿದ್ದೀರಿ‌. ಯಾರ ಒತ್ತಾಯಕ್ಕೋ ಮಣಿದು ನಿಮ್ಮ ನಿರ್ಧಾರಗಳನ್ನು ಬದಲಿಸಿಕೊಳ್ಳಬೇಡಿ. ಹಿಡಿದ ಕೆಲಸವನ್ನು ಬಿಡದೆ ಮುನ್ನಡೆಸುವ ಜಾಯಮಾನವು ನಿಮ್ಮ ಇಂದಿನ ಯಶಸ್ಸಿನ ಗುಟ್ಟುಗಳಲ್ಲೊಂದು. ಎಂತಹ ಸಂದರ್ಭದಲ್ಲಿಯೂ ಉದ್ವೇಗಕ್ಕೆ ಒಳಗಾಗಬೇಡಿ. ಹೂಡಿಕೆಯ ಬಗ್ಗೆ ನಿಮಗೆ ಸರಿಯಾದ ಮಾಹಿತಿಯ ಕೊರತೆ ಇರುವುದು. ಇಂದು ನಿಮ್ಮ ನಕಾರಾತ್ಮಕ ಭಾವನೆಗಳು ಹೆಚ್ಚಿರುವುದು. ಉಸಿರಾಟದ ತೊಂದರೆಯನ್ನು ಗಂಭೀರವಾಗಿ ಪರಿಗಣಿಸಬೇಕಾದೀತು. ನಿಮ್ಮ ಸಂತೋಷವನ್ನು ವ್ಯಕ್ತಪಡಿಸುವ ವಿಧಾನವು ವಿಭಿನ್ನವಾಗಿರಲಿದೆ. ಯಾವ ನೋವನ್ನೂ ನಿರ್ಲಕ್ಷಿಸುವುದು ಬೇಡ. ನಿಮ್ಮಿಂದ ಉಪಕಾರವನ್ನು ಕೇಳಿ ಬರಬಹುದು. ಅಪರಿಚಿತರ ಕರೆಯಿಂದ ಚಿಂತೆಯಾಗವುದು.