Daily Horoscope 30 August 2024: ಯಾರದೋ ಮೂಲಕ ನಿಮಗೆ ಅಪಾಯದ ಸೂಚನೆ ಬರಬಹುದು-ಎಚ್ಚರ

ಆಗಸ್ಟ್​ 30,​ 2024ರ​​ ನಿಮ್ಮ ರಾಶಿಭವಿಷ್ಯ: ನಿಮ್ಮ ಚಟುವಟಿಕೆಗಳನ್ನು ಬೇರೆಯವರು ಗಮನಿಸುವರು. ಉದ್ಯೋಗವನ್ನು ಬದಲಾಯಿಸಲು ಆಲೋಚಿಸುವಿರಿ. ಬಿಡುವಿನ ಸಮಯವನ್ನು ಸದುಪಯೋಗ ಮಾಡಿಕೊಳ್ಳುವುದು ಉತ್ತಮ. ಹಾಗಾದರೆ ಆಗಸ್ಟ್​ 30ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope 30 August 2024: ಯಾರದೋ ಮೂಲಕ ನಿಮಗೆ ಅಪಾಯದ ಸೂಚನೆ ಬರಬಹುದು-ಎಚ್ಚರ
ರಾಶಿ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 30, 2024 | 12:01 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಆಗಸ್ಟ್​ 30) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ವ್ಯತಿಪಾತ್, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:44 ಗಂಟೆ, ರಾಹು ಕಾಲ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:33, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ ಸಂಜೆ 05:12ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:54 ರಿಂದ 09:27ರ ವರೆಗೆ.

ಮೇಷ ರಾಶಿ : ಕೆಲವು ಸಂಗತಿಗಳ ವಿಚಾರದಲ್ಲಿ ನೀವು ಗೊತ್ತಿಲ್ಲದಂತೆ ಇರುವುದು ಒಳ್ಳೆಯದು. ಅಸೂಯೆಯು ನಿಮ್ಮ ಸೃಜನಾತ್ಮಕತೆಗೆ ತೊಂದರೆ ಕೊಡುವುದು. ಸಾಮರಸ್ಯದ ಕೊರತೆಯಿಂದ ಮನಸ್ಸು ಉದ್ವೇಗಕ್ಕೆ‌ ಒಳಗಾಗಬಹುದು. ನಿಮಗೆ ಇನ್ನಷ್ಟು ವಿದ್ಯಾಭ್ಯಾಸದ ಅವಶ್ಯಕತೆ ಬೇಕು ಎನಿಸಲಿದೆ. ಉಚಿತವಾದುದನ್ನು ಪಡೆದುಕೊಳ್ಳಲು ಪ್ರಯತ್ನಿಸುವಿರಿ. ನಿಮಗೆ ಬೇಕಾದವರಲ್ಲಿ ಮಾತ್ರ ಸಹಾಯ ಕೇಳಬಹುದು. ಕಡೆಗಣಿಸಿದ ಕಾರಣಕ್ಕೆ ಸಿಟ್ಟಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ವಲ್ಪ ಆಲಸ್ಯವು ಇರಲಿದ್ದು ಕೆಲಸಗಳು ನಾಳೆಗೆ ಉಳಿದುಕೊಳ್ಳುವುದು. ಸಂಗಾತಿಯು ಸಂಕಟಪಡುತ್ತಿದ್ದು ನಿಮ್ಮಿಂದ ಸಾಂತ್ವನ ಸಿಗಬೇಕಿದೆ. ಸಿಗಬೇಕಾದ ಲಾಭವು ಕೈ ತಪ್ಪಿ ಹೋಗುವ ಸಾಧ್ಯತೆ ಇದೆ. ಯಾವುದನ್ನಾದರೂ ಪರಸ್ಪರ ಮಾತುಕತೆಯ ಮೂಲಕ‌ ಪರಿಹಾರವನ್ನು ಕಂಡುಕೊಳ್ಳಬೇಕಾಗುವುದು. ಸಾಮರಸ್ಯದ ಅಭಾವವು ದ್ವೇಷಕ್ಕೆ ಕಾರಣವಾಗಬಹುದು.

ವೃಷಭ ರಾಶಿ : ನಿಮಲ್ಲಿ ಎಲ್ಲವೂ ಇದ್ದರೂ ಕೊರತೆ ಎಂಬಂತೆ ಇರುವಿರಿ. ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಯಾರದೋ ಮೂಲಕ ನಿಮಗೆ ಅಪಾಯದ ಸೂಚನೆ ಬರಬಹುದು. ನಿಮ್ಮ ನಿಷ್ಪಕ್ಷಪಾತ ನಿಲುವು ಕೆಲವರಿಗೆ ಇಷ್ಟವಾಗದೇ ಹೋಗಬಹುದು. ನಿರ್ಮಾಣ ಹಂತದ ಕೆಲಸಗಳು ನಿಧಾನಗತಿಯಲ್ಲಿ ಸಾಗಬಹುದು. ನಿಮ್ಮ ಶೋಧನೆಗೆ ಸರಿಯಾದ ದಿಕ್ಕು ಸಿಗದೇ ಕಷ್ಟವಾದೀತು. ನಿಮ್ಮ ಪೂರ್ವನಿರ್ಧಾರಿತ ಪ್ರಯಾಣವನ್ನು ಮುಂದೂಡುವಿರಿ. ಖುಷಿ‌ಪಡುವ ಸಂಗತಿಗಳನ್ನು ಬಿಟ್ಟು ನಕಾರಾತ್ಮಕವಾಗಿ ಆಲೋಚಿಸುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಲು ಶ್ರಮಿಸುವಿರಿ. ಕಷ್ಟವಾದರೂ ಕೆಲವನ್ನು ಇಷ್ಟಪಡಬೇಕಾದೀತು. ಬರಲಿರುವ ಜವಾಬ್ದಾರಿಯನ್ನು ಜಾಣತನದಿಂದ ತಪ್ಪಿಸಿಕೊಳ್ಳುವಿರಿ. ನಿಮ್ಮ ಹೊಣೆಗಾರಿಕೆ ಕಡಿಮೆ ಆದಂತೆ ಅನ್ನಿಸುವುದು. ಆಪ್ತರನ್ನು ನೀವು ಕಳೆದುಕೊಳ್ಳುವ ಸಾಧ್ಯತೆ ಇದೆ. ಅನ್ಯರ ಜೊತೆ ಸಮಾನಸ್ಥಾನವನ್ನು ಗಳಿಸುವುದು ಕಷ್ಟವಾಗುವುದು. ನಿಮಗೆ ಸಿಕ್ಕ ಸ್ಥಾನಕ್ಕೆ ಬೆಲೆ ಕೊಡಿ.

ಮಿಥುನ ರಾಶಿ : ಇಂದು ನಿಮ್ಮ ಮಕ್ಕಳ ವಿಚಾರದಲ್ಲಿ ನಿಮಗೆ ಬೇಸರವಾಗಲಿದೆ. ಪಾಲುದಾರಿಕೆಯಿಂದ ನೀವು ನಿಶ್ಚಿಂತರೆಂಬ ಭಾವ ಬರಬಹುದು. ಸ್ನೇಹಿತರಿಗೆ ಧನಸಹಾಯವನ್ನು ಮಾಡುವಿರಿ. ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಕ್ಕಿ ಅವರ ಜೊತೆ ಮಾತಮಾಡುವಿರಿ. ಪೂರ್ವಪುಣ್ಯದಿಂದ ದೊಡ್ಡ ಅಪಾಯವೊಂದು ತಪ್ಪಿಹೋಗುವ ಸಂಭವವಿದೆ. ತಿಳಿವಳಿಕೆಯು ಕಡಿಮೆ ಎನ್ನುವುದು ನಿಮಗೇ ಗೊತ್ತಾಗಿ ಆ ಕುರಿತು ಪ್ರಯತ್ನ ಮಾಡುವಿರಿ. ಕೃಷಿಯು ನಿಮ್ಮ ಆಸಕ್ತಿಯ ಕ್ಷೇತ್ರವಾಗುವುದು. ಸಂಗಾತಿಯ ಜೊತೆ ಹರಟೆ ಹೊಡೆಯುತ್ತ ಕಾಲಕಳೆಯುವಿರಿ. ತಂದೆಯಿಂದ ಅಸಮಾಧಾನದ ಮಾತುಗಳನ್ನು ಕೇಳುವಿರಿ.‌ ಸ್ಪರ್ಧಾಮನೋಭಾವವು ನಿಮ್ಮನ್ನು ಎಚ್ಚರಿಸುವುದು. ನೀವು ಪ್ರೇಮಿಗಳಿಗೆ ದೂರವಾಗುವ ಸಾಧ್ಯತೆ ಇದೆ. ಅಹಂಕಾರದ ಮಾತುಗಳು ಇತರರಿಗೆ ಹಿಂಸೆಯಾದೀತು. ಏಕಾಗ್ರತೆಯನ್ನು ಬೆಳೆಸಿಕೊಳ್ಳಲು ಅಭ್ಯಾಸ ಮಾಡುವಿರಿ. ಏಕಕಾಲಕ್ಕೆ ಎಲ್ಲವೂ ನಿಮ್ಮದಾಗದು.

ಕರ್ಕಾಟಕ ರಾಶಿ : ನಿಮಗೆ ಅವಶ್ಯಕ ವಸ್ತುಗಳ ಬಗ್ಗೆ ಅತಿಯಾದ ಇಚ್ಛೆ ಇರಲಿದೆ. ಅನಾರೋಗ್ಯದಿಂದ ನಿಮ್ಮ ಕಾರ್ಯದಲ್ಲಿ ಲವಲವಿಕೆ ಇಲ್ಲವಾದೀತು. ಪಾಲುದಾರಿಕೆಯು ಕಲಹದಲ್ಲಿ ಕೊನೆಯಾಗುವುದು. ವೃತ್ತಿಪರರು ಕಛೇರಿಯಲ್ಲಿ ಸಮಸ್ಯೆಯಲ್ಲಿ ಸಿಕ್ಕಿಕೊಳ್ಳುವರು. ನಿಮ್ಮ ಅಭ್ಯಾಸವು ಮುಂದುವರಿಯುವುದು ಉತ್ತಮ. ನಿಮಗೆ ಸಿಗುವ ಸಂಗಾತಿಯು ಬಹಳ ಬುದ್ಧಿವಂತನಾಗಿರುವನು. ಧಾರ್ಮಿಕ‌ಕ್ಷೇತ್ರಗಳಿಗೆ ಹೋಗಿ ನಿಮ್ಮ ಹರಕೆಯನ್ನು ಒಪ್ಪಿಸಿ ಬರುವಿರಿ. ಸದ್ದಿಲ್ಲದೇ ನಿಮ್ಮ‌ ಪ್ರಚಾರಗಳನ್ನು ಶತ್ರುಗಳು ಮಾಡುವರು.‌ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಲಾಗದು. ನಿಮ್ಮ ಸ್ವಭಾವದಲ್ಲಿ ಆದ ಬದಲಾವಣೆಯುಂದ ಅಚ್ಚರಿಯಾದೀತು. ಎಲ್ಲ ಸಮಯಕ್ಕೂ ನಿಮಗೆ ಸಹಕಾರ ಸಿಗುತ್ತದೆ ಎಂಬ ಯೋಚನೆ ಬೇಡ. ನಿಮ್ಮದಲ್ಲದ್ದನ್ನು ನಿಮ್ಮದೆಂದು ವಾದಿಸಲು ಹೋಗಬೇಡಿ. ಇಂದಿನ ಕಛೇರಿಯ ಕೆಲಸಕ್ಕೆ ಸಮಯ ಮಿತಿ ಇರುವುದು.

ಸಿಂಹ ರಾಶಿ : ಇಂದು ನಿಮ್ಮ ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ. ತಪ್ಪಿಗೆ ನೀವು ಸಮಜಾಯಿಷಿ ಕೊಟ್ಟು ತಪ್ಪಿಸಿಕೊಳ್ಳುವಿರಿ. ಆಲಸ್ಯದಿಂದ ಇಂದು ಕಛೇರಿಗೆ ವಿಳಂಬವಾಗಿ ಹೋಗುವಿರಿ. ಇದು ವೃತ್ತಿಜೀವನ ಮೊದಲ ಕಪ್ಪುಚುಕ್ಕೆಯಾಗಲಿದೆ. ಒತ್ತಾಯ ಪೂರ್ವಕವಾಗಿ ಯಾರನ್ನೂ ಇಟ್ಟಕೊಳ್ಳುವ ಕೆಲಸಕ್ಕೆ ಹೋಗಬೇಡಿ. ವಿವಾಹವಾಗಬೇಕೆಂಬ ಆತುರ ಬೇಡ. ಉತ್ತಮ ಕುಲದವರು ಬಾಳಸಂಗಾತಿಯು ಆಗಬಹದು. ತಾಳ್ಮೆಯಿಂದ ಕಾಯುವುದು ಅವಶ್ಯಕ. ಆತುರದ ಕೈಗೆ ಬುದ್ಧಿಯನ್ನು ಕೊಡುವುದು ಬೇಡ. ಪರಪುರುಷರ ಜೊತೆ ಮಾತನಾಡುವುದನ್ನು ಸ್ವಲ್ಪ ಕಡಿಮೆ‌ ಮಾಡಿ. ಇನ್ನೊಬ್ಬರ ವಿಚಾರದಲ್ಲಿ ಆಸಕ್ತಿಯು ಹೆಚ್ಚಿರುವುದು. ಯೋಗ್ಯವಾದ ಮಾತುಗಳಿಂದ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ. ವ್ಯಾಪರಕ್ಕೆ ಸಂಬಂಧಿಸಿದಂತೆ ನಿಮಗೆ ಆದಾಯ ಕಡಿಮೆ ಆಗಬಹುದು.ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಮಿತ್ರರಿಂದ ಆಪತ್ಕಾಲದಲ್ಲಿ ಸಹಕಾರ ಸಿಗಲಿದೆ.

ಕನ್ಯಾ ರಾಶಿ : ನಿಮ್ಮ ಮೇಲೆ ಕಳ್ಳತನದ ಮಾತುಗಳು ಕೇಳಿಬರಬಹುದು. ಪರಿಚಿತರೇ ನಿಮ್ಮನ್ನು ಅಪರಿಚಿತರಂತೆ ಮಾತನಾಡಬಹುದು. ನಿಮ್ಮ ಶುದ್ಧ ನಡತೆಯು ಎಲ್ಲವನ್ನೂ ಮಾಡಿಸೀತು. ಸಂಗಾತಿಯಿಂದ ಉಡುಗೊರೆಯನ್ನು ಪಡೆಯುವಿರಿ. ಸ್ವಲ್ಪ ಆದಾಯವೂ ನಿಮಗೆ ಸುಖವನ್ನು ಕೊಡುವುದು. ವಿವಾಹದ ವಿಚಾರವನ್ನು ತಂದೆಯೇ ನಿಮ್ಮ ಬಳಿ‌ ಮಾತನಾಡಬಹುದು. ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ತಯಾರಿಸಿಕೊಳ್ಳುವುದು ಕಷ್ಟವಾದೀತು. ಬೋಧಕ ವರ್ಗದವರು ಜೊತೆಗಾರರ ಬಳಿ ಹೊಂದಾಣಿಕೆ ಮಾಡಬೇಕಾಗುವುದು. ಅಧಿಕಾರಿಗಳ ಜೊತೆ ನಿಮ್ಮ ವರ್ತನೆಯ ನಿಮ್ಮ ಬೆಳವಣಿಗೆಗೆ ಪೂರಕವಾಗಿರಲಿದೆ. ಬದಲಾದ ವಾತಾವರಣದಿಂದ ದೇಹಕ್ಕೆ ತೊಂದರೆಯಾಗಬಹುದು. ನಿಮ್ಮ ಸ್ಥಾನವನ್ನು ಕಳೆದುಕೊಳ್ಳುವುದು ಬೇಡ. ನೌಕರರಿಂದ ನಿಮಗೆ ಕಷ್ಟವಾಗಲಿದೆ. ಹಿತಶತ್ರುಗಳ ಪಿತೂರಿಯು ನಿಮ್ಮ ಶ್ರೇಯಸ್ಸಿಗೆ ತೊಂದರೆಯನ್ನು ಮಾಡೀತು.

ತುಲಾ ರಾಶಿ : ನೀವು ಪಾಲುದಾರಿಕೆಯನ್ನು ಬಿಡುವ ಬಗ್ಗೆ ಯೋಚಿಸುವಿರಿ. ಕಾರ್ಯಗಳನ್ನು ಮುಂದೂಡಿ ನಿಮಗೆ ಬೇಸರವಾಗಬಹುದು. ನಿಮ್ಮೊಳಗೆ ಹತ್ತಾರು ದ್ವಂದ್ವಗಳು ಇರಲಿವೆ. ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಕುಗ್ಗಿಸಬಹುದು. ಕೆಲವರ ಮಾತಗಳನ್ನು ಯಾವ ರೀತಿಯಲ್ಲಿ ತೆಗೆದುಕೊಳ್ಳಬಹುದು ಎಂಬ ಗೊಂದಲ ಕಾಡಬಹುದು. ಆದಷ್ಟು ಸಕಾರಾತ್ಮಕವಾಗಿ ಯೋಚಿಸಲು ಪ್ರಯತ್ನಿಸಿ. ಮನಸ್ಸನ್ನು ಖಾಲಿ ಇಡದೇ ಸದ್ವಿಚಾರಗಳಲ್ಲಿ ತೊಡಗಿಸಿ. ಕೂಡಿಟ್ಟ ಸ್ವಲ್ಪ‌ ಹಣವು ನಿಮಗೆ ಸಿಗಬಹುದು. ಸಣ್ಣ ಆರೋಗ್ಯವನ್ನೂ ನೀವು ದೊಡ್ಡದಾಗಿ ಮಾಡಿಕೊಳ್ಳುವಿರಿ. ನಿಮ್ಮನ್ನು ನೀವು ಸಮರ್ಥಿಸಿಕೊಳ್ಳುವುದಾದರೂ ಯಾರ ಬಳಿ ಎನ್ನುವುದೂ ಮುಖ್ಯವಾಗಿರುವುದು. ಸಮಾಜದ‌ ಕೆಲಸಗಳನ್ನು ಸಣ್ಣ ಪ್ರಮಾಣದಲ್ಲಿ ಮಾಡುವಿರಿ. ನಿಮ್ಮ ಸ್ವಭಾವವು ಇತರರಿಗೂ ಗೊತ್ತಾದೀತು. ನಿಮ್ಮ ಗೌರವಕ್ಕೆ ತೊಂದರೆಯಾಗುವುದು. ವಾತಾವರಣದ ವ್ಯತ್ಯಾಸದ ಕಾರಣ ನೀವು ಉದ್ವೇಗದಲ್ಲಿ ಇರುವಂತೆ ಕಾಣಿಸುವುದು.

ವೃಶ್ಚಿಕ ರಾಶಿ : ಇಂದು ನಿಮ್ಮ ಪರಿಶ್ರಮದ ಬಗ್ಗೆ ಹೆಚ್ಚು ವಿಶ್ವಾಸವಿರಲಿದೆ. ಸ್ವಾವಲಂಬಿಯಾಗಲು ಎಲ್ಲ ರೀತಿಯಿಂದ ಪ್ರಯತ್ನಿಸುವಿರಿ. ಎಲ್ಲದಕ್ಕೂ ನೀವು ಇಂದು ಆಕರ್ಷಿತರಾಗುವಿರಿ. ಎಲ್ಲ ವಿಚಾರವನ್ನೂ ಆಮೂಲಾಗ್ರವಾಗಿ ತಿಳಿಯಬೇಕು ಎಂಬ ಹಂಬಲವಿರುವುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಗಿಸಿ ಕಾರ್ಯದಲ್ಲಿ ತೊಡಗುವರು. ಹಿರಿಯರ ಆಚರಣೆಗಳನ್ನು ಅಲ್ಲಗಳೆಯುತ್ತ ಆಚರಿಸುವಿರಿ. ನಿಮ್ಮ ಪ್ರಾಮಾಣಿಕ ಪ್ರಯತ್ನವು ಕಾಡುವುದು. ಇಂದು ನಿಮ್ಮ‌ ಕನಸು ನನಸಾಗಿಲ್ಲ ಎಂಬ ದುಃಖವು ಇರಲಿದೆ. ವಿಜ್ಞಾನಕ್ಷೇತ್ರದಲ್ಲಿ ಶೋಧಿಸುವವರಿಗೆ ಹೆಚ್ಚಿನ‌ ಅನುಕೂಲತೆಗಳು ಇರಲಿವೆ. ಯಾರ ಮಾತನ್ನೂ ಕೇಳದೇ ಸ್ವೇಚ್ಛೆಯಾಗಿ ಇರುವುದು ನಿಮಗೆ ಇಷ್ಟದ ಸಂಗತಿಯಾಗಲಿದೆ. ಚಿತ್ತವನ್ನು ಸಮಾಧಾನದಲ್ಲಿ ಇಟ್ಟುಕೊಳ್ಳುವುದು ಉತ್ತಮ. ನಿರ್ಮಾಣದ ಕಾರ್ಯದಲ್ಲಿ ನಿಮಗೆ ಯಶಸ್ಸು ಸಿಗುವುದು. ಉದ್ಯೋಗದ ಸ್ಥಳದಲ್ಲಿ ನಿಮ್ಮ ಶಿಸ್ತಿನ ಹಾಗೂ ವೇಗದ ಕೆಲಸವನ್ನು ಕಂಡು ಪ್ರಶಂಸಿಸುವರು. ಅಗ್ಗದ ಬೆಲೆಗೆ ವಸ್ತುವನ್ನು ಕೊಂಡು ಹಾಳು ಮಾಡಿಕೊಳ್ಳುವಿರಿ.

ಧನು ರಾಶಿ : ಇಂದು ನೀವು ಮನೆಯನ್ನು ಸುಂದರವಾಗಿಡಲು ತೊಡಗುವಿರಿ. ವ್ಯವಹಾರದಲ್ಲಿ ನಿಮಗೆ ಇಂದು ನಿಮಗೆ ನಿಂದನೆ ಸಿಗಬಹುದು. ಇಂದು ನಿಮಗೆ ಶ್ರೇಷ್ಠವ್ಯಕ್ತಿಗಳ ಸಹವಾಸ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಇಂದು ಬಂಧುಗಳು ನಿಮ್ಮ ಮನೆಯಲ್ಲಿ‌ ಇರುವರು. ದುರಭ್ಯಾಸದಿಂದ ದೂರವಿರುವುದು ಉತ್ತಮ. ನಿಮಗೆ ಇಷ್ಟವಾಗದ ಸಂಗತಿಗಳೇ ಮತ್ತೆ ಮತ್ತೆ ಕೇಳಿಬರಬಹುದು. ನಿಮ್ಮ ಚಟುವಟಿಕೆಗಳನ್ನು ಬೇರೆಯವರು ಗಮನಿಸುವರು. ಉದ್ಯೋಗವನ್ನು ಬದಲಾಯಿಸಲು ಆಲೋಚಿಸುವಿರಿ. ಬಿಡುವಿನ ಸಮಯವನ್ನು ಸದುಪಯೋಗ ಮಾಡಿಕೊಳ್ಳುವುದು ಉತ್ತಮ. ಉಪಕಾರದ ಸ್ಮರಣೆಯು ನಿಮ್ಮಲ್ಲಿ ಇರದು. ಚಂಚಲವಾದ ಮನಸ್ಸನ್ನು ಒಮ್ಮೆಲೇ ಪಕ್ವಗೊಳ್ಳದು. ನಿಮ್ಮ ವಿದ್ಯೆಯನ್ನು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳುವಿರಿ. ನಿಮ್ಮ ಕಷ್ಟಕ್ಕೆ ಬಂದವರು ನಿಮ್ಮ ಆಪ್ತರಾಗಬಹುದು. ಸಮಾಧಾನದಿಂದ ಆಲೋಚಿಸಲು ನಿಮಗೆ ಬಾರದು. ಮಾತನಾಡುವಾಗ ಜಾಣತನದ ಅವಶ್ಯಕತೆ ಇರುವುದು.

ಮಕರ ರಾಶಿ : ಇಂದು ನೀವು ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಲು ಕಷ್ಟವಾಗುವುದು. ಯಾವುದೇ ಕಾರಣಕ್ಕೆ ಹತಾಶರಾಗಂತೆ ನೋಡಿಕೊಳ್ಳುವುದು ನಿಮಗೆ ಬಿಟ್ಟಿದು.‌ ಒತ್ತಡವನ್ನು ಪರಿಹರಿಸಿಕೊಳ್ಳಲು ದೂರದ ಊರಿಗೆ ಹೋಗುವಿರಿ. ವಿವಾಹಕ್ಕೆ ಬೇಕಾದ ತಯಾರಿಯಲ್ಲಿ ನೀವಿರುವಿರಿ. ಸಂಗಾತಿಯ‌ ಜೊತೆ ಪ್ರಯಾಣವನ್ನು ಇಚ್ಛಿಸುವಿರಿ. ಸರ್ಕಾರಿ ಕೆಲಸಕ್ಕಾಗಿ ನೀವು ಅರ್ಜಿಯನ್ನು ಸಲ್ಲಿಸುವಿರಿ. ಭೂಮಿಯ ವ್ಯವಹಾರದಿಂದ ಸ್ವಲ್ಪ ಲಾಭವನ್ನು ಗಳಿಸುವಿರಿ. ಕೃಷಿಯಲ್ಲಿ ಪ್ರಯೋಗಗಳನ್ನು ಹೆಚ್ಚು ಮಾಡುವಿರಿ. ನಿಮ್ಮನ್ನು ಉನ್ನತ ಸ್ಥಾನಕ್ಕೆ ಏರಿಸುವ ಸಾಧ್ಯತೆ ಇದೆ. ಹಳೆಯ ದ್ವೇಷವನ್ನು ಮುಂದುವರಿಸುವುದು ಬೇಡ. ಸಾಮರಸ್ಯದಿಂದ ಬದುಕುವುದನ್ನು ಇಷ್ಟಪರುವಿರಿ. ಸಣ್ಣ ವಿಚಾರಗಳ ಬಗ್ಗೆ ಗಮನವಿರದು. ಅದೇ ದೊಡ್ಡದಾಗಬಹುದು. ತಂದೆಯ ಪ್ರೀತಿ ಸಿಗಲಿದೆ. ನಿಮ್ಮ ಬಗ್ಗೆ ನಿಮಗೆ ಹೆಮ್ಮೆ ಬರುವುದು. ಕೊನೆಗೆ ಅನುಭವಿಸುವವರು ತಾವೇ ಆಗಿರುತ್ತೀರಿ. ಆಸ್ತಿಯ ಖರೀದಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸರಿಯಾಗಿ ಪಡೆಯಿರಿ.

ಕುಂಭ ರಾಶಿ : ಇಂದು ನೀವು ಎಲ್ಲವನ್ನೂ ಶಕ್ತಿಮೀರಿ ಕಾರ್ಯದಲ್ಲಿ ಪ್ರಯತ್ನಶೀಲರಾಗುವಿರಿ. ಕಾರಣಾಂತರಗಳಿಂದ ನಿಮ್ಮ ಉದ್ಯೋಗದಲ್ಲಿ ತೊಂದರೆಯಾಗಲಿದೆ. ಹೊಸಬರನ್ನು ಪರಿಚಯಿಸಿಕೊಳ್ಳುವ ಹಂಬಲವು ಇರುವುದು. ನಿಮ್ಮ ಮೇಲೆ‌ ಕೆಟ್ಟ ದೃಷ್ಟಿಯು ಬೀಳುವ ಸಾಧ್ಯತೆ ಇದೆ. ಮನೆಯ ಕಾರ್ಯದಲ್ಲಿ ನೀವು ಭಾಗಿಯಾಗುವಿರಿ. ನಿಮ್ಮ ಮಾತನ್ನು ಕೇಳದೇ ಇರುವುದು ನಿಮಗೆ ಬೇಸರವಾಗುವುದು. ಆಸ್ತಿಯ ವಿಚಾರವಾಗಿ ಮನೆಯಲ್ಲಿ ಕಲಹವಾಗಬಹುದು. ಆಲಸ್ಯದಿಂದ ಚಟುವಟಿಕೆಯತ್ತ ಮುಖ ಮಾಡುವಿರಿ. ನಿಮ್ಮ ಜೊತೆಗಾರನ್ನು ಗುರುತಿಸಿಕೊಳ್ಳುವುದು ಕಷ್ಟ. ಮನಸ್ಸಿನ‌ ಏಕಾಗ್ರತೆ ಕೆಡಬಹುದು. ಸರಳವಾದುದನ್ನು ಕ್ಲಿಷ್ಟ ಮಾಡಿಕೊಳ್ಳುವಿರಿ. ಅಸಮತೋಲನ ಸ್ಥಿತಿಯಿಂದ ನಿಮಗೆ ಗ್ರಹಿಸುವುದು ಕಷ್ಟವಾದೀತು. ಹಣಕಾಸಿನಲ್ಲಿ ಸುಧಾರಣೆಯನ್ನು ಮಾಡಿಕೊಳ್ಳಲು ಮಾರ್ಗಗಳನ್ನು ಹುಡುಕುವಿರಿ. ಮನೆಯ ಸದ್ಯರ ಜೊತೆ ಹೆಚ್ಚು ಸಮಯ ಕಾಲಹರಣ ಮಾಡುವಿರಿ.

ಮೀನ ರಾಶಿ : ಇಂದು ಮಹಿಳೆಯರಿಗೆ ಬಿಡುವಿಲ್ಲದ ಕಾರ್ಯವು ಇರಲಿದೆ. ಇಂದು ನೀವು ಇನ್ನೊಬ್ಬರ ಬಗ್ಗೆ ಸಲ್ಲದ ಮಾತುಗಳನ್ನು ಆಡುವಿರಿ. ಸಮಯಕ್ಕೆ ಸಿಕ್ಕ ಸ್ಫೂರ್ತಿಯು ನಿಮ್ಮ‌ ಇಂದಿನ ಕೆಲಸವನ್ನು ಚೆನ್ನಾಗಿಸುವುದು. ಸ್ವಂತ ವಾಹನದ ಬಗ್ಗೆ ನಿಮಗೆ ಮೋಹವು ಹೆಚ್ಚಾಗುವುದು. ಯಾರದೋ ಮಾತಿನ ಆಧಾರದ ಮೇಲೆ ನಿಮಗೆ ನಂಬಿಕೆ ಬಾರದು. ಮಾಡಲು ಹೊರಟ ಕೆಲಸವು ಅರ್ಧಕ್ಕೆ ನಿಲ್ಲಬಹುದು. ನೀವು ಇಂದು ನಿಮ್ಮ ಕೆಲಸವನ್ನು ಸುಲಭ ಮಾಡಿಕೊಳ್ಳಲು ಬಯಸುವಿರಿ. ಮಕ್ಕಳಿಂದ ನಿಮಗೆ ಧನ ಸಹಾಯವು ಆಗುವುದು. ಮಾತನ್ನು ಹದವನ್ನು ಅರಿತು ಮಾತನಾಡಿ. ಹೆಚ್ಚು ಮಾತನಾಡಿ ಇನ್ನೊಬ್ಬರಿಗೆ ನೋವನ್ನು ಕೊಡುವುದು ಬೇಡ. ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಬಯಸುವಿರಿ. ಬೇಡವಾದ ಸಂಗತಿಗಳನ್ನು ಯಾರಾದರೂ ನಿಮ್ಮ ತಲೆಗೆ ಹಾಕುವರು. ಮನೋಗತವನ್ನು ಹೇಳಿಕೊಳ್ಳಿ. ಸೋತರೂ ಗೆದ್ದವರ ಜೊತೆ ನಿಮ್ಮ ಪ್ರತಿಷ್ಠೆಯನ್ನು ತೋರಿಸುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು