AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 30ರ ದಿನಭವಿಷ್ಯ 

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 30ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 30ರ ದಿನಭವಿಷ್ಯ 
ಪ್ರಾತಿನಿಧಿಕ ಚಿತ್ರ Image Credit source: the-sun.com
Follow us
ಗಂಗಾಧರ​ ಬ. ಸಾಬೋಜಿ
|

Updated on: Mar 30, 2023 | 5:15 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 30ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಸರ್ಕಾರಿ ಕಾಂಟ್ರಾಕ್ಟ್‌ಗಳನ್ನು ತೆಗೆದುಕೊಳ್ಳುವಂಥವರು, ಟೆಂಡರ್‌ಗಳ ಮೂಲಕ ಕೆಲಸಗಳನ್ನು ವಹಿಸಿಕೊಳ್ಳುವಂಥವರು ಸ್ವಲ್ಪ ಹಿನ್ನಡೆ ಅನುಭವಿಸುವಂತಾಗುತ್ತದೆ. ಹೊಸದಾಗಿ ವಾಹನ ತೆಗೆದುಕೊಳ್ಳಬೇಕು ಎಂದಿರುವವರು ಹಣದ ವಿಚಾರಕ್ಕೆ ಮುಂದಕ್ಕೆ ಹಾಕಬೇಕಾದ ಸಂದರ್ಭ ಎದುರಾಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಸೆಕ್ಯೂರಿಟಿ ಏಜೆನ್ಸಿಗಳಲ್ಲಿ ಕೆಲಸ ಮಾಡುವಂಥವರು, ಸೈನ್ಯದಲ್ಲಿ ಇರುವಂಥವರು, ಆರಕ್ಷಕರು ಉತ್ತಮ ದಿನವನ್ನು ನಿರೀಕ್ಷಿಸಬಹುದು. ಬಡ್ತಿ, ಬೇಕಾದ ಸ್ಥಳಕ್ಕೆ ವರ್ಗಾವಣೆ ಬಯಸುವಂಥವರಿಗೆ ಅದಕ್ಕೆ ದಾರಿ ಕಾಣಿಸುತ್ತದೆ. ಭೂಮಿ, ಮನೆಗೆ ಸಂಬಂಧಿಸಿದ ವಿಚಾರಗಳಿಗೆ ಪ್ರಾಶಸ್ತ್ಯ ಸಿಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಹಣದ ವಿಚಾರ ಬಹಳ ಪ್ರಾಮುಖ್ಯ ಪಡೆಯುತ್ತದೆ. ಬಹಳ ದೊಡ್ಡ ದೊಡ್ಡ ಸ್ಕೀಮ್‌ಗಳನ್ನು ಮಾಡುವುದಕ್ಕೆ ಮುಂದಾಗುತ್ತೀರಿ. ಆದರೆ ಇದನ್ನು ಇತರರೊಂದಿಗೆ ಸದ್ಯಕ್ಕೆ ಹಂಚಿಕೊಳ್ಳಬೇಡಿ. ಸಂಜೆ ಹೊತ್ತಿಗೆ ನಿಮ್ಮ ಮನಸಿಗೆ ಪ್ರಶಾಂತತೆ ನೀಡಬಲ್ಲಂಥ ಸ್ಥಳಕ್ಕೆ ಒಬ್ಬರೇ ಹೋಗಿ, ನಿಮ್ಮೊಂದಿಗೆ ನೀವು ಸಮಯ ಕಳೆಯಿರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಗುಣಕ್ಕೆ ಮತ್ಸರ ಬೇಡ, ನಿಮಗಿಂತ ತುಂಬ ಚೆನ್ನಾಗಿ ಕೆಲಸ ಮಾಡಬಲ್ಲ, ಅದ್ಭುತವಾಗಿ ಆಲೋಚಿಸಬಲ್ಲ ವ್ಯಕ್ತಿ ಎದುರಿಗಿದ್ದಲ್ಲಿ ಹೊಗಳಿಬಿಡಿ. ಅನಗತ್ಯವಾಗಿ ಚುಚ್ಚಿ ಮಾತನಾಡುವುದು, ಅವರ ಆತ್ಮವಿಶ್ವಾಸ ಕಡಿಮೆ ಮಾಡುವ ಕೆಲಸಕ್ಕೆ ಇಳಿಯಬೇಡಿ. ನಿಮ್ಮ ವ್ಯಕ್ತಿತ್ವ ತುಂಬ ಎತ್ತರಕ್ಕೆ ಸಾಗುತ್ತಿದೆ, ಅತ್ತ ಗಮನ ನೀಡಿದರೆ ಸಾಕು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನೀವು ಈ ಹಿಂದೆ ಹೇಳಿದ್ದ ವಿಚಾರವನ್ನು ಈಗ ಸ್ವತಃ ನೀವೇ ಮರೆತು, ಬೇರೆಯವರ ಮೇಲೆ ತಪ್ಪನ್ನು ಹೊರೆಸುವ ಸಾಧ್ಯತೆ ಇದೆ. ಆದ್ದರಿಂದ ಎದುರಿನವರು ಹೇಳಿದ ಮಾತನ್ನೂ ಸ್ವಲ್ಪ ಲಕ್ಷ್ಯ ಇಟ್ಟು ಕೇಳಿಸಿಕೊಳ್ಳಿ, ಈ ಹಿಂದೆ ಹೇಳಿದ್ದನ್ನು ನೆನಪಿಸಿಕೊಳ್ಳಿ. ಈ ದಿನ ನಿಮಗೆ ಪಾರ್ಟಿಗಳಿಗೆ, ಗೆಟ್ ಟು ಗೆದರ್‌ಗೆ ಆಹ್ವಾನ ಬರಲಿದೆ. ಅದಕ್ಕೆ ಹೋದರೂ ಸ್ವಂತ ವಾಹನದಲ್ಲಿ ಬೇಡ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಯೂಟ್ಯೂಬರ್‌ಗಳು, ಸೋಷಿಯಲ್ ಮೀಡಿಯಾ ಪ್ರಭಾವಿಸುವಂಥವರು, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಕ್ಷೇತ್ರದಲ್ಲಿ ಕೆಲಸ ಮಾಡುವಂಥವರಿಗೆ ಅಚಾನಕ್ಕಾಗಿ ಹಣದ ಹರಿವು ಜಾಸ್ತಿ ಆಗುವ ಸಾಧ್ಯತೆಗಳು ಗೋಚರಿಸುತ್ತವೆ. ಅದನ್ನು ನೀವು ಗಂಭೀರವಾಗಿ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ತುಂಬ ಆರಾಮವಾಗಿ ದಿನ ಕಳೆಯುವುದಕ್ಕೆ ಬಯಸುತ್ತೀರಿ. ಬರೀ ಅಂದುಕೊಂಡರಷ್ಟೇ ಸಾಲದು, ಅದಕ್ಕೆ ತಕ್ಕ ತಯಾರಿಯೂ ಮುಖ್ಯ. ಆ ಕಡೆಗೂ ಗಮನ ನೀಡಿ. ಇನ್ನೊಬ್ಬರ ಸಹಾಯಕ್ಕಾಗಿ ಕಾಯಲಿಕ್ಕೆ ಹೋಗದಿರಿ. ದೀರ್ಘವಾದ ಪಯಣವೊಂದು ನಿಮ್ಮನ್ನು ಕಾಯುತ್ತಾ ಇದೆ. ಹೆಸರು, ಕೀರ್ತಿ, ಹಣ ಮಾಡುವುದಕ್ಕೆ ವೇದಿಕೆ ದೊರೆಯುವ ಸೂಚನೆ ಸಿಗಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನೀವು ಯಾರನ್ನೋ ಸ್ಪರ್ಧಿ ಅಂತ ಅಂದುಕೊಂಡು ಬಿಟ್ಟಿದ್ದರೆ ಅದನ್ನು ತಲೆಯಿಂದ ತೆಗೆದು ಹಾಕಬೇಕಾದ ದಿನ ಇದು. ಏಕೆಂದರೆ, ದೊಡ್ಡ ಅವಕಾಶ ನಿಮ್ಮೆದುರು ಕಾಯುತ್ತಾ ಇದೆ. ಆ ಕಡೆಗೆ ಲಕ್ಷ್ಯ ನೀಡಬೇಕು. ಸಣ್ಣ- ಪುಟ್ಟ ವಿಚಾರಗಳು, ಅನುಮಾನಗಳು, ಕೀಳರಿಮೆ ನಿಮ್ಮ ಅವಕಾಶದಿಂದ ದೂರಕ್ಕೆ ತಳ್ಳಬಾರದು.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಈ ದಿನ ನಿಮ್ಮಂತೆ ನೀವಿದ್ದರೆ ಸಾಕು. ಏನೋ ಮಹತ್ತರವಾದದ್ದು ಸಂಭವಿಸಲಿದೆ. ಅದು ಕೂಡ ಸಂಬಂಧದ ವಿಷಯದಲ್ಲಿ. ಇದರಿಂದ ನಿಮ್ಮ ಮನಸ್ಸಿಗೂ ಸಂತೋಷ ಆಗಲಿದೆ. ಗೊಂದಲಗಳು ಪರಿಹಾರ ಆಗುತ್ತದೆ. ಪ್ರೀತಿ- ಸ್ನೇಹ ಇನ್ನಷ್ಟು ಗಟ್ಟಿ ಆಗುತ್ತದೆ. ನೀವು ಮಾಡಬೇಕಾದ್ದೆಲ್ಲ ಇಷ್ಟೇ, ಬಿಗುಮಾನ ಬಿಡಿ, ಮುಕ್ತ ಮನಸ್ಸಿನಿಂದ ಇರಿ.

ಲೇಖನ- ಎನ್‌.ಕೆ.ಸ್ವಾತಿ

ಕೊಲೆ ಪಾತಕಿಯನ್ನು ಹಿಡಿಯಲು ಪೊಲೀಸ್ ಅಧಿಕಾರಿ ಮಾಡಿದ ಸಾಹಸ ನೋಡಿ
ಕೊಲೆ ಪಾತಕಿಯನ್ನು ಹಿಡಿಯಲು ಪೊಲೀಸ್ ಅಧಿಕಾರಿ ಮಾಡಿದ ಸಾಹಸ ನೋಡಿ
ಗಣ್ಯರ ಜೊತೆ ಹಿಂಬಾಲಕರು ಬೇಡವೆಂದು ವಿನಂತಿಸಿಕೊಳ್ಳಲಾಗಿದೆ: ಸೀಮಾ ಲಾಟ್ಕರ್
ಗಣ್ಯರ ಜೊತೆ ಹಿಂಬಾಲಕರು ಬೇಡವೆಂದು ವಿನಂತಿಸಿಕೊಳ್ಳಲಾಗಿದೆ: ಸೀಮಾ ಲಾಟ್ಕರ್
ಕಾರು ಚಲಾಯಿಸುವಾಗ ನಿದ್ರೆಗೆ ಜಾರಿದ ಟೆಕ್ಕಿ, ನಡೆಯಿತು ಭಯಾನಕ ಘಟನೆ
ಕಾರು ಚಲಾಯಿಸುವಾಗ ನಿದ್ರೆಗೆ ಜಾರಿದ ಟೆಕ್ಕಿ, ನಡೆಯಿತು ಭಯಾನಕ ಘಟನೆ
ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್​ಪುರಿಯಾ ತಾಯಿಯ ಗುಂಡಿಕ್ಕಿ ಹತ್ಯೆ
ಗ್ಯಾಂಗ್​​ಸ್ಟರ್ ಜಗ್ಗು ಭಗವಾನ್​ಪುರಿಯಾ ತಾಯಿಯ ಗುಂಡಿಕ್ಕಿ ಹತ್ಯೆ
ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಆಷಾಢ ಮೊದಲ ಶುಕ್ರವಾರ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಜಮ್ಮು ಕಾಶ್ಮೀರದ ಪ್ರವಾಸಿ ರೆಸಾರ್ಟ್​ ಬಳಿ ಕರಡಿ ಪ್ರತ್ಯಕ್ಷ, ಹೆಚ್ಚಿದ ಆತಂಕ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಕುಂಕುಮ ಹಾಗೂ ವಿಭೂತಿ ಇಲ್ಲದೆ ದೇವತಾಕಾರ್ಯ ಮಾಡಬಹುದಾ ತಿಳಿಯಿರಿ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಚಂದ್ರನು ಕರ್ಕಾಟಕ ರಾಶಿಯಿಂದ ಪುನರ್ವಸು ನಕ್ಷತ್ರದೆಡೆಗೆ ಸಂಚಾರ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
ಗುಜರಾತ್​​ನಲ್ಲಿ ಭಾರೀ ಪ್ರವಾಹ; ಭಾಗಶಃ ಮುಳುಗಿದ ತಡಕೇಶ್ವರ ಮಹಾದೇವ ದೇವಾಲಯ
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್
‘ಕಾಲವೇ ಮೋಸಗಾರ’ ಚಿತ್ರಕ್ಕಾಗಿ ವಿದ್ಯಾರ್ಥಿಗಳ ಬಳಿ ತೆರಳಿದ ಭರತ್ ಸಾಗರ್