Kannada News Horoscope Daily horoscope based on numerology predictions of June 27 according to number of birth dates as per numerology in Kannada
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 27ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 27ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 27ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಒಂದೇ ಕೆಲಸದ ಸಲುವಾಗಿ ಹಲವು ಸಲ ಪ್ರಯತ್ನಿಸುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಅಂದುಕೊಳ್ಳದ ಖರ್ಚು ತಲೆ ಎತ್ತಿ ನಿಲ್ಲಲಿದೆ. ಸಾರ್ವಜನಿಕ ಸಾರಿಗೆಯಲ್ಲಿ ದೂರ-ಭಾರ ತೆರಳಬೇಕು ಎಂದಿರುವವರು ಬೆಲೆ ಬಾಳುವ ವಸ್ತುಗಳನ್ನು ಜೋಪಾನವಾಗಿ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ತೀವ್ರ ಆಗುವಂತಹ ಸಾಧ್ಯತೆಗಳಿದ್ದು, ವೈದ್ಯರನ್ನು ಭೇಟಿ ಮಾಡಿ, ಸೂಕ್ತ ವೈದ್ಯೋಪಚಾರವನ್ನು ತೆಗೆದುಕೊಳ್ಳುವುದು ಉತ್ತಮ.
ನಿಮ್ಮ ವೈಯಕ್ತಿಕ ವಿಚಾರದಲ್ಲಿ ಇತರರು ವಿಪರೀತ ಮೂಗು ತೂರಿಸುತ್ತಿದ್ದಾರೆ ಎಂದು ಬಲವಾಗಿ ಅನಿಸುವುದಕ್ಕೆ ಆರಂಭವಾಗುತ್ತದೆ. ನೇರ ನೇರವಾಗಿ ಮಾತನಾಡುವುದರಿಂದ ಸಮಸ್ಯೆಗೆ ಪರಿಹಾರ ಏನೂ ದೊರಕುವುದಿಲ್ಲ. ಮನೆ ಬದಲಾವಣೆ ಮಾಡುವುದಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತವಾದ ಅಥವಾ ನಿಮ್ಮ ಮನಸ್ಸಿನಲ್ಲಿ ಇರುವಂಥದ್ದು ದೊರೆಯುವಂಥ ಅವಕಾಶಗಳಿವೆ. ಹಣಕಾಸಿನ ಜವಾಬ್ದಾರಿಯನ್ನು ನಿರ್ವಹಿಸುವವರು ಹೆಚ್ಚು ಎಚ್ಚರಿಕೆಯನ್ನು ವಹಿಸಬೇಕು.
ನಿಮ್ಮ ಇನ್ ಟ್ಯೂಷನ್ ಈ ದಿನ ಬಹಳ ಜಾಗೃತವಾಗಿರುತ್ತದೆ. ಯಾವ ವ್ಯಕ್ತಿ ಜತೆಗೆ ವ್ಯವಹರಿಸುತ್ತಿದ್ದೀರಿ ಎಂಬ ಬಗ್ಗೆ ನಿಮ್ಮ ಮನಸ್ಸಿನ ಮಾತನ್ನು ಕೇಳಿ, ತೀರ್ಮಾನವನ್ನು ಕೈಗೊಳ್ಳಿ. ಗೆಳೆಯರೋ ಅಥವಾ ಸಂಬಂಧಿಕರೋ ಮನೆಗೆ ಊಟವೋ ತಿಂಡಿಗಾಗಿ ಆಹ್ವಾನ ನೀಡಲಿದ್ದಾರೆ. ಸಣ್ಣದಾಗಿ ಆರಂಭಿಸುವ ವ್ಯವಹಾರದ ಬಗೆಗಿನ ಮಾತು ದೊಡ್ಡ ಮಟ್ಟದಲ್ಲಿ ತಿರುವು ಪಡೆದುಕೊಂಡು, ಭವಿಷ್ಯದಲ್ಲಿ ಅನುಕೂಲವಾಗಿ ಮಾರ್ಪಡಬಹುದು. ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರವನ್ನು ಮಾಡುವಂಥವರು ಲಾಗಿನ್ ಐಡಿ, ಪಾಸ್ ವರ್ಡ್ ಜೋಪಾನವಾಗಿ ಇರಿಸಿಕೊಳ್ಳಿ.
ಲೋಕಾರೂಢಿಗೆ ನೀವಾಡಿದ ಮಾತು ನಿಮಗೆ ಸಮಸ್ಯೆಯಾಗಿ ಸುತ್ತಿಕೊಳ್ಳಬಹುದು. ಸಂಗಾತಿಯ ಜತೆಗೆ ಪಾರದರ್ಶಕವಾಗಿ ಇರುವುದು ಉತ್ತಮ. ನಿಮಗೆ ಗೊತ್ತಿರುವ ಸಂಗತಿಯೇ ಆದರೂ ಮಿತಿಯನ್ನು ಅರಿತು, ವರ್ತಿಸುವುದು ಮುಖ್ಯವಾಗುತ್ತದೆ. ಹತ್ತಾರು ಜನರು ಇರುವ ಜಾಗದಲ್ಲಿ ಮಾತಿನ ಭರಾಟೆಯಲ್ಲಿ ಹೇಳಿಕೊಂಡ ವಿಷಯಗಳಿಗೆ ದೊಡ್ಡದಾಗಿ ಬೆಲೆ ಕಟ್ಟುವಂಥ ಸನ್ನಿವೇಶ ಎದುರಾಗಬಹುದು. ರಾಜಕಾರಣದಲ್ಲಿ ಆಸಕ್ತಿ ಇರುವಂಥವರು ಸೋಷಿಯಲ್ ಮೀಡಿಯಾಗಳಲ್ಲಿ ಏನನ್ನಾದರೂ ಪೋಸ್ಟ್ ಮಾಡುತ್ತಿದ್ದಲ್ಲಿ ಅದರ ಪರಿಣಾಮದ ಕಡೆಗೂ ಗಮನ ಕೊಡಿ.
ನಿಮ್ಮ ಸಂಬಂಧಿಕರೋ ಅಥವಾ ಸ್ನೇಹಿತರೋ ಹಿಂದೆ ಯಾವಾಗಲೋ ಆಡಿದ ಮಾತಿನಿಂದ ಬೇಸರವಾಗಿದ್ದಲ್ಲಿ ಅದನ್ನು ಈ ದಿನ ಪ್ರತೀಕಾರ ಎಂಬಂತೆ ತೀರಿಸಿಕೊಳ್ಳಲಿದ್ದೀರಿ. ಹಾಲಿನ ವ್ಯಾಪಾರ ಮಾಡುವಂಥವರಿಗೆ ಆದಾಯದಲ್ಲಿ ಇಳಿಕೆ ಆಗುವ ಸಂಭವ ಇದೆ. ಲೆಕ್ಕಾಚಾರ ಹಾಕಿಕೊಳ್ಳದೆಯೇ ಹಣಕಾಸಿನ ವಿಚಾರದಲ್ಲಿ ಯಾವುದೇ ಮಾತನ್ನು ನೀಡಲಿಕ್ಕೆ ಹೋಗದಿರಿ. ನಿಮ್ಮಷ್ಟಕ್ಕೆ ನೀವು ಎಂದಿದ್ದರೂ ಯಾವುದಾದರೂ ವ್ಯಾಜ್ಯಕ್ಕೆ ಇತರರು ಎಳೆದು ತರುವ ಸಾಧ್ಯತೆ ಇದೆ. ಸಾರ್ವಜನಿಕ ಬದುಕಿನಲ್ಲಿ ಇರುವವರು ವಿವಾದಕ್ಕೆ ಸಿಲುಕಿಕೊಳ್ಳುವ ಸಾಧ್ಯತೆಗಳಿವೆ.
ಅನಿರೀಕ್ಷಿತವಾಗಿ ಆದಾಯದ ಮೂಲ ಹೆಚ್ಚಳ ಆಗುವ ಸಾಧ್ಯತೆ ಇದೆ. ನಿಮ್ಮ ನಿಷ್ಠೆ, ಪರಿಶ್ರಮ, ಸಾಮರ್ಥ್ಯದ ಆಧಾರದ ಮೇಲೆ ಹೊಸ ಅವಕಾಶವೊಂದು ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಅದನ್ನು ಮಾಡುವುದಕ್ಕೆ ನಿಮ್ಮಿಂದ ಆದೀತೆ ಎಂದು ಅನುಮಾನ ಪಡಬೇಡಿ. ಟೂರ್ ಆಪರೇಟರ್ ಗಳಾಗಿ ಕಾರ್ಯ ನಿರ್ವಹಿಸುವವರಿಗೆ ಹಳೇ ಬಾಕಿಗಳು ಮತ್ತೆ ಕೈ ಸೇರುವಂಥ ಅವಕಾಶಗಳು ಸೃಷ್ಟಿ ಆಗಲಿವೆ. ಪ್ರಾಣಿಗಳ ಕಡಿತದಿಂದ ಸಮಸ್ಯೆ ಮಾಡಿಕೊಳ್ಳಬಹುದು ಎಂಬ ಸೂಚನೆಗಳಿದ್ದು, ಈ ವಿಚಾರದಲ್ಲಿ ಎಚ್ಚರಿಕೆ ವಹಿಸುವುದು ಸೂಕ್ತ.
ಇತರರು ತಮ್ಮ ಅನಿಸಿಕೆಗಳನ್ನು ನಿಮ್ಮ ಮೇಲೆ ಹೇರುತ್ತಿದ್ದಾರೆ ಎಂಬ ಬಲವಾಗಿ ಅನಿಸುತ್ತದೆ. ನವವಿವಾಹಿತರಿಗೆ ಸಂಗಾತಿ ಜತೆಗೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ಈ ದಿನ ನಿಮ್ಮ ಹಣೆ ಅಥವಾ ತಲೆಯ ಭಾಗಕ್ಕೆ ಪೆಟ್ಟಾಗುವಂಥ ಸಾಧ್ಯತೆಗಳು ಕಂಡುಬರುತ್ತಿದೆ. ಆದ್ದರಿಂದ ಮೆಟ್ಟಿಲು ಹತ್ತುವಾಗ, ಇಳಿಯುವಾಗ ಅಥವಾ ವೇಗವಾಗಿ ಕೆಲಸ ಮಾಡುತ್ತಿದ್ದೀರಿ ಎಂದಾಗ ಜಾಗ್ರತೆ ಇರಿಸಿಕೊಳ್ಳಿ. ನನಗೆ ಎಲ್ಲ ಗೊತ್ತು ಎಂದು ಹೇಳುತ್ತಿರುವ ಗೆಳೆಯರೋ ಅಥವಾ ಇತರರೋ ಅಂಥವರ ಜತೆಗೆ ವಾದಕ್ಕೆ ಇಳಿಯದಿರುವುದು ಉತ್ತಮ.
ಈ ದಿನ ನಿಮ್ಮ ಕೆಲಸಗಳು ವೇಗವನ್ನು ಪಡೆದುಕೊಳ್ಳಲಿವೆ. ನಿರ್ಧಾರ ಮಾಡಿಕೊಂಡು, ಎಲ್ಲ ವಿಚಾರಗಳಲ್ಲೂ ಬಿಗಿ ಪಟ್ಟನ್ನು ಹಾಕಲಿದ್ದೀರಿ. ನಿಮ್ಮ ತಂತ್ರಗಾರಿಕೆ, ಆಲೋಚನೆಗಳು ಫಲ ನೀಡಲಿವೆ. ಆನ್ ಲೈನ್ ವ್ಯವಹಾರಗಳಲ್ಲಿ ತೊಡಗಿರುವವರು, ಯೂ ಟ್ಯೂಬರ್ ಗಳು, ಟ್ಯಾಟೂ ಹಾಕುವಂಥವರು, ಮನೆಗಳಿಗೆ ತೆರಳಿ ಸೌಂದರ್ಯ ವರ್ಧಕಕ್ಕೆ ಬೇಕಾದ ಸೇವೆಗಳನ್ನು ನೀಡುವಂಥವರು ಇವರಿಗೆಲ್ಲ ಆದಾಯದಲ್ಲಿ ಏರಿಕೆ ಆಗಲಿದೆ. ವೃತ್ತಿನಿರತರಾಗಿದ್ದಲ್ಲಿ ಸ್ವಂತ ಕಚೇರಿ ಮಾಡುವ ಬಗ್ಗೆ ಗಂಭೀರವಾದ ಆಲೋಚನೆ ಮಾಡಲಿದ್ದೀರಿ.
ಎಲೆಕ್ಟ್ರಿಕಲ್ ವಾಹನವನ್ನೋ ಅಥವಾ ಗೃಹಬಳಕೆ ವಸ್ತುಗಳನ್ನೋ ಖರೀದಿಸುವುದಕ್ಕೆ ಹಣಕಾಸನ್ನು ಹೊಂದಾಣಿಕೆ ಮಾಡಿಕೊಳ್ಳಲಿದ್ದೀರಿ. ಒಂದಿ ವೇಳೆ ಖರೀದಿಯ ಉದ್ದೇಶವೇ ಇಲ್ಲದಿದ್ದರೂ ಆಫರ್ ಗಳು ಇದೆ ಎಂಬ ಕಾರಣಕ್ಕೆ ಕೊಂಡುಕೊಳ್ಳುವ ಸಾಧ್ಯತೆಗಳಿವೆ. ಪ್ರವೇಶ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದೀರಿ ಎಂದಾದರೆ ಕೆಲವರ ಮಾತುಗಳಿಂದ ನಿರುತ್ಸಾಹ ಆಗಬಹುದು. ಅಂಥವರಿಂದ ಅಂತರವನ್ನು ಕಾಯ್ದುಕೊಳ್ಳಿ. ಈ ದಿನ ಸಾಧ್ಯವಾದಷ್ಟೂ ತಾಜಾ- ಬಿಸಿಯಾದ ಆಹಾರ ಸೇವನೆ ಮಾಡುವುದಕ್ಕೇ ಆದ್ಯತೆಯನ್ನು ನೀಡಿ.
Swathi NK
ಸ್ವಾತಿ ಎನ್.ಕೆ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನೆಂಪೆ ಎಂಬ ಗ್ರಾಮದವರು. ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಮಲೆನಾಡಿನ ಅಡುಗೆ ಮಾಡುವ ಪದ್ಧತಿ ಇವೆಲ್ಲ ಆಸಕ್ತಿ, ಅಚ್ಚುಮೆಚ್ಚು. ಸಮುದ್ರದ ಪರಿಸರಕ್ಕೆ ಪ್ರವಾಸ ಹೋಗುವುದು, ಹೊಸ ಗ್ಯಾಜೆಟ್ ಗಳ ಬಗ್ಗೆ ತಿಳಿಯುವುದು ತುಂಬ ಇಷ್ವವಾದ ಸಂಗತಿ. ಪಡೆದಿರುವುದು ಕಾಮರ್ಸ್ ಡಿಗ್ರಿ. ಅಲ್ಪ ಕಾಲ ಅಲ್ಲಿಲ್ಲಿ ಕೆಲಸ ಮಾಡಿದ ಅನುಭವ ಜತೆಗಿದೆ. ಉಳಿದಂತೆ ಬೆಂಗಳೂರಲ್ಲಿ ಸದ್ಯದ ವಾಸ.