Kannada News Horoscope Daily horoscope based on numerology predictions of June 30 according to number of birth dates as per numerology in Kannada
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 30ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 30ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 30ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಧಾನವಾಗಿ ಆರಂಭವಾಗಿದ್ದ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ಹಣಕಾಸು ಹೊಂದಿಕೆ ಆಗದೆ ನಿಂತುಹೋಗಿದ್ದ ಕೆಲಸಗಳಿಗೆ ಅಗತ್ಯವಿರುವ ಹಣ ದೊರೆಯುವ ಮಾರ್ಗ ಗೋಚರಿಸಲಿದೆ. ನೀವು ಒಪ್ಪಿಕೊಂಡಿದ್ದ ಕೆಲಸಗಳನ್ನು ಗಡುವಿನೊಳಗೆ ಮುಗಿಸಿಕೊಡುವ ಕಡೆಗೂ ಗಮನ ನೀಡಿ. ಇನ್ನು ಬರಬೇಕಾದ ಹಣ ಇದ್ದಲ್ಲಿ ಗಟ್ಟಿಯಾಗಿ ಪ್ರಯತ್ನಿಸಿ, ಬರುವ ಸಾಧ್ಯತೆ ಇರುತ್ತದೆ ಅಥವಾ ಇಂಥ ಸಮಯದಲ್ಲಿ ಕೊಡುವುದಾಗಿ ಭರವಸೆ ಒಪ್ಪಿಕೊಳ್ಳಲಿದ್ದಾರೆ.
ನಿಮಗೆ ಕೌನ್ಸೆಲಿಂಗ್‌ನ ಅಗತ್ಯ ಇದೆ, ಸಣ್ಣ- ಪುಟ್ಟ ವಿಚಾರಗಳಿಗೂ ವಿಪರೀತ ರಿಯಾಕ್ಟ್ ಮಾಡುತ್ತಿದ್ದೀರಿ ಎಂದು ಯಾರಾದರೂ ನಿಮಗೆ ಹೇಳಿದಲ್ಲಿ ಅದನ್ನು ಗಂಭೀರವಾಗಿ ಆಲೋಚಿಸಿ. ಮನಸ್ಸು ಪ್ರಶಾಂತವಾಗಿ ಇಟ್ಟುಕೊಳ್ಳುವುದಕ್ಕೆ ಪ್ರಯತ್ನಿಸಿ. ನನ್ನಿಂದ ಎಲ್ಲರೂ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ, ನನ್ನ ಸಾಮರ್ಥ್ಯ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಅಂತ ನಿಮಗೆ ಅನಿಸುವ ಸಾಧ್ಯತೆ ಇದೆ. ನಿಮ್ಮ ಕಣ್ಣಿಗೆ ಇರುವೆಗಳ ಗುಂಪು ಕಂಡರೆ ಅವುಗಳಿಗೆ ಸಕ್ಕರೆ ಹಾಕಿ.
ಮುಂಚಿನ ರೀತಿಯಲ್ಲಿ ಹೇಳಿದ ತಕ್ಷಣ ಕೆಲಸಗಳು ಆಗುವುದಿಲ್ಲ. ಇದೇ ಕಾರಣಕ್ಕೆ ನಿಮ್ಮ ಪ್ರಾಶಸ್ತ್ಯ ಕಡಿಮೆ ಆಗುತ್ತಿದೆಯೇನೋ ಎಂಬಂತೆ ಅನಿಸುತ್ತದೆ. ಅದು ಮನೆ ಇರಲಿ ಅಥವಾ ಹೊರಗಿರಲಿ. ಹೀಗೆ ಅನಿಸಿದ ತಕ್ಷಣ ಎಲ್ಲರ ಗಮನ ಸೆಳೆಯುವ ಸಲುವಾಗಿ ವಿಪರೀತದ ಕೆಲಸಗಳೇನೋ ಮಾಡುವುದಕ್ಕೆ ತೊಡಗಬೇಡಿ. ಈ ಸಮಯ ಕಳೆಯಲು ಬಿಡಿ. ನೀವು ಅನುಸರಿಸುವ ಧರ್ಮದ ಅಥವಾ ಮನಸಿಗೆ ನೆಮ್ಮದಿ- ಚೈತನ್ಯ ನೀಡುವಂಥ ಆಡಿಯೋಗಳನ್ನು ಕೇಳಿಸಿಕೊಳ್ಳಿ.
ನಿಮ್ಮದಲ್ಲದ್ದು ಅಂತ ಗೊತ್ತಾದ ಮೇಲೆ ಅದಕ್ಕೆ ಆಸೆ ಪಡಬೇಡಿ. ಯಾರಿಗೂ ಗೊತ್ತಾಗಲ್ಲ, ನಾನು ಬುದ್ಧಿವಂತಿಕೆಯಿಂದ ಎಲ್ಲವನ್ನೂ ನಿಭಾಯಿಸಬಲ್ಲೆ ಎಂಬ ಧೋರಣೆ ನಿಮ್ಮನ್ನು ಸಂಕಷ್ಟಕ್ಕೆ ದೂಡಲಿದೆ. ಯಾವುದೇ ಮುಖ್ಯ ಕೆಲಸಕ್ಕೆ ಹೊರಡುವ ಮುನ್ನ ಈ ದಿನ ದುರ್ಗಾ ದೇವಿಯ ಧ್ಯಾನ ಮಾಡಿ. ನಿಮ್ಮ ಧರ್ಮಾಚರಣೆ ಬೇರೆ ಆಗಿದ್ದಲ್ಲಿ ಬಿಳಿ ವಸ್ತ್ರವೊಂದನ್ನು ನಿಮ್ಮ ಪರ್ಸ್ ಅಥವಾ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಿ.
ಈ ದಿನ ಅತಿಯಾದ ಆಲೋಚನೆ ನಿಮ್ಮನ್ನು ಕಾಡಲಿದೆ. ಬಹುಶಃ ಇತರರನ್ನು, ಇತರರ ಮನೆಯನ್ನು ಹೋಲಿಕೆ ಮಾಡಲಿದ್ದೀರಿ. ಮನೆಗೆ ಅಗತ್ಯ ಇರುವ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಈ ದಿನ ಹಲವು ಜನರ ಮಧ್ಯೆ ಇದ್ದರೂ ಒಂಟಿತನ ನಿಮ್ಮನ್ನು ಕಾಡುತ್ತದೆ, ಸ್ವಾದಿಷ್ಟವಾದ ಊಟ- ತಿಂಡಿ ಸವಿಯುವ ಯೋಗ ಇದೆ. ವಿನಾಕಾರಣವಾಗಿ ಭವಿಷ್ಯದ ಬಗ್ಗೆ ಆತಂಕಕ್ಕೆ ಒಳಗಾಗಬೇಡಿ. ಎಲ್ಲರಿಗೂ ಆಗಿದ್ದೇ ನಿಮಗೂ ಆಗಲಿದೆ. ಅದಕ್ಕೆ ಗಾಬರಿ ಏಕೆ? ಆತ್ಮವಿಶ್ವಾಸ ಇದ್ದಲ್ಲಿ ಎಂಥ ಸವಾಲನ್ನಾದರೂ ದಾಟಬಹುದು.
ಏನನ್ನಾದರೂ ದಕ್ಕಿಸಿಕೊಳ್ಳಬಲ್ಲೆ ಎಂಬ ಧೋರಣೆ ಈ ದಿನ ಯಾವುದೇ ಕಾರಣಕ್ಕೂ ಬೇಡ. ವಿಪರೀತ ಚಂಚಲತೆ ಇರುತ್ತದೆ. ಎಲ್ಲವೂ ಬೇಕು, ಬೇಕು ಎಂಬ ಧೋರಣೆ ಸರಿಯಲ್ಲ. ನಿಮ್ಮ ಅಗತ್ಯಗಳನ್ನು ಅರಿತುಕೊಂಡು, ಎಷ್ಟು ಬೇಕೋ ಅಷ್ಟನ್ನು ಮಾತ್ರ ಖರೀದಿಸಿ. ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಾಗ ಬಹಳ ಎಚ್ಚರಿಕೆ ಅಗತ್ಯ. ಕಡಿಮೆ ಬಡ್ಡಿಗೆ ಅಥವಾ ಬಡ್ಡಿಯೇ ಇಲ್ಲದ ಸಾಲ ಸಿಗುತ್ತದೆ ಎಂಬ ಕಾರಣಕ್ಕೆ ಹಣ ಅಥವಾ ವಸ್ತು ತೆಗೆದುಕೊಳ್ಳಬೇಡಿ. ಮುಖ್ಯ ವಸ್ತುಗಳ ಕಡೆಗೆ ಹೆಚ್ಚಿನ ಲಕ್ಷ್ಯ ಇರಲಿ.
ನಾನಾ ಕಾರಣಗಳಿಗೆ ಈ ದಿನ ನಿಮಗೆ ಒತ್ತಡ ಇರಲಿದೆ. ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗಬಹುದು. ಹೊಸ ವಿಷಯಗಳನ್ನು ಕಲಿತುಕೊಳ್ಳಲಿದ್ದೀರಿ. ವಸ್ತ್ರಾಭರಣ ಖರೀದಿಸಲಿದ್ದೀರಿ. ಗುರು- ಹಿರಿಯರ ಆಶೀರ್ವಾದ ಇರಲಿದೆ. ಸ್ನೇಹಿತರು- ಬಂಧುಗಳು ಹಣಕಾಸಿನ ನೆರವು ನೀಡಬಹುದು. ಮನರಂಜನೆಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಯಾರಿಗೂ ಸಾಲಕ್ಕೆ ಜಾಮೀನಾಗಿ ನಿಲ್ಲಬೇಡಿ. ಪಾರ್ಟಿಗಳಲ್ಲಿ ಭಾಗೀ ಆಗಲಿದ್ದೀರಿ. ನಿದ್ದೆ- ಊಟ ಇವುಗಳನ್ನು ಸರಿಯಾದ ಸಮಯಕ್ಕೆ ಮಾಡುವ ಕಡೆಗೆ ಗಮನ ನೀಡಿ.
ಇನ್ನೇನು ಎಲ್ಲ ಕೆಲಸ ಆಗಿಹೋಗಿದೆ, ಹಣ ಬರುವುದಷ್ಟೇ ಬಾಕಿ ಎಂದುಕೊಂಡಿದ್ದ ಕೆಲಸದಲ್ಲಿ ಸವಾಲು ಎದುರಾಗಲಿದೆ. ಭರವಸೆ ಇಟ್ಟುಕೊಂಡು ಶುರು ಮಾಡಿದ್ದ ಕೆಲಸ ಅರ್ಧಕ್ಕೆ ನಿಲ್ಲುವ ಸಾಧ್ಯತೆಗಳಿವೆ. ಇದರಿಂದಾಗಿ ನಿಮ್ಮ ವರ್ಚಸ್ಸು, ಹಣಕ್ಕೆ ಹಾನಿ ಆಗಬಹುದು. ಹೊಸಬರ ಪರಿಚಯ ಆಗುತ್ತದೆ. ಸ್ವಂತ ಉದ್ಯಮಿಗಳಿಗೆ ದೂರ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಕಣ್ಣಿನ ಅಲರ್ಜಿ ಕಾಡಬಹುದು. ಹೊಸ ವಾಹನ ಖರೀದಿಸಬೇಕು ಎಂದಿರುವವರು ಸ್ವಲ್ಪ ಸಮಯ ನಿರ್ಧಾರವನ್ನು ಮುಂದೂಡಿ.
ಒಂದು ವೇಳೆ ಸಂಬಂಧಿಗಳ ಜತೆಗೆ ಈಗಾಗಲೇ ಏನಾದರೂ ಸಣ್ಣ- ಪುಟ್ಟ ವೈಮನಸ್ಯ ಮಾಡಿಕೊಂಡಿದ್ದಲ್ಲಿ ಅದನ್ನು ಸರಿ ಮಾಡಿಕೊಳ್ಳಲು ಅವಕಾಶ, ವೇದಿಕೆ ದೊರೆಯಲಿದೆ. ಇದನ್ನು ನೀವು ಬಳಸಿಕೊಳ್ಳುವುದರಿಂದ ಸಂಬಂಧ ಗಟ್ಟಿ ಆಗಲಿದೆ. ಸ್ನೇಹಿತರ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದ್ದೀರಿ. ಮರದ ಕೆತ್ತನೆ, ಮಾರಾಟ ಮಾಡುವಂಥವರಿಗೆ ಲಾಭದ ಪ್ರಮಾಣ ಜಾಸ್ತಿ ಆಗುವ ಮಾರ್ಗ ಗೋಚರಿಸಲಿದೆ. ರಾಜಕಾರಣಿಗಳಿಗೆ ಪ್ರಭಾವ ವಿಸ್ತರಿಸಿಕೊಳ್ಳವಂಥ ದಿನ ಇದು. ಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳು ಬರಲಿದ್ದಾರೆ.
Swathi NK
ಸ್ವಾತಿ ಎನ್.ಕೆ. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ನೆಂಪೆ ಎಂಬ ಗ್ರಾಮದವರು. ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಮಲೆನಾಡಿನ ಅಡುಗೆ ಮಾಡುವ ಪದ್ಧತಿ ಇವೆಲ್ಲ ಆಸಕ್ತಿ, ಅಚ್ಚುಮೆಚ್ಚು. ಸಮುದ್ರದ ಪರಿಸರಕ್ಕೆ ಪ್ರವಾಸ ಹೋಗುವುದು, ಹೊಸ ಗ್ಯಾಜೆಟ್ ಗಳ ಬಗ್ಗೆ ತಿಳಿಯುವುದು ತುಂಬ ಇಷ್ವವಾದ ಸಂಗತಿ. ಪಡೆದಿರುವುದು ಕಾಮರ್ಸ್ ಡಿಗ್ರಿ. ಅಲ್ಪ ಕಾಲ ಅಲ್ಲಿಲ್ಲಿ ಕೆಲಸ ಮಾಡಿದ ಅನುಭವ ಜತೆಗಿದೆ. ಉಳಿದಂತೆ ಬೆಂಗಳೂರಲ್ಲಿ ಸದ್ಯದ ವಾಸ.