Nitya Bhavishya: ಈ ರಾಶಿಯವರಿಗೆ ಆಸ್ತಿಯ ವಿಚಾರದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು

ನೀವು ಇಂದು ಕೈಗೊಳ್ಳುವ ಯಾವುದೇ ಕೆಲಸಕಾರ್ಯಗಳು ಚೆನ್ನಾಗಿರಬೇಕು ಎಂದರೆ ನಿಮ್ಮ ರಾಶಿಫಲ ಚೆನ್ನಾಗಿರಬೇಕು. ಒಂದಷ್ಟು ಮಂದಿ ರಾಶಿಭವಿಷ್ಯ ತಿಳಿದುಕೊಂಡೇ ಮುಂದಿನ ಹೆಜ್ಜೆ ಇಡುತ್ತಾರೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ ಫೆಬ್ರವರಿ​​​​ 02ರ ನಿಮ್ಮ ಭವಿಷ್ಯ ಹೀಗಿದೆ ನೋಡಿ.

Nitya Bhavishya: ಈ ರಾಶಿಯವರಿಗೆ ಆಸ್ತಿಯ ವಿಚಾರದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು
ರಾಶಿ ಭವಿಷ್ಯ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 02, 2024 | 12:45 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಫೆಬ್ರವರಿ​​​​ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರ ಮಾಸ, ಮಹಾನಕ್ಷತ್ರ: ಶ್ರವಣಾ, ಮಾಸ: ಪೌಷ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಶೂಲ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 30 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:20 ರಿಂದ 12:46ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:39 ರಿಂದ 05:05ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:28 ರಿಂದ 09:54ರ ವರೆಗೆ.

ಧನು ರಾಶಿ : ನೀವು ಇಂದು ಒಮ್ಮೆಲೆ ಸ್ವೀಕರಿಸಲು ಒಪ್ಪಲಾರಿರಿ. ನೀವು ಇಂದು ವ್ಯಾಪಾರದಲ್ಲಿ ಲಾಭವನ್ನು ಪಡೆಯುವಿರಿ. ಕೆಲವು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಪ್ರಯೋಜನಗಳನ್ನು ಪಡೆಯಬಹುದು. ಇಂದು ನಿಮ್ಮ ಪರಿವಾರದಲ್ಲಿ ಪ್ರೀತಿ ಮತ್ತು ಸಾಮರಸ್ಯ ಉಳಿಯಲಿದೆ. ಪೋಷಕರು ಬೆಂಬಲಿಸಲು ಸಾಧ್ಯವಾಗುತ್ತದೆ. ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ಆದರೆ ಸಂಗಾತಿಯ ಆರೋಗ್ಯ ಸ್ವಲ್ಪ ಚಿಂತಾಜನಕವಾಗಿರುತ್ತದೆ. ತಾಯಿಯ ಬಂಧುಗಳು ನಿಮಗೆ ಸಹಕಾರವನ್ನೂ ಕೊಡುವರು. ಹಳೆಯ ರೋಗವೇ ಪುನಃ ಕಾಣಸಿಕೊಳ್ಳುವುದು. ಇಂದು ನೀವು ಸಮಾನ್ಯಾರಂತೆ ತೋರುವಿರಿ. ತಂತ್ರಜ್ಞಾನದ ಬಗ್ಗೆ ಮಾಹಿತಿ ಕಡಿಮೆ‌ ಇರುವುದು. ಬಾಡಿಗೆ ಮನೆಯವರು ಮನೆಯನ್ನು ಬದಲಾಯಿಸುವರು. ಗುಣಮುಖವಾಗುವ ಆರೋಗ್ಯದಿಂದ ಸಮಾಧಾನ‌ ಸಿಗಲಿದೆ. ನಿಮ್ಮನ್ನು ತಿಳಿದವರೇ ನಿಮಗೆ ವಂಚನೆ ಮಾಡಬಹುದು.

ಮಕರ ರಾಶಿ : ಇಂದು ನಿಮ್ಮ ಕೆಲಸದ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮದಿಂದಾಗಿ ನೀವು ಗೌರವವನ್ನು ಪಡೆಯಬಹುದು. ನಿಮ್ಮ ಪ್ರಭಾವವೂ ಇಂದು ಇತರರ ಮೇಲೆ ಹೆಚ್ಚಾಗಿರಲಿದೆ. ಕುಟುಂಬದಲ್ಲಿಯೂ ನೀವು ಗೌರವವನ್ನು ಪಡೆಯುವಿರಿ. ಕೆಲವು ಸಾಮಾಜಿಕ ಕಾರ್ಯಗಳನ್ನು ಮಾಡಲು ಬಯಸಿದರೆ ಅಥವಾ ಯಾವುದಾದರೂ ಸಾಮಾಜಿಕ ಸಂಸ್ಥೆಗೆ ಸೇರಲು ಇಚ್ಛಿಸಬಹುದು. ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಗುರುತನ್ನು ಮಾಡಲು ನಿಮಗೆ ಅವಕಾಶ ಸಿಗುತ್ತದೆ. ಭೂಮಿಯ ಮೇಲೆ ಹೂಡಿಕೆ‌ ಮಾಡಲು ನಿಮಗೆ ಅವಕಾಶ ಸಿಗಬಹುದು. ಉದ್ಯೋಗವನ್ನು ಬದಲಿಸುವ ಆಲೋಚನೆ ಮಾಡಬೇಕಾದೀತು. ಆರ್ಥಿಕ ಸಂಕಷ್ಟವನ್ನು ಜಾಣ್ಮೆಯಿಂದ ನಿಭಾಯಿಸುವಿರಿ. ಭೂಮಿಯ ಬಗ್ಗೆ ಆಸೆ ಕಡಿಮೆ ಆಗಬಹುದು. ಧಾರ್ಮಿಕ ಕಾರ್ಯದಲ್ಲಿ ಹೆಚ್ಚು ಮಗ್ನರಾಗುವಿರಿ. ನಿಮ್ಮ ಬಂಧುಗಳ ನಡುವೆ ವಿವಾಹ ಸಂಬಂಧವು ಆಗಲಿದೆ. ನಿಮ್ಮ ನೋವನ್ನು‌ ನೀವೇ ನುಂಗಿಕೊಳ್ಳುವಿರಿ.

ಕುಂಭ ರಾಶಿ : ನೀವು ಇಂದು ಕೆಲವು ಕೌಟುಂಬಿಕ ವಿಷಯಗಳ ಬಗ್ಗೆ ಗೊಂದಲಕ್ಕೊಳಗಾಗಬಹುದು. ಕೆಲಸದ ಸ್ಥಳದಲ್ಲಿ ಉದ್ವಿಗ್ನತೆ ಇರುತ್ತದೆ. ನೀವು ವಿರುದ್ಧ ಲಿಂಗಿಗಳ ಬೆಂಬಲವನ್ನು ಪಡೆಯುತ್ತೀರಿ. ಖಾಸಗಿ ಕೆಲಸಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಗೆ ಇಂದು ಬಹಳ ಮುಖ್ಯವಾಗಿರುತ್ತದೆ. ಯಾವುದೇ ಸಲಹೆಯು ನಿಮಗೆ ಸಂತೋಷವನ್ನು ನೀಡುತ್ತದೆ. ಹೂಡಿಕೆ ಲಾಭದಾಯಕವಾಗಲಿದೆ. ನಿಮಗೆ ಬರಬೇಕಾದ ಹಣವನ್ನು ನೀವು ಬಿಟ್ಟುಕೊಡುವಿರಿ. ಚಂಚಲ ಮನಸ್ಸನ್ನು ನೀವು ನಿಯಂತ್ರಿಸಲು ಆಗದು. ಇದರಿಂದ ತೀರ್ಮಾನ ಸರಿಯಾಗಿ ತೆಗೆದುಕೊಳ್ಳಲಾಗದು. ಕಛೇರಿಯಲ್ಲಿ ಅಸಮಾಧಾನವಿರಲಿದ್ದು, ನೆಮ್ಮದಿಯಿಂದ ಕೆಲಸ ಮಾಡಲು ಆಗದು. ಬಲವಾದ ನೋವನ್ನು ಪಡೆಯಬೇಕಾದೀತು. ಉನ್ನತ ಅಧಿಕಾರಿಗಳ ಜೊತೆ ಸೆಣೆಸಾಡುವ ಸ್ಥಿತಿಯೂ ಬರಬಹುದು. ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಸ್ವಂತ ಹಣವನ್ನು ದುಪ್ಪಟ್ಟು ಖರ್ಚುಮಾಡುವಿರಿ.

ಮೀನ ರಾಶಿ : ಇಂದು ಆರ್ಥಿಕ ವಿಷಯಗಳಿಗೆ ಬಂಧುಗಳ ಪ್ರವೇಶವಾಗಬಹುದು. ಮಕ್ಕಳು ನಿಮ್ಮ ವಿರುದ್ಧ ದಿಕ್ಕಿನ ಕಡೆ ಇರುವರು. ಅನಿರೀಕ್ಷಿತ ಬಂಧುಗಳ ಆಗಮನದಿಂದ ಕೊಂಚ ಗಲಿಬಿಲಿ ಆಗುವುದು. ಆತ್ಮೀಯರ ಜೊತೆ ಇದ್ದು ಹಣವನ್ನು ಖರ್ಚು ಮಾಡುವಿರಿ. ಆಸ್ತಿಯ ವಿಚಾರದಲ್ಲಿ ನಿಮಗೆ ಕೆಲವು ಸಮಸ್ಯೆಗಳು ಎದುರಾಗಬಹುದು. ಮಕ್ಕಳ‌ ಮೇಲೆ ನಿಮಗೆ ಅತಿಯಾದ ಮೋಹ ಬೇಡ. ವಿದ್ಯಾಭ್ಯಾಸದ ವಿಚಾರದಲ್ಲಿ ಯಾವ ಸಡಿಲಿಕೆಯನ್ನೂ ಮಾಡಿಕೊಳ್ಳದಿರಿ. ದುರ್ಘಟನೆಯ ಕಾರಣದಿಂದ ನಿಮಗೆ ಭಯವು ಇರುವುದು. ದಾಂಪತ್ಯದಲ್ಲಿ ನೀವು ಸಂತೋಷವಾಗಿರುವಿರಿ. ಬಂಧುಗಳನ್ನು ಕಳೆದುಕೊಳ್ಳುವಿರಿ. ಇಂದಿನ‌ ಒತ್ತಡದಲ್ಲಿ ನೀವು ಅನೇಕ ವಿಚಾರಗಳನ್ನು ಮರೆಯುವಿರಿ. ಮನಸ್ಸಿಗೆ ನೆಮ್ಮದಿ ಸಿಗುವ ಜಾಗಕ್ಕೆ ಹೋಗುವಿರಿ. ಅಪರಿಚಿತರ ಮುಂದೆ ಅಸಭ್ಯ ವರ್ತನೆ ಬೇಡ.

-ಲೋಹಿತ ಹೆಬ್ಬಾರ್-8762924271 (what’s app only)