Horoscope: ಈ ರಾಶಿಯವರ ನೇರವಾದ ಮಾತಿನಿಂದ ತೊಂದರೆಯಾಗಬಹುದು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್​ 23) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ಈ ರಾಶಿಯವರ ನೇರವಾದ ಮಾತಿನಿಂದ ತೊಂದರೆಯಾಗಬಹುದು
ರಾಶಿ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 23, 2023 | 12:30 AM

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಉತ್ತರಾಭಾದ್ರಾ, ಯೋಗ: ವ್ಯಾಘಾತ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 38 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 01:44 ರಿಂದ 03:09ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:38 ರಿಂದ 08:03ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:29 ರಿಂದ 10:54ರ ವರೆಗೆ.

ಸಿಂಹ ರಾಶಿ : ಪ್ರಭಾವಿ ವ್ಯಕ್ತಿಗಳ ಸಂಪರ್ಕವು ಇಂದು ಸಾಧ್ಯವಾಗುವುದು. ನಿಮ್ಮವರಿಗೆ ಹೊಸ ವಸ್ತುಗಳನ್ನು ಕೊಡಿಸುವಿರಿ. ದಾಂಪತ್ಯದ ಒಳ ಜಗಳವು ಕುಟುಂಬಕ್ಕೆ ಗೊತ್ತಾಗಲಿದೆ. ದುರಭ್ಯಾಸವನ್ನು ರೂಢಿಸಿಕೊಳ್ಳುವಿರಿ. ಇನ್ನೊಬ್ಬರ ಸ್ವತ್ತನ್ನು ಅಪೇಕ್ಷಿಸುವುದು ಬೇಡ. ಮೋಹದಿಂದ ಹೊರಬರುವುದು ಕಷ್ಟವಾದೀತು. ನಿಮ್ಮ ಶತ್ರುಗಳು ಬಲಗೊಳ್ಳುವ ಸಾಧ್ಯತೆ ಇದೆ. ಚರಾಸ್ತಿಯ ಸಲುವಾಗಿ ಕಾನೂನು ಹೋರಾಟ ಮಾಡಬೇಕಾದೀತು. ನಿಮ್ಮ ದುರ್ಬಲ್ಯವು ಇನ್ನೊಬ್ಬರಿಗೆ ಆಹಾರವಾಗಬಹುದು. ನೇರವಾದ ಮಾತಿನಿಂದ ತೊಂದರೆಯಾಗಬಹುದು. ಹೂಡಿಕೆಯ ವ್ಯವಹಾರವು ಕೆಲವರಲ್ಲಿ ಮಾತ್ರ ಇರಲಿ. ಸಹನೆಯನ್ನು ನೀವು ಪ್ರಯತ್ನದಿಂದ ಬೆಳೆಸಿಕೊಳ್ಳಬೇಕಾದೀತು. ದೇಹಕ್ಕೆ ಬಲವಾದ ಪೆಟ್ಟು ಬೀಳಬಹುದು. ಅಪರಿಚಿತರ ಜೊತೆ ಮಾತನಾಡಲು ಮುಜುಗರಪಟ್ಟುಕೊಳ್ಳಬಹುದು. ಆರಾಮದಿಂದ ಈ ದಿನವನ್ನು ಕಳೆಯಬೇಕು ಎಂದು ಅನ್ನಿಸಬಹುದು.

ಕನ್ಯಾ ರಾಶಿ : ಕುಟುಂಬದಲ್ಲಿ ಆಸ್ತಿಯ ವಿಚಾರದಲ್ಲಿ ಕಲಹವು ಕಾಣಿಸಿಕೊಳ್ಳುವುದು. ಅಚಾತುರ್ಯದಿಂದ ಹಣವನ್ನು ಕಳೆದುಕೊಳ್ಳುವಿರಿ.‌ ನಿಮ್ಮ ಸಂಸ್ಥೆಗೆ ಹೆಚ್ಚಿನ ಮನ್ನಣೆಯು ಸಿಗುವುದು. ನಿಮ್ಮ ಲಾಭವನ್ನು ಹೆಚ್ಚು ಮಾಡಿಕೊಳ್ಳುವಿರಿ. ಸಂತೋಷದ ಸಮಯವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಿರಿ. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ಆಲಸ್ಯ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಿ. ಸಾಮಾಜಿಕ ಕೆಲಸದಲ್ಲಿ ನೀವು ಕಳೆದುಹೋಗಬಹುದು. ಮಿತ್ರರಿಗೆ ಸಹಾಯ ಮಾಡಿ ನೀವು ತೊಂದರೆಯಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಆಕಸ್ಮಿಕ ಧನಲಾಭವು ನಿಮಗೆ ಸ್ವಲ್ಪ ಸಮಾಧಾನಿರುವುದು. ಉದ್ಯೋಗದಲ್ಲಿ ಅವಘಡವು ಸಂಭವಿಸುವ ಸಾಧ್ಯತೆ ಇದೆ. ಇಂದು ನೀವು ಬಹಳ ಆಕರ್ಷಕವಾಗಿ ಕಾಣುವಿರಿ. ಯಾರು ಏನೇ ಅಂದರೂ ನಿಮ್ಮ ನಿರ್ಧಾರವನ್ನು ಬದಲಿಸಲು ನೀವು ಸರಿಯಾಗದು.

ತುಲಾ ರಾಶಿ : ಮಕ್ಕಳ‌ ವಿಚಾರದಲ್ಲಿ ನಿಮ್ಮ ನಿಲುವು ಸರಿ ಇರದು. ನಿಮ್ಮ ಗೌರವಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ದಾಂಪತ್ಯದಲ್ಲಿನ ಮಾತುಗಳು ನಿಮಗೆ ಅನಿರೀಕ್ಷಿತವಾಗಿರುವುದು. ಆರೋಗ್ಯದ ಸಮತೋಲನವನ್ನು ಇಟ್ಟುಕೊಳ್ಳುವುದು ಮುಖ್ಯವಾಗುವುದು. ಹಿತಶತ್ರುಗಳಿಂದ ಹಲವು ತೊಂದರೆಗಳು ಬರಬಹುದು. ಹೊಗಳಿಕೆಯನ್ನು ಬಹಳ ಸಂಕೋಚದಿಂದ ಪಡೆಯುವಿರಿ. ಸಿಗದ ಹಣದ ಬಗ್ಗೆ ನಿಮಗೆ ಬೇಸರವಿರದು. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ. ಪ್ರೀತಿಯ ವಿಚಾರದಲ್ಲಿ ಬುದ್ಧಿವಾದವನ್ನು ಹೇಳುವರು. ಕೆಲವರನ್ನು ನೀವು ನಂಬಬೇಕಾಗುತ್ತದೆ. ಸರಳವಾಗಿರಲು ಇರುವುದು ನಿಮಗೆ ಕಷ್ಟವಾದೀತು. ಇನ್ನೊಬ್ಬರ ಜೊತೆ ಮಾತನಾಡುವಾಗ ಹೆದರಿಕೆ ಇರುವುದು. ನೆಮ್ಮದಿಯನ್ನು ಏಕಾಂತದಲ್ಲಿ ಪಡೆದುಕೊಳ್ಳುವಿರಿ.

ವೃಶ್ಚಿಕ ರಾಶಿ : ನಿಮ್ಮ‌ ಇಂದಿನ‌ ಕೆಲಸವು ತೃಪ್ತಿಯನ್ನು ಕೊಡುವುದು. ಖರ್ಚುಗಳು ಅಧಿಕವಿದ್ದರೂ ಚಿಂತೆ ಇಲ್ಲದೇ ಮಾಡುವಿರಿ. ಕೆಲವರ ಜೊತೆ ಮಾತನಾಡಲು ಸಂಕೋಚವಾದೀತು. ಮನೆಯ ಮಂಗಲ ಕಾರ್ಯದಲ್ಲಿ ಭಾಗಿಯಾಗುವಿರಿ. ರಹಸ್ಯವನ್ನು ಭೇದಿಸುವ ಕುತೂಹಲ ಇರಲಿದೆ. ಗಣ್ಯರ ಜೊತೆ ಮಾತುಕತೆ ನಡೆಸುವಿರಿ. ದೂರವಾಣಿಯ ಕರೆಯಿಂದ ನಿಮಗೆ ಆತಂಕ ಎದುರಾಗಬಹುದು. ಕುಟುಂಬದ ಕಾರ್ಯದಿಂದ ಆಯಾಸವು ಬರಲಿದೆ. ಸಂಗಾತಿಯ ಬಗ್ಗೆ ಆರೋಗ್ಯದ ಕಾಳಜಿ ತೋರಿಸುವಿರಿ. ನಿಗದಿತ ಅವಧಿಯಲ್ಲಿ ನಿಮ್ಮ ಕೆಲಸಗಳನ್ನು ಪೂರ್ಣ ಮಾಡಿಕೊಳ್ಳುವಿರಿ. ನೀವು ಇಷ್ಟಪಟ್ಟಿದ್ದನ್ನು ಕಳೆದುಕೊಳ್ಳುವ ಸಂದರ್ಭವು ಬರಬಹುದು. ಪತ್ನಿಯ ಕಡೆಯವರಿಂದ ಅಹಿತಕರವಾದ ಮಾತುಗಳು ಕೇಳಿಬರಬಹುದು. ಭವಿಷ್ಯದ‌ ದೃಷ್ಟಿಯಿಂದ ಹಣವನ್ನು ಯಾರಿಗೂ ಹೇಳದೇ ಗೌಪ್ಯವಾಗಿ ಇಡುವಿರಿ. ಇನ್ನೊಬ್ಬರ ಬಗ್ಗೆ ಗೊತ್ತಿಲ್ಲದೇ ಮಾತನಾಡಿ ನೋವನ್ನು ಉಂಟುಮಾಡುವಿರಿ.

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್