AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ದಿನಭವಿಷ್ಯ, ಹಿತಶತ್ರುಗಳ ಕಾರಣದಿಂದ ಇಂದಿನ ವ್ಯವಹಾರವು ಹಿಂದೆ ಸಾಗಲಿದೆ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್​ 08) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ದಿನಭವಿಷ್ಯ, ಹಿತಶತ್ರುಗಳ ಕಾರಣದಿಂದ ಇಂದಿನ ವ್ಯವಹಾರವು ಹಿಂದೆ ಸಾಗಲಿದೆ
ಪ್ರಾತಿನಿಧಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Nov 08, 2023 | 12:30 AM

Share

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 08) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ಐಂದ್ರ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 31 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:16 ರಿಂದ 01:42 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:24 ರಿಂದ 09:24 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:50 ರಿಂದ 12:16ರ ವರೆಗೆ.

ಸಿಂಹ ರಾಶಿ : ಉದ್ಯಮವನ್ನು ಮಾರಾಟಮಾಡುವ ಆಲೋಚನೆ ಮಾಡುವಿರಿ. ಅಕ್ರಮ ವ್ಯವಹಾರಗಳು ಎಲ್ಲರಿಗೂ ಗೊತ್ತಾದೀತು. ಉದ್ಯೋಗದಲ್ಲಿ ಪ್ರಗತಿ ಇಲ್ಲ ಎಂದು ಬೇಸರಗೊಂಡಿದ್ದರೆ ನಿಮಗೆ ಅಲ್ಪ ನೆಮ್ಮದಿಯ ಸಂಗತಿಯು ಇರಲಿದೆ. ನೌಕರರ ಕಾರ್ಯವು ನಿಮಗೆ ಸಂತೋಷವನ್ನು ತರದು. ಸಂಪೂರ್ಣವಾದ ಮನಸ್ಸಿನಿಂದ ಕಾರ್ಯವನ್ನು ಮಾಡಲಾಗದು‌. ಪ್ರತಿಷ್ಠಿತ ಸಂಸ್ಥೆಯ ಉನ್ನತ ಅಧಿಕಾರದ ಪ್ರಾಪ್ತಿಯ ಅವಕಾಶವು ಬರಬಹುದು. ಲಾಭವಿಲ್ಲದ ಕಾರ್ಯದಲ್ಲಿ ಆಸಕ್ತಿಯು ಇರದು. ವಾಹನ ಚಾಲನೆಯಲ್ಲಿ ಜಾಗರೂಕರಾಗಿರಿ. ಕಣ್ಣಿನ ತೊಂದರೆಯು ಹೆಚ್ಚಾಗಬಹುದು. ನಿಮ್ಮ ಮೇಲಧಿಕಾರಿಗಳು ನಿಮ್ಮ ಕೆಲಸಕ್ಕೆ ಅಸಮಾಧಾನಗೊಳ್ಳುವರು. ನಿಮಗೆ ಗೊತ್ತಿಲ್ಲದೇ ಇರುವ ವಿಚಾರಗಳನ್ನು ಕೇಳಿ ಪಡೆಯಿರಿ. ಎಲ್ಲವೂ ಇದ್ದರೂ ಒಂಟಿಯಂತೆ ಅನ್ನಿಸಬಹುದು.

ಕನ್ಯಾ ರಾಶಿ : ಇಂದಿನ ಲಾಭವನ್ನು ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ಸುಮ್ಮನೇ ನಿಮ್ಮಷ್ಟಕ್ಕೆ ಇರಿ. ವಾಹನದ ಕಾರಣ ಕಲಹವಾಗುವುದು. ಆರೋಗ್ಯದಲ್ಲಿ ಸುಧಾರಣೆ ಇರಲಿದ್ದು ಕಾರ್ಯಕ್ಕೆ ತಯಾರಾಗುವಿರಿ. ಕಛೇರಿಯ ಕಾರ್ಯದ ನಿಮಿತ್ತ ಓಡಾಟವನ್ನು ಮಾಡಬೇಕಾಗಿದ್ದು ನಿಮಗೆ ಕಷ್ಟವಾದೀತು. ವಿತಂಡ ವಾದವನ್ನು ಮಾಡಿ ಎಲ್ಲರಿಂದ ದೂರಾಗುವಿರಿ. ಶತ್ರುಗಳು ಮಾನಸಿಕ ಕಿರುಕುಳವನ್ನು ಯಾವ ರೀತಿಯಿಂದಲೂ ಕೊಡಬಹುದು. ನಿಮ್ಮ ಕೆಲಸಕ್ಕೆ ಸಮಯದ ಮಿತಿಯನ್ನು ಇಟ್ಟುಕೊಳ್ಳುವುದು ಉತ್ತಮ. ಹಿರಿಯರ ತಿಳಿವಳಿಕೆಯು ಅಪಮಾನದಂತೆ ಕಾಣಬಹುದು. ಆಲಸ್ಯದ ಕಾರಣ ನಿಮ್ಮ ಕಾರ್ಯವು ಪೂರ್ಣವಾಗದು. ಸಂಗಾತಿಯ ಮಾತನ್ನು ನೀವು ಗಂಭೀರವಾಗಿ ಪರಿಗಣಿಸುವುದಿಲ್ಲ. ಕಛೇರಿಯ ಸ್ಥಳದಲ್ಲಿ ಬಹಳ ಎಚ್ಚರಿಕೆಯಿಂದ ಇರಿ. ಮಿತವಾದ‌ ಮಾತಿರಲಿ.

ತುಲಾ ರಾಶಿ : ಮಾನಸಿಕ ಆಘಾತವು ಇಂದು ಅನಿರೀಕ್ಷಿತ ಆಗಬಹುದು. ಬಾಂಧವರ ನಡುವೆ ವ್ಯವಹಾರದ ಕಾರಣ ಭಿನ್ನಾಭಿಪ್ರಾಯ ಬರಬಹುದು. ಇಂದಿನ‌ ‌ಮನೆಯ ವಾತಾವರಣದುಮನದ ನಿಮ್ಮ ಅಧ್ಯಯನಕ್ಕೆ ತೊಡಬಲಕಾಗಬಹುದು. ದಾಯಾದಿಗಳು ನಿಮ್ಮ ಮೇಲೆ ಅಪವಾದವನ್ನು ಮಾಡಬಹುದು. ಕಾರ್ಯದಲ್ಲಿ ಜಯವಿದ್ದರೂ ಆರ್ಥಿಕ ನಷ್ಟವು ಆಗಬಹುದು. ಹಿತಶತ್ರುಗಳ ಕಾರಣದಿಂದ ಇಂದಿನ ವ್ಯವಹಾರವು ಹಿಂದೆ ಸಾಗಲಿದೆ. ವಿವಾಹದ ವಿಳಂಬದಿಂದ ನಿಮಗೆ ಬೇಸರವಾದೀತು. ನಿಮ್ಮ ತಪ್ಪಿನಿಂದ ಹಿರಿಯರ ಕೆಂಗಣ್ಣಿಗೆ ಗುರಿಯಾಗುವಿರಿ. ತಂದೆಯ ಜೊತೆ ನಿಮ್ಮ ಭವಿಷ್ಯದ ಚಿಂತನೆಯನ್ನು ಮಾಡಲಿದ್ದೀರಿ. ಇಂದಿನ ಶುಭವಾರ್ತೆಯು ನಿಮ್ಮ ಕಾರ್ಯಕ್ಕೆ ಉತ್ಸಾಹವನ್ನು ಕೊಡುವುದು. ಉದ್ಯಮಕ್ಕೆ ಸೇರಲು ತಯಾರಿಯನ್ನು ಮಾಡಿಕೊಳ್ಳುವಿರಿ. ಇಷ್ಟದೇವರ ಸ್ಮರಣೆಯೊಂದಿಗೆ ಹೋಗಿ.

ವೃಶ್ಚಿಕ ರಾಶಿ : ಸ್ಪರ್ಧೆಯಲ್ಲಿ ಭಾಗವಹಿಸುವ ಉತ್ಸಾಹವಿರುವುದು. ಗೆಲುವು ಕಷ್ಟಸಾಧ್ಯವಾದೀತು. ಅನಿರೀಕ್ಷಿತ ಪ್ರಯಾಣವಾದರೂ ಕಾರ್ಯದಲ್ಲಿ ಜಯ ಸಿಕ್ಕೀತು. ಇಂದು ನಿಮ್ಮ ಪ್ರೀತಿಪಾತ್ರರ ಭೇಟಿಯಾಗಲಿದೆ. ಶುಭ ಕಾರ್ಯದಲ್ಲಿ ನಿಮಗೆ ಹೆಚ್ಚು ಆಸಕ್ತಿಯು ಇರಲಿದೆ. ಆಸ್ತಿಯ ಮಾರಾಟದಿಂದ ನಿಮಗೆ ಹೆಚ್ಚಿನ ಲಾಭವು ಸಿಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ಅಸ್ತಿತ್ವವು ಹೆಚ್ಚಾಗಿ ತೋರುವುಸು. ಭೂಸ್ವಾದೀನವನ್ನು ಮಾಡಿಕೊಳ್ಳುವ ಸಂದರ್ಭವು ಬರಬಹುದು. ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಲು ಸಿದ್ಧರಿರುವಿರಿ. ತಪ್ಪನ್ನು ನೀವು ಒಪ್ಪಿಕೊಳ್ಳಲಾರಿರಿ. ಸಹೋದರರ ನಡುವೆ ವಾಗ್ವಾದವು ಆಗಬಹುದು. ಇಂದಿನ ವ್ಯವಹಾರವು ಎಚ್ಚರಿಕೆಯಿಂದ ಇರಲಿ. ಕೆಲವೊಮ್ಮೆ ನಿಮ್ಮ ಮಾತುಗಳೇ ನಿಮಗೆ ಮುಳುವಾಗಬಹುದು. ಬಹಳ ದಿನಗಳ ಅನಂತರ ಖುಷಿಯಿಂದ ಇರುವಿರಿ. ಜಂತುಗಳಿಂದ ತೊಂದರೆಯಗೆ ಸಿಕ್ಕಿಕೊಳ್ಳುವಿರಿ.

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ