Horoscope: ಈ ರಾಶಿಯವರು ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಇಂದು ಸುದಿನ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್ 24) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ರೇವತೀ, ಯೋಗ: ಹರ್ಷಣ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 38 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:54 ರಿಂದ 12:19ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:09 ರಿಂದ 04:34ರ ವರೆಗೆ, ಗುಳಿಕ ಕಾಲ ಬೆಳಗ್ಗೆ 08:04 ರಿಂದ 09:29ರ ವರೆಗೆ.
ಸಿಂಹ ರಾಶಿ : ಜಾಣ್ಮೆಯಿಂದ ಸಿಗುವ ಜವಾಬ್ದಾರಿಯನ್ನು ಕಳೆದುಕೊಳ್ಳುವಿರಿ. ಬರವಣಿಗೆ ಕ್ಷೇತ್ರದವರು ಹೊಸ ದಾಖಲೆಯನ್ನು ಮಾಡುವರು. ಕೆಟ್ಟ ಅಭ್ಯಾಸಕ್ಕೆ ಹಣವನ್ನು ಖರ್ಚು ಮಾಡುವಿರಿ. ನಿಮ್ಮ ಸರಳ ಉಪಾಯವನ್ನು ಕಾರ್ಯದಲ್ಲಿ ಹಾಕುವಿರಿ. ನಿಮ್ಮ ಮಾತು ಸಂಗಾತಿಯನ್ನು ಮೌನಿಯನ್ನಾಗಿ ಮಾಡುವುದು. ನೀವು ಮನೆಯ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕಾದೀತು. ಮನೆಯ ಕಾರ್ಯವು ನಿಮಗೆ ತೃಪ್ತಿ ಕೊಡುವುದು. ಉಪಕಾರದ ಸ್ಮರಣೆಯನ್ನು ನೀವು ಇಟ್ಟುಕೊಳ್ಳುವುದು ಅನಿವಾರ್ಯ. ವಾಹನ ಸಂಚಾರಕ್ಕೆ ತೊಂದರೆಯಾಗುವುದು. ಹಣಕಾಸಿನ ವ್ಯವಹಾರದಲ್ಲಿ ಸಡಿಲಿಕೆ ಬೇಡ. ಎಲ್ಲ ವಿಚಾರವನ್ನೂ ನೀವು ತಿಳಿಯಬೇಕು ಎಂಬ ಕುತೂಹಲವು ಇರುವುದು. ಕನಸಿನಲ್ಲಿಯೇ ದಿನವನ್ನು ಕಳೆಯುವಿರಿ.
ಕನ್ಯಾ ರಾಶಿ : ಹಲವು ದಿನದ ಅನಂತರ ಸ್ಥಗಿತವಾದ ಕಾರ್ಯವನ್ನು ಕೈಗೆತ್ತಿಕೊಳ್ಳುವಿರಿ. ನಿಮಗೆ ನಾನಾ ವಿಘ್ನಗಳು ಮತ್ತೆ ಬರುವುದು. ದೈವಜ್ಞರನ್ನು ಭೇಟಿಯಾಗುವುದು ಸೂಕ್ತ. ನಿಮ್ಮಅಹಂಕಾರದ ಮಾತುಗಳಿಂದ ಮಿತ್ರರೇ ನಿಮ್ಮ ವಿರುದ್ಧ ತಿರುಗಿ ನಿಲ್ಲಬಹುದು. ಇನ್ನೊಬ್ಬರನ್ನು ಕಂಡು ಕೊರಗುವುದು ಬೇಡ. ನಿಮ್ಮ ಆಲೋಚನೆಗಳನ್ನು ಇನ್ನೊಬ್ಬರ ಮೇಲೆ ಹೇರುವುದು ಬೇಡ. ಚಾಂಚಲ್ಯದ ಕಾರಣ ಉದ್ಯೋಗದಲ್ಲಿಯೂ ಸರಿಯಾದ ಏಕಾಗ್ರತೆಯಿಂದ ಕೆಲಸವನ್ನು ಮಾಡಲಾಗದು. ಸಾಮಾಜಿಕವಾಗಿ ಕಾರ್ಯಗಳಿಗೆ ನಿಮ್ಮ ಹಣವನ್ನೇ ಬಳಸುವಿರಿ. ಮನೆಯಲ್ಲಿ ನಿಮ್ಮ ಕಾರ್ಯಗಳಿಗೆ ಹಿರಿಯರಿಂದ ವಿರೋಧ ಬರಲಿದೆ. ಮನೆಯ ಎಷ್ಟೋ ಸಂಗತಿಗಳನ್ನು ಇಂದು ತಿಳಿದುಕೊಳ್ಳುವಿರಿ. ಅಪಮಾನವನ್ನು ಧೈರ್ಯದಿಂದ ಎದುರಿಸಲು ಮುಂದಾಗುವಿರಿ. ತಿಳಿವಳಿಕೆಯು ಇಂದು ನಿಮಗೆ ಮುಜುಗರವನ್ನು ತರಬಹುದು. ನಿಮ್ಮ ವೃತ್ತಿಯನ್ನು ಪ್ರೀತಿಸುವುದು ಅನಿವಾರ್ಯವೇ ಆಗಿರುತ್ತದೆ.
ತುಲಾ ರಾಶಿ : ಮನೆಗಾಗಿ ಅನವಶ್ಯಕ ಖರ್ಚನ್ನು ಮಾಡುವಿರಿ. ಸಿಟ್ಟಿನಿಂದ ಮೂಗನ್ನು ಕತ್ತರಿಸಿಕೊಳ್ಳುವಿರಿ. ಅನಂತರ ಪಶ್ಚಾತ್ತಾಪ ಪಡುವಿರಿ. ರಾಜಕೀಯದಲ್ಲಿ ತೃಪ್ತಿ ಸಿಗದೇ ತೊಳಲಾಟ ಇರಲಿದೆ. ಸಂಗಾತಿಯ ಆರೋಗ್ಯದ ಕಡೆ ನಿಮ್ಮ ಗಮನವು ಹೆಚ್ಚಿರುವುದು. ಕಿರಿಯರಿಂದ ಆಕಸ್ಮಿಕವಾಗಿ ಗೌರವಕ್ಕೆ ಪಾತ್ರರಾಗುವಿರಿ. ಅಸಹಜ ಮಾತುಗಳಿಗೆ ಸ್ಪಂದನೆ ಸಿಗದು. ಪ್ರತ್ಯೇಕತೆಯನ್ನು ನೀವು ಬಯಸುತ್ತಿರುವಿರಿ. ಹೂಡಿಕೆಯಿಂದ ಆರ್ಥಕ ಅಭಿವೃದ್ಧಿಯಾಗಲಿದೆ ಎಂಬ ನೆಮ್ಮದಿ ಇರುವುದು. ದಾಂಪತ್ಯ ಜೀವನವನ್ನು ಬಹಳ ಆನಂದಿಸುವಿರಿ. ನಿಮ್ಮ ಬಗ್ಗೆಯೂ ಅಪ್ರಚಾರ ಮಾಡುತ್ತಾರೆ ಎಂಬುದು ತಿಳಿಯುವುದು. ಸ್ನೇಹಿತರ ಜೊತೆ ಆಪ್ತವಾಗಿ ಕಾಲವನ್ನು ಕಳೆಯಲಿದ್ದೀರಿ. ಖರ್ಚುಗಳಿಗೆ ನಿರ್ದಿಷ್ಟ ಕಾರಣವು ಇರಲಿ. ಚಂಚಲವಾದ ಮನಸ್ಸಿನಿಂದ ಯಾರು ಹೇಳಿದ್ದೂ ನಿಮಗೆ ಗೊತ್ತಾಗದು.
ವೃಶ್ಚಿಕ ರಾಶಿ : ನಿಮ್ಮ ವೃತ್ತಿಯೇ ನಿಮ್ಮನ್ನು ಕೈಹಿಡಿದು ನಡೆಸುವುದು. ಭೂಮಿಯ ಖರೀದಿಯ ಬಗ್ಗೆ ಪೂರ್ಣ ಮನಸ್ಸು ಇರದು. ಸಂಗಾತಿಯ ಒತ್ತಾಯಕ್ಕೆ ಮಣಿಯುವಿರಿ. ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಇಂದು ಸುದಿನ. ನಿಮ್ಮ ಜ್ಞಾನವನ್ನು ಇತರಿಗೆ ಹಂಚುವಿರಿ. ಭೂಮಿಯ ಲಾಭವು ಆಗಲಿದ್ದು ಅನೇಕ ದಿನದ ಚಿಂತೆಗಳು ದೂರಾಗುವುದು. ಅಧಿಕ ಆದಾಯಕ್ಕಾಗಿ ಉದ್ಯೋಗವನ್ನು ನೀವು ತ್ಯಾಗಮಾಡುವಿರಿ. ಮಾನಸಿಕ ಅಸಮತೋಲನವನ್ನು ಸರಿ ಮಾಡಿಕೊಳ್ಳುವಿರಿ. ಮಾತಿಗೆ ಸಂಬಂಧಿಸದಂತೆ ದೋಷವು ನಿಮಗೆ ಕಾಣಸಿಗುವುದು. ನಿಮ್ಮ ಕೆಲಸವನ್ನು ಶಿಸ್ತಿನಿಂದ ಮಾಡಿ ಮುಗಿಸುವಿರಿ. ಇಂದು ಆಗಬೇಕಾದ ಕೆಲಸಕ್ಕೆ ಹೆಚ್ಚು ಓಡಾಡಬೇಕಾಗುವುದು. ಇಂದು ಪ್ರಯತ್ನಿಸಿದ ಕಾರ್ಯವು ಆಗದೇ ಇರುವುದಕ್ಕೆ ಬೇಸರಿಸುವಿರಿ. ಇನ್ನೊಬ್ಬರನ್ನು ಟೀಕಿಸುವುದು ನಿಮಗೆ ಬೇಡ. ಹಿರಿಯರ ಕಿವಿಮಾತಿನ ಮೇಲೆ ನಿರ್ಲಕ್ಷ್ಯವಿರುವುದು. ನಿಮ್ಮದಲ್ಲದ ವಸ್ತುಗಳ ಮೇಲೆ ಅಧಿಕ ಮೋಹವು ಇರುವುದು.