Horoscope: ದಿನಭವಿಷ್ಯ, ಈ ರಾಶಿಯವರು ಭೂತಕಾಲದ ವಿಷಯವನ್ನು ಪುನಃ ನೆನಪಿಸಿಕೊಂಡು ಮನಸ್ಸು ಹಾಳುಮಾಡಿಕೊಳ್ಳುವಿರಿ
ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 31) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 31) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಅತಿಗಂಡ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹುಕಾಲ ಮಧ್ಯಾಹ್ನ 02:06 ರಿಂದ 15:39ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:22 ರಿಂದ 07:54ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 09:27 ರಿಂದ 11:00ರ ವರೆಗೆ.
ಸಿಂಹ ರಾಶಿ : ರಾಜಕೀಯ ವ್ಯಕ್ತಿಗಳ ಸಹವಾಸವಾಗಲಿದೆ. ತುಂಬಾ ಹಳೆಯದಾದ ಸಂಸ್ಥೆಯೊಂದನ್ನು ಮುನ್ನಡೆಸುವ ಜವಾಬ್ದಾರಿಯು ನಿಮ್ಮ ಹೆಗಲಿಗೆ ಬರಬಹುದು. ಹೆಚ್ಚು ಆದಾಯವನ್ನು ಇಂದಿನ ಉದ್ಯಮದಿಂದ ನೀವು ನಿರೀಕ್ಷಿಸುವಿರಿ. ನಿಮ್ಮ ಕರ್ತವ್ಯವನ್ನು ನೀವು ಮಾಡಿ. ಅದೃಷ್ಟವನ್ನು ನಂಬಿಕೊಂಡು ಸಮಯವನ್ನು ವ್ಯರ್ಥಮಾಡುವ ಸಾಧ್ಯತೆ ಇದೆ. ಮಾತಿಗೆ ತಪ್ಪಿದ ಕಾರಣ ನಿಮ್ಮನ್ನು ಅವಮಾನಿಸಬಹುದು. ಆರ್ಥಿಕಬಲವು ನಿಮಗೆ ತುಂಬಾ ಅಗತ್ಯವಾಗಿ ಬೇಕಿದೆ. ಬೇರೆ ಕೆಲಸಗಳಿಂದ ಹೆಚ್ಚು ಆದಾಯ ಬರುವಂತೆ ನೀವು ನೋಡಿಕೊಳ್ಳುವಿರಿ. ನಿಮ್ಮ ಮಾತುಗಳು ಕೆಲವರಿಗೆ ಪ್ರಯೋಜನಕ್ಕೆ ಬರಲಿದೆ.
ಕನ್ಯಾ ರಾಶಿ : ಉದ್ಯೋಗವನ್ನು ಅರಸಿ ದೂರದ ಊರಿಗೆ ಹೋಗುವಿರಿ. ಕೆಲಸದ ಹುಡುಕಾಟದಲ್ಲಿ ನಿಮ್ಮ ಸಮಯವು ವ್ಯರ್ಥವಾಗುವುದು. ಪದೆ ಪದೆ ಬರುವ ಸಾಲದ ವಿಚಾರದಿಂದ ಮನೆಯ ವಾತಾವರಣವು ಬಿನ್ನವಾಗಿರುವುದು. ಭೂತಕಾಲದ ವಿಷಯವನ್ನು ಪುನಃ ನೆನಪಿಸಿಕೊಂಡು ಮನಸ್ಸು ಹಾಳುಮಾಡಿಕೊಳ್ಳುವಿರಿ. ಇಂದಿನ ನಿಮ್ಮ ಪ್ರಯಾಣವು ಅಡೆತಡೆಗಳಿಂದ ಇರಲಿದೆ. ಅನೇಕ ವಿಚಾರದಲ್ಲಿ ಆಸಕ್ತಿಯಿದ್ದು ಯಾವುದುನ್ನೂ ಪೂರ್ಣ ಮಾಡುವುದಿಲ್ಲ. ದೂರದಲ್ಲಿ ಇರುವ ಮಿತ್ರರು ನಿಮಗೆ ಸಹಾಯವನ್ನು ಮಾಡುವರು. ಇಂದು ದೈಹಿಕ ಪರಿಶ್ರಮವು ಹೆಚ್ಚು ಇರಲಿದೆ. ಕಛೇರಿಯ ಕೆಲಸಕ್ಕೆ ಸಂಬಂಧಿಸಿದಂತೆ ನೀವು ಯಾರ ಸಹಾಯವನ್ನೂ ಪಡೆಯದೆ ಸ್ವಾಭಿಮಾನದಿಂದ ವರ್ತಿಸುವಿರಿ.
ತುಲಾ ರಾಶಿ : ಅನಿರೀಕ್ಷಿತವಾಗಿ ದೊರೆತ ಉನ್ನತ ಅಧಿಕಾರದಿಂದ ನಿಮಗೆ ಸಂತೋಷವಾಗಲಿದೆ. ದಾಂಪತ್ಯದಲ್ಲಿ ಬರುವ ಸಮಸ್ಯೆಗಳನ್ನು ನೀವೇ ಸರಿಮಾಡಿಕೊಳ್ಳುವುದು ಉತ್ತಮ. ಬಹಿರಂಗಪಡಿಸಿ ನಿಮ್ಮ ಮಾನವನ್ನು ನೀವು ಕಳೆದುಕೊಳ್ಳಬೇಕಾಗುವುದು. ಸಾಧ್ಯವಾದಷ್ಟು ಮಾತನ್ನು ಕಡಿಮೆ ಮಾಡಿ. ಕೃತಿಯೇ ನಿಮ್ಮ ಮಾತಾಗಲಿ. ಇಂದಿನ ನಿಮ್ಮ ಸಮಯವು ಗೃಹ ಬಳಕೆಯ ವಸ್ತುಗಳ ಖರೀದಿಗೆ ಮೀಸಲಿಡುವಿರಿ. ನಿಮ್ಮ ಮೇಲಿನ ಆರೋಪವು ಸುಳ್ಳು ಎಂದು ತೀರ್ಮಾನವು ಪ್ರಕಟವಾಗುವವುದು. ಸಮಯಸ್ಫೂರ್ತಿಯಿಂದ ಗಂಭೀರವಾದ ಸಮಸ್ಯೆಯನ್ನೂ ಸಲೀಸಾಗಿ ಬಗೆಹರಿಸಿಕೊಳ್ಳುವಿರಿ. ಅನುಮಾನದಿಂದ ಸ್ನೇಹವು ಹಾಳುಗುವುದು. ದುಡುಕಿ ನಿರ್ಧಾರವನ್ನು ತೆಗೆದುಕೊಳ್ಳುವ ಶಂಕೆ ಇದೆ.
ವೃಶ್ಚಿಕ ರಾಶಿ : ಆರ್ಥಿಕ ನಷ್ಟಕ್ಕೆ ನಿಮಗೆ ಚಿಂತೆಯಾಗಬಹುದು. ಎಲ್ಲರ ಜೊತೆಗೂಡಿ ಕೆಲಸ ಮಾಡಲು ನಿಮಗೆ ಆಗದೇ ಇರುವುದು. ನಿಮ್ಮ ಪ್ರಶಂಸೆಯಿಂದ ಉಳಿದವರಿಗೆ ಕಷ್ಟವಾದೀತು. ತಂದೆಯಿಂದ ನಿಮಗೆ ಬೇಕಾದ ಕೆಲಸವು ಆಗಲಿದೆ. ಧಾರ್ಮಿಕ ಕಾರ್ಯಗಳನ್ನು ಇಂದು ಅನಿವಾರ್ಯವಾಗಿ ಮಾಡಬೇಕಾಗಬಹುದು. ನಿಮ್ಮ ಯೋಜನೆಯನ್ನು ಗೌಪ್ಯವಾಗಿ ಇರಿಸಿಕೊಳ್ಳಿ. ಸಂಕೋಚದಿಂದ ನಿಮಗೆ ಸಮಸ್ಯೆಗೆ ಪರಿಹಾರವನ್ನು ತಿಳಿದುಕೊಳ್ಳುವುದು ಕಷ್ಟವಾದೀತು. ಬಂಧುಗಳ ಜೊತೆಗೆ ಸಂವಹನವು ಇಷ್ಟವಾಗದು. ವಾಹನದ ಓಡಾಟವು ನಿಮಗೆ ಕಿರಿಕಿರಿ ಕೊಡಬಹುದು. ನಿಮ್ಮ ಪ್ರಯಾಣವನ್ನು ಮಾಡಿ ಮುಂದೂಡುವುದು ಉತ್ತಮ. ಯಾರೋ ಮಾಡಿದ ನಿಯಮಕ್ಕೆ ನಿಮಗೆ ತೊಂದರೆಯಾಗಬಹುದು.
–ಲೋಹಿತಶರ್ಮಾ 8762924271 (what’s app only))