ದಿನಭವಿಷ್ಯ: ಇಂದು ಈ ರಾಶಿಯವರು ಪಡೆದುದಕ್ಕಿಂತ ಕಳೆದುಕೊಳ್ಳುವುದು ಅಧಿಕ..

Horoscope Today 13 August: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಗ್ರೀಷ್ಮ ಋತುವಿನ ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯಾ ತಿಥಿಯ ಶುಕ್ರವಾರದಂದು ಪರರ ದೂಷಣೆಯ ಮಾತು, ಪುಣ್ಯಕ್ಷೇತ್ರ ದರ್ಶನ, ಉಪವಾಸ, ಅಹಂಕಾರ ದೂರ, ವೃತ್ತಿಯ ಆಧಾರದಿಂದ ಸಾಲ, ಪಶ್ಚಾತ್ತಾಪ, ಪರರ ಪ್ರಶಂಸೆಗೆ ಅಸಹನೆ, ತಂತ್ರಜ್ಞರಿಗೆ ಒತ್ತಡ ಇವೆಲ್ಲ ಈ ದಿನದ ವಿಶೇಷ.

ದಿನಭವಿಷ್ಯ: ಇಂದು ಈ ರಾಶಿಯವರು ಪಡೆದುದಕ್ಕಿಂತ ಕಳೆದುಕೊಳ್ಳುವುದು ಅಧಿಕ..
ದಿನಭವಿಷ್ಯ
Edited By:

Updated on: Aug 13, 2026 | 12:18 AM

ಮೇಷ ರಾಶಿ:

ಅನುಭವವುಳ್ಳ ಜನರಿಂದ ನೀವು ಸಹಕಾರ ಪಡೆಯುವಿರಿ. ಕುಟುಂಬದ ಸಂತೋಷಕ್ಕಾಗಿ ಕೆಲವನ್ನು ತ್ಯಾಗ ಮಾಡಬೇಕಾಗುವುದು. ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಬಹುದು. ಕಲಾಪ್ರಪಂಚಕ್ಕೆ ನಿಮ್ಮ ಪ್ರವೇಶವಾಗಲಿದ್ದು, ಹಲವರಿಂದ ನಿಮ್ಮ ಬಗ್ಗೆ ಆಸ್ತೆಯನ್ನು ಕಾಣಬಹುದು. ವೃತ್ತಿಕ್ಷೇತ್ರದಲ್ಲಿ ಇಂದು ಅತಿಯಾದ ಉತ್ಸಾಹ ಬೇಡ. ನಿಮ್ಮ ನಿರೀಕ್ಷೆಗೆ ವಿರುದ್ಧವಾದುದು ನಡೆಯಬಹುದು. ಕ್ರೋಧಕ್ಕೆ ವಶವಾಗಬೇಕಾಗುವುದು. ಯಾವುದೇ ಅನಾಹುತಗಳು ಸಂಭವಿಸಿದಂತೆ ಎಚ್ಚರಿಕೆಯೂ ಬೇಕು.

ವೃಷಭ ರಾಶಿ:

ವೃತ್ತಿಜೀವನದಲ್ಲಿ ನಿಮ್ಮ ಪ್ರಯತ್ನವು ಫಲಕೊಡುವುದು. ನಿಮ್ಮ ನಾಯಕನಿಂದ ನಿಮಗೆ ಬೇಕಾದ ಸಂಪೂರ್ಣ ಬೆಂಬಲ ಸಿಗಲಿದೆ. ವೃತ್ತಿಜೀವನದಲ್ಲಿ ಪ್ರಭಾವ ಎಷ್ಟಿದೆ ಎಂದು ಇಂದು ತಿಳಿಯುವುದು. ಹಣಕಾಸಿನ ಬಗ್ಗೆ ಯಾರನ್ನೂ ನಂಬಿ ಹಣವನ್ನು ಕೊಡುವುದು ಬೇಡ. ವೃತ್ತಿಯಲ್ಲಿ ಉದ್ಯೋಗಿಗಳ ಜೊತೆ ಸೌಜನ್ಯದಿಂದ ವರ್ತಿಸಿ. ಯಾರನ್ನೂ ಅನವಶ್ಯಕವಾಗಿ ಬದೂರಬೇಡಿ. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು. ಇಂದು ನಿಮಗೆ ಸಮಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗುವುದು.

ಮಿಥುನ ರಾಶಿ:

ನಂಬಿಕೆಯ ದ್ರೋಹದಿಂದ ನಿಮಗೆ ಬೇಸರವಾಗಲಿದೆ. ಆರ್ಥಿಕವಾದ ಸಬಲತೆಯು ನಿಮಗೆ ಚೈತನ್ಯವನ್ನು ಕೊಡುವುದು. ಕಚೇರಿಯಲ್ಲಿ ಕೆಲಸದ ಒತ್ತಡ ಇಂದು ಅಧಿಕವಾಗಿರಲಿದೆ. ನಿಸ್ಪೃಹರಾಗಿ ದೇವರ ಸೇವೆಯಲ್ಲಿ ತೊಡಗುವಿರಿ. ಬರುವ ಹಣವು ಬಾರದೇ ತಾಳ್ಮೆ ಕಳೆದುಕೊಳ್ಳಬೇಕಾಗುವುದು. ನೂತನ ಗೃಹದ ನಿರ್ಮಾಣದ ಬಗ್ಗೆ ನಿಮಗೆ ಅತ್ಯಂತ ಬಲವಾದ ಬಯಕೆ ಇರಲಿದೆ. ವಿವಾಹಕ್ಕೆ ನಿಮ್ಮೆ ದೃಢವಾದ ಮನಸ್ಸು ಇರದು.

ಕರ್ಕಾಟಕ ರಾಶಿ:

ನಿಮ್ಮ ಆದಾಯದ ಮೂಲವನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಿ. ದಿನ ನೀವು ಗಮನ ಕೊಡದಿದ್ದರೆ, ಅನೇಕ ಉತ್ತಮ ಅವಕಾಶಗಳು ಕಳೆದುಹೋಗಬಹುದು. ಕುಟುಂಬ ಮಹತ್ವವನ್ನು ಅರ್ಥಮಾಡಿಕೊಳ್ಳಿ ಮತ್ತು ಅವರ ಜೊತೆ ನಿಮ್ಮ ವ್ಯವಹಾರವನ್ನು ಇಟ್ಟುಕೊಳ್ಳಿ. ಸಮಾಜದಿಂದ ಆರ್ಥಿಕವಾದ ಟೀಕೆಗೆ ಗುರಿಯಾಗಬೇಕಾದೀತು‌. ಆಪ್ತರನ್ನು ಕಳೆದುಕೊಳ್ಳಬೇಕಾಗುವುದು. ಸಾಲವಾಗಿ ಪಡೆದ ಹಣವನ್ನು ತೀರಿಸುವಿರಿ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು.

ಸಿಂಹ ರಾಶಿ:

ಸಣ್ಣ ಮೊತ್ತವಾದರೂ ಅದನ್ನು ಉಳಿಸುವ ಬಗ್ಗೆ ಯೋಚಿಸುವಿರಿ‌. ಹಿತಶತ್ರುಗಳಿಂದ ಬೇಕಾದ ಮಾಹಿತಿಯು ಸಿಗಲಿದೆ. ಈ ದಿನ ನಿಮ್ಮ ಸಮಯವು ಬಹಳ ಉತ್ಸಾಹ ಮತ್ತು ನೆಮ್ಮದಿಯಿಂದ ಕಳೆದುಹೋಗುವುದು. ಅತಿಯಾದ ಆಲೋಚನೆಯಿಂದ ತಲೆನೋವು ಉಂಟಾಗಬಹುದು. ಹೊಸತನ್ನು ಪಡೆಯದಿದ್ದರೂ ಇದ್ದುದನ್ನು ರಕ್ಷಿಸುವುದು ಹೊಣೆಗಾರಿಕೆ ಆಗಿರುವುದು. ಸಂಬಂಧಿಕರ ಜೊತೆ ಮನಸ್ತಾಪ ಏಳಬಹುದು. ಈ ಕಾರಣಕ್ಕೆ ನಿಮ್ಮ ಕೆಲಸಕ್ಕೆ ಸಹಾಯವೂ ಸಿಗದೆ ಹೋಗಬಹುದು. ನಿಮ್ಮ ತಪ್ಪಿನ ನಿರ್ಧಾರದಿಂದ ಪಶ್ಚಾತ್ತಾಪ ಪಡಬೇಕಾಗುವುದು.

ಕನ್ಯಾ ರಾಶಿ:

ನೀವು ಮಾಡದ ಕಾರ್ಯಗಳಿಗೆ ನಿಮ್ಮ ಹಣೆಪಟ್ಟಿ ಬೀಳಬಹುದು. ಅದನ್ನು ಎದುರಿಸುವ ಚಾಕಚಕ್ಯತೆ ನಿಮ್ಮದಾಗಲಿದೆ. ಇಂದು ಜಾಣ್ಮೆಯಿಂದ ಮಾಡಿದ ಕೆಲಸಕ್ಕೆ ನಿಮಗೆ ಮೆಚ್ಚುಗೆ ಸಿಗುವುದು. ನಿಮ್ಮ ತಪ್ಪಿಗೆ ಮತ್ಯಾರನ್ನೋ ಗುರಿ ಮಾಡುವಿರಿ. ಏಕಾಂತದಿಂದ ಮನಸ್ಸು ನಿರಾಳ ಎನಿಸುವುದು. ಸಾಲವಾಗಿ ತಂದ ಹಣವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಅಸಾಧ್ಯ ಎನಿಸಿರುವುದನ್ನು ಬಲವಂತವಾಗಿ ಮಾಡುವುದು ಬೇಡ. ಏನನ್ನೋ ಮಾತನಾಡಲು ಹೋಗಿ ಸಿಕ್ಕಿಹಾಕಿಕೊಳ್ಳಬೇಡಿ. ಮನಸ್ಸಿಗೆ ಹಿಡಿಸದ್ದನ್ನು ಪ್ರಯತ್ನ ಪೂರ್ವಕವಾಗಿ ಮಾಡುವುದು ಬೇಡ.

ತುಲಾ ರಾಶಿ:

ಪರೋಪಕಾರದಲ್ಲಿ ಆಸಕ್ತಿ ಹೆಚ್ಚಿದ್ದು ಇನ್ನೊಬ್ಬರನ್ನೂ ಇದಕ್ಕೆ ಪ್ರೇರಿಸುವಿರಿ. ಉತ್ತಮ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳಲಿದ್ದೀರಿ. ನಿಮ್ಮ ಅಡಿಯಲ್ಲಿ ಬರುವ ನೌಕರರ ನಡವಳಿಕೆಯನ್ನು ಪ್ರಶ್ನಿಸಬೇಕಾದ ಸಂದರ್ಭವು ಬರಬಹುದು. ಅಧ್ಯಾತ್ಮದಲ್ಲಿ ಆಸಕ್ತಿ ಹೆಚ್ಚಾಗಬಹುದು. ಪ್ರೇಮದಲ್ಲಿ ಗೊಂದಲ ಉಂಟಾಗಬಹುದು. ದಾಖಲೆಗಳ ಬಗ್ಗೆ ಎಚ್ವರಿಕೆ ಅಗತ್ಯ. ವಿರುದ್ಧ ವಂಚನೆಯ ಆರೋಪವು ಬರಬಹುದು. ವಿಷಯ, ಸಮಯ ಎಲ್ಲವನ್ನೂ ನೋಡಿ ವ್ಯವಹರಿಸಿ.

ವೃಶ್ಚಿಕ ರಾಶಿ:

ಇಂದು ನಿಮ್ಮ ವಿದೇಶ ಪ್ರಯಾಣವು ಸಫಲವಗುವುದುಬೆಂಬ ಭರವಸೆ ಬರಲಿದೆ. ಸ್ವಾಭಿಮಾನವನ್ನು ಮರೆತು ನೀವು ಜೀವನ ಸಾಗಿಸುವುದು ಕಷ್ಟವಾದೀತು. ನಿಮಗೆ ಲಾಭವಾಗುವ ಕೆಲವು ಕಾರ್ಯಗಳು ನಿಮಗೆ ಸಿಗಬಹುದು. ನಿಮ್ಮ ಆರೋಗ್ಯ ಸಮಸ್ಯೆಗೆ ಕಾಳಜಿ ಅತ್ಯವಶ್ಯಕ. ವೃತ್ತಿಜೀವನದಲ್ಲಿ ಸವಾಲುಗಳು ಬರಬಹುದು. ವಿದ್ಯಾರ್ಥಿಗಳು ಅಭ್ಯಾಸವನ್ನು ಅರ್ಧಕ್ಕೇ ನಿಲ್ಲಸಬೇಕಾಗಿಬರಬಹುದು. ಅನಿವಾರ್ಯವಾಗಿ ಮನೆಯಿಂದ ದೂರ ಹೋಗುವಿರಿ.

ಧನು ರಾಶಿ:

ವಿದ್ಯಾರ್ಥಿಗಳು ತಮ್ಮ ಓದಿನ ಉತ್ಸಾಹವನ್ನು ಕಳೆದುಕೊಳ್ಳುವರು. ಸಾಮಾಜಿಕ ಗೌರವವು ಸಿಗುವಂತಹ ಕೆಲಸವನ್ನು ನೀವು ಮಾಡುವಿರಿ. ವೃತ್ತಿಯ ಆಧಾರದ ಮೇಲೆ ಸಾಲ ಪಡೆಯುವಿರಿ. ಇನ್ನೊಬ್ಬರನ್ನು ಬದಲಾಯಿಸುವ ಬದಲು ನೀವೇ ಬದಲಾಗಿ. ಹೊಸ ನಿರೀಕ್ಷೆಗಳು ನಿಮಗೆ ಸಂತೋಷವನ್ನು ತರುತ್ತವೆ. ಹೊಸತನ್ನು ಏನಾದರೂ ಹುಟ್ಟುಹಾಕುವ ಹಂಬಲ ಅಧಿಕವಾಗುವುದು. ಮಕ್ಕಳು ನಿಮಗೆ ಬೇಕಾದ ಆರ್ಥಿಕ ನೆರವನ್ನು ಕೊಡುವರು. ನಿಮ್ಮ ದುರಭ್ಯಾಸವು ಅತಿಯಾಗಲಿದೆ.

ಮಕರ ರಾಶಿ:

ನಿಮಗೆ ಇಂದು ಅವ್ಯಕ್ತ ಭಯವು ಕಾಡುವುದು. ಎಲ್ಲ ಕಡೆಗಳಿಂದ ತೊಂದರೆಯಾದಂತೆ ಅನ್ನಿಸೀತು. ಇಂದು ನಿಮ್ಮ ಕುಟುಂಬದಲ್ಲಿ ನೆಮ್ಮದಿ ಇರಲಿದೆ. ವೆಚ್ಚವನ್ನು ನಿಯಂತ್ರಿಸಿ, ಆರ್ಥಿಕ ಲಾಭವನ್ನು ಪಡೆಯುವಿರಿ. ಯಾಂತ್ರಿಕ ಜೀವನಕ್ಕೆ ತಿಲಾಂಜಲಿ ನೀಡುವಿರಿ. ನಿಮ್ಮ ಒಂದು ತಪ್ಪು ನಿರ್ಧಾರವು ನಿಮ್ಮ ಆರ್ಥಿಕತೆಯನ್ನು ಸಡಿಲಿಸಬಹುದು. ಉತ್ಸಾಹ ಭಗಂವು ವೃತ್ತಿಯಲ್ಲಿ ಆಗುವುದು. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ನಿಮ್ಮ ಬಗ್ಗೆ ಕುಟುಂಬದಲ್ಲಿ ಒಳ್ಳೆಯ ಅಭಿಪ್ರಾಯವು ಇರುವುದು.

ಕುಂಭ ರಾಶಿ:

ನಿಮ್ಮ ಇಷ್ಟದ ವಸ್ತುಗಳನ್ನು ಪಡೆಯುವ ಖುಷಿಯೇ ಬೇರೆ. ನಿಮಗೆ ಉದ್ಯೋಗದಲ್ಲಿ ಬಡ್ತಿಯಿಂದ ಸಂತೋಷವು ಇಮ್ಮಡಿಸುವುದು. ನಿಮ್ಮ ನಿರ್ಧಾರಗಳು ಇಂದು ಈಡೇರಬಹುದು. ಸವಾಲುಗಳನ್ನು ಬಹಳ ಜಾಣ್ಮೆಯಿಂದ ಸ್ವೀಕರಿಸಬೇಕು‌ ಮತ್ತು ಎದುರಿಸಬೇಕು. ವೃತ್ತಿಜೀವನದಲ್ಲಿ ಅಧಿಕಾರಿಗಳಿಂದ ಕಿರಿಕಿರಿ ಉಂಟಾಗಬಹುದು. ನೀವು ಮಾಡಿದ ದಾನ ಇತರರಿಗೆ ಗೊತ್ತಾಗದಂತೆ ಇರುವಿರಿ. ನಿಮ್ಮ ಕರ್ತವ್ಯವನ್ನು ಮಾಡಿ ಮುಗಿಸಿ. ರಾಜಕೀಯ ವ್ಯಕ್ತಿಗಳಿಗೆ ಬೆಂಬಲವಿರುವುದನ್ನು ಕಾಣಬಹುದು.

ಮೀನ ರಾಶಿ:

ನೀವು ಬಂಧುಗಳಿಂದ ಯಾವುದಾದರೂ ಸಹಾಯವನ್ನು ಬಯಸುವಿರಿ. ನೀವು ಇಂದು ವೃತ್ತಿಯನ್ನು ಬದಲಿಸುವ ನಿರ್ಧಾರ ಮಾಡಲಿದ್ದೀರಿ. ಕಛೇರಿಯಲ್ಲಿ ಏರು ದನಿಯಿಂದ ಕೆಲಸ ಮಾಡಿಸಿಕೊಳ್ಳುವಿರಿ. ನಿಮ್ಮ ವೃತ್ತಿಕ್ಷೇತ್ರದಲ್ಲಿ ಸ್ಥಾನಮಾನ, ಪ್ರತಿಷ್ಠೆ ಹೆಚ್ಚಾಗಲಿದೆ. ಕಷ್ಟಕ್ಕೆ ಇಂದು ಫಲವು ಸಿಗಲಿದೆ. ಪ್ರೇಮವು ನಿಮಗೆ ನಿಮ್ಮನ್ನು ಉತ್ಸಾಹದಿಂದ ಇಡುವುದು. ಇನ್ನೊಬ್ಬರಿಗೆ ನೀವು ಸಹಾಯವನ್ನು ಮಾಡಲು ಹೆಚ್ಚು ಇಷ್ಟಪಡುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಗ್ರೀಷ್ಮ, ಚಾಂದ್ರಮಾಸ : ಆಷಾಢ, ಸೌರ ಮಾಸ : ಕರ್ಕಾಟಕ, ಮಹಾನಕ್ಷತ್ರ : ಆಶ್ಲೇಷಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಮಘಾ, ಯೋಗ : ವರಿಯಾನ್, ಕರಣ : ತೈತಿಲ, ಸೂರ್ಯೋದಯ – 06 – 08 am, ಸೂರ್ಯಾಸ್ತ – 06 – 40 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:58 – 15:33, ಯಮಗಂಡ ಕಾಲ 06:08 – 07:42, ಗುಳಿಕ ಕಾಲ 09:16 – 10:50

-ಲೋಹಿತ್ ಹೆಬ್ಬಾರ್ – 8762924271 (what’s app only)

Loading...
Unable to load recommendations.
Follow Us