ದಿನ ಭವಿಷ್ಯ: ಇಂದು ಈ ರಾಶಿಯವರು ಬಲವುಳ್ಳವರ ಜೊತೆ ಸಮರ ನಡೆಸುವರು

Horoscope Today 21 August: ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಶುಕ್ಲ ಪಕ್ಷದ ನವಮೀ ತಿಥಿಯ ಶುಕ್ರವಾರದಂದು ಬಂಧುಗಳಿಂದ ಸತ್ಕಾರ, ಪರಿವರ್ತನೆಗೆ ಪ್ರಯತ್ನ, ಪರಿಹಾರದಿಂದ ಸಂಕಟ ದೂರ, ಅಸ್ತವ್ಯಸ್ತ ಸ್ಥಿತಿ, ಸಹೋದರಿಂದ ಧನಸಹಾಯ, ಭೂ ವ್ಯಾಜ್ಯ, ಆರೋಗ್ಯ ಹಾಳು ಇವೆಲ್ಲ ಇಂದಿನ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರು ಬಲವುಳ್ಳವರ ಜೊತೆ ಸಮರ ನಡೆಸುವರು
ಭವಿಷ್ಯ
Image Credit source: Getty images
Edited By:

Updated on: Aug 21, 2026 | 1:02 AM

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಮಘಾ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ನವಮೀ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ಬ್ರಹ್ಮ, ಕರಣ : ವಣಿಜ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 36 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:49 – 12:23, ಯಮಗಂಡ ಕಾಲ 15:30 – 17:03, ಗುಳಿಕ ಕಾಲ 07:42 – 09:16

ಮೇಷ ರಾಶಿ: ಬಹಳ ದಿನಗಳ ಅನಂತರ ನಿಮ್ಮ ಮನೆಯಲ್ಲಿ ಸಂತೋಷದ ಸಂದರ್ಭವು ಇರುವುದು. ನಿತ್ಯ ಬಳಸುವ ವಸ್ತುವಿನಿಂದ ನಿಮಗೆ ಲಾಭವಿದೆ. ಅನ್ಯ ಕಾರ್ಯಗಳಿಗೆ ನಿಮ್ಮನ್ನು ಸೇಳೆಯುವರು. ಅತಿಥಿಗಳ ಆಗಮನವು ಅನಿರೀಕ್ಷಿತವಾಗುವುದು. ನೀವು ವೃತ್ತಿಯನ್ನು ನಂಬಿ ಜೀವನ ಸಾಗಿಸುತ್ತಿದ್ದು ನಿಮಗೆ ಒಮ್ಮೆಲೆ ಬಿಡಬೇಕಾದ ಸ್ಥಿತಿ ಬರಬಹುದು. ಅನುವಾದಕರಿಗೆ ಹೆಚ್ಚು ಕಾರ್ಯಗಳು ಬರಬಹುದು. ಮನಸ್ಸಿನ ಭಾರವನ್ನು ಕಳೆಯುವ ದಾರಿಗಳು ನಿಮ್ಮ ಮುಂದೆ ಇರುವುದು.

ವೃಷಭ ರಾಶಿ: ನಿಮ್ಮ ಅಂತಶ್ಶಕ್ತಿಯೇ ನಿಮ್ಮ ನಿಜವಾದ ಬಲವಾದುದರಿಂದ ಯಾವ ಸಮಸ್ಯೆಗಳಿಗೂ ನಿರಾತಂಕವಾಗಿ ಇರುವಿರಿ. ಎಲ್ಲದರಲ್ಲೂ ಹಿನ್ನಡೆಯಾಗುವ ನಿಮಗೆ ಆತ್ಮವಿಶ್ವಾಸ ತುಂಬಲು ಜನರ ಅವಶ್ಯಕತೆ ಇದೆ. ಕಷ್ಟದ ಕೆಲಸವನ್ನು ನೀವು ಅನಾಯಾಸವಾಗಿ ಮಾಡಿ ಮುಗಿಸುವಿರಿ. ಹೆಚ್ಚು ಶ್ರಮದಿಂದ ಸಂಪತ್ತನ್ನು ಪಡೆಯುವಿರಿ. ಮಾಧ್ಯಮದಲ್ಲಿ ನೀವು ಇಂದು ಕಾಣಿಸಿಕೊಳ್ಳಬಹುದು. ಪಕ್ಷಪಾತದಿಂದ ನಿಮ್ಮ ಸಂಬಂಧಗಳು ಹಾಳಾಗಬಹುದು.

ಮಿಥುನ ರಾಶಿ: ನಿಮ್ಮ ಬಗ್ಗೆ ಸಕಾರಾತ್ಮಕವಾಗಿ ಹೇಳಿದರೂ ನಕಾರಾತ್ಮಕವಾಗಿ ಬದಲಾಹುವುದು. ನೀವು ಅದನ್ನು ಕಲಿಯಲು ಇಚ್ಛಿಸುವಿರಿ. ಕಲಿಕೆ ನಿಮ್ಮದೇ ಆದ ವಿಧಾನವನ್ನು ಬಳಸಿಕೊಳ್ಳಲಿದ್ದೀರಿ. ಪ್ರೇಮದ ಸೆಳೆತಕ್ಕೆ ಸಿಲುಕುವಿರಿ. ಪ್ರೇಮಿಗಳು ಇಂದು ಒಂದಾಗುವ ಸಾಧ್ಯತೆ ಇದೆ. ಮನೆಯಲ್ಲಿ ಪ್ರಸ್ತಾಪ‌ ಮಾಡಿ ನಿಮ್ಮ ಮಾರ್ಗವನ್ನು ಸರಿ ಮಾಡಿಕೊಳ್ಳಿ. ಪೌರುಷವನ್ನು ಅಶಕ್ತರಲ್ಲಿ ತೋರಿಸುವಿರಿ. ಶಿಸ್ತನ್ನು ಕಾಪಾಡಿಕೊಂಡು ಕೆಲಸ ಮಾಡಿಕೊಳ್ಳುವಿರಿ. ಧಾರ್ಮಿಕ ಕಾರ್ಯಕ್ಕಾಗಿ ಸಮಯವನ್ನು ಹೊಂದಿಸಿಕೊಳ್ಳುವಿರಿ.

ಕರ್ಕಾಟಕ ರಾಶಿ: ಯಾವುದನ್ನು ಮಾಡಲೇ ಬಾರದು ಎಂದು ಮತ್ತೆ ಅಂದುಕೊಂಡಿದ್ದರೋ ಅದೇ ಆಗುವುದು. ಇಂದು ನೀವು ಮಾಡಿದ ಕೆಲಸಕ್ಕೆ ಪಶ್ಚಾತ್ತಾಪ ಪಡಬಹುದು. ಬೇಸರದ ಸಂಗತಿಗಳು ಇಂದು ನಡೆಯುವ ಸಾಧ್ಯತೆ ಇದೆ. ವಿರೋಧದ ನಡುವೆಯೂ ನಿಮ್ಮ ಹಣವನ್ನು ಸಾಧಿಸುವಿರಿ. ನಿಮ್ಮ ಅಪೇಕ್ಷಿತ ಸುಖವು ಬಯಸಿದವರಿಗೆ ಸಿಗದು. ಅಧ್ಯಾತ್ಮ ಶಕ್ತಿಯಿಂದ ನಿಮಗೆ ಸ್ಥೈರ್ಯ ಬರಲಿದೆ. ಪ್ರಭಾವೀ ವ್ಯಕ್ತಿಗಳಿಂದ ನಿಮಗೆ ವಂಚನೆಯಾಗಿದೆ ಎಂದನಿಸಬಹುದು.

ಸಿಂಹ ರಾಶಿ: ನಿಮ್ಮ ಇಚ್ಛಾಶಕ್ತಿಯು ನಿಮ್ಮ ಇಂದಿನ ಮೇಲಧಿಕಾರಿಗಳಿಗೆ ಖುಷಿಯಾಗುವಂತೆ ನಡೆದುಕೊಳ್ಳುವಿರಿ. ಸುಲಭದ ವಿಚಾರವನ್ನು ಬಹಳ ಸಂಕೀರ್ಣ ಮಾಡಿಕೊಳ್ಳಲಿದ್ದೀರಿ. ನಿಮ್ಮ ಬಗ್ಗೆ ಇರುವ ಭಾವನೆಗಳು ಬದಲಾಗಬಹುದು. ಸಂಗಾತಿಯ ವಿಚಾರದಲ್ಲಿ ನೀವು ತಟಸ್ಥರಾಗುವಿರಿ. ಮಾನಸಿಕವಾಗಿ ನೀವು ದುರ್ಬಲರಾಗುವಿರಿ. ನಿನ್ನೆಯ ಘಟನೆಯನ್ನು ನೆನಪಿಸಿಕೊಳ್ಳದೇ ಕಾರ್ಯಪ್ರವೃತ್ತರಾಗಿ. ಕಾನೂನಿನ ವಿಚಾರದಲ್ಲಿ ನಿರ್ದಿಷ್ಟತೆ ಇರಲಿ.

ಕನ್ಯಾ ರಾಶಿ: ನೀವು ಇಂದು ಯಾವುದಾದರೂ ಸತ್ಕಾರ್ಯದಲ್ಲಿ ಜೋಡಿಸಿಕೊಳ್ಳುವಿರಿ. ಹೂಡಿಕೆಯು ನಿಮ್ಮ ಆರ್ಥಿಕತೆಯನ್ನು ಹೆಚ್ಚಿಸುವುದು. ಏಕಾಂಗಿಯಾಗಿ ನೀವು ಎಲ್ಲಿಗಾದರೂ ಹೋಗುವಿರಿ. ನಿಮ್ಮ ವಸ್ತುವನ್ನು ಸ್ನೇಹಿತರಿಗೆ ಕೊಟ್ಟಿದ್ದು ಅದನ್ನು ಪಡೆಯಲು ನೀವು ಕಷ್ಟ ಪಡುವಿರಿ. ಉದ್ಯೋಗದಲ್ಲಿ ನಿಮಗಿರುವ ಗೊಂದಲವು ಪರಿಹಾರವಾಗಿ ನಿಶ್ಚಿಂತೆಯಿಂದ ಕಾರ್ಯವನ್ನು ಮಾಡುವಿರಿ. ನಿಮ್ಮ ಬಗ್ಗೆ ಇರುವ ಭಾವನೆ ಬದಲಾಗುವುದು. ಏನನ್ನೂ ತೋರಿಸಿಕೊಳ್ಳದೇ ಜಾಣ ಕುರುಡುತನ ಈ ದಿನ ಎಲ್ಲದರಿಂದ ದಾಟಿ ಬರಬಹುದು.

ತುಲಾ ರಾಶಿ: ನಿಮ್ಮ ಸಮಯವನ್ನು ಸ್ನೇಹಿತರು ವ್ಯರ್ಥಮಾಡಿಯಾರು. ವೃತ್ತಿಯಲ್ಲಿ ಯಾರಾದರೂ ಕೋಪವನ್ನು ತರಿಸಬಹುದು. ಬಾಲ್ಯ ಸ್ನೇಹಿತ ಏಳ್ಗೆಯನ್ನು ಕೇಳಿ ನಿಮಗೆ ಅಸೂಯೆ ಉಂಟಾಗಬಹುದು. ವಾಹನ‌ ಖರೀದಿಯನ್ನು ನೀವು ಮುಂದೂಡುವಿರಿ. ಧನವನ್ನು ಕೇಳಿ ಬಂದವರಿಗೆ ನೀಡಲಿದ್ದೀರಿ. ಕೊನೆಗೂ ಮನೆಯರು ತೋರಿಸಿದ ಸಂಗಾತಿಯನ್ನೇ ವರಿಸಬೇಕಾಗುವುದು. ಕೆಲವನ್ನು ಅಳೆದು ತೂಗಿ ಮಾತಾನಾಡಿದರೆ ಮಾತ್ರ ನೀವು ಎಲ್ಲರ ಜೊತೆ ಸೌಹಾರ್ದದಿಂದ ಇರಲು ಸಾಧ್ಯ.

ವೃಶ್ಚಿಕ ರಾಶಿ: ಹಿರಿಯರಿಗೆ ಎದುರಾಡುವುದನ್ನು ಕಡಿಮೆ ಮಾಡಿ. ಮಾತಿನಿಂದ ನೀವು ಅನೇಕ ಉತ್ತಮವಾದ ವಿಷಯವನ್ನು ಕಳೆದುಕೊಳ್ಳುವಿರಿ. ಕೋಪವನ್ನು ಆದಷ್ಟು ನಿಯಂತ್ರಣಕ್ಕೆ ತಂದುಕೊಳ್ಳಿ. ಸ್ವಹಿತಾಸಕ್ತಿಯನ್ನು ಬೆಳೆಸಿಕೊಳ್ಳಯವುದು ಮುಖ್ಯ. ಎಲ್ಲವೂ ಗೊತ್ತಿದ್ದರೂ ಏನೂ ಗೊತ್ತಿರದಂತೆ ವರ್ತಿಸುವಿರಿ. ಅನಪೇಕ್ಷಿತ ವಿಷಯವನ್ನು ಮರೆತುಬಿಡಿ. ಆಯ್ಕೆಗಳ ವಿಚಾರದಲ್ಲಿ ನೀವು ಹಿಂದುಳಿಯಬಹುದು. ಲಾಭಾಕ್ಕಾಗಿ ವ್ಯಾಪಾರದಲ್ಲಿ ಹೊಸದಾದ ಆಕರ್ಷ ಯೋಜನೆಗಳನ್ನು ಹಾಕಿಕೊಳ್ಳುವಿರಿ.

ಧನು ರಾಶಿ: ಉದ್ವೇಗದ ಮಾತುಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ಅಧಿಕವಾದ ಸಂಪತ್ತನ್ನು ಗಳಿಸಬೇಕು ಎನ್ನುವ ಹಂಬಲವಿದ್ದರೂ ಅದನ್ನು ಪಡೆಯಲು ದಾರಿ ಸುಲಭವಿಲ್ಲ ಎಂದು ಅನ್ನಿಸಬಹುದು. ನೀವಾಡುವ ಆಟವು ನಿಮ್ಮ ಮೈ ಮರೆಸಲಿದೆ. ವರ್ತಮಾನದ ಬಾಳಿಗಿಂತ ಭವಿಷ್ಯವು ನಿಮಗೆ ಬಹಳ ರೋಚಕತೆಯದ್ದಾಗಿ ಕಾಣಬಹುದು. ತಾಳ್ಮೆಯನ್ನು ಕಳೆದುಕೊಳ್ಳಬಹುದು ಇಂದು. ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ಪ್ರೇರಿಸುವಿರಿ. ಅನಿರೀಕ್ಷಿತವಾಗಿ ಹಣವು ಖಾಲಿಯಾಗುವುದು.

ಮಕರ ರಾಶಿ: ಕೆಲವು ಕಾಲದ ಚಿಂತೆಯು ಇಂದು ನಿಮ್ಮಿಂದ ದೂರವಾಗಬಹುದು. ರಾಜಕೀಯವಾಗಿ ನೀವು ಹೊಸ‌ದಾರಿಯನ್ನು ಪ್ರಸಿದ್ಧರಾಗಲು ಆಯ್ಕೆ ಮಾಡಿಕೊಳ್ಳಬಹುದು. ಅಪರಿಚಿತ ಪ್ರದೇಶದಲ್ಲಿ ನಿಮಗೆ ದಾರಿ ತಪ್ಪುವುದು. ನಿಮ್ಮನ್ನು ಯಾವುದಾದರೂ ಖಾಸಗಿ ಸಂಸ್ಥೆಗೆ ಮುಖ್ಯಸ್ಥರನ್ನಾಗಿ ಮಾಡಬಹುದು. ಪ್ರಮಾಣವಿಲ್ಲದೇ ಏನನ್ನೂ ಕೊಡಲಾರಿರಿ. ಸ್ತ್ರೀಯರಿಂದ ನಿಮ್ಮ‌ಬಗ್ಗೆ ಸುಳ್ಳು ಅಪವಾದಬರಬಹುದು.

ಕುಂಭ ರಾಶಿ: ಬಹಳ ದಿನಗಳಿಂದ ನಿರೀಕ್ಷಿಸಿದ್ದ ಸ್ಥಳಕ್ಕೆ ಹೋಗುವಿರಿ. ಹಣವನ್ನು ನೀವು ಎಂದಿನಂತೆ ಖರ್ಚು ಮಾಡಬಾರದು. ನಿಮ್ಮ ಬೆಂಬಲಕ್ಕೆ ನಿಲ್ಲುವವರು ಯಾರು ಎಂಬ ಕುತೂಹಲವಿದ್ದರೂ ಸಣ್ಣ ಸುಳಿವು ಸಿಗಲಿದೆ. ಸೂಚನೆ ಬರದೇ ಯಾವ ಕಾರ್ಯವನ್ನೂ ಆರಂಭಿಸುವುದು ಬೇಡ. ನಿಮ್ಮ‌ ಮೇಲಿನ ಅಪವಾದವನ್ನು ನೀವು ಕಳೆದುಕೊಳ್ಳಲು ಹೆಚ್ಚು ಮಾತನಾಡುವಿರಿ. ಸಂಗಾತಿಯ ಮನೋಭಾವವನ್ನು ತಿಳಿಯಲು ನೀವು ಕೆಲವು ತಂತ್ರವನ್ನು ಬಳಸುವಿರಿ.

ಮೀನ ರಾಶಿ: ಮಾನವೀಯತೆಯನ್ನು ಕಿಂಚಿತ್ತಾದರೂ ಇರಿಸಿಕೊಳ್ಳಬಹುದು. ಸಂಗಾತಿಯ ಅನಿರೀಕ್ಷಿತ ಮಾತುಗಳು ನಿಮಗೆ ಆಶ್ಚರ್ಯಕರ ಎನಿಸಬಹುದು. ಆಯಾಸದಿಂದ‌‌ ಇಂದು ಸುಖವಾದ ನಿದ್ರೆಯನ್ನು ಮಾಡುವಿರಿ. ಕೆಲವರ ವ್ಯಕ್ತಿತ್ವವು ನಿಮಗೆ ಇಷ್ಟವಾದೀತು. ಹತ್ತಿರದವರ ವಿಯೋಗ ಉಂಟಾಗಲಿದೆ. ಇನ್ನೊಬ್ಬರಿಂದ ನಿಮ್ಮ ಕಾರ್ಯವಾಗಲಿದೆ. ಎಲ್ಲದಕ್ಕೂ ಕಾರಣವನ್ನು ಹುಡುಕುತ್ತ ಕಾಲಹರಣಮಾಡಬೇಡಿ.

ಲೋಹಿತ್ ಹೆಬ್ಬಾರ್ – 8762924271 (what’s app only)

Loading...
Unable to load recommendations.
Follow Us