
ಸ್ವಾವಲಂಬಿಯಾಗುವ ಬಗ್ಗೆ ಚಿಂತನೆ ನಡೆಸುವಿರಿ. ಪ್ರಕ್ಷುಬ್ಧವಾಗಿದ್ದ ಮನಸ್ಸು ಇಂದು ಪ್ರಶಾಂತವಾಗಬಹುದು. ಇಂದು ಎಲ್ಲ ಕಡೆಯಿಂದ ಸ್ವಾರ್ಥವನ್ನು ನಿರೀಕ್ಷಿಸುವುದು ಸರಿಯಲ್ಲ. ವ್ಯಾವಹಾರಿಕ ಸಂಬಂಧದ ಮರು ಸ್ಥಾಪನೆ ಸಾಧ್ಯವಾಗದು. ಅಲ್ಪ ಲಾಭಕ್ಕೆ ಹೆಚ್ಚು ಶ್ರಮವನ್ನು ವಹಿಸಬೇಕಾಗುವುದು. ಸಹೋದರರ ವ್ಯಾಜ್ಯವು ಭೇಟಿಯಿಂದ ಪ್ರಶಮನವಾಗುವುದು. ಮೋಸ ಹೋಗುವ ಸಾಧ್ಯತೆ ಇದೆ. ಇದು ಸಂಬಂಧಗಳಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ.
ಹಳೆಯ ಗೆಳೆಯನಾದರೂ ಭಾವ ಹಂಚಿಕೊಳ್ಳುವಷ್ಟು ಆಪ್ತತೆ ಬಾರದು. ವ್ಯರ್ಥ ಓಡಾಟದಿಂದ ನಿಮಗೆ ಆಯಾಸವಾಗಲಿದೆ. ನಿಮ್ಮ ವಾಸ ಸ್ಥಳವನ್ನು ಬದಲು ಮಾಡಬೇಕಾಗಬಹುದು. ಸರ್ಕಾರಿ ಕೆಲಸವು ಮುಂದೆಕ್ಕೆ ಹೋಗಲಿದೆ. ಇರುವ ಅವಕಾಶವನ್ನು ಕಳೆದುಕೊಂಡು ಸಂಕಟಪಡಬೇಕಾಗವುದು. ಧಾರ್ಮಿಕ ಕಾರ್ಯವನ್ನು ಒತ್ತಾಯದಿಂದ ಮಾಡಿದರೂ ಅಲ್ಪ ಪ್ರಯೋಜನ ಸಿಗುವುದು. ಅಂತರ್ಜಾಲದ ಉದ್ಯೋಗಕ್ಕೆ ಮಾರುಹೋಗಬಹುದು.
ಇಂದು ಹರುಷದ ನಡುವೆಯೂ ದುಃಖವನ್ನು ಹುಡುಕುವಿರಿ. ವಿದೇಶಕ್ಕೆ ಪ್ರಯಾಣ ಹೋಗುವ ಅವಕಾಶಗಳು ಸಿಗಬಹುದು. ನಿಮ್ಮ ಪ್ರಯತ್ನಕ್ಕೆ ಫಲವು ಇಂದೇ ಬೇಕೆನ್ನುವುದು ಬೇಡ. ಬರಬೇಕಾದ ಹಣವೂ ಸ್ವಲ್ಪ ಬರಲಿದೆ. ಕೃಷಿಯ ಕಾರ್ಯದಲ್ಲಿ ಹಿನ್ನಡೆ ಮತ್ತು ಆದಾಯದ ಹೊಸ ದಾರಿಯೂ ಕಾಣದಾಗದು. ಸಂಗಾತಿಯಿಂದ ನಿಮ್ಮ ಬೇಡಿಕೆಯನ್ನು ಪೂರ್ಣಮಾಡಿಕೊಳ್ಳುವಿರಿ. ನಿಮ್ಮ ಆಪ್ತರ ಜೊತೆ ಕೆಲವು ಸಂತೋಷದ ಕ್ಷಣಗಳನ್ನು ಕಳೆಯುವಿರಿ.
ಭೂಲಾಭವನ್ನು ಮಾಡಿಕೊಂಡರೂ ನಿಮಗೆ ಸಲ್ಲದ ಮಾತುಗಳನ್ನು ನೀವು ಕೇಳಬೇಕಾದೀತು. ಸುಮ್ಮನಿರಲಾಗದೇ ಏನನ್ನಾದರೂ ಮೈಮೇಲೆ ಎಳೆದುಕೊಳ್ಳುವಿರಿ. ಬಹಳ ದಿನಗಳ ಅನಂತರ ಮನೆಯಲ್ಲಿ ಶುಭಕಾರ್ಯವನ್ನು ಮಾಡಲು ಇಚ್ಛಿಸುವಿರಿ. ಋಣಮುಕ್ತರಾಗಲು ನಿಮ್ಮ ಪ್ರಯತ್ನ ಇಂದು ಬಹಳ ಇರಲಿದೆ. ವಾಹನ ಖರೀದಿಗೆ ಆಪ್ತರ ಸಲಹೆಯನ್ನು ಪಡೆಯಿರಿ. ದೂರದಲ್ಲಿ ಇದ್ದರಷ್ಟೇ ಚೆನ್ನ ಎಲ್ಲವೂ ಎನ್ನುವ ಅರಿವು ಬರಬಹುದು.
ಸಾರ್ವಜನಿಕ ಕ್ಷೇತ್ರದಲ್ಲಿ ನಿಮ್ಮ ನಡೆಯು ಎಲ್ಲರಿಗೂ ಇಷ್ಟವಾಗಬಹುದು. ಹಣವನ್ನು ಸಾರ್ವಜನಿಕ ಕಾರ್ಯಗಳಿಗೆ ಬಳಸಲು ಆಲೋಚಿಸುವಿರಿ. ಹೂಡಿಕೆಯ ಪ್ರಯತ್ನ ವಿಫಲವಾಗಬಹುದು. ಇದು ವಿವಾದವಾಗಿ ಪರಿವರ್ತನೆ ಆಗಬಹುದು. ಎಚ್ಚರಿಕೆಯಿಂದ ವ್ಯವಹಾರವನ್ನು ಮಾಡುವಿರಿ. ಸಂಬಂಧಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ ನೀವು ಹಿರಿಯರ ಮಾತನ್ನು ಕೇಳಬೇಕು ಮತ್ತು ಅನುಸರಿಸುವದೂ ಮುಖ್ಯ.
ಹಿತಶತ್ರುಗಳಿಂದ ಇಂದಿನ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಹಿರಿಯರಿಂದ ಬೈಗುಳವು ಸಿಗಬಹುದು. ಅತಿಯಾದ ಮಾತಿನಿಂದ ನಿಮಗೆ ಸಂಕಷ್ಟ ಬರಬಹುದು. ಖಾಸಗಿ ಸಂಸ್ಥೆಯು ನಿಮಗೆ ಒಂದು ಜವಾಬ್ದಾರಿಯುತ ಸ್ಥಾನವನ್ನು ಕೊಡಬಹುದು. ವಿದ್ಯಾಭ್ಯಾಸಕ್ಕೆ ಯಾವುದಾರೂ ಅಪ್ರಬುದ್ಧ ವಿವಾದಕ್ಕೆ ಸಿಲುಕಿಕೊಂಡು ಮನಸ್ತಾಪವಾಗುವುದು. ಕಠಿಣ ಪರಿಶ್ರಮಕ್ಕೆ ಸರಿಯಾಗಿ ಯಶಸ್ಸು ಸಿಗುತ್ತದೆ. ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ಅಗತ್ಯ ಸಹಾಯವನ್ನು ಪಡೆಯುವಿರಿ.
ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಬಗ್ಗೆ ಚಿಂತೆ ಹೆಚ್ಚುವುದು. ನೀವು ಹಣಕಾಸಿನ ಮುಗ್ಗಟ್ಟು ಎದುರಿಸಬೇಕಾಗುವುದು. ಶತ್ರುಗಳು ಏನಾದರೂ ಮಾನಸಿಕ ಕಿರುಕುಳವನ್ನು ಉಂಟುಮಾಡಿಯಾರು. ನಿಮ್ಮ ಕೆಲಸಕ್ಕೆ ಸಮಯದ ಮಿತಿಯನ್ನು ಅಳವಡಿಸಿಕೊಳ್ಳಿ. ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡದಲ್ಲಿ ಇರುವರು. ಯಾರಾದರೂ ಅಸೂಯೆ ಇರುವವರು ನಿಮ್ಮ ಕಿವಿ ಕಚ್ಚಿ ಸಂಬಂಧವನ್ನು ಹಾಳುಮಾಡುವರು. ಭೋಗವಸ್ತುಗಳನ್ನು ಖರೀದಿಸಿ ಹಣವನ್ನು ವ್ಯರ್ಥಮಾಡುವಿರಿ.
ಇಂದಿನ ವಿವಾದಗಳು ನಿಮ್ಮ ಮನಸ್ಸನ್ನು ಕೆಡಿಸಬಹುದು. ಮನಸ್ಸು ಚಂಚಲವಾಗಲಿದ್ದು ಯಾವುದರ ಬಗ್ಗೆಯೂ ಏಕಾಗ್ರತೆಯಿಂದ ಇರಲು ಸಾಧ್ಯವಾಗದು. ಲಾಭವಿಲ್ಲದ ಕೆಲಸವನ್ನು ನೀವು ಮಾಡಲು ಇಚ್ಛಿಸುವುದಿಲ್ಲ. ಇಂದು ಸಮಯ ಸಿಗದೇ ಗಡಿಬಿಡಿಯಿಂದ ಕೆಲಸವನ್ನು ಮುಗಿಸುವಿರಿ. ಇಟ್ಟುಕೊಳ್ಳಲು ಕೊಟ್ಟ ಹಣವು ಪುನಃ ಬಾರದೇ ಇದ್ದೀತು. ಒಳ್ಳೆಯ ಕಾರ್ಯಕ್ಕೆ ಯಾರಿಂದಲಾದರೂ ಪ್ರೇರಣೆ ಸಿಗಬಹುದು. ಹಿರಿಯರ ಎದುರು ಮಾತನಾಡಲು ನೀವು ಹೆದರುವಿರಿ.
ಮನಸ್ಸಿನಲ್ಲಿ ನಾನಾ ಬಗೆಯ ಚಿಂತೆಗಳು ಹುಟ್ಟಿಕೊಳ್ಳಬಹುದು. ಆತ್ಮಬಲವಿಲ್ಲದೇ ಸುಮ್ಮನೇ ತೋರಿಕೆಗೆ ಒಪ್ಪಿಕೊಳ್ಳುವುದು ಬೇಡ. ಭವಿಷ್ಯದ ಬಗ್ಗೆ ಆಲೋಚನೆಗಳನ್ನು ಮಾಡುವುದು ಸೂಕ್ತವಾದರೂ ಸರಿಯಾದ ಚೌಕಟ್ಟು ಇರಲಿ. ಸರ್ಕಾರದಿಂದ ಬರುವ ಸಹಾಯ ಧನಕ್ಕೆ ಅಡೆತಡೆಗಳು ಬರುವುದು. ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸಿ. ಹೂಡಿಕೆಯತ್ತ ನಿಮ್ಮ ಗಮನವಿದ್ದು, ಸರಿಯಾದ ಮಾಹಿತಿ ಇರಲಿ.
ನಾಚಿಕೆಯ ಸ್ವಭಾವವು ಯಸರ ಜೊತೆಯೂ ಬೆರೆಯಲಾಗದು. ಏನೋ ಮಾಡಲು ಹೋಗಿ ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಕಳ್ಳರ ಭೀತಿಯು ನಿಮ್ಮನ್ನು ಕ್ಷಣವೂ ಕಾಡಬಹುದು. ಪ್ರತಿಭೆಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಿ. ಅತಿಯಾದ ನಿದ್ರೆಯಲ್ಲಿ ಮೈ ಮರೆಯುವ ಸಾಧ್ಯತೆ ಇದೆ. ಶರೀರವು ನಿಮ್ಮ ಮಾತನ್ನು ಕೇಳದೇಹೋಗಬಹುದು. ವಿಶ್ರಾಂತಿಯನ್ನು ಪಡೆದು ಕಾರ್ಯದಲ್ಲಿ ಮುನ್ಮಡೆಯಿರಿ. ಅದನ್ನು ಉಳಿಸಿಕೊಳ್ಳಲು ನೀವು ಇಷ್ಟಪಡುವಿರಿ.
ಇಂದು ನಿಮಗೆ ಆತ್ಮೀಯರ ಒಡನಾಡ ಅಧಿಕವಾಗಲಿದೆ. ಮನೆಯಿಂದ ಹಣವನ್ನು ನೀವು ಪಡೆಯುವಿರಿ. ನೀವು ಸಮಾರಂಭಕ್ಕೆ ಹೋಗಿ ಸಂತೋಷಪಡುವ ಸಾಧ್ಯತೆ ಇದೆ. ನಿಮಗೆ ಬರುವ ಆಪತ್ತನ್ನು ದೈವವೇಪರಿಹರಿಸುವುದು. ಕೆಲವರನ್ನು ನೀವು ವಿನಾಕಾರಣ ದ್ವೇಷಿಸುವಿರಿ. ನಿರ್ಲಕ್ಷ್ಯದ ಕಾರಣ ನಿಮಗೇ ಬೇಸರವಾದೀತು. ಸಂಗಾತಿಯ ಜೊತೆ ಸಮಯವನ್ನು ಕಳೆಯುವಿರಿ. ಸ್ಪರ್ಧೆಗೆ ಸರಿಯಾದ ಪೈಪೋಟಿ ನೀಡುವಿರಿ. ನಿಮ್ಮ ಇಷ್ಟದವರ ಭೇಟಿಯಾಗಲಿದೆ.
ಸೋಲು, ಗೆಲುವನ್ನು ನೀವು ಸಮಾನವಾಗಿ ಸ್ವೀಕರಿಸುವುದು ಮುಖ್ಯ. ಇಂದು ಮನೆಯಲ್ಲಿ ನಿಮಗೆ ನಿರಾಸೆಯ ಅನುಭವ ಆಗಬಹುದು. ಶಾರೀರಿಕ ಅಸೌಖ್ಯದ ಕೊರತೆ ಕಾಡಲಿದ್ದು ಮನೆಮದ್ದನ್ನು ಮಾಡಿ. ಉದ್ಯೋಗದಲ್ಲಿ ಸ್ಥಿರತೆಯು ಕಾಣದ ಕಾರಣ ಬದಲಿಸುವ ಅಲೋಚನೆಯೂ ಇರಲಿದೆ. ನಿಮ್ಮ ಕಡೆಯಿಂದ ಮಾಡುವ ಒಳ್ಳೆಯದನ್ನು ಮಾಡಿ. ಕೆಲವು ಬದಲಾವಣೆಯನ್ನು ನಿರೀಕ್ಷಿಸುವಿರಿ ಮತ್ತು ನೀವು ಬದಲಾಗುವಿರಿ. ವಿಶೇಷ ವ್ಯಕ್ತಿಯ ಬಗ್ಗೆ ಒಂಟಿ ಜನರ ಆಸಕ್ತಿ ಹೆಚ್ಚಾಗುತ್ತದೆ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ವ್ಯತಿಪಾತ್, ಕರಣ : ಬವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 25 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:42 – 09:14, ಯಮಗಂಡ ಕಾಲ 10:46 – 12:18, ಗುಳಿಕ ಕಾಲ 13:50 – 15:21
– ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ