AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಇಂದು ಈ ರಾಶಿಯವರು ತಮ್ಮವರಿಂದಲೇ ಮೋಸ ಹೋಗುವ ಸಾಧ್ಯತೆ!

Horoscope Today: ಇಂದು ಈ ರಾಶಿಯವರು ತಮ್ಮವರಿಂದಲೇ ಮೋಸ ಹೋಗುವ ಸಾಧ್ಯತೆ!

ಭಾವನಾ ಹೆಗಡೆ
|

Updated on: Sep 06, 2026 | 6:38 AM

Share

ಸೆಪ್ಟೆಂಬರ್ 6, ಭಾನುವಾರದ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಮತ್ತು ಇತರ ಪ್ರಮುಖ ಅಂಶಗಳ ಕುರಿತು ಜ್ಯೋತಿಷ್ಯ ಸಲಹೆಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಸೆಪ್ಟೆಂಬರ್ 6, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸದ ಕೃಷ್ಣಪಕ್ಷ ದಶಮಿ, ಆರ್ದ್ರಾ ನಕ್ಷತ್ರ ಇರಲಿದೆ. ಸಂಜೆ 4:57 ರಿಂದ 6:28 ರವರೆಗೆ ರಾಹುಕಾಲ ಇರುತ್ತದೆ. ಬೆಳಗಿನ ಜಾವ 10:45 ರಿಂದ 12:18 ರವರೆಗೆ ಹಾಗೂ ಮಧ್ಯಾಹ್ನ 1:50 ರಿಂದ 3:22 ರವರೆಗೆ ಸರ್ವಸಿದ್ಧಿ ಕಾಲವಿದ್ದು, ಈ ಅವಧಿ ಸಂಕಲ್ಪಗಳು ಮತ್ತು ಹೂಡಿಕೆಗಳಿಗೆ ಅತ್ಯುತ್ತಮವಾಗಿದೆ.

ಇಂದು ಚಂದ್ರನು ಮಿಥುನ ರಾಶಿಯ ಆರ್ದ್ರಾ ನಕ್ಷತ್ರದಲ್ಲಿ ಸಂಚರಿಸುತ್ತಿದ್ದು, ಇದು ರಾಹುವಿನ ನಕ್ಷತ್ರವಾಗಿದೆ. ಈ ಕಾರಣದಿಂದ ಸ್ವಲ್ಪ ವಾತಾವರಣವು ಪ್ರಕ್ಷುಬ್ಧವಾಗಿರಬಹುದು. ಇದಕ್ಕೆ ತಕ್ಕಂತೆ ನಡೆದುಕೊಂಡರೆ ಶುಭಫಲ ದೊರೆಯುತ್ತದೆ ಎಂದು ಗುರೂಜಿ ಹೇಳಿದ್ದಾರೆ.

 

Follow Us