ದಿನ ಭವಿಷ್ಯ: ಇಂದು ಈ ರಾಶಿಯವರು ಗೃಹ ನಿರ್ಮಾಣದಲ್ಲಿ ದುಂದುವೆಚ್ಚ ಮಾಡುವರು…

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ಏಕಾದಶೀ ತಿಥಿಯ ಸೋಮವಾರದಂದು ಮನೆಯಲ್ಲಿ‌ ಕಲಹ, ಅಪರಿಮಿತರ ಒಡನಾಟ, ಸೇವೆಗೆ ಅವಕಾಶ, ಪ್ರಭಾವಿಗಳ ಭೇಟಿ, ಕಾನೂನು ಸಮರ, ಅಪಾವಾದ, ಅಧಿಕಾರಕ್ಕೆ ಒತ್ತಾಯ ಇವೆಲ್ಲ ಈ ದಿನದ ಭವಿಷ್ಯ.

ದಿನ ಭವಿಷ್ಯ: ಇಂದು ಈ ರಾಶಿಯವರು ಗೃಹ ನಿರ್ಮಾಣದಲ್ಲಿ ದುಂದುವೆಚ್ಚ ಮಾಡುವರು...
ದಿನ ಭವಿಷ್ಯ
Edited By:

Updated on: Sep 21, 2026 | 12:04 AM

ಮೇಷ ರಾಶಿ :

ದಾಂಪತ್ಯದಲ್ಲಿ ಮಾತುಕತೆಗಳು ವಿವಾದವಾಗಿ ಬದಲಾಗಬಹುದು. ವಿದ್ಯುತ್ ಉಪಕರಣಗಳ ಉದ್ಯಮವನ್ನು ಮಾಡುತ್ತಿದ್ದರೆ ಲಾಭವನ್ನು ಪಡೆಯಲಿದ್ದೀರಿ. ಸಹೋದರನ ವಿವಾಹಕ್ಕೆ ನೀವೇ ಮುಂದಾಲೋಚನೆ ಮಾಡುವ ಸಂದರ್ಭ. ಕೊರತೆಗಳನ್ನು ಅತಿಯಾಗಿ ಆಲೋಚಿಸಿದರೆ ಇಂದಿನ ದಿನ ಕಷ್ಟವಾಗುವುದು. ನಿಮಗೆ ಸಾಧ್ಯವಾಗುವುದನ್ನು ಒಪ್ಪಿಕೊಳ್ಳುವಿರಿ. ಅಚ್ಚರಿ ಉಡುಗೊರೆಯೊಂದು ಸಿಗುವ ಸಾಧ್ಯತೆ ಇದೆ. ಯಾರಾದರೂ ನಿಮ್ಮ ಜೊತೆ ವಾದಕ್ಕೆ ಬಂದರೆ ನಿಮ್ಮ ನಿಲುವನ್ನು ಸ್ಪಷ್ಟವಾಗಿಸುವಿರಿ.

ವೃಷಭ ರಾಶಿ :

ನೀವು ಸಕಾರಾತ್ಮಕವಾಗಿ ಇರಬೇಕು ಎಂದುಕೊಂಡರೂ ಆಗದು. ವಿದ್ಯಾರ್ಥಿಗಳು ಪರೀಕ್ಷೆಗೆ ಹೆಚ್ಚು ತಯಾರಿ ಮಾಡುವಿರಿ. ಬಂಧುಗಳು ನಿಮಗೆ ಕಿರಿಕಿರಿ ಆಗಲಿದೆ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಕೊಡಲಿದ್ದೀರಿ. ಸಂಗಾತಿಯ ಜೊತೆ ವಿರಸವು ಇರಲಿದೆ. ಸಜ್ಜನರ ಸಹವಾಸವನ್ನು ಬಯಸುವಿರಿ. ನಿಮ್ಮ ಬೇಸರವನ್ನು ಹೇಗಾದರೂ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ನಿಮಗೆ ಕೆಲವು ತಂತ್ರಗಳು ಗೊತ್ತಾಗಲಿದೆ. ಎಲ್ಲರೆದುರು ಮಾತನಾಡಲು ನಿಮಗೆ ಭಯವಾಗಲಿದೆ. ಆಪ್ತರನ್ನು ಕಳೆದುಕೊಳ್ಳಲು ಕಷ್ಟವಾದೀತು.

ಮಿಥುನ ರಾಶಿ:

ಆರ್ಥಿಕದಿಂದ ನೀವು ಬಲವಾಗುವಿರಿ. ಸಹೋದರಿಯ ಜೊತೆ ಸಂತೋಷದಿಂದ ನೀವು ಮಾತನಾಡಿ ಸಂತೋಷಗೊಳಿಸುವಿರಿ. ಹಿತಶತ್ರುಗಳು ನಿಮಗೆ ತೊಂದರೆ ಕೊಡಬಹುದು. ಯಾರಿಗೆ ಎಷ್ಟು ಆದ್ಯತೆ ಕೊಡಬೇಕು ಎನ್ನುವ ಜ್ಞಾನವೂ ಬೇಕು. ಆಕಸ್ಮಿಕ ಒತ್ತಡವನ್ನು ಸುಲಭವಾಗಿ ಸ್ವೀಕರಿಸಲಾರಿರಿ. ಕಾರ್ಯದಲ್ಲಿ ಕ್ರಮಬದ್ಧ ಇದ್ದರೆ ಬೇಗ ಮುಕ್ತಾಯವಾಗುವುದು. ಕೃಷಿಯಲ್ಲಿ ನಿಮಗೆ ಆಸಕ್ತಿ ಹೆಚ್ಚಾಗಬಹುದು. ಪ್ರಯಾಣದಲ್ಲಿ ನಿಮಗೆ ಸುರಕ್ಷತೆಯ ಅವಶ್ಯಕತೆ ಇರಲಿದೆ.

ಕರ್ಕಾಟಕ ರಾಶಿ:

ನೂತನ ಉದ್ಯೋಗವು ನಿಮಗೆ ಪ್ರಾಪ್ತವಾಗಲಿದೆ. ಅಧಿಕಾರಿಯ ಜೊತೆ ನಿಮ್ಮ ಮಾತುಕತೆಗಳು ಮಿತಿಮೀರಲಿದೆ. ದಿನಬಳಕೆಯ ವಸ್ತುವನ್ನು ಮಾರಾಟ ಮಾಡುವವರು ಲಾಭವನ್ನು ಗಳಿಸುವರು. ಕೆಲಸದಲ್ಲಿ ಆಸಕ್ತಿ ಇದ್ದರೂ ನಿಮ್ಮನ್ನು ಟೀಕಿಸಿದ ಕಾರಣ ಅದನ್ನು ಕೈ ಬಿಡುವಿರಿ. ಸಾಹಸಕ್ಕೆ ಹೋಗುವಾಗ ನಿಮ್ಮ ಬಗ್ಗೆ ನಿಮಗೆ ಗೊತ್ತಿರಲಿ. ದುರಾಲೋಚನೆಯು ನಿಮ್ಮ ಸಮಯವನ್ನೂ ಮಾರ್ಗವನ್ನೂ ಬದಲಾಯಿಸಬಹುದು. ಉನ್ನತ ಹುದ್ದೆಗೆ ಏರುವ ಅವಕಾಶ ಬರಲಿದ್ದು ಅದರಲ್ಲಿ ನಿಮಗೆ ಆಸಕ್ತಿ ಕಡಿಮೆ.

ಸಿಂಹ ರಾಶಿ:

ಉದ್ಯೋಗದ ಕಾರಣಕ್ಕೆ ನಿಮಗೆ ಅನಾರೋಗ್ಯವು ಕಾಣಿಸಿಕೊಳ್ಳಬಹುದು. ಬರಬೇಕಾದ ಹಣವನ್ನು ನೀವು ಪಡೆಯಲಿದ್ದೀರಿ. ಶತ್ರುಗಳ ಜೊತೆ ವೇದಿಕೆಯನ್ನು ಹಂಚಿಕೊಳ್ಳಬೇಕಾಗುವುದು. ನ್ಯಾಯಾಲಯದಲ್ಲಿ ನಿಮಗೆ ಜಯವು ಸಿಗಲಿದೆ. ಉದ್ಯೋಗಕ್ಕೆ ಸೇರಲು ಮಾನಸಿಕವಾಗಿ ನೀವು ಸಿದ್ಧರಾಗುವಿರಿ. ಇಂದಿನ ಅಧಿಕ ಲಾಭವನ್ನು ಹೂಡಿಕೆ ಮಾಡಬಹುದು. ಉದ್ಯೋಗಕ್ಕೆ ಬೇರೆ ಪ್ರದೇಶಕ್ಕೆ ಹೋಗುವಿರಿ. ದೌರ್ಬಲ್ಯವನ್ನು ಮೆಟ್ಟಿ ಸಾಧಿಸಬೇಕಾದುದು ಇದೆ. ನಿಮ್ಮ ಆರ್ಥಿಕ ದೌರ್ಬಲ್ಯವನ್ನು ಆಡುಕೊಳ್ಳಬಹುದು.

ಕನ್ಯಾ ರಾಶಿ:

ಇಂದು ಇನ್ನೊಬ್ಬರಿಗೆ ಬರುವ ಧನಕ್ಕೆ ಸಹಾಯ ಮಾಡುವಿರಿ. ನಿಮ್ಮ ಅಪರೂಪದ ವಸ್ತುವನ್ನು ಕಳೆದುಕೊಳ್ಳುವಿರಿ. ಹೊಸ ಸ್ಥಳಗಳನ್ನು ನೀವು ನೋಡಲು ನಿಮಗೆ ಇಷ್ಟವಾಗಲಿದೆ. ಸಮಯಪಾಲನೆಗೆ ನೀವು ಹೆಚ್ಚು ಒತ್ತನ್ನು ಕೊಡುವಿರಿ. ನೀರಿನಿಂದ ಇಂದು ಭಯವಾಗುವ ಸಾಧ್ಯತೆ ಇದೆ. ದಿನ‌ ಒತ್ತಡದಿಂದ ಇರಲಿದೆ. ವಿದ್ಯಾರ್ಥಿಗಳು ಖುಷಿಯಿಂದ ಇರಲಿದ್ದು, ಇದಕ್ಕೆ ಸಾಧನೆಯು ಕಾರಣವಾಗಲಿದೆ. ಧಾರ್ಮಿಕ ವಿಚಾರದಲ್ಲಿ ನಿಮಗೆ ಆಸಕ್ತಿಯು ಹೆಚ್ಚಬಹುದು. ರಹಸ್ಯವನ್ನು ಬಿಟ್ಟುಕೊಡಲು ಇಚ್ಛಿಸುವಿರಿ.

ತುಲಾ ರಾಶಿ:

ನೀವು ಅನ್ಯರ ಯಶಸ್ಸಿಗೆ ನೀವು ಅಸೂಯೆ ಪಡುವ ಅವಶ್ಯಕತೆ ಇಲ್ಲ. ಮಾನಸಿಕವಾಗಿ ಬಳಲಲಿದ್ದೀರಿ. ದೈಹಿಕ ಸಾಮರ್ಥ್ಯದಿಂದ ಕುಗ್ಗಿರುವಿರಿ. ಜೀವನದಲ್ಲಿ ಬದಲಾವಣೆಯನ್ನು ಬಯಸುವಿರಿ. ಆಯ ತಪ್ಪದಂತೆ ನಡೆಯುವುದು ಅವಶ್ಯಕ. ನಿಮ್ಮ ಹೆಜ್ಜೆಯನ್ನೂ ಗಮನಿಸುವವರು ಇರುವರು. ಸಾಮರ್ಥ್ಯದಿಂದ ಬೇಕಾದ ಹಾಗೆ ಮಾಡಿಕೊಳ್ಳುವಿರಿ. ನೀರಿನ ಕಾರಣದಿಂದ ನಿಮ್ಮ ಆರೋಗ್ಯ ಕೆಡುವುದು. ವಿದೇಶದಲ್ಲಿ ಇದ್ದವರಿಗೆ ಸಂಕಡವಾಗಲಿದೆ.

ವೃಶ್ಚಿಕ ರಾಶಿ:

ಚರಾಸ್ತಿಯನ್ನು ಕಳೆದುಕೊಳ್ಳುವಿರಿ. ನಿಮ್ಮ ನಿಗದಿತ ಸಮಯವು ವ್ಯತ್ಯಾಸವಾಗಿ ಕಾರ್ಯಕ್ರಮವೂ ಬದಲಾಗಲಿದೆ. ನೇರವಾದ ಮಾತುಗಳಿಂದ ಆಗದೇ ಇರುವುದು ಪರೋಕ್ಷವಾಗಿ ಆಗಲಿದೆ. ಉದ್ವಿಗ್ನತೆಗೆ ಎಡಮಾಡಿಕೊಡದೇ ಸಮಾಧಾನಚಿತ್ತದಿಂದ ಇರುವುದನ್ನು ಕಲಿಯಬೇಕಾದೀತು. ನೌಕರರ ವಿಷಯದಲ್ಲಿ ಸಿಟ್ಟಾಗುವ ಸಾಧ್ಯತೆ ಇದೆ. ನಿಮ್ಮ ವರ್ತನೆಗಳು ಇತರರಿಗೆ ಮಾದರಿಯಾಗಬಹುದು. ನಿಮ್ಮ ಭೂಮಿಯು ನಿಮಗೆ ಸಿಗಲಿದೆ. ನಿಮಗೆ ಸಪ್ಪೆ ಎನಿಸಿದ ವಿಷಯವನ್ನು ಮುಂದುವರಿಸುವುದಿಲ್ಲ.

ಧನು ರಾಶಿ:

ನಿಮಗೆ ಮನೆಯವರ ಸಹಕಾರದಿಂದ ಎಲ್ಲ ಕಾರ್ಯವನ್ನು ಮಾಡುವಿರಿ. ನಿಮ್ಮ ಸ್ವಭಾವಗಳು ಇಷ್ಟವಾಗದು. ನಿಮ್ಮ‌ ಮಾತುಗಳನ್ನು ನಿರಾಸಕ್ತಿಯಿಂದ ಪಾಲಿಸುವರು. ನಿಮ್ಮ ಪ್ರಭಾವವನ್ನು ತೋರಿಸಲು ಹೋಗಿ ಅಪಮಾನಗೊಳ್ಳುವಿರಿ. ಹಣಕಾಸಿಗೆ ಸಂಬಂಧಿಸಿದ ವಸ್ತುವನ್ನು ಎಲ್ಲಿಯೂ ಬಿಡದೇ ಒಯ್ಯಬೇಕು. ದಾಂಪತ್ಯದಲ್ಲಿ ಉಂಟಾದ ಬಿರುಕನ್ನು ಕುಳಿತು ಸರಿಮಾಡಿಕೊಳ್ಳಿ. ಚಲಿಸುತ್ತಿದ್ದರೆ ಯಾವುದಾದರೂ ಒಂದು ಸ್ಥಾನವನ್ನು ತಲುಪಲು ಸಾಧ್ಯ.

ಮಕರ ರಾಶಿ:

ನೀವು ಯಾವುದೇ ಒತ್ತಡಕ್ಕೆ ಸಿಲುಕದೇ ಆಪ್ತರ ಜೊತೆ ಆರಾಮಾಗಿ ಮಾತನಾಡಿ ದಿನವನ್ನು ಕಳೆಯುವಿರಿ. ಯಾರಾದರೂ ನಿಮ್ಮ ಹಾದಿಯನ್ನು ತಪ್ಪಿಸಬಹುದು. ದೈವೀಕ್ಷೇತ್ರದಲ್ಲಿ ಹೆಚ್ಚು ಸಮಯವನ್ನು ಕಳೆಯಲು ಇಷ್ಟಪಡುವಿರಿ. ವಿವಾಹದಲ್ಲಿ ಆಸಕ್ತಿಯು ಕಡಿಮೆಯಾಗಲಿದೆ. ಮಕ್ಕಳನ್ನು‌ ಮನೆಯಿಂದ ಆಚೆ ಇಟ್ಟು ಓದಿಸುವ ಆಲೋಚನೆ ಇರಲಿದೆ. ನಿಮ್ಮ ನಡತೆಯಲ್ಲಿ ಅನುಮಾನ ಕಾಣಬಹುದು. ಸಮಯವು ಅಮೂಲ್ಯ ಎಂದು ಅನ್ನಿಸಬಹುದು. ಉಪಕಾರಕ್ಕೆ ಪ್ರತ್ಯುಪಕಾರವನ್ನು ಬಯಸುವಿರಿ.

ಕುಂಭ ರಾಶಿ:

ಸ್ನೇಹಿತರ ಜೊತೆ ಸಮಯವನ್ನು ಕಳೆಯುವಿರಿ. ನಂಬಿಕೆಗೆ ದ್ರೋಹವಾಗಬಹುದು.‌ ಸಂಗಾತಿಯ ಮಾತುಗಳು ನಿಮಗೆ ಅಜೀರ್ಣವಾಗುವುದು. ಅಕಾರಣ ಪ್ರೀತಿಯನ್ನು ಒಪ್ಪಿಕೊಳ್ಳುವಿರಿ. ಹಣಕಾಸಿನ ವೃದ್ಧಿಗೆ ಮಾರ್ಗೋಪಾಯವನ್ನು ಕಂಡುಕೊಳ್ಳುವಿರಿ. ನೀವು ಬಯಸಿದ ವಸ್ತುಗಳು ನಿಮ್ಮನ್ನು ಬಂದು ಸೇರಲಿದೆ. ನಿಮ್ಮ ಬಳಗಕ್ಕೆ ಯಾರನ್ನೂ ಸೇರಿಸಿಕೊಳ್ಳಲಾರಿರಿ. ನಿಮ್ಮವರ ಕೆಲವು ವರ್ತನೆಗಳು ನಿಮಗೆ ಇಷ್ಟವಾಗದೇಹೋಗಬಹುದು.

ಮೀನ ರಾಶಿ:

ವಿನಾಕಾರಣ ಎಲ್ಲದಕ್ಕೂ ಎಲ್ಲರಮೇಲೂ ಸಿಟ್ಟಾಗುವಿರಿ. ತುರ್ತಾಗಿ ನೆರವು ಯಾರಿಂದಲೂ ಸಿಗದು. ಶಿಕ್ಷಣ ತಜ್ಞರ ಭೇಟಿಯಿಂದ ನಿಮ್ಮ ಓದು ಇನ್ನಷ್ಟು ಸುಗಮವಾಗುವುದು. ಮನೆಯವರ ಜೊತೆ ಕಾಲ ಕಳೆಯುವಿರಿ. ಕೂಡಿಟ್ಟ ಹಣದಿಂದ ಉಪಯುಕ್ತವಾದ ವಸ್ತುವನ್ನು ಖರೀದಿಸುವಿರಿ. ಪಿತೃಭಕ್ತಿಯಿಂದ ನೆಮ್ಮದಿ ಬರುವುದು. ಕೃಷಿಯಲ್ಲಿ ಉತ್ತಮ‌ ಲಾಭವನ್ನು ಪಡೆಯಲು ಸಾಧ್ಯವಾಗುವುದು. ಯಾವುದಾದರೂ ಉಪಕರಣದಿಂದ ನಿಮಗೆ ಲಾಭವಾಗಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಸೋಮ, ಪಕ್ಷ : ಶುಕ್ಲ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಉತ್ತರಾಷಾಢ, ಯೋಗ : ಶೋಭನ, ಕರಣ : ಗರಜ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 15 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:40 – 09:11, ಯಮಗಂಡ ಕಾಲ 10:42 – 12:13, ಗುಳಿಕ ಕಾಲ 13:43 – 15:14

– ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us