Horoscope 15 Nov: ದಿನಭವಿಷ್ಯ, ಈ ರಾಶಿಯವರ ಬಹು ದಿನದ ನಿರೀಕ್ಷೆಗಳು ಇಂದು ಸಾಕಾರವಾಗವುದು

| Updated By: Rakesh Nayak Manchi

Updated on: Nov 15, 2023 | 12:00 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ನವೆಂಬರ್​ 15) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 15 Nov: ದಿನಭವಿಷ್ಯ, ಈ ರಾಶಿಯವರ ಬಹು ದಿನದ ನಿರೀಕ್ಷೆಗಳು ಇಂದು ಸಾಕಾರವಾಗವುದು
ರಾಶಿಭವಿಷ್ಯ
Image Credit source: iStock Photo
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ನವೆಂಬರ್​​​ 15 ಬುಧವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಅತಿಗಂಡ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 34 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05-59 ಗಂಟೆ, ರಾಹು ಕಾಲ ಮಧ್ಯಾಹ್ನ 12:17 ರಿಂದ 01:43ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:00 ರಿಂದ 09:26ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:51 ರಿಂದ 12:17ರ ವರೆಗೆ.

ಮೇಷ ರಾಶಿ: ಸಾಲ ಮಾಡುವ ಸ್ಥಿತಿಯನ್ನು ನೀವೇ ತಂದುಕೊಳ್ಳುವಿರಿ. ಪ್ರಯಾಣದಿಂದ ನಿಮಗೆ ಪ್ರಯಾಸವಾಗುವುದು. ದುಃಖವನ್ನು ಒಬ್ಬರೇ ಅನುಭವಿಸುವಿರಿ. ಧನಾರ್ಜನೆಗೆ ಹೆಚ್ಚು ಅವಕಾಶಗಳು ಲಭ್ಯವಾಗಿದ್ದು ಉತ್ತಮ ಆದಾಯದ್ದನ್ನು ಆಯ್ಕೆ ಮಾಡಿಕೊಳ್ಳುವಿರಿ. ಆದರೆ ಇದರಿಂದ ಕೆಲವು ರಿಸ್ಕ್ ಗಳನ್ನೂ ಎದುತಿಸಬೇಕಾಗುವುದು. ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾದರೂ ಸ್ವಲ್ಪ ನೆಮ್ಮದಿಯು ಇರಲಿದೆ. ಸ್ತ್ರೀಯರಿಗೆ ಅಭದ್ರತೆಯು ಕಾಡಬಹುದು. ಕೃಷಿಯಲ್ಲಿ ಚಂಚಲವಾದ ಮನಸ್ಸನ್ನು ಇಟ್ಟುಕೊಳ್ಳುವಿರಿ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ನೀವು ಇರುವಿರಿ. ಮಕ್ಕಳ ವಿಚಾರದಲ್ಲಿ ನೀವು ಮೃದುವಾಗುವಿರಿ. ಬಂಧುಗಳು ಅನಿರೀಕ್ಷಿತ ಭೇಟಿಯಾಗಿ ಸಂತೋಷ ಕೊಡುವರು. ಯಾರ ಮಾತನ್ನೂ ಕೇಳದ ಚಿತ್ತಚಾಂಚಲ್ಯವು ಇರಲಿದೆ. ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಆಡಿಕೊಳ್ಳುವರು.

ವೃಷಭ ರಾಶಿ: ಇಂದಿನ ಆಯಾಸದ ಕೆಲಸವು ನಿಮ್ಮನ್ನು‌ ನಿಷ್ಕ್ರಿಯ ಗೊಳಿಸಬಹುದು. ಅಸಹಜ ವರ್ತನೆಯು ನಿಮ್ಮನ್ನು ಮಿತ್ರರಿಂದ ದೂರವಾಗಿಸುವುದು. ನಿಮ್ಮ ನಕಾರಾತ್ಮಕ ಜನಪ್ರಿಯತೆಯು ನಿಮಗೆ ಬೇಸರ ಕೊಡುವುದು. ಮಿತ್ರರ ಸಹಕಾರವನ್ನು ಬಹಳ ದಿನಗಳ ಅನಂತರ ಕೇಳುವಿರಿ. ಆದರೆ ಅವರಿಂದ ಅದು ಸಿಗದು. ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡೀತು. ನಿಮ್ಮ ಗುರಿಯ ಬಗ್ಗೆ ಸ್ಪಷ್ಟವಾದ ನಿರ್ಧಾರವಿರಲಿ. ಸ್ನೇಹಿತರಿಂದ ಉಡುಗೊರೆ ಸಿಗಬಹುದು. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಒಂಟಿಯಾದಂತೆ ನಿಮಗೆ ಅನ್ನಿಸೀತು. ಅತಿಯಾದ ಕೋಪವನ್ನು ಮಾಡಿಕೊಳ್ಳುವುದು ಬೇಡ. ಆಲಸ್ಯದಿಂದ ಉತ್ತಮ ವಿಚಾರಗಳನ್ನು ಕಳೆದುಕೊಳ್ಳಬೇಕಾದೀತು. ಅಸಂಬದ್ಧ ಚರ್ಚೆಗಳಿಂದ ದೂರ ಇರುವಿರಿ. ಸಿಕ್ಕಿದ್ದನ್ನು ಜತನ ಮಾಡಿಕೊಳ್ಳುವ ಹೊಣೆಗಾರಿಕೆ ಇರಲಿದೆ‌.

ಮಿಥುನ ರಾಶಿ: ನೂತನದ ವಾಹನದಿಂದ ನಿಮಗೆ ಸಂತೋಷವಾಗಲಿದೆ‌. ದಾಂಪತ್ಯದ ತೊಡಕುಗಳನ್ನು ನೀವೇ ಕುಳಿತು ಸರಿಮಾಡಿಕೊಳ್ಳುವುದು ಉತ್ತಮ. ಸೇವಾಮನೋಭಾವವು ನಮ್ಮಲ್ಲಿ ಜಾಗರೂಕವಾಗಬಹುದು. ಜನರ ಜೊತೆ ಬೆರೆಯಲು ಹಿಂದೇಟು ಹಾಕುವಿರಿ. ಅನಿರೀಕ್ಷಿತ ನಿಧಿಯ ನಿರೀಕ್ಷೆಯಲ್ಲಿ ಇರುವಿರಿ. ಅಂದುಕೊಂಡಿದ್ದರ ವಿರುದ್ಧ ನಡೆಯುವುದು ನಿಮಗೆ ಬೇಸರ ತರಿಸಬಹುದು. ನಿಮ್ಮ ವ್ಯಕ್ತಿತ್ವದ ಬಗ್ಗೆ ಇತರರು ಹೆಮ್ಮೆಪಡುವರು. ಉದ್ಯೋಗ ವೃದ್ಧಿಯ ಕುರಿತು ಅಧಿಕಾರಿಗಳ ಜೊತೆ ಚರ್ಚಿಸುವಿರಿ. ಅನಾರೋಗ್ಯವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ಸಂಗಾತಿಗೆ ನಿಮ್ಮ ಪ್ರೀತಿಯು ಕಡಿಮೆಯಾಗಿರುವುದು. ಪ್ರಶಂಸೆಯಿಂದ ಅಹಂಕಾರವು ಬರುವ ಸಾಧ್ಯತೆ ಇದೆ. ಕುಟುಂಬಕ್ಕೆ ಹೆಚ್ಚು ಸಮಯವನ್ನು ಕೊಡುವಿರಿ. ವಿಶ್ವಾಸವನ್ನು ಉಳಿಸಿಕೊಳ್ಳಲು ಕಷ್ಟವಾದೀತು.

ಕಟಕ ರಾಶಿ: ಯಾರದೋ ಮಾತಿಗೆ ವೃತ್ತಿಯನ್ನು ಬಿಡಬೇಕಾಗುವುದು.‌ ಅತಂತ್ರ ಸ್ಥಿತಿಯು ನಿಮಗೆ ಕಷ್ಟವಾಗುವುದು. ಬೇಕೆಂದುಕೊಂಡಿದ್ದನ್ನು ಪಡೆಯುವುದು ಕಷ್ಟವಾಗುವುದು. ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ನಿಮ್ಮ ಅಂತಸ್ತು ಕಡಿಮೆ ಎಂಬ ಭಾವನೆಯು ನಿಮ್ಮ ತಲೆಯಲ್ಲಿ ಇರುವುರು. ಗುಣಾತ್ಮಕ ಚಿಂತನೆಯನ್ನು ಮಾಡಿ. ಏನೇ ಬಂದರೂ ಎಲ್ಲವೂ ವಿಧಿ ನಿಯಮ ಎಂಬ ನಿರ್ಧಾರಕ್ಕೆ‌ ಬರುವಿರಿ. ಅಧಿಕ ಚಿತ್ತಚಾಂಚ್ಯಲ್ಯವು ಜೊತೆಗಾರರಿಗೆ ಕಷ್ಟವಾದೀತು. ವಿರುದ್ಧಾಹರ ಸೇವಯು ನಿಮ್ಮ ಆರೋಗ್ಯವನ್ನು ಕೆಡಿಸುವುದು. ಇನ್ನೊಬ್ಬರ ವಸ್ತುವಿನ ಬಗ್ಗೆ ಮೋಹವು ಇರುವುದು‌. ಆತ್ಮಪ್ರಶಂಸೆಯು ಅಧಿಕಾವಾಗಿ ತೋರುವುದು. ಸಾಧಿಸಬೇಕು ಎಂಬ ಮಹದಾಸೆ ಇದ್ದರೂ ಅದು ಕ್ಷಣಿಕವಾಗುವುದು. ಕಲಾವಿದರು ಪ್ರಶಂಸೆಯಿಂದ ಬೀಗುವರು. ಅಕಾರಣವಾಗಿ ಕೋಪ ಮಾಡಬೇಕಾಗುವುದು.

ಸಿಂಹ ರಾಶಿ: ಐಶ್ವರ್ಯವನ್ನು ಮಿತಿಯಲ್ಲಿ ಇರಿಸಿಕೊಳ್ಳಿ. ಆಗಮನದಿಂದ ಹಿಗ್ಗಿ ಇರುವದನ್ನು ಕಳೆದುಕಳ್ಳಬಹುದು. ಭೂಮಿಯ ಮಾರಾಟದಿಂದ ನಿಮ್ಮ ಜೀವನಕ್ಕೆ ಬೇಕಾದ ಸಂಪತ್ತು ಸಿಗಲಿದೆ. ಸಹನೆಯನ್ನು ಮೀರಿ ನೀವು ಇಂದು ವರ್ತಿಸುವಿರಿ. ಅಪರಿಚಿತರ ಜೊತೆ ಮಾತನಾಡಲು ನೀವು ಹಿಂಜರಿಯಬಹುದು. ಸ್ಮರಣಶಕ್ತಿಯ ದೋಷವು ಸ್ವಲ್ಪವೇ ಬರಲಿದೆ. ಅವಕಾಶಗಳು ತಪ್ಪಿಹೋಗಿ, ನಿಮ್ಮನ್ನೇ ನೀವು ಬೂದುಕೊಳ್ಳುವಿರಿ. ನಿಮಗೆ ವಹಿಸಿದ ಕೆಲಸವನ್ನು ಅದ್ಭುತವಾಗಿ ಮಾಡಲು ಪ್ರಯತ್ನಿಸುವಿರಿ. ನಿಮ್ಮ ಕಾಯುವಿಕೆಯು ಸಾರ್ಥಕವಾಗಬಹುದು. ಮಾತಿನಲ್ಲಿ ಮಾರ್ದವ ಇರಲಿ. ವೈಯಕ್ತಿಕ ಕಾರ್ಯದ ಕಾರಣ ಪ್ರಯಾಣ ಮಾಡುವಿರಿ. ಗಾತ್ರ ಇಲ್ಲ ಕಾರ್ಯವನ್ನು ಮಾಡಲು ಉತ್ಸಾಹ ಇರಲಿದೆ. ಸಹೋದ್ಯೋಗಿಗಳು ಅಹಂಕಾರವನ್ನು ತೋರಿಸುವರು. ನಿಮ್ಮ ನಿಲುವಲ್ಲಿ ನೀವಿರುವಿರಿ. ಕೆಲಸವು ಸರಳವಾದರೂ ಅದನ್ನು ಆರಂಭಿಸಲು ಸರಿಯಾದ ಮಾರ್ಗವು ಸಿಗದು.

ಕನ್ಯಾ ರಾಶಿ: ಗಣ್ಯರ ಒಡನಾಟವು ಸಿಗುವ ಸಾಧ್ಯತೆ ಇದೆ. ಮನಸ್ಸಿನ ಒತ್ತಡವನ್ನು ನೀವು ನಿಯಂತ್ರಣಕ್ಕೆ ತಂದುಕೊಳ್ಳುವುದು ಅನಿವಾರ್ಯ.ಅನೇಕ ದಿನಗಳಿಂದ ಅನಾರೋಗ್ಯದ ಕಾರಣ ಬಳಲುತ್ತಿದ್ದು ಸೂಕ್ತ ಚಿಕಿತ್ಸೆಯ ಅವಶ್ಯಕತೆ ಇರುವುದು. ಉದ್ಯೋಗದಲ್ಲಿ ಮಕ್ಕಳಿಗೆ ಪ್ರವೇಶವನ್ನು ಕೊಡುವಿರಿ. ಅಧಿಕ ಸಾಲವು ನಿಮ್ಮ‌ ಮಾನಸಿಕ‌ಸ್ಥಿತಿಯನ್ನೇ ಬದಲಿಸೀತು. ಸಹೋದರರು ಮರೆತ ವಿಚಾರವನ್ನು ಮತ್ತೆ ನೆನಪಿಸಿಕೊಳ್ಳುವರು. ಬಂಧುಗಳು ನಿಮ್ಮನ್ನು ಬಹಳವಾಗಿ‌ ದೂರುವರು. ಮನೆಯ ಕಾರ್ಯಗಳು ಇಂದು ಅಧಿಕವಾಗಿ ಇರಬಹುದು. ನೂತನ ವಾಹನದ ಖರೀದಿಗೆ ಪರ ಊರಿಗೆ ಹೋಗುವಿರಿ. ಅನಾಯಾಸದಿಂದ ಸಂಪಾದನೆಯ ಮಾರ್ಗವನ್ನು ನೀವು ಕಂಡುಕೊಳ್ಳುವಿರಿ. ಆಡಿಕೊಳ್ಳುವವರ ಮುಂದೆ ಮುಗ್ಗರಿಸಿ ಬೀಳಬಹುದು.‌ ನಿಮ್ಮ ಚಿಂತನೆಯನ್ನು ವಿಸ್ತರಿಸಿಕೊಳ್ಳುವುದು ಉತ್ತಮ. ದುರ್ಬಲರಿಗೆ ಮಾನಸಿಕ ಧೈರ್ಯವನ್ನು ತುಂಬುವಿರಿ.

ತುಲಾ ರಾಶಿ: ಆಪ್ತರ ಮಾತುಗಳು ನಿಮಗೆ ಸಹ್ಯವಾಗದೇ ಕೂಗಾಡುವಿರಿ. ಸಂಗಾತಿಗಾಗಿ ಹಣವನ್ನು ಖರ್ಚುಮಾಡಬೇಕಾದೀತು. ನಿಮಗೆ ಸಂಬಂಧಿಸದ ವಿಚಾರಗಳಲ್ಲಿ ಪ್ರವೇಶವನ್ನು ಪಡೆಯುವುದು ಬೇಡ. ಸರ್ಕಾರದ ಕಾರ್ಯಗಳನ್ನು ಬೇಗ ಮುಗಿಸಿಕೊಳ್ಳಲಿದ್ದೀರಿ. ವ್ಯವಹಾರದ ದಾಖಲೆಗಳು ಸರಿಯಾಗಿ ಇಟ್ಟುಕೊಳ್ಳುವಿರಿ. ವಾಹನಕ್ಕಾಗಿ ಸಾಲ ಮಾಡಬೇಕಾಗುವುದು. ದಾಂಪತ್ಯದಲ್ಲಿ ಪರಸ್ಪರರ ಹೊಂದಾಣಿಕೆಯು ಕಾಣಿಸುವುದು. ಮಕ್ಕಳನ್ನು ಪಡೆದುಕೊಳ್ಳುವ ಚಿಂತೆಯು ಕಾಡುವುದು. ಪ್ರೇಮದಲ್ಲಿ ಸಿಕ್ಕಿಕೊಂಡು ಕಷ್ಟಪಡುವಿರಿ. ನಿಮ್ಮ ತೀರ್ಮಾನವನ್ನು ಒಪ್ಪುವುದು ಕಷ್ಟವಾದೀತು. ಮಕ್ಕಳ ವಿಚಾರವಾಗಿ ನಿಮಗೆ ದೂರಬರಬಹುದು. ಮನಸ್ಸು ಬಿಚ್ಚಿ‌ ಮಾತನಾಡಲು ನಿಮಗೆ ಆಗದು. ಎಲ್ಲವನ್ನೂ ಒಳಗೇ ಅಡಗಿಸಿಕೊಳ್ಳುವಿರಿ.

ವೃಶ್ಚಿಕ ರಾಶಿ: ಬಹು ದಿನದ ನಿರೀಕ್ಷೆಗಳು ಇಂದು ಸಾಕಾರವಾಗವುದು. ನಿಮ್ಮ ಇಷ್ಟಗಳು ಸುಲಭ ಲಭ್ಯವಾಗಿರಲಿ. ನ್ಯಾಯಾಲಯದ ಹೋರಾಟವು ಅಪಯಶಸ್ಸನ್ನು ಕೊಡಬಹುದು. ಆಸ್ತಿಯಲ್ಲಿ ಸಮ ಪಾಲು ಸಿಗದೇ ನಿಮಗೆ ವಾದಕ್ಕಿಳಿಯುವಿರಿ. ಪಾಲುದಾರಿಕೆಯಲ್ಲಿ ನಿಮಗೆ ಸಣ್ಣ ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಇನ್ನೊಬ್ಬರ ಒತ್ತಾಯದ ಕಾರಣಕ್ಕೆ ನೀವು ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ. ಮಕ್ಕಳಿಂದ ಆರ್ಥಿಕ ಸಹಾಯವು ಸಿಗುವುದು. ಮಕ್ಕಳ ವಿವಾಹದ ಬಗ್ಗೆ ಬಂಧುಗಳ ಜೊತೆ ಗಂಭೀರವಾಗಿ ಚರ್ಚಿಸುವಿರಿ. ಮನಸ್ಸಿಗೆ ಹಿಡಿಸಿದ ಕೆಲಸವನ್ನು ಮಾತ್ರ ಬೇಗ ಮಾಡಿ ಮುಗಿಸುವಿರಿ. ಸಂಗಾತಿಯ ಕಡೆಯಿಂದ ನಿಮಗೆ ಶುಭಸಮಾಚಾರವು ಗೊತ್ತಾಗುವುದು. ಇಂದಿನ ನಿಮ್ಮ ಪ್ರಯಾಣವು ನಿಮಗೆ ಹಿತಕರವಾದ ಅನುಭವವನ್ನು ನೀಡಬಹುದು. ತಪ್ಪು ಮಾಡಿದರೂ ಸಿಕ್ಕಿಕೊಳ್ಳದೇ ಇರುವಿರಿ.

ಧನು ರಾಶಿ: ನಿಮ್ಮ ಕಷ್ಟಗಳನ್ನು ಪೂರ್ಣ ಮಾಡಿಕೊಳ್ಳುವುದು ಕಷ್ಟವಾದೀತು. ವೃತ್ತಿಯಲ್ಲಿ ನಿಮಗೆ ತೃಪ್ತಿಯು ಸಿಗಲಿದೆ. ಧಾರ್ಮಿಕ ವಿಚಾರವಾಗಿ ನೀವು ದೂರ ಪ್ರಯಾಣವನ್ನು ಮಾಡುವಿರಿ. ಏಕಾಗ್ರತೆಯಿಂದ ನಿಮ್ಮ ಮತ್ತೆಲ್ಲ ಕಾರ್ಯಗಳೂ ನಿಧಾನವಾಗಬಹುದು. ಪರಿಶ್ರಮದಿಂದ ಧನಾರ್ಜನೆ ಮಾಡಿದ್ದು ನಿಮಗೆ ಅಧಿಕ ಸಂತೋಷವಾಗುವುದು. ನಿಮ್ಮ ಮಾತುಗಳೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಕೆಲಸವು ಸಿಗುವುದು. ಇಂದು ಸಂದರ್ಭವನ್ನು ನೋಡಿಕೊಂಡು ಮಾತನಾಡಿ. ನಿಮ್ಮ ಕೆಲಸದ ಸಮಯವು ಬದಲಾಗಲಿದ್ದು ಹೊಂದಿಕೊಳ್ಳುವುದು ಕಷ್ಟವಾದೀತು. ರಾಜಕೀಯ ಜೀವನವು ನಿಮ್ಮನ್ನು ಅತಂತ್ರವಾಗಿಸಬಹುದು. ನಿಮ್ಮನ್ನು ತಿಳಿದವರೇ ನಿಮ್ಮ ಬಗ್ಗೆ ಸಲ್ಲದ್ದನ್ನು ಮಾತನಾಡಬಹುದು.

ಮಕರ ರಾಶಿ: ಮಕ್ಕಳು ನಿಮ್ಮ ಮಾತಿಗೆ ವಿರುದ್ಧವಾಗಿ ಮಾತನಾಡುವರು. ವಿಲಾಸಿ ಜೀವನಕ್ಕೆ ಹೆಚ್ಚು ಒತ್ತು ಕೊಡುವಿರಿ. ನಿನ್ನ ಬಾಗುವ ಸ್ವಭಾವವು ನಿಮ್ಮನ್ನು ಮೇಲಕ್ಕೆ ಏರಿಸುವುದು. ಹೇಳಿಕೊಳ್ಳಲಾಗದ ಸಂಕಟವನ್ನು ಮನಸ್ಸಿನಲ್ಲಿಯೇ ನುಂಗುವಿರಿ. ಪ್ರಭಾವಿ ಗಣ್ಯರ ಜೊತೆ ಕೆಲವು ಸಮಯವನ್ನು ಕಳೆಯುವಿರಿ. ವ್ಯವಹಾರದಲ್ಲಿ ಚುರುಕು ಸಾಲದು. ಉದ್ಯೋಗದಲ್ಲಿ ದಿನದಿಂದ ದಿನಕ್ಕೆ ಉಂಟಾದ ಒತ್ತಡದಿಂದ ಉದ್ಯೋಗವನ್ನು ಬದಲಿಸಲು ಯೋವಿಸುವಿರಿ. ಯಂತ್ರೋಪಕರಣದ ಮಾರಾಟಗಾರರಿಗೆ ಅಧಿಕ ಲಾಭವಾಗುವುದು. ಪ್ರೀತಿಯನ್ನು ಕುಟುಂಬದ ಜೊತೆ ಹಂಚಿಕೊಳ್ಳುವಿರಿ. ಮನೆತನದ ಕಾರಣದಿಂದ ನಿಮಗೆ ಗೌರವವು ಪ್ರಾಪ್ತವಾಗಲಿದೆ. ಮೇಲಧಿಕಾರಿಗಳನ್ನು ಮೆಚ್ಚಿಸುವಿರಿ. ನೀವು ಇಂದು ನೋಡಲು ಪ್ರಶಾಂತವಾಗಿ ಕಂಡರೂ ನಿಮ್ಮಳಗೆ ಅಶಾಂತಿಯ ತರಂಗಗಳು ಒಂದೊಂದೊಗಿಯೇ ಮೇಲೆ ಬರುವುದು. ಹಣದ ವಿನಿಮಯದ ಸಂದರ್ಭದಲ್ಲಿ ಜಾಗರೂಕತೆ ಅವಶ್ಯಕ.

ಕುಂಭ ರಾಶಿ: ಸ್ಥಿರಾಸ್ತಿಯ ಬಗ್ಗೆ ಸದಾ ಯೋಚಿಸಿ, ಅದರ ಮೇಲೆ ಮೋಹ ಕಡಿಮೆ ಆದೀತು. ಪ್ರಯಾಣದಲ್ಲಿ ನಿನಗೆ ಯಾರಾದರೂ ಶತ್ರುಗಳಾಗಬಹುದು. ಬರುವ ಹಣವು ಕೈಸೇರಿದರೂ ಖರ್ಚಿನ ದಾರಿ ಮುಕ್ತವಾಗಿರುವುದು ಮಕ್ಕಳಿಗೆ ಸಿಗುವ ಪುರಸ್ಕಾರದಿಂದ ನಿಮಗೆ ಸಂತೋಷವಾಗುವುದು. ಅಪರೂಪದ ಮಿತ್ರರು ನಿಮ್ಮನ್ನು ಭೇಟಿ ಮಾಡುವರು. ಮನೆಗೆ ಅತಿಥಿಗಳ ಆಗಮನವಾಗಬಹುದು. ನಿಮ್ಮ ಮಕ್ಕಳನ್ನು ಓದಿಸಲು ಹೊರಗೆ ಕಳುಹಿಸುವ ನಿರ್ಧಾರವಿರಲಿದೆ. ಉದರ ಸಂಬಂಧದ ರೋಗವು ಆಹಾರದ ವ್ಯತ್ಯಾಸದಿಂದ ಬರುವುದು. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಸಫಲರಾಗುವುದಿಲ್ಲ. ಏಕಪಕ್ಷೀಯವಾದ ನಿರ್ಧಾರದಿಂದ ನಿಮ್ಮವರಿಗೆ ಬೇಸರವಾದೀತು. ಅಹಂಕಾರದಿಂದ ಸಾಧಿಸಲು ಶಕ್ಯವಾಗದ್ದನ್ನು ಪ್ರೀತಿಯಿಂದ ಸಾಧಿಸುವಿರಿ. ಸಂಗಾತಿಯಿಂದ ಪ್ರೀತಿಯು ಸಿಗಲಿದೆ. ಯಾರ ಮೇಲೂ ಪ್ರಮಾಣ‌ಮಾಡಿ ನೀವೇ ಸಿಕ್ಕುಕೊಳ್ಳುವಿರಿ.

ಮೀನ ರಾಶಿ: ನಿಮ್ಮ ಸಂಪಾದನೆಯ ಮಾರ್ಗವು ಶುದ್ಧವಾಗಿರದು. ಕಛೇರಿಯಲ್ಲಿ ಹಿತಕರವಲ್ಲದ ವಾತಾವರಣವು ಇರಲಿದೆ. ಸಂತೋಷದ ಕೂಟದಲ್ಲಿ ಭಾಗವಹಿಸುವಿರಿ. ಧನನಷ್ಟವನ್ನು ನೀವು ಸಹಿಸಲಾರಿರಿ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ ಅಭಾವವು ಹೆಚ್ಚು ತೋರುವುದು.. ಇಂದಿನ ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಮನೆಯ ಎಷ್ಟೋ ವಿಚಾರಗಳು ನಿಮಗೆ ಗೊತ್ತಾಗದೇ ಹೋಗಬಹುದು. ಆಂತರಿಕ ಕಲಹವನ್ನು ಜಗಜ್ಜಾಹಿರ ಮಾಡಿಕೊಳ್ಳುವಿರಿ. ನಿಮ್ಮ ಅಗಾಧ ಜ್ಞಾನವು ಸದುಪಯೋಗ ಆಗಬಹುದು. ಇಂದು ಬಂಧುಗಳ ಕಾರಣಕ್ಕಾಗಿ ಧನವ್ಯಯವಾಗುವುದು. ನಿಮ್ಮ ಆಸ್ತಿಯ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಹಳೆಯ ನೋವುಗಳು ಕಾಣಿಸಿಕೊಳ್ಳಬಹುದು. ಉದ್ಯೋಗದಲ್ಲಿ ಆಯ್ಕೆ ಸಮಸ್ಯೆಯು ಬರಬಹುದು. ಶತ್ರುಗಳ ಸಂಚಿಗೆ ಬಲಿಯಾಗುವಿರಿ. ಅಲ್ಪಕಾಲಕ್ಕಾಗಿ ಹೆಚ್ಚು ಹೂಡಿಕೆ ಮಾಡುವಿರಿ.

-ಲೋಹಿತಶರ್ಮಾ – 8762924271 (what’s app only)

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ