Daily Horoscope July 13, 2024: ತುಲಾ ರಾಶಿಯವರಿಗೆ ಕೋಪದಿಂದ ಅವಮಾನ, ದಿನ ಭವಿಷ್ಯ ಇಲ್ಲಿದೆ

2024 ಜುಲೈ 13 ದಿನ ಭವಿಷ್ಯ: ಶನಿವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Daily Horoscope July 13, 2024: ತುಲಾ ರಾಶಿಯವರಿಗೆ ಕೋಪದಿಂದ ಅವಮಾನ, ದಿನ ಭವಿಷ್ಯ ಇಲ್ಲಿದೆ
ರಾಶಿ ಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ರಮೇಶ್ ಬಿ. ಜವಳಗೇರಾ

Updated on: Jul 12, 2024 | 10:11 PM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶನಿವಾರ (ಜುಲೈ 13) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಪುನರ್ವಸು, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ವರಿಯಾನ್, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 12 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:25ರಿಂದ 11:02ರ ವರೆಗೆ, ಯಮಘಂಡ ಕಾಲ 14:15 ರಿಂದ 15:52ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:12 ರಿಂದ 07:49ರ ವರೆಗೆ.

ಮೇಷ ರಾಶಿ :ಇಂದು ನಿಮ್ಮ ಮಕ್ಕಳಿಗೆ ಬೇಕಾದ ಸಹಕಾರವು ನಿಮ್ಮಿಂದ ಸಿಗಲಿದೆ. ಕೃಷಿಯಲ್ಲಿ ಆಸಕ್ತಿ ಇರುವವರು ಹೊಸ ಕೃಷಿಯ ಅನ್ವೇಷಣೆಯಲ್ಲಿ ನಿರತರಾಗುವಿರಿ. ವಾಹನ ಖರೀದಿ, ಚಿತ್ತದಲ್ಲಿ ಏಕಾಗ್ರತೆ ಬರುವುದು ಕಷ್ಡ. ಇನ್ನೊಬ್ಬರಿಗೆ ಅಪಮಾನವಾಗುವಂತೆ ಇಂದಿನ‌ ನಿಮ್ಮ ಮಾತು ಇರಬಹುದು. ಮರದ ವೃತ್ತಿಯನ್ನು ಮಾಡುವವರಗೆ ಲಾಭ ಕಡಿಮೆ ಇದ್ದೀತು. ಸ್ನೇಹಿತರು ನಂಬಿಕೆಗೆ ದ್ರೋಹ ಬಗೆಯಬಹುದು. ವಿದೇಶಕ್ಕೆ ಪ್ರಯಾಣಿಸಲು ಅನುಮತಿ ಪತ್ರವು ಸಿಗಲಿದೆ. ನಿರೀಕ್ಷಿಸಿದ ಗೌರವವು ಕಡಿಮೆಯಾದಂತೆ ಅನ್ನಿಸಬಹುದು. ಉದ್ಯಮಕ್ಕೆ ಸಂಬಂಧಿಸಿದಂತೆ ಹಣದ ಖರ್ಚು ಮಾಡಬೇಕಾದೀತು. ಕಾರ್ಯದಲ್ಲಿ ಉಂಟಾದ ತೊಂದರೆಯನ್ನು ನೀವು ಲೆಕ್ಕಿಸದೇ ಮುನ್ನಡೆಯುವಿರಿ. ಖರೀದಿಯ ವೇಳೆ ಅಸಲಿ ನಕಲಿಗಳ ಬಗ್ಗೆ ಅರಿವು ಇರಲಿ. ಸರಿಯಾದ ಕಾರ್ಯವನ್ನು ಮಾಡಿದರೂ ಅದು ತಪ್ಪಾಗಬಹುದು ಅಥವಾ ತಪ್ಪಾದಂತೆ ಬಿಂಬಿಸಬಹುದು.

ವೃಷಭ ರಾಶಿ :ನೀವು ಬದಲಾಗುವ ಅನಿವಾರ್ಯತೆ ಎದುರಾಗಬಹುದು. ಇಂದು ನಾನಾ ಕಡೆಗಳಿಂದ ಅಧಿಕ ಖರ್ಚುಗಳು ಹುಡುಕಿಕೊಂಡು ಬರಬಹುದು, ಜಾಗರೂಕರಾಗಿರಿ. ನಿತ್ಯಕರ್ಮವನ್ನು ಮಾಡಲು ಆಲಸ್ಯವು ಬರಬಹುದು. ತಂದೆಯ ವಿಚಾರದಲ್ಲಿ ನಿಮಗೆ ಬೇಸರವಾದೀತು. ಹೆಚ್ಚು ಮಾತುಕತೆಗಳು ತಂದೆಯ ಜೊತೆ ಆಡಬಹುದು. ವಿದ್ಯಾಭ್ಯಾಸ ಹಿನ್ನಡೆಯಿಂದ ನಿಮ್ಮಲ್ಲಿ ಆತಂಕವು ಹೆಚ್ಚಾಗುವುದು. ಸಹಾಯವನ್ನು ಕೇಳಿ ಬಂದವರಿಗೆ ಇರುವುದನ್ನು ಕೊಟ್ಟು ಸಂತೋಷಪಡಿಸಿ. ಅಪರಿಚಿತರನ್ನು ನಂಬಿ ಮೋಸಹೋಗಬೇಕಾದೀತು. ಹೂಡಿಕೆಯಲ್ಲಿ ಹೆಚ್ಚು ಹಣವನ್ನು ಹೂಡಿಕೆ ಮಾಡುವಿರಿ. ನಿಮ್ಮ ಕಾರ್ಯದಲ್ಲಿ ಗುಣಮಟ್ಟ ಕಡಿಮೆ ಆಗಬಹುದು. ಯಾರ ಬೆಂಬಲವನ್ನು ಬಯಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುವಿರಿ. ನಿಮ್ಮ ತಪ್ಪಿಗೆ ಬೇರೆಯವರನ್ನು ದೂರುವುದು ಬೇಡ. ಇಂದು ನೀವು ಮನೆಯಲ್ಲಿ ಇರದೇ ಊರೂರು ಸುತ್ತುವಿರಿ. ನಿಜ ಬಣ್ಣವು ಬಯಲಾಗಬಹುದು.

ಮಿಥುನ ರಾಶಿ :ಸಾಲ ಬಾಧೆಯೇ ಇಂದು ನಿಮ್ಮನ್ನು ಕಾಡುವುದು. ಅನಿರೀಕ್ಷಿತವಾಗಿ ಅಮೂಲ್ಯವಾದ ವಸ್ತುವೊಂದು ಸಿಗಲಿದೆ. ಕೃಷಿಕರಿಗೆ ಉತ್ತಮ ಧನಾಗಮನದಿಂದ ನೆಮ್ಮದಿ ಎನಿಸಿಬಹುದು. ಸಜ್ಜನರ ಸಹವಾಸವನ್ನು ಮಾಡುವ ಅವಕಾಶ ಸಿಗಲಿದೆ. ಮನಶ್ಚಾಂಚಲ್ಯವಿದ್ದರೆ ಧ್ಯಾನವನ್ನು ಮಾಡಬೇಕಾದೀತು.‌ ಎಂದೋ ಕೂಡಿಟ್ಟ ಹಣವು ಇಂದು ಉಪಯೋಗಕ್ಕೆ ಬಂದೀತು. ಆರೋಗ್ಯವು ಹದ ತಪ್ಪಬಹುದು. ನಿರ್ಲಕ್ಷ್ಯ ಮಾಡದೇ ಇರುವುದು ಉತ್ತಮ. ಸಜ್ಜನರ ವಿಚಾರದಲ್ಲಿ ನೀವು ಅನಾದರ ತೋರಿಸಬಹುದು. ಆಧಾರವಿಲ್ಲದೇ ಮಾತನಾಡಿ ಅವಮಾನಿತರಾಗಬಹುದು. ಉತ್ಪಾದನಾ ವಲಯದ ಉದ್ಯಮದಲ್ಲಿ ಹಿನ್ನಡೆಯಾಗಲಿದೆ. ಗೊಂದಲವನ್ನು ನೀವು ಮೀರುವುದು ಕಷ್ಟವಾದೀತು. ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯವು ನಿಮ್ಮ ಕಡೆಯಿಂದ ಆಗುವುದು. ಯಾವುದಾದರೂ ರೀತಿಯಲ್ಲಿ ನೀವು ಆರ್ಥಿಕ ಉಳಿತಾಯವನ್ನು ಮಾಡಬೇಕಾಗುವುದು. ಅಜಾಗರೂಕತೆಯಿಂದ ಹಣವನ್ನು ಕಳೆದುಕೊಳ್ಳುವಿರಿ.

ಕರ್ಕ ರಾಶಿ :ಅನ್ಯರ ಅಧೀನರಾಗಿಯೇ ಇರುವುದು ನಿಮಗೆ ಸರಿಕಾಣದು. ನಿಮ್ಮ ಮೇಲೆ ಉಂಟಾದ ಅಪನಂಬಿಕೆಯನ್ನ ದೂರಮಾಡಿಕೊಳ್ಳಲು ಪ್ರಯತ್ನಿಸುವಿರಿ. ಇಂದು ಧಾರ್ಮಿಕ ಆಚಾರವಂತರಿಗೆ ಆಚರಣೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಎದುರಾಗಲಿದೆ. ಉನ್ನತ ಹುದ್ದೆಯಲ್ಲಿರುವ ಉದ್ಯೋಗಸ್ಥರಿಗೆ ಹಿರಿಯ ಅಧಿಕಾರಿ ವರ್ಗದಿಂದ ಆಪಾದನೆಗಳು ಬರಬಹುದು. ಪ್ರಯಾಣವನ್ನು ನೀವು ಧಾವಂತದಲ್ಲಿ ಮಾಡುವುದು ಬೇಡ. ಪತ್ನಿಯಿಂದ ಮನೆಯಲ್ಲಿ ಕಿರಿಕಿರಿಯಾದೀತು. ಆಪ್ತ ಮಿತ್ರರ ಭೇಟಿಯಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಇದ್ದರೂ ಉತ್ಸಾಹದಿಂದ ಹೆಚ್ಚಿನ ಕೆಲಸವನ್ನು ಮಾಡಬೇಡಿ. ಬಂಧುವರ್ಗವು ನಿಮ್ಮನ್ನು ಸೇರಸಿಕೊಳ್ಳದೇ ಇದ್ದೀತು. ಯಾವುದೇ ವ್ಯವಸ್ಥೆಯಲ್ಲಿ ಮುಂದುವರಿಯಲು ಇಷ್ಟವಾಗದು. ಹೇಳಬೇಕಾದುದನ್ನು ಸರಿಯಾದ ಕ್ರಮದಲ್ಲಿ ಹೇಳಿ.

ಸಿಂಹ ರಾಶಿ :ಇಂದು ಸಾಹಸ ಪ್ರವೃತ್ತಿಯುಳ್ಳವರಿಗೆ ದೂರ ಊರಿನಲ್ಲಿ ಸುತ್ತಾಡುವ ಮನಸ್ಸಾಗುವುದು. ಇಂದು ನೀವು ಮಂಗಲ ಕಾರ್ಯಗಳಿಂದ ಉತ್ಸಾಹವನ್ನು ಪಡೆದುಕೊಳ್ಳುವಿರಿ. ಅವಿವಾಹಿತರಿಗೆ ಯೋಗ್ಯ ಸಂಬಂಧವು ಆಕಸ್ಮಿಕವಾಗಿ ಬಂದು ಶೀಘ್ರವಾಗಿ ವಿವಾಹವು ಆಗುವುದು. ವ್ಯವಹಾರದಿಂದ ಉತ್ತಮ ಸಂಬಂಧವು ನಷ್ಟವಾಗಬಹುದು. ಉದ್ಯೋಗಸ್ಥರಿಗೆ ಉನ್ನತ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗೆ ಬೇಕಾದ ಉತ್ತಮ ಅವಕಾಶಗಳು ಸಿಗಲಿದೆ. ಹಣದ ಹರಿವಿನಿಂದ ತೃಪ್ತಿ ಉಂಟಾಗಬಹುದು. ಉದ್ಯೋಗದ ವಿಚಾರದಲ್ಲಿ ಸಂತಸವಿರುವುದು. ಸೂಕ್ಷ್ಮ ಸನ್ನಿವೇಶಗಳನ್ನು ನಿರ್ವಹಿಸುವ ಕಲೆಯು ಗೊತ್ತಾಗದು. ಗೆಲುವನ್ನು ಇವರು ನಿರೀಕ್ಷಿಸಬಹುದು. ಸಂತಾನದ ವಿಚಾರದಲ್ಲಿ ಶುಭ ಸೂಚನೆ ಇಂದು ನಿಮಗೆ ಸಿಗಲಿದೆ. ಎಲ್ಲರಿಂದ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಇಷ್ಟಪಡುವಿರಿ. ಯಾರ ಮೇಲೇ ರೇಗದೇ ಇರುವುದು ನಿಮಗೆ ಇಷ್ಟವಾದೀತು. ನಿಮ್ಮ ಉದ್ದೇಶಿತ ಯೋಜನೆಯು ಪೂರ್ಣವಾಗುವುದು.

ಕನ್ಯಾ ರಾಶಿ :ಇಂದು ನಿಮ್ಮ ಅಂತಸ್ಸತ್ವದ ಮೇಲೆ ನಂಬಿಕೆ ಹೋಗಬಹುದು. ವಿದ್ಯಾರ್ಥಿಗಳಿಗೆ ಗೊಂದಲವಿರಲಿದೆ. ಹೊಸ ಉದ್ಯೋಗಕ್ಕೆ ಸೇರುವವರಿಗೆ ಅವಕಾಶಗಳು ಸಿಗಲಿವೆ. ಪ್ರೇಮಿಯಿಂದ ನಿಮಗೆ ಧನಸಹಾಯ ಸಿಗಲಿದೆ. ಆದರೆ ಇದರಿಂದ ಅನಂತರ ನೆಮ್ಮದಿಯನ್ನು ಹಾಳುಮಾಡಿಕೊಳ್ಳುವಿರಿ. ಇದು ನಿಮಗೆ ಮುಜುಗರವನ್ನೂ ಉಂಟುಮಾಡೀತು. ಅನ್ಯರು ನಿಮ್ಮ ಖಾಸಗಿ ವಿಚಾರಗಳಿಗೆ ಮನೆಯವರು ಮೂಗು ತೂರಿಸಿದರೆ ಸಿಟ್ಟುಗೊಳ್ಳುವಿರಿ. ಆದರೆ ಕೌಟುಂಬಿಕ ಅಗತ್ಯಗಳಿಗೆ ತಕ್ಷಣ ಗಮನ ನೀಡಬೇಕಾದೀತು. ಇಂದು ನೀವು ಯಾರ ಮಾತನ್ನೂ ಒಪ್ಪಿಕೊಳ್ಳಲಾರಿರಿ. ಭೂಮಿಯ ವಿಚಾರದಲ್ಲಿ ಕಿರಿಕಿರಿ ಆಗಬಹುದು. ವಿದೇಶೀ ವ್ಯಾಪಾರದಲ್ಲಿ ಅನಿಶ್ಚಿತತೆ ನಿಮ್ಮನ್ನು ಕಾಡಬಹುದು. ಸಾಮಾಜಿಕ ಕಾರ್ಯದಿಂದ ಪ್ರೇರಣೆ ಪಡೆದು ಸಂಸ್ಥೆಯನ್ನು ಆರಂಭಿಸುವಿರಿ. ಗೊತ್ತಿದ್ದರೂ ಗೊತ್ತಿಲ್ಲದಂತೆ ಇರುವಿರಿ. ಯಾವುದನ್ನೇ ಮಾಡಿದರೂ ಅದರಿಂದ ಏನನ್ನಾದರೂ ಬಯಸುವಿರಿ.

ತುಲಾ ರಾಶಿ :ಕೋಪದಿಂದ ಏನನ್ನಾದರೂ ಹೇಳಿ ಕಷ್ಟದಲ್ಲಿ ಸಿಕ್ಕಿಬೀಳುವಿರಿ. ಇಂದು ನಿಮ್ಮ ಶತ್ರುಗಳು ಜಯಗಳಿಸಿ ನಿಮ್ಮನ್ನು ಛೇಡಿಸಬಹುದು. ಸರ್ಕಾರಿ ಕಚೇರಿಯಲ್ಲಿ ಕಾರ್ಯಗಳು ಮಂದಗತಿಯಲ್ಲಿ ಸಾಗುವುದು. ಸಮಯಕ್ಕಾಗಿ ಕಾಯಬೇಕಾಗಬಹುದು. ಇಂದು ನೀವು ಹಣಕಾಸಿನ ವಿಚಾರದಲ್ಲಿ ನಿಷ್ಠುರದಿಂದ ವರ್ತಿಸಿದರೆ ಮಾತ್ರ ಲಾಭಗಳಿಸುವ ಸಾಧ್ಯತೆ ಇದೆ. ಯಾರನ್ನೋ ಸೋಲಿಸುವ ಸವಾಲನ್ನು ತಗೆದುಕೊಳ್ಳುವಿರಿ ಪ್ರೇಮಿಯು ದೂರಾಗಬಹುದು. ದುಃಖವು ಅಧಿಕವಾಗಲಿದೆ. ಸ್ನೇಹಿತರಿಂದ ಸಾಂತ್ವನ ಮಾಡುವರು. ಇನ್ನೊಬ್ಬರನ್ನು ನೋಡಿ ಕಲಿಯುವ ವಿಚಾರವು ಸಾಕಷ್ಟಿರಬಹುದು. ರಾಜಕೀಯದ ಹಿನ್ನಡೆಯಿಂದ ಅಪಮಾನವಾಗಲಿದೆ. ಸಾಲ ಪಡೆದರವರ ಹುಡುಕಾಟವನ್ನು ಮಾಡುವಿರಿ. ಶ್ರಮವಹಿಸಿದಷ್ಟು ಫಲವು ಸಿಗಲಿಲ್ಲ ಎಂಬ ಬೇಸರವಿದ್ದರೂ ತಕ್ಕಮಟ್ಟಿನ ಖುಷಿಯು ಇರಲಿದೆ. ಎಲ್ಲರಿಗೂ ಬೇಕಾದ ರೀತಿಯಲ್ಲಿ ನಿಮ್ಮ ವರ್ತನೆ ಇರಲಿದೆ‌.

ವೃಶ್ಚಿಕ ರಾಶಿ :ನಿಮಗೆ ಆದ ಅವಮಾನದಿಂದ ಹೊರಬರಲು ಅಸಾಧ್ಯವಾಗಬಹುದು. ನೂತನ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ನಿಮ್ಮ ಆದಾಯ ಚೆನ್ನಾಗಿದ್ದು, ಖರ್ಚುಗಳು ಆತಂಕಕ್ಕೆ ತಳ್ಳಬಹುದು. ಪರಿಚಿತರ ಪ್ರಭಾವದಿಂದ ವೃತ್ತಿಯಲ್ಲಿ ಮುನ್ನಡೆಯುವಿರಿ. ವೈಯಕ್ತಿಕ ಸ್ಥಾನಮಾನಗಳು ಹೆಚ್ಚಾಗಬಹುದು. ನೂತನ ಗೃಹ ನಿರ್ಮಾಣಕ್ಕೆ ಹಣದ ಹೊಂದಿಸುವಿಕೆಯಲ್ಲಿ ಮಗ್ನರಾಗುವಿರಿ. ವಿರಾಮ ರಹಿತವಾದ ಮಾತುಗಳಿಂದ ಇನ್ನೊಬ್ಬರಿಗೆ ತೊಂದರೆಯಾಗಲಿದೆ. ಅವಿವಾಹಿತರಿಗೆ ದೂರದ ಸಂಬಂಧದಿಂದ ವಿವಾಹವು ಕೂಡಿಬರಬಹುದು. ಪ್ರತಿಫಲದ ನಿರೀಕ್ಷೆ ಇಲ್ಲದೇ ನೀವು ಸ್ನೇಹಿತನಿಗೆ ಸಹಾಯವನ್ನು ಮಾಡುವಿರಿ. ನಿರ್ದಿಷ್ಟ ಕ್ರಮವನ್ನು ಅಳವಡಿಸಿಕೊಂಡು ಉದ್ಯಮವನ್ನು ಕ್ರಮಬದ್ಧವಾಗಿಸಿ. ದುರಾಸೆಯಿಂದ ಇರುವ ವಸ್ತುಗಳೂ ನಷ್ಟವಾಗುವುದು. ಮಾತಿನಿಂದ ಇನ್ನೊಬ್ಬರು ನಿಮ್ಮನ್ನು ದ್ವೇಷಿಸುವರು. ಪುಣ್ಯಕ್ಷೇತ್ರದ ದರ್ಶನವನ್ನು ಮಾಡುವಿರಿ.

ಧನು ರಾಶಿ :ನಿಮ್ಮ ಅಜ್ಞಾ‌ನದ ಪ್ರದರ್ಶನದಿಂದ ಇರುವ ಗೌರವವನ್ನು ಕಳೆದುಕೊಳ್ಳುವಿರಿ. ಅದನ್ನು ಮರೆಯುವುದು ಮುಂದುವರಿಸುವುದು ನಿಮಗೆ ಬಿಟ್ಟಿದ್ದು. ಇಂದು ಪ್ರಮುಖ ವಿಚಾರಗಳಲ್ಲಿ ಹೆಚ್ಚು ವಿವೇಕಪೂರ್ವಕವಾಗಿ ಮುನ್ನಡೆಯುವು ಉತ್ತಮ. ವಿವೇಕಪೂರ್ಣವಾದ ಮಾತುಗಳಿಂದ ನಿಮ್ಮನ್ನು ಸರಿದಾರಿಗೆ ತರುವುದು ಕಷ್ಟವಾದೀತು. ಬಹುದಿನಗಳಿಂದ ವಿವಾಹದ ಸಿದ್ಧತೆಯಲ್ಲಿ ಇದ್ದವರಿಗೆ ಕಂಕಣ ಬಲ ಕೂಡಿ ಬರಲಿದೆ. ಕುಟುಂಬದಲ್ಲಿ ಕಿರಿಕಿರಿಯಾದರೂ ಸಮಾಧಾನದಿಂದ ಹೋಗುವುದು ಒಳಿತು. ಕಛೇರಿಯ ಕೆಲಸದಲ್ಲಿ ಆಕಸ್ಮಿಕ ಬದಲಾವಣೆಯಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಅಧಿಕಾರಿಗಳ ಸಹಾಯವೂ ಸಿಗಬಹುದು. ಅಸಮಾಧಾನವನ್ನು ಅಸಭ್ಯವಾಗಿ ಹೊರಹಾಕುವಿರಿ. ವಿದ್ಯಾರ್ಥಿಗಳಿಗೆ ಬೆಂಬಲದ ಕೊರತೆ ಇರುವುದು. ಹಿರಿಯರ ಆರೋಗ್ಯದಲ್ಲಿ ವ್ಯತ್ಯಸಾವಾಗಿದ್ದು ತುರ್ತು ಚಿಕಿತ್ಸೆಯ ಅವಶ್ಯಕತೆ ಬೇಕಾಗಬಹುದು. ಜೀರ್ಣಶಕ್ತಿಯ ವ್ಯತ್ಯಾಸದಿಂದ ರೋಗವನ್ನು ತಂದುಕೊಳ್ಳುವಿರಿ.

ಮಕರ ರಾಶಿ :ನಿಮ್ಮ ದಾಂಪತ್ಯ ಜೀವನವು ಕಲಹದಿಂದ ಕೂಡಿದ್ದರೂ ಕೊನೆಯಲ್ಲಿ ಸುಖಾಂತವಾಗಲಿದೆ. ದಾಂಪತ್ಯದಲ್ಲಿ ಪ್ರೇಮಸಲ್ಲಪವು ಎಂದಿಗಿಂತ ಜೋರಾಗಿ ಇರಲಿದೆ. ಇಂದು ಕಚೇರಿಯಲ್ಲಿ ನಿಮ್ಮ ಕೆಲಸಗಳನ್ನು ನಿಮ್ಮ ಅನುಪಸ್ಥಿತಿಯಲ್ಲಿ ಮಾಡಿ ಮುಗಿಸುವರು. ಸಮಾರಂಭದಲ್ಲಿ ನೀವು ಗುರುತಿಸಿಕೊಳ್ಳಲು ಬಯಸುವಿರಿ. ಯಾರಾದರೂ ಒಬ್ಬರೂ ತಲೆಬಾಗಲೇಬೇಕಾದೀತು. ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುವರು. ಕೆಲಸಕ್ಕಾಗಿ ಬಹಳ ಹುಡುಕುತ್ತಿದ್ದರೆ ನಿಮಗೆ ಅನುಗುಣವಾಗಿ ಉದ್ಯೋಗವು ಪ್ರಾಪ್ತಿಯಾಗುವುದು. ಧಾರ್ಮಿಕಕ್ಷೇತ್ರಗಳ ದರ್ಶನವನ್ನು ಪಡೆಯುವ ಸದವಕಾಶ ಸಿಗಲಿದೆ. ಆರೋಗ್ಯವು ಸುಧಾರಿಸಿದ್ದರಿಂದ ತೃಪ್ತಿ ಇರುವುದು. ದುರಭ್ಯಾಸದಿಂದ ನೀವು ಎಲ್ಲರ ಕಡೆಯಿಂದ ಮುಖಭಂಗವಾಗಲಿದೆ. ಇಂದು ನಿಮ್ಮ ನೇತೃತ್ವದಲ್ಲಿ ಕೆಲವು ಕಾರ್ಯಗಳು ನಡೆಯುವುದು. ವಿದ್ಯಾರ್ಥಿಗಳು ಪ್ರತಿಕ್ಷಣವನ್ನು ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಯೋಚಿಸುವುದು ಉತ್ತಮ. ಒಗ್ಗಟ್ಟಿನಿಂದ ಕಾರ್ಯವನ್ನು ಸಾಧಿಸುವುದು ಅಗತ್ಯವೂ ಹೌದು.

ಕುಂಭ ರಾಶಿ :ನಿಮ್ಮನ್ನು ನೀವೇ ಪ್ರಸ್ತುತಿ ಪಡಿಸಿಕೊಳ್ಳಬೇಕು. ಪ್ರಯತ್ನವಿಲ್ಲದೇ ಯಾವುದೂ ಸಾಧ್ಯವಾಗದು ಎನ್ನುವ ಮಾತನ್ನು ಮನನ ಮಾಡಿಕೊಳ್ಳಿ. ಇಂದು ನಿಮ್ಮ ವ್ಯಾಪರಗಳು ಸುಲಲಿತವಾಗಿ ನಡೆದರೂ ಲಾಭದಲ್ಲಿ ಸ್ವಲ್ಪ ಕೊರತೆ ಎದ್ದು ಕಾಣುವುದು. ಎಲ್ಲರಿಗೂ ಸಲ್ಲುವಂತಾಗುವುದು ಕಷ್ಟ. ಇಂತಹ ಸಂದರ್ಭಗಳಲ್ಲಿ ತಾಳ್ಮೆ ಮುಖ್ಯವಾಗಿ ಬೇಕಾಗುವುದು. ನಿಮ್ಮ ಹಳೆಯ ದ್ವಿಚಕ್ರ ವಾಹನವನ್ನು ಮಾರಾಟ ಮಾಡಿ ಲಾಭ ಪಡೆದುಕೊಳ್ಳುವಿರಿ. ಉದ್ಯಮದ ಲಾಭಾಂಶವನ್ನು ಸತ್ಕಾರ್ಯಕ್ಕೆ ವಿನಿಯೋಗಿಸುವಿರಿ. ಅನಿರೀಕ್ಷಿತ ಧನ ಲಾಭದಿಂದ ಹೊಸ ಕೆಲಸಗಳನ್ನು ಮಾಡಲು ಪ್ರಯತ್ನಿಸುವಿರಿ. ಭೂಮಿಯನ್ನು ಕಳೆದುಕೊಳ್ಳುವ ಸಂದರ್ಭ ಬರುವುದು. ಇಂದು ನೀವು ಸಂಗಾತಿಯ ಮಾತನ್ನೇ ಹೆಚ್ಚು ಕೇಳಬೇಕಾದೀತು. ಬಂಧುಗಳೇ ನಿಮಗೆ ಹಿತವೆನಿಸುವುದು. ಸಮಯವು ಎಷ್ಟೇ ಇದ್ದರೂ ಕೆಲಸವನ್ನು ಮಾಡುವ ಮನಸ್ಸು ಇರದು. ಕೆಲವು ಕಹಿ ಸುದ್ದಿಯನ್ನು ಮರೆಯಲಾಗದು.

ಮೀನ ರಾಶಿ :ಅನ್ಯಥಾ ಶರಣಂ ನಾಸ್ತಿ ಎಂದು ನೀವು ಮತ್ತೆ ಬಿಟ್ಟ ಕಾರ್ಯವನ್ನೇ ಮಾಡಬೇಕಾಗುವುದು. ಅಂದುಕೊಂಡ ಕೆಲಸಗಳು ಸುಗಮವಾಗಿ ಸಾಗಲಿದೆ‌. ಇಂದು ನೀವು ಅಚ್ಚರಿಯ ಕಾರ್ಯ ಸಾಧನೆ ಮಾಡಲಿದ್ದೀರಿ. ಇದರಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ ಕಾಣಲಿದೆ. ಕೆಲಸವನ್ನು ವಹಿಸಿಕೊಂಡು ಮಾಡುವ ಗುತ್ತಿಗೆದಾರರಿಗೆ, ಕಲಾವಿದರಿಗೆ ಇಂದು ಸಕಾಲವಾಗಿದೆ. ಹೆಚ್ಚು ಪ್ರಯತ್ನದಿಂದ ಅಧಿಕ ಲಾಭವನ್ನು ಪಡೆಯಬಹುದಗಿದೆ. ಸಮಾಜದಲ್ಲಿ ಅನೇಕ ಸಾಮಾಜಿಕ ಕಾರ್ಯವನ್ನು ಮಾಡುವವರಿಗೆ ಯೋಗ್ಯ ಗೌರವ, ಸಮ್ಮಾನಗಳು ಸಿಗಲಿದೆ. ಮಿತ್ರರ ಸಹಕಾರದಿಂದ ಹೊಸತನ್ನು ಸಾಧಿಸಬಹುದು. ಸುಲಭವಾಗಿ ಯಾವುದೂ ಸಾಧ್ಯವಿಲ್ಲ ಎಂಬ ಸತ್ಯ ನಿಮ್ಮ ಅರಿವಿಗೆ ಬರುವುದು. ಎದುರಿಸಬಹುದಾದ ಸಮಸ್ಯೆಗೆ ಧೈರ್ಯದಿಂದ ಮುನ್ನುಗ್ಗಿ ಸರಿ ಮಾಡಿಕೊಳ್ಳಿ. ನಿಮ್ಮ ಕೈಲಾದಷ್ಟು ಶಕ್ತಿಯಲ್ಲಿ ಕೆಲಸ ಮಾಡುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)

‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ