ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 7) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಪ್ರೀತಿ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 04 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:00 ರಿಂದ ಮಧ್ಯಾಹ್ನ 12:37ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:51 ರಿಂದ 05:28ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:47 ರಿಂದ 09:24ರ ವರೆಗೆ.
ತುಲಾ: ಉದ್ಯೋಗದಲ್ಲಿರುವ ಮಹಿಳೆಗೆ ಉನ್ನತ ಸ್ಥಾನವು ಸಿಗಬಹುದು. ಸ್ಥಿರಾಸ್ತಿಯ ಮಾರಾಟವಾಗಲಿದೆ. ಮಿತ್ರರು ನಿಮ್ಮನ್ನು ಹಣಕ್ಕಾಗಿ ಪೀಡಿಸಬಹುದು. ಹೂಡಿಕೆಯಲ್ಲಿ ಎಚ್ಚರಿಕೆ ಇರಲಿ. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಚ್ಛಿಸುವಿರಿ. ನೀವು ಕೊಟ್ಟ ಉಡುಗೊರೆಯಿಂದ ಸಂಗಾತಿಗೆ ಸಂತೋಷವಾಗಲಿದೆ. ವೃತ್ತಿಯ ಸ್ಥಳದಲ್ಲಿ ಪ್ರೇಮವು ಅಂಕುರಿಸಬಹುದು. ನಿಮ್ಮ ಸ್ವಂತ ಕೆಲಸಗಳಿಗೆ ಪರರ ಸಹಾಯವನ್ನು ನೀವು ಬಯಸುವುದಿಲ್ಲ. ಜೀವನದ ಅಕಸ್ಮಾತ್ ತಿರುವುಗಳು ನಿಮಗೆ ಅನುಕೂಲಕರವಾಗಿ ಇರಲಿದೆ. ಇನ್ನೊಬ್ಬರ ವಿಷಯವನ್ನು ತಿಳಿಯಲು ಹೆಚ್ಚು ಖುಷಿ ಪಡುವಿರಿ.
ವೃಶ್ಚಿಕ: ನಿಮಗೆ ಸಿಕ್ಕ ಪ್ರಶಂಸೆಯಿಂದ ಅಸೂಯೆಗೊಂಡು ಸಹೋದ್ಯೋಗಿಗಳು ತೊಂದರೆಯನ್ನು ಕೊಡಬಹುದು. ಮಿತ್ರರು ನಿಮಗೆ ಬೇಕಾದ ಸಹಾಯವನ್ನು ಮಾಡುವರು. ಹಣಕಾಸಿನ ವ್ಯವಹಾರದಲ್ಲಿ ಅಪರಿಚಿತರ ಆಗಮನವಾಗಬಹುದು. ಎಚ್ಚರಿಕೆಯಿಂದ ಇರಿ. ನಿಮ್ಮನ್ನು ಕೆಲಸದಿಂದ ತೆಗೆಯುವ ಭಯವು ಇರಲಿದೆ. ಸದ್ಯವಷ್ಟೇ ಸಾಲದಿಂದ ಮುಕ್ತರಾಗಿದ್ದು ಪುನಃ ಸಾಲ ಮಾಡಬೇಕಾಗಿ ಬರಬಹುದು. ಸ್ನೇಹಿತರು ನಿಮ್ಮನ್ನು ಭೇಟಿಯಾಗಲು ಬರಬಹುದು. ಸ್ವತಂತ್ರವಾಗಿ ನೀವು ಚಿಂತನೆಯನ್ನು ಮಾಡುವುದು ಒಳ್ಳೆಯದು. ಅಕಸ್ಮಾತ್ತಾಗಿ ನಿಮಗೆ ಹೊಣೆಗಾರಿಕೆಯು ಬರಬಹುದು.
ಧನು: ಭೂಮಿಯ ಉತ್ಪನ್ನಗಳಿಂದ ನಿಮಗೆ ಲಾಭವಾಗುವುದು. ಆತುರದಲ್ಲಿ ಯಾವ ನಿರ್ಧಾರವನ್ನೂ ಮಾಡದೇ ಯೋಚಿಸಿ ಮುಂದುವರಿಯುವುದು ಉತ್ತಮ. ಕುಟುಂಬದಲ್ಲಿ ಬಂದ ಭಿನ್ನಾಭಿಪ್ರಾಯವನ್ನು ನೀವು ಸರಿ ಮಾಡಲು ಪ್ರಯತ್ನಿಸುವಿರಿ. ಅವರವರ ಜೀವನವು ಬಹಳ ಭಿನ್ನವಾಗಿದ್ದು ಯಾರ ಜೊತೆಯೂ ನೀವು ಹೋಲಿಸಿಕೊಂಡು ಕಷ್ಟಪಡುವಿರಿ. ನಿಮಗೆ ಗೌರವ ಸಿಗದೆ ಕಡೆ ಹೋಗುವುದು ಇಷ್ಟವಿಲ್ಲ. ದಾಂಪತ್ಯದಲ್ಲಿ ಸುಖವಾಗಿ ಕಾಲವನ್ನು ಕಳೆಯುವುರಿ. ನೌಕರರ ವಿಚಾರದಲ್ಲಿ ಒಂದು ಕಣ್ಣಿರಲಿ. ತಾಳ್ಮೆ ಅವಶ್ಯಕ.
ಮಕರ: ನಿಮ್ಮ ಇಂದಿನ ಕಾರ್ಯದಿಂದ ಕಛೇರಿಯಲ್ಲಿ ನಿರೀಕ್ಷೆಯನ್ನು ಮೀರಿದ ಪ್ರಶಂಸೆಯು ಬರಬಹುದು. ನಿಮ್ಮವರೇ ನಿಮ್ಮ ಯಶಸ್ಸನ್ನು ಸಹಿಸದೇ ತೊಂದರೆ ಕೊಡುವರು. ಹಣವನ್ನು ಸರಿಯಾಗಿ ಸಂಗ್ರಹಿಸಿ. ಸಾಲದಿಂದ ನೀವು ಮುಕ್ತರಾಗುವಿರಿ. ನಿಮ್ಮ ಆತ್ಮವಿಶ್ವಾಸವು ಅಹಂಕಾರದಂತೆ ಕಾಣಲಿದೆ. ಇಂದು ಅಲ್ಪ ಆನಂದಕ್ಕೆ ಹೆಚ್ಚು ಹಣವನ್ನು ಕೊಡುವಿರಿ. ದೂರ ಪ್ರಯಾಣವನ್ನು ಮಾಡದೇ ಮುಂದೂಡುವುದು ಒಳ್ಳೆಯದು. ಕೆಲಸದಲ್ಲಿ ಇಂದು ಏಕಾಗ್ರತೆಯ ಕೊರತೆ ಕಾಣಬಹುದು. ನಿಮ್ಮ ಇಂದಿನ ಸ್ಥಾನವು ಬಹಳ ಪರಿಶ್ರಮದ ಫಲವಾಗಿದೆ.
ಕುಂಭ: ಹಿರಿಯರಿಂದ ನಿಮ್ಮ ಜೀವನಕ್ಕೆ ಮಾರ್ಗದರ್ಶನ ಸಿಗಲಿದೆ. ಉದ್ಯೋಗದ ಕಾರಣಕ್ಕೆ ಇಂದು ನೀವು ಪ್ರಯಾಣವನ್ನು ಮಾಡಬೇಕಾಗಿ ಬರಬಹುದು. ವಿದ್ಯಾರ್ಥಿಗಳಲ್ಲಿ ಆಲಸ್ಯವು ಹೆಚ್ಚಾಗಿದ್ದು ಶ್ರಮದ ಅವಶ್ಯಕತೆ ಅಧಿಕವಾಗಿರುವುದು. ಇಂದು ನಿಶ್ಚಿಂತೆಯಿಂದ ಇರಬೇಕು ಎಂದು ಅಂದುಕೊಂಡರೂ ಒಂದೊಂದೇ ಕೆಲಸಗಳು ಬರಬಹುದು. ವ್ಯಾಪಾರದಲ್ಲಿ ನಷ್ಟವಾಗಲದ್ದು ಲಾಭದ ತಂತ್ರವನ್ನು ರಚಿಸುವಿರಿ. ನಿಮ್ಮ ವರ್ತನೆಯಿಂದ ಆಚ್ಚರಿಯಾದೀತು. ಸಮಸ್ಯೆಗಳನ್ನು ನೀವು ಎದುರಿಸುವ ರೀತಿಯು ಭಿನ್ನವಾಗಿರುವುದು. ವಾಸ್ತವದಿಂದ ದೂರವಾದ ಕಲ್ಪನೆಯಿಂದ ಯಾವ ಲಾಭವಾಗದು.
ಮೀನ: ಕುಟುಂಬದಲ್ಲಿ ಸಂತಸದ ವಾತಾವರವಿರಲಿದೆ. ವಾಹನವನ್ನು ಚಲಾಯಿಸುವಾಗ ಸ್ವಲ್ಪ ಎಚ್ಚರವಿರಲಿ. ಹೊಸ ವ್ಯಾಪಾರದಲ್ಲಿ ನಿಮಗೆ ಮನಸ್ಸಾಗಲಿದೆ. ಇಂದು ನಿಮ್ಮದೇ ಸ್ವಂತ ಕಾರ್ಯಗಳು ಇರಲಿದ್ದು, ಬೇರೆ ಕಡೆ ಮನಸ್ಸು ಕೊಡುವುದು ಕಷ್ಟವಾದೀತು. ಯಾವ ಸಂದರ್ಭದಲ್ಲಿಯೂ ಯಾರನ್ನೂ ಅವಲಂಬಿಸಬಾರದು ಎಂಬ ಸತ್ಯವು ನಿಮಗೆ ಗೊತ್ತಾಗಬಹುದು. ದೇವರಲ್ಲಿ ಭಕ್ತಿ ಕಡಿಮೆಯಾಗಬಹುದು. ಇಂದು ಹೆಚ್ಚಿನ ಸಮಯವನ್ನು ವಿಶ್ರಾಂತಿಯಲ್ಲಿ ಕಳೆಯುವಿರಿ. ಅಂದುಕೊಂಡ ಕೆಲಸಗಳು ಪೂರ್ಣವಾಗದೇ ಆತಂಕಕ್ಕೆ ಒಳಗಾಗುವಿರಿ. ನಿಮ್ಮ ಅನುಭವವು ಪಾಠವಾಗಲಿದೆ ನಿಮಗೆ.