Horoscope: ಇಂದಿನ ರಾಶಿಭವಿಷ್ಯ, ಈ ರಾಶಿಯವರಿಗೆ ಹಣಕಾಸಿನ ಕೊರತೆ ಇದ್ದರೂ ನೆಮ್ಮದಿಯ ಜೀವನ ಇರಲಿದೆ
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 24) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಗೆಳೆಯರೇ.. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇಂದಿನ ರಾಶಿ ಭವಿಷ್ಯ ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 24) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ : ಆರ್ದ್ರಾ, ಮಾಸ : ಆಷಾಢ, ಪಕ್ಷ : ಶುಕ್ಲ, ವಾರ : ಶನಿ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಪೂರ್ವಾಫಲ್ಗುಣೀ, ಯೋಗ : ಸಿದ್ದಿ, ಕರಣ : ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 06 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:21 ರಿಂದ 10:58ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:12 ರಿಂದ 03:49ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:07 ರಿಂದ 07:44ರ ವರೆಗೆ.
ಧನು: ನಿಮ್ಮ ಆಲೋಚನೆಗಳನ್ನು ಮನೆಯವರ ಮೇಲೆಹೇರಲು ಹೋದರೆ ಕಲಹವೇ ಆದೀತು. ನಿಮ್ಮವರನ್ನು ಸ್ವತಂತ್ರವಾಗಿ ಬಿಡಿ. ಹಣಕಾಸಿನ ಕೊರತೆ ಇದ್ದರೂ ನೆಮ್ಮದಿಯ ಜೀವನ ಇರಲಿದೆ. ನಿಮ್ಮವರು ನಿಮಗೆ ಕೊಡುವ ಸಲಹೆಗಳು ನಿಮಗೆ ನಕಾರಾತ್ಮಕವಾಗಿ ತೋರುವುದು. ಇಂದು ನಿಮ್ಮ ಪ್ರೀತಿಪಾತ್ರರನ್ನು ಭೇಟಿ ಮಾಡುವಿರಿ. ನಿಮ್ಮಲ್ಲಿ ಹೊಸ ಬಗೆಯ ಉತ್ಸಾಹವು ಇರಲಿದೆ. ರಾಜಕೀಯದವರ ಬೆಂಬಲ ಸಿಗಲಿದೆ. ಅದನ್ನು ಸದುಪಯೋಗ ಮಾಡಿಕೊಳ್ಳುವುದು ಉತ್ತಮ. ನಿಮಗೆ ಆಯ್ಕೆಗಳನ್ನು ಮಾಡಲು ಗೊಂದಲವಿರಬಹುದು. ನಿಮ್ಮ ಕೆಲಸವು ಬೇಸರ ತರಿಸಬಹುದು.
ಮಕರ: ನೀವು ನಿಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವಿರಿ. ನಿಮಗೆ ಅದು ಬಹಳ ಆಪ್ತವಾಗಲಿದೆ. ಸಂಗಾತಿಯ ಭಾವನೆಗಳಿಗೆ ಸ್ಪಂದನೆ ಇರಲಿ. ಸಂಪಾದಿಸಿದ್ದನ್ನು ಮನೆಯ ಬಳಕೆಗೆ ಇಡಬೇಕಾದೀತು. ದೇವರ ದರ್ಶನವನ್ನು ನೀವು ಮಾಡುವಿರಿ. ಸಂಗದೋಷದಿಂದ ಅಪವಾದ ಬರಬಹುದು. ಸಮಯಕ್ಕೆ ನೀವು ನಿಮ್ಮ ವ್ಯಕ್ತಿತ್ವಗಳನ್ನು ಬಳಸಿಕೊಳ್ಳುವಿರಿ. ಸ್ತ್ರೀಯರಿಗೆ ಸಂಬಂಧಿಸಿದ ಅಪವಾದವನ್ನು ಹೊರಬೇಕಾದೀತು. ಯಾರ ಮಾತನ್ನೂ ಕೇಳದೇ ನಿಮ್ಮದೇ ದಾರಿಯಲ್ಲಿ ನಡೆಯುವಿರಿ.
ಕುಂಭ: ನಿಮ್ಮವರನ್ನೇ ನೀವು ನಂಬದ ಸ್ಥಿತಿಯಲ್ಲಿ ಇರಬಹುದು. ನಿಮ್ಮ ಸಿಟ್ಟು ಇಂದು ಕಾಣಿಸಿಕೊಳ್ಳದೇ ಇದ್ದೀತು. ತಾಳ್ಮೆಯಿಂದ ನಿಮ್ಮ ವ್ಯವಹಾರ ಇರಲಿ. ಅಸಾಧ್ಯವನ್ನು ಸಾಧಿಸುವ ಹಠದ ಸ್ವಭಾವ ಒಳ್ಳೆಯದೇ. ಎಲ್ಲವೂ ಕೈಗೂಡುವುದು ಎಂಬ ಅತಿಯಾದ ಆತ್ಮವಿಶ್ವಾಸಬೇಡ. ನಿರ್ಭಾವುಕತೆಯು ನಿಮಗೆ ಶೋಭೆಯನ್ನು ತಂದುಕೊಡದು. ಅನ್ನಿಸಿದ್ದನ್ನು ನೀವು ಇನ್ನೊಬ್ಬರಿಗೆ ಹೇಳುವಾಗ ತಡೆಯುವಿರಿ. ನಿಮ್ಮ ಕೈಲಾದ ಸಹಾಯವನ್ನು ಮಾಡಬೇಕಾದೀತು. ವ್ಯರ್ಥವಾಗಿ ಕಲಾಹರಣ ಮಾಡುವುದು ಬೇಡ.
ಮೀನ: ಇಂದು ನೀವು ಯಾವದೇ ವಿಚಾರವನ್ನು ಸಂಪೂರ್ಣವಾಗಿ ತಿಳಿದು ಮಾತನಾಡುವುದು ಒಳ್ಳೆಯದು. ನಿಮ್ಮ ಮಾತು ಇತರರಿಗೆ ನೋವನ್ನು ಕೊಡಬಹುದು. ಅವರು ನೊಂದಿದ್ದು ನಿಮಗೆ ಶಾಪವಾಗಬಹುದು. ನಿಮ್ಮ ಮನಸ್ಸು ಹಾಗೂ ಕೃತಿಯಲ್ಲಿ ಭಿನ್ನತೆ ಇರುವುದು ತಿಳಿದುಬರಲಿದೆ. ನಿಮ್ಮ ಉತ್ಸಾಹಭಂಗವನ್ನು ಮಿತ್ರರು ಮಾಡಿಯಾರು. ಆನಾರೋಗ್ಯವಿದ್ದರೂ ತಿನ್ನಬೇಕು ಎನ್ನುವ ಚಪಲಕ್ಕೆ ಆಹಾರವನ್ನು ತಿಂದು ಆನಾರೋಗ್ಯವನ್ನು ಹೆಚ್ಚುಮಾಡಿಕೊಳ್ಳುವಿರಿ. ಕುತೂಹಲದ ನೆಪದಲ್ಲಿ ಏನಾದರೂ ಮಾಡಿಕೊಳ್ಳಬೇಡಿ. ನಿಮಗೆ ನಿಮ್ಮ ಕೆಲಸದ ಮೇಲೆ ಹೆಚ್ಚು ಗಮನವಿರಲಿ.
-ಲೋಹಿತಶರ್ಮಾ – 8762924271 (what’s app only)