Daily Horoscope: ಹಿರಿಯರ ಮಾತನ್ನು ಶ್ರದ್ಧೆಯಿಂದ ಕೇಳಿ, ಸಹಾಯವಾದೀತು

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಅಕ್ಟೋಬರ್​ 11: ದೀರ್ಘಕಾಲದ ಹೂಡಿಕೆಗಳಿಗೆ ಕೈಹಾಕುವ ಮುನ್ನ ಯೋಚಿಸಿ. ಹಿರಿಯರ ಮಾತನ್ನು ಶ್ರದ್ಧೆಯಿಂದ ಕೇಳಿ, ನಿಮ್ಮ ಕಾರ್ಯಕ್ಕೆ ಸಹಾಯಕವಾದೀತು. ಶಕ್ತಿ‌ ಮೀರಿ ಮಾಡಿದ ಕೆಲಸದಲ್ಲಿ ನಿಮಗೆ ತೊಂದರೆಯಾಗಬಹುದು. ಹಾಗಾದರೆ ಅಕ್ಟೋಬರ್​ 11ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಹಿರಿಯರ ಮಾತನ್ನು ಶ್ರದ್ಧೆಯಿಂದ ಕೇಳಿ, ಸಹಾಯವಾದೀತು
ಹಿರಿಯರ ಮಾತನ್ನು ಶ್ರದ್ಧೆಯಿಂದ ಕೇಳಿ, ಸಹಾಯವಾದೀತು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 11, 2024 | 12:10 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಉತ್ತರಾಷಾಢ, ಯೋಗ: ಸುಕರ್ಮ​, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 10:51 ರಿಂದ 12:19, ಯಮಘಂಡ ಕಾಲ ಮಧ್ಯಾಹ್ನ 03:17ರಿಂದ 04:45ರವರೆಗೆ, ಗುಳಿಕ ಕಾಲ ಬೆಳಗ್ಗೆ 07:53 ರಿಂದ 09:22 ರವರೆಗೆ.

ಸಿಂಹ ರಾಶಿ: ನೀವು ಇಂದು ಹೊಸತನವನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುವಿರಿ. ವೃತ್ತಿಯಲ್ಲಿ ಆತಂಕದ ವಾತಾವರಣವು ಇರಲಿದೆ. ದೀರ್ಘಕಾಲದ ಹೂಡಿಕೆಗಳಿಗೆ ಕೈಹಾಕುವ ಮುನ್ನ ಯೋಚಿಸಿ. ಹಿರಿಯರ ಮಾತನ್ನು ಶ್ರದ್ಧೆಯಿಂದ ಕೇಳಿ, ನಿಮ್ಮ ಕಾರ್ಯಕ್ಕೆ ಸಹಾಯಕವಾದೀತು. ಶಕ್ತಿ‌ ಮೀರಿ ಮಾಡಿದ ಕೆಲಸದಲ್ಲಿ ನಿಮಗೆ ತೊಂದರೆಯಾಗಬಹುದು. ಯಾರ ಬಗ್ಗೆಯೂ ಅನಗತ್ಯ ಟೀಕೆಗಳನ್ನು ಮಾಡುವುದು ಬೇಡ. ಕಳೆದ ದಿನಗಳ ಉದ್ಯಮ‌ಮತಗತು ಈಗಿನದ್ದನ್ನು ತೂಕ ಮಾಡುವಿರಿ. ಇಂದು ನಿಮ್ಮ ಸಂತೋಷವು ಕಡಿಮೆ ಇರಬಹುದು. ನಿಮ್ಮ ಪ್ರತಿಭೆಗೆ ಉತ್ತಮ ಅವಕಾಶವು ಸಿಗಲಿವೆ. ಆಶಾಭಂಗವಾಗುವ ಸಾಧ್ಯತೆ ಇದೆ. ಅವಕಾಶವನ್ನು ಸದುಪಯೋಗ ಮಾಡಿಕೊಂಡರೆ ಉತ್ತಮ ಭವಿಷ್ಯವು ಇರಲಿದೆ. ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ತಪ್ಪಿಸಲು ಅಸಂಬದ್ಧ ಸಲಹೆಗಳನ್ನು ಕೊಡಬಹುದು. ಉತ್ಸಾಹದಿಂದ ನೀವು ಇಂದಿನ ಕಾರ್ಯವನ್ನು ಮಾಡುತ್ತಿದ್ದರೂ ದಿನದ ಕೊನೆಗೆ ಸಲ್ಲದ ಮಾತುಗಳು ಬರಬಹುದು.

ಕನ್ಯಾ ರಾಶಿ: ಇಂದು ನಿಮ್ಮ ಹಳೆಯ ಕಾರ್ಯಗಳನ್ನೇ ಯಾರಾದರೂ ನೆನಪಿಸಿಯಾರು. ಸಮಸ್ಯೆಯನ್ನು ಬರುವ ಮೊದಲೇ ಯೋಚಿಸಿ ಸಿದ್ಧತೆಯನ್ನು ಮಾಡಿಕೊಳ್ಳುವಿರಿ. ಕೆಲವು ಸಂಬಂಧಗಳು ಯಾಕೆ ದೂರವಾಗುತ್ತವೆ ಎಂದು ತಿಳಿಯುವುದಿಲ್ಲ. ಯಾರನ್ನೂ ನೋಯಿಸುವುದು ನಿಮಗೆ ಆಗದು. ಈ ಬಗ್ಗೆ ನೀವೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು. ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜಯ ಸಿಗುತ್ತದೆ. ಛಲಬಿಡದೇ ನಿಮ್ಮ ಸೋಲನ್ನು ಎದುರಿಸುವಿರಿ. ಈಗ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ. ನಿಮ್ಮ ಕೆಲಸದಲ್ಲಿ ಇಂದು ಅಡತಡೆಗಳು ಬರಬಹುದು. ಆಧ್ಯಾತ್ಮಿಕತೆಯ ಸೆಳೆತವು ಇರುವುದು. ನೆರೆಯವರ ವರ್ತನೆಯು ನಿಮ್ಮ ಸಿಟ್ಟಿಗೆ ಕಾರಣವಾಗಲಿದೆ. ಪ್ರೇಮ ಸಂಬಂಧಗಳಲ್ಲಿ ಅನುಮಾನವನ್ನು ಇಟ್ಟುಕೊಳ್ಳುವುದು ಬೇಡ. ಸಹೋದರನ ಪ್ರಗತಿಯಲ್ಲಿ ನೀವು ಸಂತೋಷ ಆಗಲಿದೆ. ಸಣ್ಣ ಉಳಿತಾಯವೂ ನಿಮಗೆ ಉಪಯೋಗವಾದೀತು.

ತುಲಾ ರಾಶಿ: ಇಂದು ನಿಮ್ಮ ವಿವಾಹದ ಪ್ರಸ್ತಾಪಗಳು ಬರಬಹುದು. ಭೋಗವಸ್ತುಗಳನ್ನು ಅನವಶ್ಯಕವಾಗಿ ಖರೀದಿಸುವಿರಿ. ನಿಮ್ಮ ಇಷ್ಟದವರು ನಿಮ್ಮನ್ನು ಭೇಟಿಯಾಗಲು ಬರಬಹುದು. ನಿಮ್ಮ‌ ಸಣ್ಣ ಉಳಿತಾಯಕ್ಕೆ ಇಂದು ಬಹಳ ಬೆಲೆ‌ಬರಲಿದೆ. ಹೊಸ ಜವಾಬ್ದಾರಿಗಳ ನಿರೀಕ್ಷೆಯಲ್ಲಿ ಇರುವಿರಿ. ಶುಭಕಾರ್ಯಗಳಿಗೆ ಇಂದು ಸೂಕ್ತ ದಿನವಾಗಿದೆ. ಆಲಸ್ಯತನ ಮಾಡದೆ ಹಮ್ಮಿಕೊಂಡ ಕಾರ್ಯಗಳನ್ನು ಆರಂಭಿಸಿರಿ. ಹಿರಿಯರ ಮತ್ತು ಸಹೋದ್ಯೋಗಿಗಳ ಬೆಂಬಲ ದೊರೆಯುವುದು. ಹಣವನ್ನು ನೀರಿನಂತೆ ಖರ್ಚು ಮಾಡುವುದು ಉತ್ತಮವಲ್ಲ. ವಿವೇಕಮತಿಯಾಗಿ ನೀವು ಮಾಡಿದ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ವೃತ್ತಿಜೀವನದಲ್ಲಿ ಆನಂದದ ವಾತಾವರಣವು ಇರಲಿದೆ. ಹೊಸ ಉದ್ಯಮವಾದರೂ ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುವಿರಿ. ಹಿರಿಯ ಮೇಲೇ ಸಿಟ್ಟಾಗುವ ಸಾಧ್ಯತೆ ಇದೆ. ಮಾನಸಿಕವಾಗಿ ಉಂಟಾಗುವ ಕಿರಿಕಿರಿಗೆ ನಿಮಗೆ ಕೋಪ ಬರಬಹುದು.

ವೃಶ್ಚಿಕ ರಾಶಿ: ಇಂದು ನಿಮ್ಮ ಗೌರವಕ್ಕೆ ಯಾರಿಂದಲಾದರೂ ಚ್ಯುತಿಯಾಗಬಹುದು. ಯಾವ ಅಪವಾದವನ್ನೂ ನೀವು ಇಟ್ಟುಕೊಳ್ಳುವುದು ಇಷ್ಟಪಡುವುದಿಲ್ಲ. ಹೊಸ ತರಹದ ಆಲೋಚನೆಗಳು ನಿಮ್ಮನ್ನು ಹುರಿದುಂಬಿಸಲಿದೆ. ಮಾನಸಿಕ ನೆಮ್ಮದಿಯನ್ನು ಪಡೆಯಲು ಮತ್ತು ಮನಸ್ಸಿನಲ್ಲಿ ಮಾಡಿದ ಆಲೋಚನೆಗಳು ಸಾಕಾರಗೊಳ್ಳಲು ಧ್ಯಾನ ಮಾಡಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ಉತ್ಸಾಹದಿಂದ ನಿಮ್ಮ ಇಂದಿನ ಕೆಲಸವು ಆಗಲಿದೆ. ಸಹೋದನಿಂದ ನಿಮಗೆ ಸಮಸ್ಯೆ ಆಗಬಹುದು. ಹಠದ ಸ್ವಭಾವದಿಂದ ನಿಮ್ಮವರಿಗೆ ಕಿರಿಕಿರಿ ಆಗಬಹುದು. ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳುವಿರಿ. ರಾಜಕಾರಣಿಗಳಿಗೆ ಇಂದು ಸ್ಥಾನಮಾನಗಳು ಸಿಗಬಹುದು. ಇರುವ ಆದಾಯದ ಮೂಲವನ್ನು ಗಟ್ಟಿಮಾಡಿಕೊಳ್ಳಿ.‌ ಎದುರಿನವರ ಇಂಗಿತವನ್ನು ತಿಳಿದುಕೊಳ್ಳದೇ ಏನನ್ನಾದರೂ ಹೇಳುವಿರಿ. ಇಂದು ನಿಮ್ಮ ಅನಾರೋಗ್ಯವನ್ನು ಯಾರ ಬಳಿಯೂ ಹೇಳಿಕೊಳ್ಳಲಾರಿರಿ.